ಕಿಚ್ಚ ಸುದೀಪ್ ಮಗಳು ಸಾನ್ವಿ, ದಬಾಂಗ್ 3 ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಭೇಟಿಯಾದ ಅನುಭವ ಹಂಚಿಕೊಂಡಿದ್ದಾರೆ. ಚಿಕ್ಕಂದಿನಲ್ಲಿ ನೀಡಿದ ಬ್ರೇಸ್ ಲೈಟ್ ಅನ್ನು ಸಲ್ಮಾನ್ ಬಿಗ್ ಬಾಸ್ ನಲ್ಲಿ ಧರಿಸಿದ್ದರು. ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಸಲ್ಮಾನ್ ಭೇಟಿಯಾದಾಗ ನಡುಕ ಉಂಟಾಯಿತು ಎಂದಿದ್ದಾರೆ. ಸಲ್ಮಾನ್ ಹಾಡು ರೆಕಾರ್ಡ್ ಮಾಡಿಸಿ, ಫಾರ್ಮ್‌ಹೌಸ್‌ಗೆ ಕರೆದೊಯ್ದು ಕಾಳಜಿ ವಹಿಸಿದರು. ಜಿಮ್, ಈಜಲು ಕರೆದುಕೊಂಡು ಹೋಗಿ ಟ್ರಕ್‌ನಲ್ಲಿ ಸವಾರಿ ಮಾಡಿಸಿದರು. ಆ ಮೂರು ದಿನಗಳು ಸ್ಮರಣೀಯವೆಂದು ಸಾನ್ವಿ ಹೇಳಿದ್ದಾರೆ.

ದಬಾಂಗ್ 3 ರಲ್ಲಿ ಕಿಚ್ಚ ಸುದೀಪ್ ಅವರು, ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡಿದ್ದರು. ಈ ಸಂದರ್ಭದಲ್ಲಿ ಸುದೀಪ್​ ಅವರ ಮಗಳು ಸಾನ್ವಿ, ಸಲ್ಮಾನ್​ ಖಾನ್​ ಅವರನ್ನು ಭೇಟಿಯಾದ ಮತ್ತು ಅವರೊಂದಿಗೆ ಸಮಯ ಕಳೆದ ಅನುಭವವನ್ನು ಹಂಚಿಕೊಂಡಿದ್ದಾರೆ. ಜಿನಾಲ್ ಮೋದಿ ಅವರ ಯೂಟ್ಯೂಬ್​ ಚಾನೆಲ್​ ಜೊತೆಗಿನ ಸಂಭಾಷಣೆಯಲ್ಲಿ ಸಾನ್ವಿ ಅವರು, ಸಲ್ಮಾನ್ ಖಾನ್​ ತಮ್ಮನ್ನು ಹೇಗೆ ನಡೆಸಿಕೊಂಡರು ಎಂದು ನೆನಪಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರೊಂದಿಗಿನ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡಿರುವ ಸಾನ್ವಿ, ನಾನು ಚಿಕ್ಕವಳಿದ್ದಾಗ ಅವರನ್ನು ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ ನಾನು ಧರಿಸಿದ್ದ ಬ್ರೇಸ್​ಲೈಟ್​ ಅನ್ನು ಅವರಿಗೆ ನೀಡಿದ್ದೆ. ಅದನ್ನು ಅವರು ಬಿಗ್ ಬಾಸ್ ಚಿತ್ರೀಕರಣದ ಸಮಯದಲ್ಲಿ ಧರಿಸಿದ್ದರು' ಎಂದಿದ್ದಾರೆ. ನಂತರ ಕೆಲ ವರ್ಷಗಳ ನಂತರ ದಬಾಂಗ್ 3 ಚಿತ್ರೀಕರಣದ ಸಮಯದಲ್ಲಿ ಅವರನ್ನು ಮತ್ತೆ ಭೇಟಿಯಾದ ಬಗ್ಗೆ ನೆನಪಿಸಿಕೊಂಡಿರುವ ಸಾನ್ವಿ ಅವರು, ಇದು "ಅತ್ಯಂತ ಮೋಜಿನ ಸಂದರ್ಭವಾಗಿತ್ತು" ಎಂದು ಹೇಳಿದ್ದಾರೆ.

ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ಸಲ್ಮಾನ್ ಖಾನ್ ಅವರ ನಿವಾಸಕ್ಕೆ ಸರ್​ಪ್ರೈಸ್​ ಆಗಿ ಹೋಗಿರುವುದನ್ನು ಸಾನ್ವಿ ನೆನಪಿಸಿಕೊಂಡಿದ್ದಾರೆ. 'ಆಗ ನಾನು 14 ವರ್ಷದವಳಿದ್ದೆ. ಚೆನ್ನಾಗಿ ಡ್ರೆಸ್​ ಮಾಡಿಕೊಂಡು ಬರಲು ಅಪ್ಪ ಹೇಳಿದ್ರು. ಅದರೆ ಹೋಗುವುದು ಎಲ್ಲಿ ಎಂದು ತಿಳಿದಿರಲಿಲ್ಲ. ಗ್ಯಾಲಕ್ಸಿ ಅಪಾರ್ಟ್​ಮೆಂಟ್​ ಒಳಗೆ ಹೋಗುತ್ತಿದ್ದಂತೆಯೇ ಸಲ್ಮಾನ್​ ಖಾನ್​ ಬೆನ್ನು ಕಾಣಿಸಿತು. ಆದರೆ, ಅವರೇ ಎಂದು ನನಗೆ ಗೊತ್ತಾಗಲಿಲ್ಲ. ಯಾರೋ ಅಪ್ಪನ ಅಭಿಮಾನಿ ಇರಬೇಕು ಎಂದುಕೊಂಡೆ. ಬಳಿಕ, ಅವರು ಸೋಫಾದಲ್ಲಿ ಬಂದು ಕುಳಿತುಕೊಂಡಾಗಲೇ ಸಲ್ಮಾನ್​ ಖಾನ್​ ಎನ್ನುವುದು ತಿಳಿಯಿತು. ಅವರನ್ನು ನೋಡಿ ಒಮ್ಮೆ ನಡುಕ ಉಂಟಾಯಿತು ಎಂದಿದ್ದಾರೆ ಸಾನ್ವಿ. 

ಸಲ್ಮಾನ್​ ರಾತ್ರಿ ಐಶ್ವರ್ಯ ಮನೆಗೆ ಹೋಗ್ತಿದ್ದ, ಆದ್ರೆ... ಬ್ರೇಕಪ್​ ಕಾರಣ ಹೇಳಿದ ಲೇಖಕ ಹನೀಫ್​ ಜಾವೇರಿ

ಸಲ್ಮಾನ್​ ಅವರು ನನ್ನ ಹಾಡುಗಳನ್ನು ರೆಕಾರ್ಡ್​ ಮಾಡಿಕೊಂಡರು. ನನ್ನನ್ನು ತುಂಬಾ ಪ್ರೀತಿಸಿದರು. ಬೆಳಿಗ್ಗೆ 3 ಗಂಟೆಗೆ, ಅವರು ತಮ್ಮ ಸಂಗೀತ ನಿರ್ದೇಶಕರಿಗೆ ಕರೆ ಮಾಡಿ, 'ನಾನು ಈ ಹುಡುಗಿಯನ್ನು ಕಳುಹಿಸುತ್ತಿದ್ದೇನೆ. ನೀವು ಅವಳನ್ನು ಟ್ರ್ಯಾಕ್‌ನಲ್ಲಿ ರೆಕಾರ್ಡ್ ಮಾಡಬೇಕೆಂದು ನಾನು ಬಯಸುತ್ತೇನೆ, ನಮಗೆ ಏನಾದರೂ ಅವಳ ಅಗತ್ಯವಿದ್ದರೆ ಅವಳ ಧ್ವನಿಯನ್ನು ಇರಿಸಿ' ಎಂದು ಹೇಳಿದರು ಎಂದು ಅಂದು ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಸಾನ್ವಿ. ಮರುದಿನ ನಾನು ಅಲ್ಲಿಗೆ ಹೋದೆ. ನಂತರ ಸಲ್ಮಾನ್ ಖಾನ್​ ಫಾರ್ಮ್‌ಹೌಸ್‌ಗೆ ಕರೆದುಕೊಂಡು ಹೋದರು. ಅವರ ಜೊತೆಯಲ್ಲಿಯೇ ಇರಲು ನಾನು ಬಯಸಿದ್ದೆ. ಅವರು ಕೂಡ ನನ್ನ ಜೊತೆಯಲ್ಲಿಯೇ ಇದ್ದರು. ತುಂಬಾ ಕಾಳಜಿ ಮಾಡುತ್ತಿದ್ದರು ಎಂದಿದ್ದಾರೆ. ನಾನು ರೆಕಾರ್ಡ್​ ಮಾಡಿದ್ದ ದಬಾಂಗ್​ 3 ಹಾಡನ್ನು ರದ್ದು ಮಾಡಲಾಗಿತ್ತು. ಆದರೆ ಸಲ್ಮಾನ್​ ಖಾನ್​ ಅವರು ಪ್ರತಿ ಪಾರ್ಟಿಯಲ್ಲಿಯೂ ಸಲ್ಮಾನ್ ನಾನು ಹಾಡಿದ್ದ ಹಾಡನ್ನೇ ನುಡಿಸುತ್ತಿದ್ದರು. ಇದು ತುಂಬಾ ಖುಷಿ ಕೊಟ್ಟಿತ್ತು ಎಂದಿದ್ದಾರೆ.

ಅವರು ನನ್ನನ್ನು ಜಿಮ್‌ಗೆ ಕರೆದುಕೊಂಡು ಹೋದರು. ನಾವು ಈಜಲು ಹೋಗುತ್ತಿದ್ದೆವು. ಮತ್ತು ನಾನು ಕಾರುಗಳು ಮತ್ತು ಬೈಕ್‌ಗಳನ್ನು ಪ್ರೀತಿಸುವುದರಿಂದ, ಅವರು ನನ್ನನ್ನು ಕಾಡಿನ ಮೂಲಕ ತುಂಬಾ ತಂಪಾಗಿ ಕಾಣುವ ದೈತ್ಯಾಕಾರದ ಟ್ರಕ್‌ನಲ್ಲಿ ಸವಾರಿಗಾಗಿ ಕರೆದೊಯ್ದರು. ಅದು ತುಂಬಾ ಮೋಜಿನ ಸಂಗತಿಯಾಗಿತ್ತು. ಅವರ ಫಾರ್ಮ್‌ಹೌಸ್‌ನಲ್ಲಿ ಆ ಮೂರು ದಿನಗಳು ನನ್ನ ಜೀವನದ ಅತ್ಯಂತ ಸ್ಮರಣೀಯ ಸಮಯ ಎಂದಿದ್ದಾರೆ. 

ಲವ್​ ಸಲ್ಮಾನ್​ ಮೇಲೆ, ಮದ್ವೆಯಾದದ್ದು ಅಭಿಷೇಕ್​ಗೆ? ಐಶ್ವರ್ಯ ರೈ ಈ ವಿಡಿಯೋದಿಂದ ರಟ್ಟಾಗೋಯ್ತು ಗುಟ್ಟು...