ಸಲ್ಮಾನ್ ರಾತ್ರಿ ಐಶ್ವರ್ಯ ಮನೆಗೆ ಹೋಗ್ತಿದ್ದ, ಆದ್ರೆ... ಬ್ರೇಕಪ್ ಕಾರಣ ಹೇಳಿದ ಲೇಖಕ ಹನೀಫ್ ಜಾವೇರಿ
ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ಬ್ರೇಕಪ್ಗೆ ಕಾರಣ ಏನು ಎಂಬ ಬಗ್ಗೆ ಲೇಖಕ ಹನೀಫ್ ಜಾವೇರಿ ಆಗ ನಡೆದ ಘಟನೆಯನ್ನು ವಿವರಿಸಿದ್ದು ಹೀಗೆ...
ಸಲ್ಮಾನ್ ಖಾನ್ ಜೊತೆಗೆ ನಟಿ ಐಶ್ವರ್ಯ ರೈ ಅವರ ಕುಚ್ ಕುಚ್ ಬಾಲಿವುಡ್ನಲ್ಲಿ ಹೊಸ ವಿಷಯವೇನಲ್ಲ. ಇವರ ಲವ್ ಸ್ಟೋರಿ ಒಂದು ಹಂತ ಮುಂದಕ್ಕೆ ಹೋಗಿತ್ತು. ಐಶ್ವರ್ಯ ಅವರು, ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಸಲ್ಮಾನ್ ಖಾನ್ ಜೊತೆ ಡೇಟಿಂಗ್‌ನಲ್ಲಿ ಇದ್ದರು. ಇವರಿಬ್ಬರ ಮದುವೆ ನಡೆಯುತ್ತದೆ ಎಂದು ಭಾರಿ ಸುದ್ದಿಯಾಗಿತ್ತು. 90ರ ದಶಕದಲ್ಲಿ ಸಲ್ಮಾನ್ ಖಾನ್ (Salman Khan) ಮತ್ತು ಐಶ್ವರ್ಯಾ ರೈ (Aishwarya Rai) ಅವರ ಸಂಬಂಧ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ ಅವರ ರೊಮ್ಯಾನ್ಸ್‌ಗಿಂತ ಬ್ರೇಕಪ್ ಹೆಚ್ಚು ಚರ್ಚೆಯಾಗಿತ್ತು. ವಾಸ್ತವವಾಗಿ, 1999 ರಲ್ಲಿ ಬಿಡುಗಡೆಯಾದ 'ಹಮ್ ದಿಲ್ ಚುಕೆ ಸನಮ್' ಚಿತ್ರದ ಸೆಟ್‌ಗಳಲ್ಲಿ ಐಶ್ವರ್ಯಾ ಮತ್ತು ಸಲ್ಮಾನ್ ಪರಸ್ಪರ ಹತ್ತಿರವಾಗಿದ್ದರು. 2001 ರಲ್ಲಿ ಇಬ್ಬರೂ ಬೇರ್ಪಟ್ಟರು. ಇವರಿಬ್ಬರು ಬೇರ್ಪಟ್ಟಿರುವುದದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಾರೆಯಾದರೂ, ಐಶ್ವರ್ಯ ತಮಗೆ ಕೈಕೊಟ್ಟಿದ್ದಾರೆ ಎಂದು ಮೊನ್ನೆಮೊನ್ನೆಯವರೆಗೂ ಸಲ್ಮಾನ್ ಖಾನ್ ಪರೋಕ್ಷವಾಗಿ ಹೇಳುತ್ತಲೇ ಬಂದಿದ್ದಾರೆ. ಇದೀಗ ಸಲ್ಲು ಭಾಯಿ ಅವಿವಾಹಿತರಾಗಿಯೇ ಉಳಿದಿದ್ದರೆ, ಐಶ್ವರ್ಯ ರೈ, ಬಚ್ಚನ್ ಕುಟುಂಬದ ಸೊಸೆಯಾಗಿ ಒಬ್ಬಳು ಮುದ್ದಾದ ಮಗಳು ಆರಾಧ್ಯಳ ಅಮ್ಮ ಕೂಡ ಆಗಿದ್ದಾರೆ.
ಆದರೆ ಇದೀಗ, ಅಭಿಷೇಕ್ ಮತ್ತು ಐಶ್ವರ್ಯ ನಡುವೆ ಬ್ರೇಕಪ್ ಬಹುತೇಕ ಫಿಕ್ಸ್ ಆದಂತಿದೆ. ಈ ಸುದ್ದಿಯನ್ನು ಅಲ್ಲಗಳೆಯಲು ಹಾಗೂ ಪ್ಯಾಚಪ್ ಎಂಬಂತೆ ಆಗೀಗ ಈ ಜೋಡಿ ಜೊತೆಯಾಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಈಗ ನಡೆಯುತ್ತಿರುವ ಹಲವಾರು ಘಟನೆಗಳನ್ನು ನೋಡಿದರೆ ಜೋಡಿ ಬ್ರೇಕಪ್ ಆಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಇದರ ನಡುವೆಯೇ, ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ನಡುವಿನ ಸಂಬಂಧದ ಬಗ್ಗೆ ಲೇಖಕ ಮತ್ತು ಚಲನಚಿತ್ರ ಪತ್ರಕರ್ತ ಹನೀಫ್ ಜವೇರಿ ಗುಟ್ಟನ್ನು ರಿವೀಲ್ ಮಾಡಿದ್ದಾರೆ. ಅವರು ಹೇಳಿದ್ದೇನೆಂದರೆ, " ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ತುಂಬಾ ಪ್ರೀತಿಸುತ್ತಿದ್ದರು. ಆದರೆ ಇದು ಐಶ್ವರ್ಯ ಕುಟುಂಬದವರಿಗೆ ಇಷ್ಟವಿರಲಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ಏನೆಂದರೆ, ಸಲ್ಮಾನ್ ಖಾನ್ ಅದೇ ಸಮಯದಲ್ಲಿ ನಟಿಯರಾದ ಸೋಮಿ ಅಲಿ, ಸಂಗೀತಾ ಬಿಜಲಾನಿ ಸೇರಿದಂತೆ ಕೆಲವರ ಜೊತೆ ಫ್ಲರ್ಟ್ ಮಾಡುತ್ತಿದ್ದುದು. ಆದ್ದರಿಂದ ಐಶ್ವರ್ಯ ಅಪ್ಪ-ಅಮ್ಮನಿಗೂ ಈತ ತಮ್ಮ ಮಗಳ ಜೊತೆಯೂ ಫ್ಲರ್ಟ್ ಮಾಡುತ್ತಿದ್ದಾನೆ ಎಂದೇ ಎನ್ನಿಸಿತ್ತು. ಅದಕ್ಕಾಗಿ ಈ ಮದುವೆ ಇಷ್ಟವಿರಲಿಲ್ಲ" ಎಂದಿದ್ದಾರೆ.
ಲವ್ ಸಲ್ಮಾನ್ ಮೇಲೆ, ಮದ್ವೆಯಾದದ್ದು ಅಭಿಷೇಕ್ಗೆ? ಐಶ್ವರ್ಯ ರೈ ಈ ವಿಡಿಯೋದಿಂದ ರಟ್ಟಾಗೋಯ್ತು ಗುಟ್ಟು...
ಆದರೆ ಸಲ್ಮಾನ್ ಖಾನ್ಗೆ ಮದುವೆ ಅರ್ಜೆಂಟ್ ಆಗಿತ್ತು. ಆತನ ಸ್ವಭಾವ ನೋಡಿ ಐಶ್ವರ್ಯ ಕೂಡ ಮದುವೆ ನಿಧಾನ ಆಗಲಿ ಎಂದೇ ಅಂದುಕೊಂಡಿದ್ದರು. ಆದರೆ ಸಲ್ಮಾನ್ ಖಾನ್ ಸುಮ್ಮನೇ ಇರದೇ ಐಶ್ವರ್ಯ ರೈ ಮನೆಗೆ ರಾತ್ರಿ ಹೋಗಿ ಬಾಗಿಲನ್ನು ಜೋರಾಗಿ ಬಡಿಯುವುದು, ಕೂಗಾಡುವುದು ಮಾಡುತ್ತಿದ್ದರು. ಇದರಿಂದ ಐಶ್ವರ್ಯ ಮನೆಯವರು ಮಾತ್ರವಲ್ಲದೇ ಆಕೆಯ ಅಕ್ಕಪಕ್ಕದವರಿಗೂ ಕಿರಿಕಿರಿಯಾಗಲು ಶುರುವಾಯಿತು. ಸಲ್ಮಾನ್ ಖಾನ್ ವಿರುದ್ಧ ಅವರೆಲ್ಲಾ ರೊಚ್ಚಿಗೆದ್ದಿದ್ದರು. ಅಕ್ಕ ಪಕ್ಕದ ಮನೆಯವರು ಮಾಧ್ಯಮಗಳ ಮುಂದೆ ಈ ಬಗ್ಗೆ ಹೇಳಿಕೆ ನೀಡತೊಡಗಿದರು. ಪತ್ರಿಕೆಗಳಲ್ಲಿ ಈ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಐಶ್ವರ್ಯ ರೈಗೂ ಇರುಸು ಮುರುಸು ಉಂಟಾಯಿತು. ಈ ಪರಿ ತೊಂದರೆ ಕೊಡುವ ವ್ಯಕ್ತಿ ತಮಗೆ ಬೇಡವೇ ಬೇಡ ಎಂದು ತೀರ್ಮಾನಿಸಿಬಿಟ್ಟರು ಎಂದು ಹನೀಫ್ ಜವೇರಿ ತಿಳಿಸಿದ್ದಾರೆ.
ಅಷ್ಟಕ್ಕೂ, ಬ್ರೇಕಪ್ ನಂತರ, 2002 ರಲ್ಲಿ, ಐಶ್ವರ್ಯಾ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದರು. 'ನನ್ನ ಯೋಗಕ್ಷೇಮ, ನನ್ನ ವಿವೇಕ, ನನ್ನ ಘನತೆ ಮತ್ತು ನನ್ನ ಕುಟುಂಬದ ಘನತೆಯನ್ನು ಪರಿಗಣಿಸಿ, ಇದು ಸಾಕು. ನಾನು ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡುವುದಿಲ್ಲ'ಎಂದು ಐಶ್ವರ್ಯಾ ಹೇಳಿದ್ದರು. ಸಲ್ಮಾನ್ ಖಾನ್ ಅವರೊಂದಿಗಿನ ಅಧ್ಯಾಯ ನನಗೆ ದುಃಸ್ವಪ್ನವಾಗಿತ್ತು ಮತ್ತು ಅದು ಮುಗಿದಿದೆ ಎಂದು ನಾನು ದೇವರಿಗೆ ಕೃತಜ್ಞನಾಗಿದ್ದೇನೆ' ಎಂದು ಐಶ್ವರ್ಯಾ ಬಹಿರಂಗಪಡಿಸಿದ್ದರು. ನಾನು ಸಲ್ಮಾನ್ ಖಾನ್ ರ ಮದ್ಯದ ಚಟ, ನಿಂದನೆಯಿಂದ ಬೇಸತ್ತಿದ್ದೆ. ಇದರ ಹೊರತಾಗಿಯೂ, ನಾನು ಅವರ ಬೆಂಬಲಕ್ಕೆ ನಿಂತಿದ್ದೆ. ಪ್ರತಿಯಾಗಿ ನನಗೆ ಸಿಕ್ಕಿದ್ದು ಸಲ್ಮಾನ್‌ರ ಮೌಖಿಕ, ದೈಹಿಕ ಮತ್ತು ಭಾವನಾತ್ಮಕ ನಿಂದನೆ ಹಾಗೂ ದ್ರೋಹ ಮತ್ತು ಅವಮಾನ ಎಂದು ಈ ಸಂದರ್ಶನದಲ್ಲಿ ಹೇಳಿದ್ದರು. ಆದರೂ ಸಲ್ಮಾನ್ ಮೇಲೆ ನಟಿಗೆ ಇದ್ದ ವ್ಯಾಮೋಹ ಆಗ್ಗಾಗ್ಗೆ ರಿವೀಲ್ ಆಗುತ್ತಲೇ ಇತ್ತು. ಎಷ್ಟೆಂದರೂ ಮೊದಲ ಲವ್ ಮರೆಯಲು ಸಾಧ್ಯವಿಲ್ಲ ಅಲ್ಲವೆ?
ನನ್ನದು ಬಚ್ಚನ್ ಫ್ಯಾಮಿಲಿ, ಖಾನ್ ಫ್ಯಾಮಿಲಿಯಲ್ಲ! ಕರಣ್ ಜೋಹರ್ ವಿರುದ್ಧ ಐಶ್ವರ್ಯ ಗರಂ ಆಗಿದ್ಯಾಕೆ?