‘ಸಾಹೋ’ ನಟಿ ಎವೆಲ್ಯನ್ ಶರ್ಮಾ ಬಾಯ್ ಫ್ರೆಂಡ್ ಡಾ. ತುಷಾನ್ ಬಿಂದಿ ಜೊತೆ ಎಂಗೇಜ್ ಆಗಿರುವುದನ್ನು ಅಧಿಕೃತಗೊಳಿಸಿದ್ದಾರೆ.  ಇಬ್ಬರೂ ಸಿಡ್ನಿಯಲ್ಲಿ ರೊಮ್ಯಾಂಟಿಕ್ ಅಗಿ ಕಾಲ ಕಳೆಯುತ್ತಿದ್ದು ಅಲ್ಲಿಂದಲೇ ಎಂಗೇಜ್  ಆಗಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. 

ನಟನೊಬ್ಬನ ಜೊತೆ ಬೆಡ್ ರೂಮ್ ನಲ್ಲಿ ಪ್ರಿಯಾಂಕ; ವಿಡಿಯೋ ಲೀಕ್!

ಎಲ್ಲಾ ಅರೇಂಜ್ ಮೆಂಟನ್ನು ತುಷಾರ್ ಮಾಡಿದ್ದ. ನಮ್ಮ ಫೇವರೆಟ್ ಹಾಡನ್ನು ಪ್ಲೇ ಮಾಡುವಂತೆ ಗಿಟಾರಿಸ್ಟ್ ಗೆ ಹೇಳಿ ನನಗೆ ಪ್ರಪೋಸ್ ಮಾಡಿದ. ಆ ಘಳಿಗೆಯನ್ನು ನಾನು ಎಂದಿಗೂ ಮರೆಯಲಾಗುವುದಿಲ್ಲ. ನನ್ನ ಕನಸು ನನಸಾದ ಘಳಿಗೆ ಅದು. ತುಷಾರ್ ಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತು. ಅವನು ಪ್ರಪೋಸ್ ಮಾಡಿದ ರೀತಿ ಪರ್ಫೆಕ್ಟ್ ಆಗಿತ್ತು ಎಂದು ಎವೆಲಿನ್ ಶರ್ಮಾ ಹೇಳಿದ್ದಾರೆ. 

ಬಿಗ್ ಬಾಸ್ ಕಿಚ್ಚ ಸುದೀಪ್ ಸಂಭಾವನೆ ರಿವೀಲ್

ಇಬ್ಬರೂ ಪರಸ್ಪರ ಚುಂಬಿಸಿಕೊಳ್ಳುತ್ತಿದ್ದು, Yesss ಎಂದು ಬರೆದಕೊಂಡಿದ್ದಾರೆ. 

 

 
 
 
 
 
 
 
 
 
 
 
 
 

Yessss!!! 🥰💍🥳😍🤩

A post shared by Evelyn Sharma (@evelyn_sharma) on Oct 7, 2019 at 7:24pm PDT

ಕಳೆದ ವರ್ಷ ನಾವು ಸ್ನೇಹಿತರೊಬ್ಬರ ಮನೆಯಲ್ಲಿ ಭೇಟಿಯಾದೆವು. ತುಷಾನ್ ನನಗಿಂತ ಹೆಚ್ಚು ರೊಮ್ಯಾಂಟಿಕ್ ಫೆಲೋ. ನಮ್ಮ ಮದುವೆ ದಿನಾಂಕ ನಿಗದಿಯಾದ ಕೂಡಲೇ ಹೇಳುತ್ತೇವೆ. ಈಗ ನಮ್ಮಿಬ್ಬರದೇ ಸಮಯ. ನಾವಿದನ್ನು ಎಂಜಾಯ್ ಮಾಡುತ್ತಿದ್ದೇವೆ’ ಎಂದು ಎವೆಲಿನ್ ಹೇಳಿದ್ದಾರೆ. 

ಎವೆಲಿನ್, ದೀಪಿಕಾ ಪಡುಕೋಣೆ, ರಣವೀರ್ ಕಪೂರ್ ಜೊತೆ ಯೇ ಜವನಿ ಯೇ ದಿವಾನಿ ಸಿನಿಮಾದಲ್ಲಿ ನಟಿಸಿದ್ದಾರೆ. ಅಡ್ವೆಂಚರ್ ರಿಯಾಲಿಟಿ ಶೋ ಲೈಫ್ ಮೇ ಏಕ್ ಬಾರ್ ದಲ್ಲಿ ಕಾಣಿಸಿಕೊಂಡಿದ್ದರು. 

ಸಾಹೋ ಸಿನಿಮಾದಲ್ಲಿ ಪ್ರಭಾಸ್ ಜೊತೆ ನಟಿಸಿದ್ದಾರೆ. ಸಾಹೋ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. 300 ಕೋಟಿ ಕಲೆಕ್ಷನ್ ಮಾಡಿದೆ. 

ಅಕ್ಟೋಬರ್ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: