ಪ್ರಿಯಾಂಕ ಚೋಪ್ರಾ- ಫರ್ಹಾನ್ ಅಖ್ತರ್ ಇಬ್ರೂ ಬೆಡ್ ರೂಮ್ ನಲ್ಲಿ ರೊಮ್ಯಾನ್ಸ್ ಮಾಡುವಾಗ ಸಿಕ್ಕಿ ಬಿದ್ದಿದ್ದಾರೆ! ಇಬ್ಬರೂ ಅರೆನಗ್ನವಾಗಿದ್ದು ನೀನು ಹಾಕಿರುವ ಅಂಡರ್ ವೇರ್ ನನ್ನದು ಎಂದು ಪ್ರಿಯಾಂಕ ಮಾದಕವಾಗಿ ನಗುತ್ತಾರೆ. ಇಬ್ಬರೂ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಮೂಡಿಸಿದ್ದಾರೆ. 

ಪ್ರಿಯಾಂಕ ನಿಕ್ ಜೋನಸ್ ರನ್ನು ಮದುವೆಯಾದ ಬಳಿಕ ಸಿನಿಮಾಗಳಿಂದ ದೂರ ಉಳಿದಿದ್ದರು. ‘The Sky is Pink' ಎನ್ನುವ ಸಿನಿಮಾ ಮೂಲಕ ಬಾಲಿವುಡ್ ಗೆ ಹಿಂತಿರುಗಿದ್ದಾರೆ. ಫರ್ಹಾನ್ ಅಖ್ತರ್, ಜೈರಾ ವಾಸಿಮ್, ರೋಹಿತ್ ಸುರೇಶ್ ಜೊತೆ ಈ ಸಿನಿಮಾ ಮಾಡಿದ್ದಾರೆ. ‘The Sky is Pink' ಸಿನಿಮಾದ ಹಸಿಬಿಸಿ ದೃಶ್ಯದ ವಿಡಿಯೋ ತುಣುಕೊಂದು ಸೋಷಿಯಲ್ ಮೀಡಿಯದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಪ್ರಿಯಾಂಕ, ಫರ್ಹಾನ್ ಇಬ್ಬರೂ ಅರೆನಗ್ನವಾಗಿ ಕಾಣಿಸಿಕೊಂಡಿದ್ದಾರೆ. 

 

ದಂಪತಿಗಳ 25 ವರ್ಷಗಳ ದಾಂಪತ್ಯ ಜೀವನದ ಬಗ್ಗೆ, ಕಂಡ ಏಳು ಬೀಳುಗಳ ಬಗ್ಗೆ ಅವರ ಮಗಳು ಆಯಿಶಾ ಚೌಧರಿ ಹೇಳುತ್ತಾ ಹೋಗುವುದೇ ಈ ಚಿತ್ರದ ಮರ್ಮ. ಪ್ರಿಯಾಂಕ, ಫರ್ಹಾನ್ ಅಪ್ಪ, ಅಮ್ಮನಾಗಿ ಕಾಣಿಸಿಕೊಂಡಿದ್ದಾರೆ. ಸೋನಾಲಿ ಬೋಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ.