Asianet Suvarna News Asianet Suvarna News

Prabhas: ಬಾಲಿವುಡ್ ಸ್ಟಾರ್ ನಟಿಯ ಜೊತೆ ಮಾಲ್ಡೀವ್ಸ್‌ನಲ್ಲಿ 'ಸಲಾರ್' ಸ್ಟಾರ್ ಪ್ರಭಾಸ್ ನಿಶ್ಚಿತಾರ್ಥವಂತೆ!

ಬಾಲಿವುಡ್ ಸ್ಟಾರ್ ನಟಿಯ ಜೊತೆ ಟಾಲಿವುಡ್ ಸ್ಟಾರ್ ಪ್ರಭಾಸ್ ಮುಂದಿನ ವಾರ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

Rumors on Kriti Sanon and Prabhas will get engaged next week in Maldives sgk
Author
First Published Feb 6, 2023, 6:07 PM IST | Last Updated Feb 7, 2023, 4:53 PM IST

ಟಾಲಿವುಡ್ ಸ್ಟಾರ್ ಪ್ರಭಾಸ್ ಮದುವೆ ವಿಚಾರ ಸದಾ ಸುದ್ದಿಯಲ್ಲಿರುತ್ತದೆ. ಅಷ್ಟೆಯಲ್ಲ ಇತ್ತೀಚಿಗೆ ಪ್ರಭಾಸ್ ಡೇಟಿಂಗ್ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಪ್ರಭಾಸ್ ಬಾಲಿವುಡ್ ಸ್ಟಾರ್ ನಟಿ ಕೃತಿ ಸನೊನ್ ಜೊತೆ ಡೇಟಿಂಗ್ ನಲ್ಲಿದ್ದಾರೆ ಸದ್ಯದಲ್ಲೇ ಮದುವೆ ಆಗ್ತಾರೆ ಎನ್ನುವ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಟಿ ಕೃತಿ ಪ್ರತಿಕ್ರಿಯೆ ನೀಡುವ ಮೂಲಕ ಡೇಟಿಂಗ್ ಮದಂತಿಯನ್ನು ತಳ್ಳಿ ಹಾಕಿದ್ದರು. ಆದರೂ ಇಬ್ಬರ ನಡುವಿನ ಡೇಟಿಂಗ್ ವದಂತಿ ಸದ್ದು ಮಾಡುತ್ತಲೇ ಇದೆ. ಇದೀಗ ಪ್ರಭಾಸ್ ಮತ್ತು ಕೃತಿ ಬಗ್ಗೆ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳಲು ಸಿದ್ದತೆ ನಡೆಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. 

ವಿದೇಶದಲ್ಲಿ ಇಬ್ಬರೂ ಎಂಗೇಜ್ ಆಗುತ್ತಿದ್ದಾರೆ, ಈಗಾಗಲೇ ಎಲ್ಲಾ ತಯಾರಿ ನಡೆದಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಹೌದು, ಪ್ರಭಾಸ್ ಮತ್ತು ಕೃತಿ ಇಬ್ಬರೂ ಮಾಲ್ಡೀವ್ಸ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರಂತೆ. ಮುಂದಿನ ವಾರವೇ ಇಬ್ಬರ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ ಎಂದು ಹೇಳಲಾಗುತ್ತಿದೆ.  ಅಷ್ಟಕ್ಕೂ ಈ ಸುದ್ದಿ ವೈರಲ್ ಆಗಲು ಕಾರಣ ಉಮೈರ್ ಸಂಧು. ಓವರ್ ಸೀಸ್ ಫಿಲ್ಮ್  ಸರ್ಕಿಫಿಕೇಟ್‌ನ ಸದಸ್ಯ ಹಾಗೂ ವಿಮರ್ಶಕ  ಉಮೈರ್ ಸಂಧು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಉಮೈರ್ ಸಂಧು, ಮುಂದಿನ ವಾರ ಮಾಲ್ಡೀವ್ಸ್‌ನಲ್ಲಿ ಪ್ರಭಾಸ್ ಮತ್ತು ಕೃತಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. 

ಅಂದಹಾಗೆ ಉಮೈರ್ ಆಗಾಗ ವೈರಲ್ ಗಾಸಿಪ್‌ಗಳ ಬಗ್ಗೆ ಟ್ವೀಟ್ ಮಾಡುತ್ತಿರುತ್ತಾರೆ. ಈ ಮೊದಲು ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ದಾಂಪತ್ಯದಲ್ಲಿ ಬಿರುಕು ಎಂದು ಟ್ವೀಟ್ ಮಾಡಿದ್ದರು. ಹೀಗೆ ಅನೇಕ ವಿಚಾರಗಳ ಟ್ವೀಟ್ ಮಾಡಿದ್ದರು. ಇದೀಗ ಪ್ರಭಾಸ್ ನಿಶ್ಚಿತಾರ್ಥದ ಬಗ್ಗೆ ಟ್ವೀಟ್ ಮಾಡಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ಪ್ರಭಾಸ್ ಮತ್ತು ಕೃತಿ ಅಭಿಮಾನಿಗಳು ಉಮೈರ್ ಸಂಧು ಅವರನ್ನು ಸಖತ್ ಟ್ರೋಲ್ ಮಾಡುತ್ತಿದ್ದಾರೆ. 

ಅನುಷ್ಕಾ ಶೆಟ್ಟಿ OR ಕೃತಿ ಸನೊನ್; ಬಾಲಯ್ಯ ಪ್ರಶ್ನೆಗೆ ಪ್ರಭಾಸ್ ರಿಯಾಕ್ಷನ್ ಹೀಗಿತ್ತು

ಅಭಿಮಾನಿಯೊಬ್ಬ ಕಾಮೆಂಟ್ ಮಾಡಿ, ನಿಮ್ಮ ಅಪ್‌ಡೇಟ್‌ಗೆ ಧನ್ಯವಾದಗಳು, ಜೊತೆಗೆ ಫುಡ್ ಕ್ಯಾಟರಿಂಗ್ ನೀವೆ ಕಾಂಟ್ರಾಕ್ಟ್ ಪಡೆದಿದ್ದೀರಿ ಎಂದು ಕೇಳಿಪಟ್ವಿ. ಬಿರಿಯಾನಿ ಹೈಲೈಟ್ ಆಗಬೇಕು. ಟೇಕ್ ಕೇರ್' ಎಂದು ಹೇಳಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಈವೆಂಟ್ಗೆ ಪ್ರಭಾಸ್ ಬರ್ತಾರಂತಾ ಎಂದು ಕಲೆಳೆದಿದ್ದಾರೆ. ಮತ್ತೋರ್ವ ಕಾಮೆಂಟ್ ಕೃತಿ ಸನೊನ್‌ಗೆ ಆಮಂತ್ರಣ ನೀಡಿದ್ದೀರಾ? ಎಂದು ಕೇಳಿದ್ದಾರೆ.

Kriti Prabhas ಬೇರೊಬ್ಬರು ಮದುವೆ ಡೇಟ್‌ ಅನೌನ್ಸ್‌ ಮಾಡುವ ಮುನ್ನ ಇದು ನನ್ನ ಕ್ಲಾರಿಟಿ: ಕೃತಿ ಸನೊನ್

 ಕೃತಿ-ಕಾರ್ತಿಕ್ ಆರ್ಯನ್ ಫೋಟೋ ವೈರಲ್ 

ಇತ್ತೀಚಿಗಷ್ಟೆ ಕೃತಿ ಸನೊನ್ ಮತ್ತು ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಇಬ್ಬರ ಫೋಟೋ   ವೈರಲ್ ಆಗಿತ್ತು. ಪ್ರಭಾಸ್ ಜೊತೆ ಡೇಟಿಂಗ್ ವದಂತಿ ಬೆನ್ನಲ್ಲೇ ಕಾರ್ತಿಕ್ ಜೊತೆ ಕೃತಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿ ಬರುತ್ತಿದೆ. ಇಬ್ಬರೂ ಅನೇಕ ವರ್ಷಗಳಿಂದ ಸ್ನೇಹಿತರು. ಇಬ್ಬರ ನಡುವೆ ಉತ್ತಮ ಸ್ನೇಹ ಬಾಂಧವ್ಯವಿದೆ. ಇದೀಗ ಇಬ್ಬರೂ ಗೋಲ್ಡನ್ ಟೆಂಪಲ್ ಮುಂದಿನ ನಿಂತು ಕ್ಲಿಕ್ಕಿಸಿಕೊಂಡಿದ್ದ ಪೋಟೋ ಶೇರ್ ಮಾಡಿದ್ದರು. ಈ ಫೋಟೋ ನೋಡಿದ ಅನೇಕರು ಇಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾದ ಬಂಧವಿದೆ ಎನ್ನುತ್ತಿದ್ದಾರೆ. ನಿಜಕ್ಕೂ ಕೃತಿ ಯಾರ ಜೊತೆ ಡೇಟಿಂಗ್‌ನಲ್ಲಿದ್ದಾರೆ, ಪ್ರಭಾಸ್ ಮದುವೆ ಯಾವಾಗ? ಎನ್ನುವ ಪ್ರಶ್ನೆಗೆ ಅವರೇ ಉತ್ತರ ನೀಡಬೇಕು.
 

Latest Videos
Follow Us:
Download App:
  • android
  • ios