Asianet Suvarna News Asianet Suvarna News

Kriti Prabhas ಬೇರೊಬ್ಬರು ಮದುವೆ ಡೇಟ್‌ ಅನೌನ್ಸ್‌ ಮಾಡುವ ಮುನ್ನ ಇದು ನನ್ನ ಕ್ಲಾರಿಟಿ: ಕೃತಿ ಸನೊನ್

ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ವರುಣ್ ಧವನ್ ಕ್ರಿಯೇಟ್‌ ಮಾಡಿದ ಗಾಳಿ ಮಾತುಗಳಿಗೆ ಬ್ರೇಕ್ ಹಾಕಿದೆ ಕೃತಿ.... 

Kriti Sanon reacts to wedding rumours with Prabhas vcs
Author
First Published Nov 30, 2022, 8:56 AM IST

ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಆದಿಪುರುಷ್ ಪೋಸ್ಟರ್‌ ಲುಕ್, ಟ್ರೈಲರ್ ಮತ್ತು ಟೀಸರ್‌ ಮೂಲಕ ಸಿನಿ ರಸಿಕರ ಗಮನ ಸೆಳೆದಿದೆ. ಟಾಲಿವುಡ್ ಸ್ಟಾರ್ ನಟ ಪ್ರಭಾಸ್‌ಗೆ ಬಾಲಿವುಡ್‌ ಸುಂದರಿ ಕೃತಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಸಲ ಈ ಕಾಂಬಿನೇಷನ್‌ ಕಂಡಿರುವ ಸಿನಿ ರಂಗ ಆನ್‌ಸ್ಕ್ರೀನ್‌ ಮೋಡಿ ನೋಡಲು ಥ್ರಿಲ್ ಆಗಿದ್ದಾರೆ ಏಕೆಂದರೆ ಆಫ್‌ ಸ್ಕ್ರೀನ್‌ ಇವರಿಬ್ಬರು ಮದುವೆ ಆಗುತ್ತಾರೆ ಹಾಗೆ ಹೀಗೆ ಎನ್ನಲಾಗಿದೆ.....

ಹೌದು! ಕೆಲವು ತಿಂಗಳುಗಳಿಂದ ಕೃತಿ ಸನೊನ್ ಮತ್ತು ಪ್ರಭಾಸ್‌ ಡೇಟಿಂಗ್ ಮಾಡುತ್ತಿದ್ದಾರೆ ಆದಿಪುರುಷ್ ಸಿನಿಮಾ ರಿಲೀಸ್ ಆದ್ಮೇಲೆ ಪ್ರಭಾಸ್ ಪ್ರಪೋಸ್‌ ಮಾಡಲಿದ್ದಾರೆ ಆನಂತರ ಮದುವೆ ಸಿದ್ಧತೆ ಆರಂಭವಾಗಲಿದೆ ಎನ್ನುವ ಮಾತುಗಳಿತ್ತು. ದಿನಕ್ಕೊಂದು ಕ್ರಿಯೇಟಿವ್‌ ರೂಮರ್ಸ್‌ಗಳು ಹೊರ ಬರುತ್ತಿತ್ತು ಆದರೆ ಪ್ರಭಾಸ್‌ ಮತ್ತು ಕೃತಿ ರಿಯಾಕ್ಟ್‌ ಮಾಡುತ್ತಿರಲಿಲ್ಲ...ಎಲ್ಲವೂ ಅತಿ ಮೀರಿತ್ತು ಅನಿಸಿದ್ದಾಗ ಇನ್‌ಸ್ಟಾಗ್ರಾಂನಲ್ಲಿ ಕೃತಿ ಪೋಸ್ಟ್ ಮಾಡಿದ್ದಾರೆ.

ಕೃತಿ ಪೋಸ್ಟ್‌:

'ಇದು ಪ್ರೀತಿನೂ ಅಲ್ಲ ಪಿಆರ್‌ನೂ ಅಲ್ಲ...ನಮ್ಮ ಬೇಡಿಯಾ ರಿಯಾಲಿಟಿ ಶೋ ಸಮಯದಲ್ಲಿ ಕೊಂಚ ವೈಲ್ಡ್‌ ಆಯ್ತು. ಆತಗ ತಮಾಷೆ ಕ್ಷಣಗಳು ಇಷ್ಟೊಂದು ದೊಡ್ಡ ಗಾಳಿ ಮಾತುಗಳಿಗೆ ಕಾರಣವಾಯ್ತು. ಯಾವುದೋ ಒಂದು ಸುದ್ದಿ ವಾಹಿನಿ ಅನೌನ್ಸ್‌ ಮಾಡುವ ಮುನ್ನ ನಾನೇ ಕ್ಲಾರಿಟಿ ಕೊಡ್ತೀನಿ ...ನಿಮ್ಮಲ್ಲರ ಬಬಲ್‌ನ ನಾನೇ ಬರ್ಸ್ಟ್‌ ಮಾಡುತ್ತೀನಿ. ಹರಿದಾಡುತ್ತಿರುವ ಮಾತುಗಳಿಗೆ ಅರ್ಥವಿಲ್ಲ...ಎಲ್ಲವೂ ಫೇಕ್' ಎಂದು ಕೃತಿ ಬರೆದುಕೊಂಡಿದ್ದಾರೆ. 

Kriti Sanon reacts to wedding rumours with Prabhas vcs

ಎಡವಟ್ಟು ಆಗಿದ್ದು ಎಲ್ಲಿ?

ವರುಣ್ ಧವನ್ ಮತ್ತು ಕೃತಿ ಸನೊನ್ ಇತ್ತೀಚಿಗಷ್ಟೆ ಬೇಡಿಯಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದ ಪ್ರಚಾರದ ವೇಳೆ ವರುಣ್ ಧವನ್, ಪ್ರಭಾಸ್ ಬಗ್ಗೆ ಮಾತನಾಡಿದ್ದಾರೆ. 'ಪ್ರಭಾಸ್ ಜೀವನದಲ್ಲಿ ಒಬ್ಬಳು ಡಾರ್ಲಿಂಗ್ ಇದ್ದಾಳೆ' ಎಂದು ಹೇಳಿದ್ದಾರೆ. ಜೊತೆಗೆ ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ಮತ್ತು ಕೃತಿ ಇಬ್ಬರದ್ದು ಉತ್ತಮ ಜೋಡಿ ಎಂದು ಹೇಳಿದ್ದಾರೆ. ವರುಣ್ ಧವನ್ ಹೇಳಿಕೆ ಅಭಿಮಾನಿಗಳಿಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಪ್ರಭಾಸ್ ಜೀವನದ ಡಾರ್ಲಿಂಗ್ ಯಾರು ಎಂದು ಈಗಾಗಲೇ ಹುಡುಕುತ್ತಿದ್ದಾರೆ. ಪ್ರಭಾಸ್ ಪ್ರೀತಿಸುತ್ತಿರುವುದು ಬಾಲಿವುಡ್ ಸ್ಟಾರ್ ಕೃತಿ ಸನೊನ್ ಇರಬಹುದಾ ಎನ್ನುವ ಅನುಮಾನ ಕೂಡ ಬಲವಾಗಿದೆ. ಒಟ್ನಲ್ಲಿ ಪ್ರಭಾಸ್ ಪ್ರೀತಿಯಲ್ಲಿ ಬಿದ್ದಿರುವುದು ನಿಜ ಎನ್ನುವುದು ವರುಣ್ ಧವನ್ ಮಾತುಗಳಿಂದ ಬಹಿರಂಗವಾಗಿದೆ. 

'ಆದಿಪುರುಷ್' ಟ್ರೋಲ್‌ಗೆ ಕೊನೆಗೂ ಮೌನ ಮುರಿದ ಕೃತಿ; ನಿರ್ದೇಶಕರ ಬಗ್ಗೆ ಹೆಮ್ಮೆ ಇದೆ ಎಂದ ನಟಿ

ಕೃತಿ ಒಪ್ಪಿಕೊಂಡಿದ್ರಾ?

ಹೌದು! ಕೃತಿ ಸನೊನ್ ಮತ್ತು ವರುಣ್ ದವನ್ ನಟಿಸಿರುವ Bhediya ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದು ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ನಿರೂಪಕಿ ಒಂದು ಪ್ರಶ್ನೆ ಹಾಕುತ್ತಾರೆ, ಟೈಗರ್ ಶ್ರಾಫ್- ಪ್ರಭಾಸ್ ಮತ್ತು ಕಾರ್ತಿಕ್ ಆರ್ಯನ್‌ ಈ ಮೂವರಲ್ಲಿ ಒಬ್ಬರನ್ನು ಮದುವೆ ಆಗಬೇಕು, ಫ್ಲರ್ಟ್‌ ಮಾಡಬೇಕು, ಮತ್ತು ಡೇಟ್ ಮಾಡಬೇಕು ಎಂದು ಕೇಳಿದ್ದರೆ ಯಾರ ಹೆಸರು ಹೇಳುತ್ತೀರಾ ಎಂದು. ಒಂದು ನಿಮಿಷವೂ ಯೋಚಿಸದೆ ಕೃತಿ ಕಾರ್ತಿಕ್ ಆರ್ಯನ್‌ನ ಫ್ಲರ್ಟ್‌ ಮಾಡ್ತೀನಿ, ಟೈಗರ್ ಶ್ರಾಫ್‌ನ ಡೇಟ್ ಮಾಡ್ತೀನಿ ಹಾಗೆ ಪ್ರಭಾಸ್‌ನ ಮದುವೆ ಆಗ್ತೀನಿ ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಇದು ನಿಜವಾಗಲಿ ಎಂದು ವಿಶ್ ಮಾಡುತ್ತೀವಿ ಎಂದಿದ್ದಾರೆ. ಏನೋ ತಮಾಷೆ ಅಂದುಕೊಂಡು ಸುಮ್ಮನಾಗಲು ಆಗುವುದಿಲ್ಲ ಏಕೆಂದರೆ ಈ ಹಿಂದೆ ಮತ್ತೊಂದು ಸಂದರ್ಶನದಲ್ಲಿ ಕೃತಿ ಉದ್ದ ಹುಡುಗನನ್ನು ಡೇಟ್ ಮಾಡುತ್ತಿರುವುದಾಗಿ ವರುಣ್ ಸುಳಿವು ಕೊಟ್ಟಿದ್ದರು. ಆಗ ಕೃತಿ ಮುಖದಲ್ಲಿ ಮುಗುಳು ನಗೆ ಕಂಡಿತ್ತು. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ # ಪ್ರಭಾಸ್ ಮತ್ತು #ಕೃತಿ ಟ್ರೆಂಡ್ ಆಗುತ್ತಿದೆ.  

Follow Us:
Download App:
  • android
  • ios