- Home
- Entertainment
- Cine World
- ಒಟ್ಟಿಗೆ ನಟಿಸುತ್ತಾ ಪ್ರೀತಿಯಲ್ಲಿ ಬಿದ್ದ ಟಾಲಿವುಡ್ ಜೋಡಿಗಳು! ಇವರ ಲವ್ ಸ್ಟೋರಿ ನಿಜಕ್ಕೂ ಇಂಟರೆಸ್ಟಿಂಗ್
ಒಟ್ಟಿಗೆ ನಟಿಸುತ್ತಾ ಪ್ರೀತಿಯಲ್ಲಿ ಬಿದ್ದ ಟಾಲಿವುಡ್ ಜೋಡಿಗಳು! ಇವರ ಲವ್ ಸ್ಟೋರಿ ನಿಜಕ್ಕೂ ಇಂಟರೆಸ್ಟಿಂಗ್
Telugu Celebrity Couples: ತೆಲುಗು ಚಿತ್ರರಂಗದಲ್ಲಿ ಸಿನಿಮಾ ಸೆಟ್ನಲ್ಲೇ ಪ್ರೇಮಕಥೆ ಆರಂಭಿಸಿಕೊಂಡು, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಲವು ಸೆಲೆಬ್ರಿಟಿ ಜೋಡಿಗಳಿದ್ದಾರೆ. ಅವರಲ್ಲಿ ಪ್ರಮುಖ ನಟ-ನಟಿಯರ ಲಿಸ್ಟ್ ಇಲ್ಲಿದೆ. ಇವರಲ್ಲಿ ನಿಮ್ಮ ಫೇವರಿಟ್ ಕಪಲ್ಸ್ ಯಾರು?

ತೆಲುಗಿನ ಸೆಲೆಬ್ರಿಟಿ ಜೋಡಿಗಳು
ತೆಲುಗು ಚಿತ್ರರಂಗದಲ್ಲಿ ಹಲವು ಸೆಲೆಬ್ರಿಟಿ ಜೋಡಿಗಳ ಪ್ರೇಮಕಥೆ ಸಿನಿಮಾ ಸೆಟ್ನಿಂದಲೇ ಆರಂಭವಾಗಿ, ಕೊನೆಗೆ ಮದುವೆಯ ಹಂತಕ್ಕೆ ತಲುಪಿದೆ. ನಾಗಾರ್ಜುನ ಮತ್ತು ಅಮಲಾ ಜೋಡಿಯಿಂದ ಹಿಡಿದು ಸಮಂತಾ-ರಾಜ್ ನಿಡಿಮೀರ್ ಜೋಡಿಯವರೆಗೆ, ಒಟ್ಟಿಗೆ ಕೆಲಸ ಮಾಡುತ್ತಾ ಪ್ರೀತಿಯಲ್ಲಿ ಬಿದ್ದ ಈ ತಾರೆಯರ ಆಸಕ್ತಿದಾಯಕ ಪ್ರೇಮಕಥೆಗಳ ಬಗ್ಗೆ ತಿಳಿಯೋಣ.
ಸಮಂತಾ ಮತ್ತು ರಾಜ್
ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ಅವರ ಪರಿಚಯ 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸೀರಿಸ್ನ ಸೆಟ್ನಲ್ಲಿ ಆಗಿತ್ತು. ಈ ಸೀರಿಸ್ನಲ್ಲಿ ಪ್ರಮುಖ ಪಾತ್ರದಲ್ಲಿ ಸಮಂತಾ ನಟಿಸಿದ್ದರು. ಇದಾದ ಬಳಿಕ ಇಬ್ಬರೂ ಮತ್ತೊಮ್ಮೆ ಜೊತೆಯಾಗಿ ಕೆಲಸ ಮಾಡಿದರು. ರಾಜ್ ಮತ್ತು ಡಿಕೆ ನಿರ್ದೇಶನದ 'ಸಿಟಾಡೆಲ್: ಹನಿ ಬನ್ನಿ' ವೆಬ್ ಸೀರಿಸ್ನಲ್ಲೂ ಸಮಂತಾ ನಟಿಸಿದ್ದರು. ಇದಾದ ಬಳಿಕ ಇಬ್ಬರೂ ಪ್ರೀತಿಯಲ್ಲಿ ಬಿದ್ದರು.
ಡಿಸೆಂಬರ್ ನಲ್ಲಿ ಮದುವೆ, ಈಗ ಪೋಷಕರಾಗಿ ಭಡ್ತಿ
ನಂತರ 2025ರ ಡಿಸೆಂಬರ್ 1ರಂದು ಇಬ್ಬರೂ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಇದಕ್ಕೂ ಮೊದಲು ಸಮಂತಾ ನಾಗ ಚೈತನ್ಯ ಅವರನ್ನು ಮದುವೆಯಾಗಿದ್ದರು. ಆದರೆ ನಂತರ ಇಬ್ಬರ ನಡುವೆ ವಿಚ್ಛೇದನವಾಗಿತ್ತು. ಇದೀಗ ಈ ಜೋಡಿ ನವೆಂಬರ್ 19ರಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದೆ.
ನಾಗಾರ್ಜುನ ಅಕ್ಕಿನೇನಿ ಮತ್ತು ಅಮಲಾ
ತೆಲುಗು ಚಿತ್ರರಂಗದ ಖ್ಯಾತ ನಟ ನಾಗಾರ್ಜುನ ಅಕ್ಕಿನೇನಿ ಮತ್ತು ಅವರ ಪತ್ನಿ ಅಮಲಾ ಅಕ್ಕಿನೇನಿ ಚಿತ್ರರಂಗದ ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ಇವರಿಬ್ಬರ ಮೊದಲ ಭೇಟಿಯಾಗಿದ್ದು 1980ರ ದಶಕದ ಕೊನೆಯಲ್ಲಿ. ಆಗ ಇಬ್ಬರೂ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಈ ಸಂದರ್ಭದಲ್ಲಿ 'ಕಿರಾಯಿ ದಾದಾ', 'ಚಿನ್ನಬಾಬು', 'ಶಿವ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಹೀಗೆ ಜೊತೆಯಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಉತ್ತಮ ಸ್ನೇಹ ಬೆಳೆದಿತ್ತು.
ಲಕ್ಷ್ಮೀ ದಗ್ಗುಬಾಟಿ ಜೊತೆ ಡಿವೋರ್ಸ್ ಬಳಿಕ ಮದುವೆ
ಆ ಸಮಯದಲ್ಲಿ ನಾಗಾರ್ಜುನ ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಕಷ್ಟದ ದಿನಗಳನ್ನು ಎದುರಿಸುತ್ತಿದ್ದರು. 1990ರಲ್ಲಿ ಲಕ್ಷ್ಮೀ ದಗ್ಗುಬಾಟಿ ಅವರೊಂದಿಗಿನ ಮೊದಲ ವಿವಾಹ ವಿಚ್ಛೇದನದೊಂದಿಗೆ ಅಂತ್ಯಗೊಂಡಿತ್ತು. ಇದಾದ ಬಳಿಕ ನಾಗಾರ್ಜುನ ಮತ್ತು ಅಮಲಾ ನಡುವಿನ ಸ್ನೇಹ ನಿಧಾನವಾಗಿ ಪ್ರೀತಿಗೆ ತಿರುಗಿತು. ಕೊನೆಗೆ 1992ರ ಜೂನ್ 11ರಂದು ಚೆನ್ನೈನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಇಬ್ಬರೂ ವಿವಾಹವಾದರು.
ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್
ತೆಲುಗು ಚಿತ್ರರಂಗದ ಸೂಪರ್ಸ್ಟಾರ್ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ಅವರ ಪ್ರೇಮಕಥೆ ಕೂಡ ಸಿನಿಮಾ ಸೆಟ್ನಿಂದಲೇ ಆರಂಭವಾಗಿತ್ತು. ಇವರಿಬ್ಬರ ಮೊದಲ ಭೇಟಿಯಾಗಿದ್ದು 2000ರಲ್ಲಿ 'ವಂಶಿ' ಸಿನಿಮಾದ ಚಿತ್ರೀಕರಣದ ವೇಳೆ. ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದು, ಪ್ರೀತಿಯಾಗಿ, ಸುಮಾರು ಐದು ವರ್ಷಗಳ ಕಾಲ ಪ್ರೀತಿ ಮಾಡಿ ಮಹೇಶ್ ಬಾಬು ಮತ್ತು ನಮ್ರತಾ ಅವರು 2005ರ ಫೆಬ್ರವರಿ 10ರಂದು ತೆಲುಗು ಸಂಪ್ರದಾಯದಂತೆ ವಿವಾಹವಾದರು. ಈ ದಂಪತಿಗೆ 2006ರಲ್ಲಿ ಗೌತಮ್ ಎಂಬ ಮಗ ಹಾಗೂ 2012ರಲ್ಲಿ ಸಿತಾರಾ ಎಂಬ ಮಗಳು ಜನಿಸಿದರು.
ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ
ತೆಲುಗು ಚಿತ್ರರಂಗದ ಮತ್ತೊಂದು ಜನಪ್ರಿಯ ಜೋಡಿ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ. ಇವರಿಬ್ಬರ ಮೊದಲ ಭೇಟಿಯಾಗಿದ್ದು 2017ರಲ್ಲಿ 'ಮಿಸ್ಟರ್' ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ. ಇದಾದ ಬಳಿಕ 2018ರಲ್ಲಿ ಬಿಡುಗಡೆಯಾದ 'ಅಂತರಿಕ್ಷಂ 9000 KMPH' ಸಿನಿಮಾದಲ್ಲೂ ಇಬ್ಬರೂ ಒಟ್ಟಿಗೆ ನಟಿಸಿದ್ದರು. ತಮ್ಮ ಪ್ರೀತಿಯನ್ನು ಗುಟ್ಟಾಗಿಟ್ಟಿದ್ದ ಜೋಡಿ, ನಂತರ 2023ರಲ್ಲಿ ಇಟಲಿಯ ಟಸ್ಕನಿಯಲ್ಲಿ ವಿವಾಹವಾಗಿದ್ದು, ಈ ಜೋಡಿಗೆ ಗಂಡು ಮಗು ಜನಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.














