Asianet Suvarna News Asianet Suvarna News

ಅನುಷ್ಕಾ ಶೆಟ್ಟಿ OR ಕೃತಿ ಸನೊನ್; ಬಾಲಯ್ಯ ಪ್ರಶ್ನೆಗೆ ಪ್ರಭಾಸ್ ರಿಯಾಕ್ಷನ್ ಹೀಗಿತ್ತು

ತೆಲುಗು ಸ್ಟಾರ್ ಬಲಯ್ಯ ಅನ್‌ಸ್ಟಾಪಬಲ್ ವಿತ್ NBK2 ಶೋನಲ್ಲಿ ಅನುಷ್ಕಾ ಶೆಟ್ಟಿನಾ ಅಥವಾ ಕೃತಿ ಸನೊನ್ ಎಂದು ಕೇಳಿದ ಪ್ರಶ್ನೆಗೆ ಪ್ರಭಾಸ್ ಉತ್ತರ ವೈರಲ್ ಆಗಿದೆ. 

Prabhas reaction on Balayya question about Kriti Sanon Or Anushka Shetty sgk
Author
First Published Dec 30, 2022, 4:10 PM IST

ಟಾಲಿವುಡ್ ಸ್ಟಾರ್ ಪ್ರಭಾಸ್ ಮದುವೆ ವಿಚಾರ ಆಗಾಗ ಸುದ್ದಿಯಾಗುತ್ತಲೆ ಇರುತ್ತೆ. ಪ್ರಭಾಸ್ ಮದುವೆ ಯಾವಾಗ ಎನ್ನುವ ಪ್ರಶ್ನೆ ಆಗಾಗ ಎದುರಾಗುತ್ತಲೇ ಇರುತ್ತದೆ. ಇತ್ತೀಚಿಗಷ್ಟೆ ಪ್ರಭಾಸ್ ಹೆಸರು ಬಾಲಿವುಡ್ ನಟಿ ಕೃತಿ ಸನೊನ್ ಜೊತೆ ಥಳಕು ಹಾಕಿಕೊಂಡಿತ್ತು. ಪ್ರಭಾಸ್ ಮತ್ತು ಕೃತಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ, ಮುಂದಿನ ವರ್ಷ ಇಬ್ಬರೂ ಹಸಮಣೆ ಏರುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಅಂದಹಾಗೆ ಕೃತಿ ಜೊತೆ ಪ್ರಭಾಸ್ ಹೆಸರು ಥಳಕು ಹಾಕಿಕೊಳ್ಳುವ ಮೊದಲು ಅನುಷ್ಕಾ ಶೆಟ್ಟಿ ಹೆಸರು ಕೇಳಿ ಬರುತ್ತಿತ್ತು. ಒಟ್ನಲ್ಲಿ ಪ್ರಭಾಸ್ ಮದುವೆ ವಿಚಾರ ಆಗಾಗ ಸುದ್ದಿಯಲ್ಲಿರುತ್ತದೆ. ಈ ಬಗ್ಗೆ ಪ್ರಭಾಸ್‌ಗೆ ಟಾಲಿವುಡ್ ಸ್ಟಾರ್ ಬಾಲಯ್ಯ ಪ್ರಶ್ನೆ ಮಾಡಿದ್ದಾರೆ.  
 
ಭಾಸ್ ಇತ್ತೀಚಿಗೀಷ್ಟೆ ತೆಲುಗು ಸ್ಟಾರ್ ನಂದಮೂರಿ ಬಾಲಕೃಷ್ಣ ಅವರ ಅನ್‌ಸ್ಟಾಪಬಲ್ ವಿತ್ NBK2 ಶೋನಲ್ಲಿ ಭಾಗಿಯಾಗಿದ್ದರು. ಈ ಶೋನಲ್ಲಿ ಬಾಲಯ್ಯ, ಪ್ರಭಾಸ್ ಮದುವೆ, ಡೇಟಿಂಗ್ ವಿಚಾರವನ್ನು ಪ್ರಶ್ನಿಸಿದ್ದಾರೆ. ಪ್ರಭಾಸ್ ಶೋನಲ್ಲಿ ರಾಮ್ ಚರಣ್ ಫೋನ್ ಮೂಲಕ ಎಂಟ್ರಿ ಕೊಟ್ಟಿದ್ದರು. ಪ್ರಭಾಸ್ ಅವರ ಸದ್ಯದ ಗರ್ಲ್‌ಫ್ರೆಂಡ್ ಹೆಸರು ಹೇಳುವಂತೆ ರಾಮ್ ಚರಣ್‌ಗೆ ಹೇಳಿದರು. ಸದ್ಯಕ್ಕೆ ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ ಎಂದು ಬಹಿರಂಗ ಪಡಿಸಿದರು. ಬಳಿಕ ಬಾಲಯ್ಯ ರೆಡ್ಡಿ, ನಾಯ್ಡು, ಚೌಧರಿ, ಸನೊನ್ ಅಥವಾ ಶೆಟ್ಟಿ ಯಾರೊಂದಿಗೆ ಡೇಟಿಂಗ್ ಮಾಡುತ್ತೀರಿ ಎಂದು ಕೇಳಿದರು. ಬಾಲಯ್ಯ ಪ್ರಶ್ನೆಗೆ ಪ್ರಭಾಸ್ ಅಷ್ಟೆ ನಾಜೂಕಾಗಿ ಉತ್ತರ ನೀಡಿದ್ದಾರೆ. 

ಸಲ್ಮಾನ್ ಖಾನ್ ಮದುವೆ ಆದ್ಮೇಲೆ ನಂದು; ಬಾಲಯ್ಯ ಪ್ರಶ್ನೆಗೆ ಪ್ರಭಾಸ್ ರಿಯಾಕ್ಷನ್ ವೈರಲ್

'ನಮ್ಮ ನಡುವೆ ಏನಿಲ್ಲ ಎಂದು ಈಗಾಗಲೇ ನಟಿಯರು ಹೇಳಿದ್ದಾರೆ. ಈಗ ಮತ್ಯಾಕೆ ಕೆದಕುತ್ತೀರಿ ಎಂದು' ಎಂದು ಹೇಳಿದ್ದಾರೆ. ರಾಮ್ ಮಾತನಾಡಿ, ಶೀಘ್ರದಲ್ಲೇ ಪ್ರಭಾಸ್ ಎಲ್ಲರಿಗೂ ಗುಡ್ ನ್ಯೂಸ್ ಕೊಡ್ತಾರೆ' ಎಂದು ಹೇಳಿದರು. 'ಓಯ್ ಚರಣ್ ನೀವು ಫ್ರೆಂಡ್ ಹಾ ಅಥವಾ ಎನಿಮಿನಾ? ಎಂದು ಪ್ರಭಾಸ್ ಕೇಳಿದರು. ಇವರ ಸಂದರ್ಶನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಶೋನಲ್ಲಿ ಪ್ರಭಾಸ್ ತನ್ನ ಮದುವೆ ಮತ್ತು ಡೇಟಿಂಗ್ ವಿಚಾರವಾಗಿ ಯಾವುದರ ಬಗ್ಗೆಯೂ ಸುಳಿವು ನೀಡಿಲ್ಲ. 

ಇನ್ನು ಬಲಯ್ಯ ಮದುವೆ ಬಗ್ಗೆಯೂ ಪ್ರಶ್ನಿಸಿದ್ದಾರೆ. ಯಾವಾಗ ಸೆಟಲ್ ಆಗ್ತೀರಿ ಎಂದು ಕೇಳಿದರು.  ಬಾಲಕೃಷ್ಣ ಪ್ರಶ್ನೆ ಕೇಳುತ್ತಿದ್ದಂತೆ, 'ಸಲ್ಮಾನ್ ಖಾನ್ ಮದುವೆಯಾದ ಬಳಿಕ' ಎಂದು ಹೇಳಿದರು. ಸದ್ಯ ಈ ಸಂಚಿಕೆ ಒಟಿಟಿಯಲ್ಲಿ ಲಭ್ಯವಿದೆ. ಈ ಸಂಚಿಕೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಕೊನೆಗೂ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 

ಅವರು ಮಗುವಿನ ಹಾಗೆ, ಈಗ ದೊಡ್ಡ ಸ್ಟಾರ್; ಪ್ರಭಾಸ್ ಬಗ್ಗೆ ನಟಿ ನಯನತಾರಾ ಮಾತು

ಕೃತಿ ಜೊತೆ ಪ್ರಭಾಸ್ ಡೇಟಿಂಗ್ ವದಂತಿ 

ಪ್ರಭಾಸ್ ಮತ್ತು ಕೃತಿ ಇಬ್ಬರೂ ಪ್ರೀತಿಸುತ್ತಿದ್ದಾರೆ. ಇಬ್ಬರ ಪ್ರೀತಿ ಪ್ರಾರಂಭವಾಗಿದ್ದೇ ಆದಿಪುರುಷ್ ಸಿನಿಮಾ ಸೆಟ್‌ನಲ್ಲಿ ಎಂದು ಹೇಳಲಾಗುತ್ತಿದೆ. ಟಾಲಿವುಡ್ ಸ್ಟಾರ್ ಪ್ರಭಾಸ್ ಶೂಟಿಂಗ್ ಸೆಟ್‌ನಲ್ಲಿಯೇ ಕೃತಿಗೆ ಲವ್ ಪ್ರಪೋಸ್ ಮಾಡಿದ್ದರು ಎನ್ನಲಾಗಿದೆ. ಪ್ರಭಾಸ್ ಪ್ರಪೋಸ್‌ಗೆ ಕೃತಿ ಶಾಕ್ ಆದರೂ ನಂತರ ಗ್ರೀನ್ ಸಿಗ್ನಲ್ ನೀಡಿದರು ಎನ್ನಲಾಗಿದೆ. ಅಂದಹಾಗೆ ಪ್ರಭಾಸ್ ಮತ್ತು ಕೃತಿ ಇಬ್ಬರೂ ಆದಿಪುರುಷ್ ಸಿನಿಮಾ ರಿಲೀಸ್ ಆದಮೇಲೆ ಮದುವೆಯಾಗ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ. ಅಂದಹಾಗೆ ಆದಿಪುರುಷ್ ಸಿನಿಮಾ ಜೂನ್ ತಿಂಗಳಲ್ಲಿ ರಿಲೀಸ್ ಆಗುತ್ತಿದೆ. ಅಂದರೆ ಇಬ್ಬರೂ ಮುಂದಿನ ವರ್ಷದ ಕೊನೆಯಲ್ಲಿ ಹಸೆಮಣೆ ಏರುವ ಸಾಧ್ಯತೆ ಇದೆ ಎನ್ನಲಾಗಿತ್ತು. 


 

Follow Us:
Download App:
  • android
  • ios