ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಎಸ್‌ಎಸ್‌ ರಾಜಮೌಳಿ ಆರ್‌ಆರ್‌ಆರ್‌ ಚಿತ್ರದ ಬಗ್ಗೆ ಮಾತನಾಡಿದ ರತ್ನ ಪಾಠಕ್ ಶಾ. Ego ಮತ್ತು Regressive ಸಿನಿಮಾ ಅಂತ ಹೇಳಿದ್ಯಾಕೆ? 

ಹಿಂದಿ ಚಿತ್ರರಂಗ, ಕಿರುತೆರೆ ಹಾಗೂ ವೆಬ್‌ ಸೀರಿಸ್‌ಗಳಲ್ಲಿ ಮಿಂಚುತ್ತಿರುವ ನಟಿ ರತ್ನ ಪಾಠಕ್ ಶಾ ಮುಂಬೈನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪುಸ್ತಕಗಳ ಬಗ್ಗೆ ಮಾತನಾಡುತ್ತಾ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಕಲೆಕ್ಷನ್‌ ಮಾಡಿರುವ ಸಿನಿಮಾಗಳ ಸಾಲಿಗೆ ಸೇರುವ ಆರ್‌ಆರ್‌ಆರ್‌ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಎಸ್‌ಎಸ್‌ ರಾಜಮೌಳಿ ಸಿನಿಮಾ ನಮ್ಮನ್ನು ಇನ್ನಷ್ಟು ಹಿಂದಕ್ಕೆ ಕರೆದುಕೊಂಡು ಹೇಗುತ್ತದೆ ಎಂದಿದ್ದಾರೆ. ರತ್ನ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದ್ದಂತೆ ರಾಮ್‌ ಚರಣ್‌ ಮತ್ತು ಜೂನಿಯರ್‌ ಎನ್‌ಟಿಆರ್ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಎಸ್‌ ಎಸ್‌ ರಾಜಮೌಳಿ ನಿರ್ದೇಶನ ಮಾಡಿರುವ ಆರ್‌ಆರ್‌ಆರ್‌ ಸಿನಿಮಾ ಮಾರ್ಚ್‌ 2022ರಲ್ಲಿ ಬಿಡುಗಡೆಯಾಗಿದೆ ವಿಶ್ವಾದ್ಯಂತ 1200 ಕೋಟಿ ರೂಪಾಯಿ ಕೆಲೆಕ್ಷನ್ ಮಾಡಿದೆ. ಇದರ ಜೊತೆಗೆ ಗೋಲ್ಡನ್‌ ಗ್ಲೋಬ್‌ ಅವಾರ್ಡ್‌ಗೆ ಆಯ್ಕೆ ಆಗಿದೆ ಮತ್ತು 5 ನೋಡ್ಸ್‌ ಫಾರ್‌ ಕ್ರಿಟಿಕ್‌ ಚಾಯ್ಸ್‌ ಅವಾರ್ಡ್‌ ಗಿಟ್ಟಿಸಿಕೊಂಡಿದೆ. ಈ ಚಿತ್ರದಲ್ಲಿ ರಾಮ್‌ ಚರಣ್, ಜೂನಿಯರ್ ಎನ್‌ಟಿಆರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವಾತಂತ್ರ್ಯ ಪೂರ್ವದ ಯುಗದ ಬಗ್ಗೆ ಕಥೆ ಹೇಳುವ ಸಿನಿಮಾ ಇದಾಗಿದ್ದು ಅಜಯ್ ದೇವಗನ್ ಮತ್ತು ಅಲಿಯಾ ಭಟ್‌ ಕೂಡ ನಟಿಸಿದ್ದಾರೆ. 

RRR; 'ಗೋಲ್ಡನ್ ಗ್ಲೋಬ್' ಪ್ರಶಸ್ತಿಯ 2 ವಿಭಾಗಗಳಿಗೆ ನಾಮಿನೇಟ್ ಆದ ರಾಜಮೌಳಿ ಸಿನಿಮಾ

ರತ್ನ ಪಾಠಕ್ ಹೇಳಿಕೆ:

'ಆರ್‌ಆರ್‌ಆರ್‌ ರೀತಿಯ ಸಿನಿಮಾಗಳು ಈ ಕಾಲದಲ್ಲಿ ತುಂಬಾ ಜನಪ್ರಿಯವಾಗುತ್ತಿದೆ. ಆದರೆ ಆರ್‌ಆರ್‌ಆರ್‌ ಒಂದು ಹಿನ್ನಡೆಯ ಚಿತ್ರ. ನಾವು ಮುಂದೆ ನೋಡಬೇಕು ಆದರೆ ಈ ಸಿನಿಮಾದಲ್ಲಿ ಹಿಂದಕ್ಕೆ ಕರೆದುಕೊಂಡು ಹಿಂದಿನ ಕಥೆ ಹೇಳುತ್ತದೆ. ನಾವು ಪ್ರಜಾಪ್ರಭುತ್ವದ ತಾಯಿಯಾದ ಭಾರತದಲ್ಲಿ ಇರುವುದರಿಂದ ನಾವು ಏನೇ ಮಾಡಿದ್ದರು ಮಾಡುತ್ತಿದ್ದರೂ ಅದು ಒಳ್ಳೆಯದು ಎಂದು ಭಾವಿಸುತ್ತೇವೆ. ಯಾವಾಗ ಸಿನಿಮಾ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಕ್ರಿಟಿಕಲ್ ಆಗಿ ನೋಡುವುದಿಲ್ಲ ಅಲ್ಲಿವರೆಗೂ ನಾನು ಆರ್‌ಆರ್‌ಆರ್‌ ರೀತಿ ಸಿನಿಮಾಗಳನ್ನು ನೋಡಬೇಕು. ನಾವು ಯಾರೂ ಟೀಕೆಗಳನ್ನು ಇಷ್ಟಪಡುವುದಿಲ್ಲ.ನಮ್ಮ ಅಹಂಕಾರಕ್ಕೆ ಧಕ್ಕೆಯಾಗುತ್ತದೆ. ಈ ರೀತಿ ವಾತಾವರಣ ಸೃಷ್ಟಿಯಾಗಿರುವುದು ದೊಡ್ಡ ದೊಡ್ಡ ವ್ಯಕ್ತಿಗಳಿಂದ ಹೀಗಾಗಿ ಇದನ್ನು ಒಪ್ಪಿಕೊಂಡಿದ್ದೇವೆ' ಎಂದು ರತ್ನ ಮಾತನಾಡಿದ್ದಾರೆ.

ರತ್ನ ಸದ್ಯಕ್ಕೆ ಗುಜರಾತಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಶಾಲ್ ಶಾ ನಿರ್ದೇಶನ ಮಾಡಿರುವ Kutch Express ಸಿನಿಮಾದಲ್ಲಿ ರತ್ನ ಅಭಿನಯಿಸಿದ್ದಾರೆ, ಇದು ಮೊದಲ ಗುಜರಾತಿ ಸಿನಿಮಾ ಆಗಿರುವ ಕಾರಣ ನಿರೀಕ್ಷೆ ಹೆಚ್ಚಿದೆ ಎಂದಿದ್ದಾರೆ. 'ಬಹು ದಿನಗಳಿಂದ ನಾನು ಗುಜರಾತಿ ಸಿನಿಮಾಗಳಲ್ಲಿ ನಟಿಸಲು ತುಂಬಾನೆ ಆಸೆ ಪಟ್ಟಿದ್ದೆ ಆದರೆ ಅವಕಾಶ ಸಿಗುತ್ತಿರಲಿಲ್ಲ ಒಳ್ಳೆ ಕಥೆ ಹಿಡಿದುಕೊಂಡು ಒಳ್ಳೆ ಟೀಂ ನನ್ನನ್ನು ಸಂಪರ್ಕ ಮಾಡಿತ್ತು, ಕಥೆ ಕೇಳಿದ ತಕ್ಷಣ ಸಿನಿಮಾ ಒಪ್ಪಿಕೊಂಡೆ. ಈ ಸಿನಿಮಾದಲ್ಲಿ ಜನರಿಗೆ ಹೇಳಲು ಒಂದು ವಿಚಾರವಿದೆ ಯಾವುದೇ ಸೆಂಟಿಮೆಂಟ್‌ ಇಲ್ಲ ಅಥವಾ ಹಿಂದುಳಿದ ಸಿನಿಮಾವಲ್ಲ. ಈ ಸಿನಿಮಾ ಜನವರಿ 6, 2023ರಂದು ಬಿಡುಗಡೆ ಆಗುತ್ತಿದೆ' ಎಂದು ರತ್ನ ಹೇಳಿದ್ದಾರೆ.