ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಪ್ರತಿಷ್ಠಿತ 'ಗೋಲ್ಡನ್ ಗ್ಲೋಬ್' ಪ್ರಶಸ್ತಿಯ 2 ವಿಭಾಗಗಳಿಗೆ ನಾಮಿನೇಟ್ ಆಗಿದೆ.

ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಸಾರಥ್ಯದಲ್ಲಿ ಬಂದ ಆರ್ ಆರ್ ಆರ್ ಸಿನಿಮಾದ ಹವಾ ಇನ್ನೂ ಕಡಿಮೆ ಆಗಿಲ್ಲ. ಸಿನಿಮಾ ರಿಲೀಸ್ ಆಗಿ ವಿಶ್ವದಾದ್ಯಂತ ಸದ್ದು ಮಾಡಿದೆ. ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ಕೋಟಿ ಗಳಿಕೆ ಮಾಡಿದೆ. ಬಾಹುಬಲಿ ಬಳಿಕ ರಾಜಮೌಳಿ ಮತ್ತೊಮ್ಮೆ ಆರ್ ಆರ್ ಆರ್ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಆರ್ ಆರ್ ಆರ್ ಸಿನಿಮಾಗೆ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಸಿಕ್ಕಿದೆ. ಈಗೇನಿದ್ರು ಪ್ರಶಸ್ತಿಗಳ ಬೇಟೆ. ಹೌದು, ಆರ್ ಆರ್ ಆರ್ ಸಿನಿಮಾ ಇದೀಗ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮಿನೇಟ್ ಆಗಿದೆ. 2 ವಿಭಾಗಗಳಲ್ಲಿ ರಾಜಮೌಳಿ ಚಿತ್ರ ನಾಮಿನೇಟ್​ ಆಗಿರುವುದು ವಿಶೇಷ. ‘ಇಂಗ್ಲಿಷ್​ ಹೊರತಾದ ಅತ್ಯುತ್ತಮ ಸಿನಿಮಾ’ ಹಾಗೂ ‘ಅತ್ಯುತ್ತಮ ಹಾಡು’ (ನಾಟು ನಾಟು) ವಿಭಾಗದಲ್ಲಿ ಈ ಚಿತ್ರ ಬೇರೆ ಬೇರೆ ದೇಶಗಳ ಸಿನಿಮಾ ಜೊತೆಗೆ ಪೈಪೋಟಿ ನೀಡುತ್ತಿದೆ. ಈ ಸುದ್ದಿ ರಾಜಮೌಳಿ ಹಾಗೂ ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ಅಭಿಮಾನಿಗಳಿಗೆ ಸಂತಸ ತಂದಿದೆ. 

ಗೋಲ್ಡನ್​ ಗ್ಲೋಬ್ ಪ್ರಶಸ್ತಿಯನ್ನು ‘ಹಾಲಿವುಡ್​ ಫಾರಿನ್​ ಪ್ರೆಸ್​ ಅಸೋಸಿಯೇಷನ್​’ ಮೂಲಕ ನೀಡಲಾಗುತ್ತದೆ. ಅಮೆರಿಕದ ಸಿನಿಮಾ ಹಾಗೂ ಕಿರುತೆರೆ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗುತ್ತಾರೆ. ಎರಡು ವಿಭಾಗಗಳಲ್ಲಿ ನಾಮಿನೇಟ್ ಆದ ಬಗ್ಗೆ ನಿರ್ದೇಶಕ ರಾಜಮೌಳಿ ಪ್ರತಿಕ್ರಿಯೆ ನೀಡಿದ್ದು ಸಂತಸ ವ್ಯಕ್ತಪಡಿಸಿದ್ದಾರೆ. ಆರ್ ಆರ್ ಆರ್ ಸಿನಮಾವನ್ನು ಗುರುತಿಸಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮಿನೇಟ್ ಮಾಡಿದ್ದಕ್ಕೆ ಹಾಲಿವುಡ್​ ಫಾರಿನ್​ ಪ್ರೆಸ್​ ಅಸೋಸಿಯೇಷನ್‌ಗೆ ಧನ್ಯವಾದ ತಿಳಿಸಿದ್ದಾರೆ. ಹಾಗೂ ಅತೀ ಹೆಚ್ಚು ಪ್ರೀತಿ ತೋರಿದ ಅಭಿಮಾನಿಗಳಿಗೂ ರಾಜಮೌಳಿ ವಿಶೇಷ ಧನ್ಯವಾದ ಹೇಳಿದ್ದಾರೆ. 

‘ಆಲ್​ ಕ್ವಾಯ್ಟ್​ ಆನ್​ ದಿ ವೆಸ್ಟರ್ನ್​ ಫ್ರಂಟ್​’ (ಜರ್ಮನಿ), ಅರ್ಜೆಂಟೀನಾ 1985 (ಅರ್ಜೆಂಟೀನಾ), ಕ್ಲೋಸ್​ (ಬೆಲ್ಜಿಯಂ), ಡಿಸಿಷನ್​ ಟು ಲೀವ್​ (ದಕ್ಷಿಣ ಕೋರಿಯಾ) ಚಿತ್ರಗಳು ‘ಆರ್​ಆರ್​ಆರ್​’ ಸಿನಿಮಾ ಜೊತೆ ಸೆಣೆಸುತ್ತಿವೆ. ಈ ಎಲ್ಲಾ ಸಿನಿಮಾಗಳನ್ನು ಹಿಂದಿಕ್ಕಿ ಆರ್ ಆರ್ ಆರ್ ಪ್ರಶಸ್ತಿ ಗೆಲ್ಲಲಿದೆಯಾ ಎನ್ನುವ ಕುತೂಹಲ ಹೆಚ್ಚಾಗಿದೆ. ಅಂದಹಾಗೆ 2023ರ ಜನವರಿ 11ರಂದು ಲಾಸ್​ ಎಂಜಲೀಸ್​ನಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

Scroll to load tweet…


ನಾವೇನು ಮಾಡ್ತಿದ್ದೀವಿ ಅಂತ ಯೋಚಿಸಬೇಕಿದೆ; 'ಕಾಂತಾರ' ಸಕ್ಸಸ್ ಬಗ್ಗೆ ನಿರ್ದೇಶಕ ರಾಜಮೌಳಿ ಅಚ್ಚರಿ ಹೇಳಿಕೆ

ಆಸ್ಕರ್ ಅಂಗಳದಲ್ಲಿ RRR

ಆಸ್ಕರ್​ ಪ್ರಶಸ್ತಿ ಸ್ಪರ್ಧೆಗೆ ಭಾರತದಿಂದ ‘ಆರ್​ಆರ್​ಆರ್​’ ಸಿನಿಮಾ ಅಧಿಕೃತವಾಗಿ ಆಯ್ಕೆ ಆಗಿಲ್ಲ. ಆದರೆ ಸ್ವಂತವಾಗಿ ನಾಮಿನೇಟ್​ ಆಗಲು ಪ್ರಯತ್ನಿಸುತ್ತಿದೆ. ಈ ಮೂಲಕ ಆರ್ ಆರ್ ಆರ್ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಗೆಲ್ಲಲ್ಲು ಪ್ರಯತ್ನಿಸುತ್ತಿದೆ. 

ರಾಜಮೌಳಿಯವರ RRR ವಿಷುಯಲ್ ಎಫೆಕ್ಟ್ಸ್: ಆಸ್ಕರ್‌ಗೆ ನಾಮನಿರ್ದೇಶನ?

RRR ಸಿನಿಮಾ ಬಗ್ಗೆ 

‘ಆರ್​ಆರ್​ಆರ್​’ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್‌ಗಳಾದ ರಾಮ್ ಚರಣ್​, ಜೂನಿಯರ್​ ಎನ್​ಟಿಆರ್​ ಪ್ರಮುಖ ಪಾತ್ರ ಮಾಡಿದ್ದಾರೆ. ಅಲ್ಲೂರಿ ಸೀತಾರಾಮ ರಾಜು ಪಾತ್ರವನ್ನು ರಾಮ್​ ಚರಣ್​ ನಿಭಾಯಿಸಿದ್ದರೆ, ಕೊಮರಮ್​ ಭೀಮ್​ ಪಾತ್ರಕ್ಕೆ ಜೂನಿಯರ್​ ಎನ್​ಟಿಆರ್​ ಬಣ್ಣ ಹಚ್ಚಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಿಬ್ಬರ ಕಾಲ್ಪನಿಕ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಇನ್ನೂ ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಆಲಿಯಾ ಭಟ್ ಮತ್ತು ಅಜಯ್ ದೇವಗನ್​ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.