ರಾಕಿಂಗ್ ಸ್ಟಾರ್ ಅವರ ಯಶೋಮಾರ್ಗ ಫೌಂಡೇಶನ್ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಇದೀಗ ಸಾಗರ ತಾಲೂಕಿನ ಆನಂದಪುರ ಸಮೀಪದ ಚಂಪಕ ಸರಸ್ಸು ಮಹಾಂತಿನ ಮಠದ ಕಲ್ಯಾಣಿಯನ್ನು ಜೀರ್ಣೋದ್ಧಾರ ಮಾಡಲಾಗಿದ್ದು ಸದ್ಯ ಲೋಕಾರ್ಪಣೆಗೊಂಡಿದೆ.
ವರದಿ: ರಾಜೇಶ್ ಕಾಮತ್, ಶಿವಮೊಗ್ಗ
ರಾಕಿಂಗ್ ಸ್ಟಾರ್ ಯಶ್(Rocking star yash) ಅವರ ಯಶೋಮಾರ್ಗ ಫೌಂಡೇಶನ್(Yashomarga foundation) ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಇದೀಗ ಸಾಗರ ತಾಲೂಕಿನ ಆನಂದಪುರ ಸಮೀಪದ ಚಂಪಕ ಸರಸ್ಸು ಮಹಾಂತಿನ ಮಠದ ಕಲ್ಯಾಣಿಯನ್ನು ಜೀರ್ಣೋದ್ಧಾರ ಮಾಡಲಾಗಿದ್ದು ಸದ್ಯ ಲೋಕಾರ್ಪಣೆಗೊಂಡಿದೆ. ಹೌದು, ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನಡುವ ಮೂಲಕ ಜೀರ್ಣೋದ್ಧಾರಗೊಂಡ ಕಲ್ಯಾಣಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ಖ್ಯಾತ ಇತಿಹಾಸ ತಜ್ಞರಾದ ಕೆಳದಿ ಗುಂಡಾ ಜೋಯಿಸ್ ರವರು ಸಂಪಿಗೆ ಗಿಡವನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು. ಚಂಪಕ ಸರಸ್ಸು ಮಹಂತಿನ ಮಠದ ಜೀರ್ಣೋದ್ಧಾರದ ಲೋಕಾರ್ಪಣೆ ಕಾರ್ಯಕ್ರಮವನ್ನು ಖ್ಯಾತ ಜಲತಜ್ಞರಾದ ಶಿವಾನಂದ ಕಳವೆಯವರು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು.
ಕೆಳದಿ ಅರಸರ ಕೆಲಸವನ್ನ ನೆನಪಿಸುವ ಉದ್ದೇಶಕ್ಕಾಗಿ ಜೀರ್ಣೋದ್ಧಾರವನ್ನು ಕೈಗೊಳ್ಳಲಾಗಿದೆ ನಟ ರಾಕಿಂಗ್ ಯಶ್ ಅವರಿಗೆ ಈ ಸ್ಥಳದ ಬಗ್ಗೆ ಮಾಹಿತಿ ನೀಡಿದಾಗ ಜಲ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ ಎಂದು ಈ ಚಂಪಕ ಸರಸ್ಸುಗೆ ಬೆಂಬಲ ನೀಡಿ ಚಂಪಕ ಸರಸ್ಸು ಮಹಂತಿನ ಮಠದ ಜೀರ್ಣೋದ್ಧಾರ ಕಾರ್ಯಕ್ಕೆ ಕೈಜೋಡಿಸಿದ್ದರು. ಮೊದಲ ಹಂತದ ಜೀರ್ಣೋದ್ಧಾರದ ಲೋಕಾರ್ಪಣೆಯನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು
ಪದೇ ಪದೇ ಭೇಟಿಯಾಗುತ್ತಿರುವ ಯಶ್ - ಪ್ರಭಾಸ್; ಇಬ್ಬರ ಸ್ನೇಹ ಹೇಗಿದೆ?
ಖ್ಯಾತ ಇತಿಹಾಸ ತಜ್ಞರಾದ ಕೆಳದಿ ಗುಂಡಾಜೋಯಿಸ್ ಮಾತನಾಡಿ, 'ನಾನೂರು ವರ್ಷಗಳ ಹಿಂದಿನ ಇತಿಹಾಸ ಇರುವ ಈ ಪುಷ್ಕರಣಿ ಕೆಳದಿ ರಾಜರ ನಾಡು ನುಡಿಗಾಗಿ ನೀಡಿದ ಸೇವೆಯನ್ನು ಎತ್ತಿ ತೋರಿಸುತ್ತಿದೆ. ಐವತ್ತು ವರ್ಷಗಳ ಹಿಂದೆ ಬಂದಾಗ ಈ ಜಾಗ ಹಾಳು ಬಿದ್ದಿದ್ದನ್ನ ನೆನಪಿಸಿ ಈಗ ಆನಂದಪುರದ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ಹಾಗೂ ಯಶೋಮಾರ್ಗದ ಮೂಲಕ ಇದು ಜೀರ್ಣೋದ್ಧಾರ ಕೈಗೊಂಡ ಕಾರ್ಯ ಶ್ಲಾಘನೀಯವಾದದ್ದು. ಇದೇ ರೀತಿಯಾಗಿ ಕೆಳದಿ ಅರಸರ ಕಾಲದ ಇತಿಹಾಸದ ಬಗ್ಗೆ ಇತಿಹಾಸ ತಜ್ಞರು ಗಮನಹರಿಸಬೇಕಾಗಿದೆ ಎಂದು ಸಹ ತಿಳಿಸಿದರು.
ಇದೇ ಸಮಯದಲ್ಲಿ ಚಂಪಕ ಸರಸ್ಸು ಜೀರ್ಣೋದ್ಧಾರ ಕಾರ್ಯದಲ್ಲಿ ಕೈಜೋಡಿಸಿದ ಕಾರ್ಮಿಕರು ಹಾಗೂ ಸೇವೆ ಸಲ್ಲಿಸಿದ ಶ್ರೀನಿವಾಸ್, ವಿಜಯ ಭಾರತಿ, ಹರೀಶ್ ನವಾತೆ ಬಾಬು ಗೌರವಿಸಿ ಸನ್ಮಾನಿಸಲಾಯಿತು.
ಪ್ರಶಾಂತ್ ನೀಲ್ ಬರ್ತಡೇ ಪಾರ್ಟಿ; ಯಶ್ ಮಾತ್ರವಲ್ಲ ರಾಧಿಕಾನೂ ಸೃಷ್ಟಿಸಿದ್ರು ಹವಾ..!
ವೇದಿಕೆಯಲ್ಲಿ ರಾಕೇಶ್ ಸಿಟಿ ಅಧ್ಯಕ್ಷರು ಅಖಿಲ ಭಾರತ ಯಶ್ ಅಭಿಮಾನಿಗಳ ಸಂಘ, ಸತೀಶ್ ಶಿವಣ್ಣ ಅಧ್ಯಕ್ಷರು ಯಶ್ ಅಭಿಮಾನಿಗಳ ಸಂಘ. ಶ್ರೀಗಂಧ ಸಂಸ್ಥಾಪಕರು ಯಶ್ ಅಭಿಮಾನಿಗಳ ಸಂಘ ಶ್ರೀ ರಾಜೇಂದ್ರ ಗೌಡ ಅಧ್ಯಕ್ಷರು ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ರವಿಕುಮಾರ್ ಬೀಡಿ ಪ್ರಧಾನ ಕಾರ್ಯದರ್ಶಿ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ರವರು ವೇದಿಕೆಯಲ್ಲಿ ಹಾಜರಿದ್ದರು.
