Asianet Suvarna News Asianet Suvarna News

ಸಲಾರ್‌ನಲ್ಲಿ ಯಶ್.. ಮತ್ತೆ ಬಂತು ಮರುಜೀವ: ಪ್ರಭಾಸ್ ಚಿತ್ರದಲ್ಲಿ ರಾಕಿ ಭಾಯಿ ಅನ್ನೋ ವಿಷಯ ಹೇಳಿದ್ಯಾರು?

ಪ್ರಶಾಂತ್ ನೀಲ್ ನಿರ್ದೇಶನದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ಸಲಾರ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸಿದ್ದಾರೆ ಅನ್ನೋ ಸುದ್ದಿ ಹಲವು ತಿಂಗಳ ಹಿಂದೆಯೇ ಹಬ್ಬಿತ್ತು. ಆದ್ರೆ ಯಾಕೋ ಆ ವಿಚಾರ ತಣ್ಣಗಾಗಿತ್ತು.

rocking star yash acted in salaar movie news goes viral gvd
Author
First Published Dec 13, 2023, 11:07 AM IST

ನ್ಯಾಷನಲ್ ಸ್ಟಾರ್ ಯಶ್ ಟಾಕ್ಸಿಕ್ ಕಿಕ್ ಈಗ ಶುರುವಾಗಿದೆ. ಟಾಕ್ಸಿಕ್ ಮತ್ತು ವರ್ಲ್ಡ್ ವೈಡ್ ಹಬ್ಬೋದು 2025ರ ಏಪ್ರಿಲ್ 10ನೇ ತಾರೀಖು. ಆದ್ರೆ ಅದಕ್ಕೂ ಮೊದಲೇ ಯಶ್ ಭರ್ಜರಿಯಾಗೆ ಕಿಕ್ ಸ್ಟಾರ್ಟ್ ಮಾಡ್ತಾರಂತೆ. ಅದು ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಜತೆಯಂತೆ. ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ಗೆ ಮತ್ತೊಂದು ಭರ್ಜರಿ ಸುದ್ದಿ ಸಿಕ್ಕಿದೆ. ಟಾಕ್ಸಿಕ್ ಸಿನಿಮಾಗೂ ಮುಂಚೆನೇ ರಾಕಿ ಭಾಯ್ ಮತ್ತೊಮ್ಮೆ ಬಿಗ್ ಸ್ಕ್ರೀನ್ ಮೇಲೆ ದರ್ಶನ ಕೊಡಲಿದ್ದಾರೆ ಅನ್ನೋ ಸಖತ್ ಸಮಾಚಾರ ಅದು. 

ಪ್ರಶಾಂತ್ ನೀಲ್ ನಿರ್ದೇಶನದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ಸಲಾರ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸಿದ್ದಾರೆ ಅನ್ನೋ ಸುದ್ದಿ ಹಲವು ತಿಂಗಳ ಹಿಂದೆಯೇ ಹಬ್ಬಿತ್ತು. ಆದ್ರೆ ಯಾಕೋ ಆ ವಿಚಾರ ತಣ್ಣಗಾಗಿತ್ತು. ಈಗ ಪ್ರಭಾಸ್ ಸಲಾರ್ ಹಾಗು ಯಶ್ ಸ್ಟೋರಿಗೆ ಮತ್ತೆ ಮರುಜೀವ ಬಂದಿದೆ. ಸಲಾರ್ನಲ್ಲಿ ಯಶ್ ನಟಿಸಿದ್ದಾರೆ ಅನ್ನೋ ಬಗ್ಗೆ ಪ್ರಭಾಸ್ ಆಗ್ಲಿ. ನಿರ್ದೇಶಕ ನೀಲ್ ಆಗ್ಲಿ, ಸಿನಿಮಾ ನಿರ್ಮಾಣ  ಮಾಡಿರೋ ಹೊಂಬಾಳೆ ಸಂಸ್ಥೆಯಾಗ್ಲಿ ಹೇಳಿಲ್ಲ. ಸಲಾರ್ ನ ಹಾಡೊಂದಕ್ಕೆ ಧ್ವನಿಯಾಗಿರೋ ಬಾಲ ಗಾಯಕಿ ತೀರ್ಥ ಕೊಟ್ಟಿರೋ ಸ್ಟೇಟ್ಮೆಂಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. 

ಖಾಸಗಿ ಕಾರ್ಯಕ್ರಮಕ್ಕೆ ಹೋಗಿದ್ದ ಬಾಲ ಗಾಯಕಿ ತೀರ್ಥ, ತನ್ನ ಜರ್ನಿ ಬಗ್ಗೆ ಮಾತನಾಡುತ್ತಾ, ಸಲಾರ್ ಚಿತ್ರದಲ್ಲಿ 3 ಭಾಷೆಯಲ್ಲಿ ಹಾಡುವ ಅವಕಾಶ ಸಿಕ್ತು. ಈ ಚಿತ್ರದಲ್ಲಿ ಪ್ರಭಾಸ್, ಯಶ್ ಹಾಗೂ ಪೃಥ್ವಿರಾಜ್ ಸುಕುಮಾರ್ ನಟಿಸಿದ್ದಾರೆ ಅಂತ ಹೇಳಿದ್ದಾಳೆ. ಸಲಾರ್ ಇದೇ ಡಿಸೆಂಬರ್ 22ಕ್ಕೆ ರಿಲೀಸ್ ಆಗ್ತಿದೆ. ಯಶ್ಗೂ ಸಲಾರ್ಗೂ ಕೆಜಿಎಫ್ಗೂ ಲಿಂಕ್ ಇದೆ ಅಂತ ಸಲಾರ್ ಶೂಟಿಂಗ್ ಶುರುವಾದಾಗಿನಿಂದಲೂ ಸುದ್ದಿ ಇದೆ. ಆದ್ರೆ ಅದಕ್ಕೆ ಯಾವ ಪ್ರ್ಯೂಫ್ ಸಿಕ್ಕಿಲ್ಲ. ಈಗ ಈ ಬಾಲ ಗಾಯಕಿ ಕೊಟ್ಟ ಹೇಳಿಕೆ ಯಶ್ ಫ್ಯಾನ್ಸ್ ಬಳಗದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಸಲಾರ್ನಲ್ಲಿ ಯಶ್ ಇದ್ದಿದ್ದೇ ನಿಜವಾದ್ರೆ ಮತ್ತೊಮ್ಮೆ ಬಾಕ್ಸಾಫೀಸ್ ಬ್ಲಾಸ್ಟ್ ಆಗೋದ್ರಲ್ಲಿ ನೋ ಡೌಟ್.

ಸಲಾರ್ ಚಿತ್ರದಲ್ಲಿ ರಾಕಿ ರೋಲ್ ಏನು? ಹೇಗಿರುತ್ತೇ?: ಈ ಸಿನಿಮಾದಲ್ಲಿ ರಾಕಿ ರೋಲ್ ಹೇಗಿರುತ್ತದೆ ಅನ್ನುವ ಕುತೂಹಲ ಇದೆ. ಕೆಜಿಎಫ್ ಚಿತ್ರದ ಅದೇ ರಾಕಿ ಬರ್ತಾರಾ? ಈ ಒಂದು ಪ್ರಶ್ನೆ ಕೂಡ ಇದೆ. ಆದರೆ ಈ ಬಗ್ಗೆ ಎಲ್ಲೂ ಏನೂ ರಿವೀಲ್ ಆಗಿಯೇ ಇಲ್ಲ. ಬಾಲ ಗಾಯಕಿ ಮಲೆಯಾಳಂ ಭಾಷೆಯಲ್ಲಿ ಹೇಳಿರೋ ಮಾತು ಸಲಾರ್ ಚಿತ್ರದಲ್ಲಿ ಯಶ್ ಇರೋದನ್ನ ಕನ್ಫರ್ಮ್ ಮಾಡುತ್ತಿವೆ ಸಲಾರ್ ಸಿನಿಮಾದಲ್ಲಿ ದೇವರಾಜ್ ಇದ್ದಾರೆ. ಭಜರಂಗಿ ಲೋಕಿ ಕೂಡ ಸ್ಪೆಷಲ್ ಆಗಿಯೇ ನಟಿಸಿದ್ದಾರೆ. ಗುಳ್ಟು ನವೀನ್ ಇರೋದು ಗೊತ್ತಾಗಿದೆ. ಮಧು ಗುರುಸ್ವಾಮಿ ನಟಿಸಿರೋದು ತಿಳಿದಿದೆ. ಹೀಗೆ ಹಲವು ಕಲಾವಿದರ ಈ ಒಂದು ಸಿನಿಮಾದಲ್ಲಿ ರಾಕಿ ಭಾಯ್ ಇರೋದು ಇದೀಗ ವೈರಲ್ ನ್ಯೂಸ್ ಆಗಿದೆ.

'ಟಾಕ್ಸಿಕ್' ಫಸ್ಟ್ ಲುಕ್ ಕೊಡೋಕೆ ಯಶ್ ಮಾಸ್ಟರ್ ಪ್ಲಾನ್: ಹೇಗಿರುತ್ತೆ ರಾಕಿಂಗ್ ಸ್ಟಾರ್ ಲುಕ್!

ಸಲಾರ್ ವಿಶ್ವದೆಲ್ಲೆಡೆ ರಿಲೀಸ್ ಆಗುತ್ತಿದೆ. ಇದನ್ನ ನೋಡಲು ಅನೇಕರು ಕಾಯುತ್ತಿದ್ದಾರೆ. ಇದರೊಟ್ಟಿಗೆ ಕನ್ನಡದ ಉಗ್ರಂ ಚಿತ್ರ ನೋಡಿದವ್ರು ಇದನ್ನ ಬೇರೆ ರೀತಿಯಲ್ಲಿಯೇ ಕಾಣುತ್ತಿದ್ದಾರೆ. ಹಾಗೋ ಹೀಗೋ ಈ ಸಿನಿಮಾದ ಕುತೂಹಲ ದಿನೇ ದಿನೇ ಜಾಸ್ತಿ ಆಗುತ್ತಿದೆ. ರವಿ ಬಸ್ರೂರು ಸಂಗೀತ ಕೊಟ್ಟಿದ್ದಾರೆ. ಭುವನ್ ಗೌಡ ಕ್ಯಾಮರಾ ವರ್ಕ್ ಮಾಡಿದ್ದಾರೆ. ಇದೀಗ ಸೆನ್ಸಾರ್ ಈ ಚಿತ್ರಕ್ಕೆ ಎ ಪ್ರಮಾಣ ಪತ್ರ ಕೊಟ್ಟಿರೋ ಸುದ್ದಿ ಹೊರ ಬಂದಿದೆ. ‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್ ಮೊದಲಾದವರು ನಟಿಸಿದ್ದಾರೆ. 

Follow Us:
Download App:
  • android
  • ios