Asianet Suvarna News Asianet Suvarna News

'ಟಾಕ್ಸಿಕ್' ಫಸ್ಟ್ ಲುಕ್ ಕೊಡೋಕೆ ಯಶ್ ಮಾಸ್ಟರ್ ಪ್ಲಾನ್: ಹೇಗಿರುತ್ತೆ ರಾಕಿಂಗ್ ಸ್ಟಾರ್ ಲುಕ್!

ಯಶ್ ಟೆರಿಟರಲಿ ಈಗ ಬರೀ ಇಂಡಿಯಾ ಮಾತ್ರ ಅಲ್ಲ. ಈಗ ಯಶ್ ಟೆರಿಟರಿಗೆ ಯಾವ್ದೇ ಗಡಿ ರೇಖೆ ಇಲ್ಲ. ಕೆಜಿಎಫ್ನಲ್ಲಿ ಪ್ಯಾನ್ ಇಂಡಿಯಾ ಅಂತ ಹೋಗಿದ್ದ ಯಶ್ ಈಗ ಟಾಕ್ಸಿಕ್ನಲ್ಲಿ ಪ್ಯಾನ್ ವರ್ಲ್ಡ್ ಕಾನ್ಸೆಪ್ಟ್ ಮೇಲೆ ಕಣ್ಣಿಟ್ಟು ವರ್ಕ್ ಶುರು ಮಾಡಿದ್ದಾರೆ.

Rocking Star Yash master plan to give the first look of Toxic gvd
Author
First Published Dec 13, 2023, 10:50 AM IST

ಯಶ್ ಟೆರಿಟರಲಿ ಈಗ ಬರೀ ಇಂಡಿಯಾ ಮಾತ್ರ ಅಲ್ಲ. ಈಗ ಯಶ್ ಟೆರಿಟರಿಗೆ ಯಾವ್ದೇ ಗಡಿ ರೇಖೆ ಇಲ್ಲ. ಕೆಜಿಎಫ್ನಲ್ಲಿ ಪ್ಯಾನ್ ಇಂಡಿಯಾ ಅಂತ ಹೋಗಿದ್ದ ಯಶ್ ಈಗ ಟಾಕ್ಸಿಕ್ನಲ್ಲಿ ಪ್ಯಾನ್ ವರ್ಲ್ಡ್ ಕಾನ್ಸೆಪ್ಟ್ ಮೇಲೆ ಕಣ್ಣಿಟ್ಟು ವರ್ಕ್ ಶುರು ಮಾಡಿದ್ದಾರೆ. ಹೀಗಾಗೆ ದೇಶಾದ್ಯಂತ ಟಾಕ್ಸಿಕ್ ಸಿನಿಮಾ ಬಗ್ಗೆ ಭಾರಿ ಜೋರಾದ ಚರ್ಚೆ ನಡೆಯುತ್ತಿದೆ. ಅದಕ್ಕೆ ಕಾರಣ ಟಾಕ್ಸಿಕ್ ಸಿನಿಮಾದ ಟೈಟಲ್ ಅನೌನ್ಸ್ನಲ್ಲೇ ಆ ಸಿನಿಮಾದ ರಿಲೀಸ್ ಡೇಟ್ ಅನ್ನೂ ರಟ್ಟು ಮಾಡಿದ್ದು. ಯಾವ್ದೇ ಸಿನಿಮಾ ಆಗ್ಲಿ ಆ ಸಿನಿಮಾ ಬಿಡುಗಡೆ ದಿನಾಂಕವನ್ನ ಟೀಸರ್ ಅಥವ ಟ್ರೈಲರ್ ಕೊಡೋ ಮೂಲಕ ಅನೌನ್ಸ್ ಮಾಡೋದು ವಾಡಿಕೆ. ಆದ್ರೆ ಯಶ್ ಅದನ್ನೆಲ್ಲಾ ಬಿಟ್ಟು ಸಿನಿಮಾ ಅನೌನ್ಸ್ನಲ್ಲೇ ಟಾಕ್ಸಿಕ್ ಯಾವಾಗ ರಿಲೀಸ್ ಆಗುತ್ತೆ ಅಂತ ಹೇಳಿದ್ದಾರೆ. 

2025ರ ಏಪ್ರಿಲ್ 10ಕ್ಕೆ ಟಾಕ್ಸಿಕ್ ತೆರೆ ಮೇಲೆ ಬರುತ್ತೆ. ಈ ಟಾಕ್ಸಿಕ್ ಆ ಡೇಟ್ಗೆ ರಿಲೀಸ್ ಆಗ್ತಿರೋದು ಯಾಕೆ.? ಯಶ್ಗೆ ಡಿಸೆಂಬರ್ ಲಕ್ ಚನ್ನಾಗಿದಿದೆ. ಅದನ್ನ ಬಿಟ್ಟು ಏಪ್ರಿಲ್ 10ನೇ ತಾರೀಖು ಆಯ್ಕೆ ಮಾಡಿದ್ದೇಕೆ ಅನ್ನೋ ಲೆಕ್ಕಾಚಾರ ಯಶ್ ಫ್ಯಾನ್ಸ್ ಮಧ್ಯೆ ಆಗ್ತಿದೆ. ಅದಕ್ಕೆ ಉತ್ತರವೂ ಸಿಕ್ಕಿದೆ. ಯಶ್ ಯಾವ್ ಕೆಲಸ ಮಾಡಿದ್ರು ಅಳೆದು ತೂಗಿ ನಿಗಾ ಇಟ್ಟು ಡಿಟೈಟ್ ಮಾಡ್ತಾರೆ. ತನ್ನ 19ನೇ ಸಿನಿಮಾ ಅನೌನ್ಸ್ಗೆ ಇಷ್ಟೊಂದು ಲೇಟ್ ಆಗಿದ್ದು ಕೂಡ ಅದೇ ಕಾರಣಕ್ಕೆ. ಈಗ ಟಾಕ್ಸಿಕ್ ರಿಲೀಸ್ ಟೇಟ್ ಕೂಡ ಅಳೆದು ತೂಗಿ ಲಾಕ್ ಮಾಡಿದ್ದಾರೆ. 2025ರ ಏಪ್ರಿಲ್ 10ರಂದೇ ಮಾಡೋಕೆ ಯಶ್ ನಿರ್ಧರಿಸಿದ್ದು ಯಾಕೆ ಗೊತ್ತಾ.? 

ಈ ಸಮಯದಲ್ಲಿ ಸಿಗೋ ಸಾಲು ಸಾಲು ರಜೆಯ ಕಾರಣಕ್ಕೆ. 2025ರ ಏಪ್ರಿಲ್ 10 ರಂದು ಮಹಾವೀರ ಜಯಂತಿ ಬರುತ್ತದೆ. ಇದು ಗುರುವಾರವೇ ಆಗಿರುತ್ತೆ. ಮರು ದಿನ ಏಪ್ರಿಲ್ 11 ರಂದು ಶುಕ್ರವಾರ ಇರುತ್ತದೆ. ಆ ದಿನ ಸಿನಿಮಾ ದಿನವೇ ಆಗಿರುತ್ತೆ. ಏಪ್ರಿಲ್-12 ಮತ್ತು 13 ವೀಕೆಂಡ್‌. ಅಲ್ಲಿಗೆ ಈ ನಾಕ್ಕು ದಿನ ಈ ಟಾಕ್ಸಿಕ್ ನೋಡೋಕೆ ಬೆಸ್ಟ್ ಟೈಂ. ಅದಾದ ಬಳಿಕ ಏಪ್ರೀಲ್-14ಕ್ಕೆ ಅಂಬೇಡ್ಕರ್ ಜಯಂತಿ ಆ ದಿನ ರಜೆ ಗ್ಯಾರಂಟಿ. ಏಪ್ರಿಲ್-18ಕ್ಕೆ ಗುಡ್‌ಫ್ರೈಡೆ ಆ ದಿನ ಕೂಡ ರಜೆ ಫಿಕ್ಸ್. ಇನ್ನು ಏಪ್ರಿಲ್ 19 ಮತ್ತು 20ಕ್ಕೆ ಎರಡನೇ ವೀಕೆಂಡ್. ಹೀಗಾಗಿ ಎಲ್ಲಾ ಕಡೆಯಂದ್ಲು ಟಾಕ್ಸಿಕ್ ನೋಡೋಕೆ ಟೈಮ್ ಸಿಗುತ್ತೆ. ಇದನ್ನೆಲ್ಲಾ ಯೋಚ್ನೆ ಮಾಡಿಯೇ ರಾಕಿ ಟಾಕ್ಸಿಕ್ ರಿಲೀಸ್ ಡೇಟ್ಅನ್ನ ಏಪ್ರಿಲ್ 10, 2025ಕ್ಕೆ ಅಂತ ಫಿಕ್ಸ್ ಮಾಡಿದ್ದಾರೆ.

ಯಶ್ ಡಿಸೆಂಬರ್ 8ಕ್ಕೆ ಟಾಕ್ಸಿಕ್ ಟೈಟಲ್ ಕಿಕ್ ಕೊಟ್ಟಿದ್ರು. ಮುಂದಿನ ವರ್ಷ ಜನವರಿ 08ಕ್ಕೆ ಫ್ಯಾನ್ಸ್ಗೆ ಭರ್ಜರಿ ಹಬ್ಬ ಎದುರಾಗ್ತಿದೆ. ಅದೇ ಯಶ್ ಹುಟ್ಟು ಹಬ್ಬ. ಈ ದಿನ ಫ್ಯಾನ್ಸ್ ಬೇಟಿಗೆ ಯಶ್ ಡಿಸೈಡ್ ಮಾಡಿದ್ದಾರಂತೆ. ಈ ಬರ್ತ್ಡೇ ಬಳಿಕ ರಾಕಿ ಮತ್ತೆ ಟಾಕ್ಸಿಕ್ ಶೂಟಿಂಗ್ ಅಖಾಡಕ್ಕೆ ಎಂಟ್ರಿ ಕೊಡ್ತಾರೆ. ಯಶ್ ತನ್ನ 19ನೇ ಸಿನಿಮಾ ಅನೌನ್ಸ್ಗೆ ಬರೋಬ್ಬರಿ 599 ದಿನ ಸಮಯ ತೆಗೆದುಕೊಂಡ್ರು. ಯಾರಿಗೂ ಗೊತ್ತಿಲ್ಲದ ಹಾಗೆ ನವೆಂಬರ್ನಿಂದಲೇ ಟಾಕ್ಸಿನ್ನ ಕೆಲವೊಂದು ದೃಶ್ಯಗಳ ಶೂಟಿಂಗ್ ಕೂಡ ಮಾಡಿದ್ದಾರೆ. ಈ ಟಾಕ್ಸಿಕ್ ಟೈಟಲ್ ಅನೌನ್ಸ್ ಆದ ಖುಷಿ ಯಶ್ ಫ್ಯಾನ್ಸ್ಗಿದೆ. ಇದರ ಜೊತೆ ಯಶ್ ಲುಕ್ ರಿವೀಲ್ ಆಗ್ಬೇಕಿತ್ತು ಅನ್ನೋದು ಹಲವರ ಆಸೆ. ಅದಕ್ಕೂ ಯಶ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಅದೇ ಹುಟ್ಟುಹಬ್ಬದ ದಿನ ಟಾಕ್ಸಿಕ್ ಫಸ್ಟ್ ಲುಕ್ ಟೀಸರ್ ರಿಲೀಸ್ ಪ್ಲಾನ್. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಅಣ್ಣ ತಂಗಿ' ಧಾರಾವಾಹಿ ನಟಿ ಅಖಿಲಾ: ಪತಿಯ ಹಿನ್ನೆಲೆಯೇನು?

ಯಶ್ ಹುಟ್ಟುಹಬ್ಬದ ಪ್ರಯುಕ್ತ ಜನವರಿ 8ಕ್ಕೆ ಟಾಕ್ಸಿಕ್ ಫಸ್ಟ್ ಲುಕ್ ರಿಲೀಸ್ ಆಗಲಿದೆ. ತೆರೆ ಮರೆಯಲ್ಲಿ ಟಾಕ್ಸಿಕ್ ಫಸ್ಟ್ ಲುಕ್ ಸಿದ್ಧಪಡಿಸೋ ವರ್ಕ್ ಕೂಡ ನಡೀದಿದೆ. ಇನ್ನು28 ದಿನ ಕಳೆದ್ರು ಟಾಕ್ಸಿಕ್ ಫಸ್ಟ್ ಲುಕ್ ಕೂಡ ರಿವಿಲ್ ಆಗುತ್ತೆ. ಈ ಫಸ್ಟ್ ಲುಕ್ ಹೇಗಿರುತ್ತೆ ಅನ್ನೋದು ಕೂಡ ಇಂಟ್ರೆಸ್ಟಿಂಗ್. ಕೆಜಿಎಫ್ನಲ್ಲಿ ಯಶ್ ಬಿಯರ್ಡ್ ಮ್ಯಾನ್. ಆ ಲುಕ್ ಈಗ್ಲೂ ಹಾಗೇ ಇದೆ. ಆದ್ರೆ ಟಾಕ್ಸಿಕ್ನಲ್ಲಿ ಯಶ್ ಹೇಗೆ ಕಾಣಿಸ್ತಾರೆ.? ಇದಕ್ಕೆ ಸಣ್ಣದೊಂದು ಹಿಂಟ್ ಟೈಟಲ್ ಟೀಸರ್ನಲ್ಲಿ ಸಿಕ್ಕಿದೆ. ಯಶ್ ಗಡ್ಡಕ್ಕೆ ಕತ್ತರಿ ಬಿದ್ದಿದೆ. ಆದ್ರೆ ಪೂರ್ತಿ ಕ್ಲೀನ್ ಶೇವ್ ಅಲ್ಲ. ಕೆಜಿಎಫ್ನಲ್ಲಿದ್ದ ಗಡ್ಡಕ್ಕೆ ಅರ್ಧ ಕತ್ತರಿ ಹಾಕಿದ್ದು ಮ್ಯಾಚ್ಯೋ ಮ್ಯಾನ್ ತರ ಕಾಣ್ಸಿಕೊಂಡಿದ್ದಾರೆ. ಇನ್ನು ಜನವರಿ 8ಕ್ಕೆ ಫಸ್ಟ್ ಲುಕ್ ಬಂದ ಮೇಲೆ ಯಶ್ ನಯಾ ಲುಕ್ ರಿವೀಲ್ ಆಗುತ್ತೆ.

Follow Us:
Download App:
  • android
  • ios