Lata Mangeshkar Death : ಲತಾ ಮಂಗೇಶ್ಕರ್ ಅಪ್ರತಿಮ ಐಕಾನ್, ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಸಂತಾಪ

ಭಾನುವಾರ ಮುಂಜಾನೆ  ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿಧನ
ವಿಶ್ವದ ಎಲ್ಲಡೆಯಿಂದ ಖ್ಯಾತ ಗಾಯಕಿಗೆ ಸಂತಾಪ ಸೂಚನೆ
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ರಿಂದಲೂ ಸಂತಾಪ

Pakistan cricket captain Babar Azam sent his condolences to legendary singer Lata Mangeshkar san

ನವದೆಹಲಿ (ಫೆ. 6): ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (legendary singer Lata Mangeshkar) ನಿಧನಕ್ಕೆ ಇಡೀ ಭಾರತ (India) ಶೋಕಸಾಗರದಲ್ಲಿ ಮುಳುಗಿದೆ. ಅಂದಾಜು ಒಂದು ತಿಂಗಳ ಕಾಲ ಮುಂಬೈನ ಬ್ರೀಚ್ ಕ್ಯಾಂಡಿ ಅಸ್ಪತ್ರೆಯಲ್ಲಿ ಕೋವಿಡ್-19 ಹಾಗೂ ಆನಂತರದ ಸಮಸ್ಯೆಗಳಿಗೆ ಹೋರಾಟ ನಡೆಸಿದ ಲತಾ ಮಂಗೇಶ್ಕರ್ ಭಾನುವಾರ ಮುಂಜಾನೆ ತಮ್ಮ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಭಾನುವಾರ ಸಂಜೆ ಶಿವಾಜಿ ಪಾರ್ಕ್ ನಲ್ಲಿ (Shivaji Park) ಸಕಲ ಸರ್ಕಾರಿ ಗೌರವಗಳೊಂದಿಗೆ ಲತಾ ಮಂಗೇಶ್ಕರ್ ಅವರ ಅಂತ್ಯ ಸಂಸ್ಕಾರ (Last Rites)ನೆರವೇರಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಪ್ರಮುಖ ಗಣ್ಯರು ಈ ವೇಳೆ ಹಾಜರಿದ್ದರು.

ಲತಾ ಮಂಗೇಶ್ಕರ್ ಅವರ ನಿಧನದ ಬೆನ್ನಲ್ಲಿಯೇ ಪ್ರಪಂಚದಾದ್ಯಂತ ಅವರಿಗೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದರು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಮತ್ತು ವೀರೇಂದ್ರ ಸೆಹ್ವಾಗ್ ಹೃದಯಸ್ಪರ್ಶಿ ಮಾತುಗಳನ್ನು ಬರೆಯುವ ಮೂಲಕ ಲತಾಜೀ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ (Pakistan cricket captain Babar Azam) ಕೂಡ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿ, ಸಾಮಾಜಿಕ ಜಾಲತಾಣದಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಲತಾ ಮಂಗೇಶ್ಕರ್ ಅವರ ನಿಧನದೊಂದಿಗೆ ಸುವರ್ಣ ಯುಗವೊಂದು ಮುಕ್ತಾಯವಾಗಿದೆ ಎಂದು ಹೇಳಿರುವ ಅಜಮ್, ಲತಾ ಅವರನ್ನು ಅಪ್ರತಿಮ ಐಕಾನ್ ಎಂದು ಬಣ್ಣಿಸಿದ್ದಾರೆ. "ಸುವರ್ಣ ಯುಗದ ಅಂತ್ಯ. ಅವರ ಮಾಂತ್ರಿಕ ಧ್ವನಿ ಮತ್ತು ಪರಂಪರೆಯು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಹೃದಯದಲ್ಲಿ ಉಳಿಯುತ್ತದೆ. ಅಪ್ರತಿಮ ಐಕಾನ್! RIP ಶ್ರೀಮತಿ ಲತಾ ಮಂಗೇಶ್ಕರ್ ಜೀ." ಎಂದು ಬಾಬರ್ ಅಜಮ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
 


'ನೈಟಿಂಗೇಲ್ ಆಫ್ ಇಂಡಿಯಾ' ಎಂದೇ ಜನಪ್ರಿಯರಾಗಿದ್ದ ಲತಾ ಮಂಗೇಶ್ಕರ್ ಕ್ರಿಕೆಟ್ ನೊಂದಿಗೆ ವಿಶೇಷ ಸಂಪರ್ಕವನ್ನು ಹೊಂದಿದ್ದರು. ತಾವು ಕ್ರಿಕೆಟ್ ಆಟದ ದೊಡ್ಡ ಅಭಿಮಾನಿ ಎಂದು ಲತಾ ಮಂಗೇಶ್ಕರ್ ಹೇಳಿಕೊಂಡಿದ್ದರು.1983ರಲ್ಲಿ ಭಾರತ ತಂಡ ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ತವರಿಗೆ ಬಂದಾಗ ಅವರಿಗೆ ಬಹುಮಾನ ನೀಡಲು ಬಿಸಿಸಿಐ ಬಳಿ ಹಣವಿರಲಿಲ್ಲ. ಈ ಸಮಯದಲ್ಲಿ ತಂಡಕ್ಕೆ ನಿಧಿಯನ್ನು ಸಂಗ್ರಹಿಸುವ ಸಲುವಾಗಿ ಆಯೋಜಿಸಿದ್ದ ವಿಶೇಷ ಸಂಗೀತ ಕಚೇರಿಯಲ್ಲಿ ಲತಾ ಮಂಗೇಶ್ಕರ್ ಹಾಡಿದ್ದರು. ಇದರಿಂದ ಬಂದ ಹಣದಲ್ಲಿ ತಂಡದ ಪ್ರತಿ ಸದಸ್ಯನಿಗೆ ತಲಾ 1 ಲಕ್ಷ ರೂಪಾಯಿ ಹಣವನ್ನು ನೀಡಲಾಗಿತ್ತು. ಅದಲ್ಲದೆ, ದಿಗ್ಗಜ ಡಾನ್ ಬ್ರಾಡ್ಮನ್ ಸಹಿ ಹಾಕಿದ್ದ ಅಪರೂಪದ ಫೋಟೋ ಕೂಡ ಇವರ ಬಳಿ ಇತ್ತು.

Lata Mangeshkar passes away: ಆಸ್ಪತ್ರೆಯಲ್ಲೇ ಲತಾ ದೀದಿ ಅಂತಿಮ ದರ್ಶನ ಪಡೆದ ಸಚಿನ್..!
ಭಾನುವಾರ, ಅಹಮದಾಬಾದ್‌ನಲ್ಲಿ (Ahmedabad) ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ (first ODI of the three-match series against West Indies ) ಮಂಗೇಶ್ಕರ್ ಅವರಿಗೆ ಗೌರವ ಸಲ್ಲಿಸಲು ಭಾರತೀಯ ಕ್ರಿಕೆಟ್ ತಂಡದ ಆಟಗಾರರು ತೋಳಿಗೆ ಕಪ್ಪು ಪಟ್ಟಿಗಳನ್ನು  (black armband) ಧರಿಸಿ ಆಡಿದ್ದರು. ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಪಂದ್ಯ ಆರಂಭಕ್ಕೂ ಮುನ್ನ ಒಂದು ನಿಮಿಷ ಮೌನ ಆಚರಿಸಿದವು. ಲತಾ ಮಂಗೇಶ್ಕರ್ ಅವರು ಏಳು ದಶಕಗಳಿಗೂ ಹೆಚ್ಚು ಕಾಲದ ಅದ್ವಿತೀಯ ವೃತ್ತಿಜೀವನದಲ್ಲಿ 5 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದರು. ಇವರ ಕಲಾ ಸೇವೆಗಾಗಿ ಕೇಂದ್ರ ಸರ್ಕಾರ 2001 ರಲ್ಲಿ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

Latest Videos
Follow Us:
Download App:
  • android
  • ios