ಸೌತ್‌ ಸೂಪರ್‌ ಸ್ಟಾರ್ ದಳಪತಿ ವಿಜಯ್ ಅಭಿಮಾನಿ ಬಾಲ ಎಂಬಾತ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ RIPಬಾಲಾ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ವಿಜಯ್‌ ಫ್ಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಅಭಿಮಾನಿಗಳು ಶೋಕದಲ್ಲಿದ್ದಾರೆ.

ಅಭಿಮಾನಿ ಆತ್ಮಹತ್ಯೆ ನಂತರ ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ RIPಬಾಲಾ ಹ್ಯಾಶ್‌ಟಾಗ್ ಟ್ರೆಂಡ್ ಆಗಿದೆ. ತಮಿಳು ಸಿನಿಮಾದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟ ವಿಜಯ್ ಕಳೆದ ವರ್ಷದ ಬಿಗಿಲ್ ಸಿನಿಮಾ ಕಳೆದ ವರ್ಷದ ಹೈಯೆಸ್ಟ್ ಗ್ರಾಸಿಂಗ್ ಸಿನಿಮಾ ಆಗಿತ್ತು.

ಮತ್ತೆ ಕೃಷ್ಣನಾಗಿದ್ದೇ ನನಗೆ ದೊಡ್ಡ ಫ್ರೀಡಂ ಎಂದ ಸುಮೇಧ್..! ಫ್ರೀಡಂ ಬಗ್ಗೆ ಸೆಲೆಬ್ರಿಟಿಗಳ ವ್ಯಾಖ್ಯಾನವಿದು

ಇತ್ತೀಚೆಗಷ್ಟೇ ಟಾಲಿವುಡ್ ನಟ ಮಹೇಶ್ ಬಾಬು ನೀಡಿದ ಗಿಡ ನೆಡುವ ಚಾಲೆಂಜನ್ನು ವಿಜಯ್ ಸ್ವೀಕರಿಸಿ, ಸ್ವತಃ ಮಣ್ಣು ಅಗೆದು ಗಿಡ ನೆಟ್ಟಿದ್ದರು. ಇದರ ಫೋಟೋಸ್ ವೈರಲ್ ಆಗಿತ್ತು.

ವಿಜಯ್ ಅಭಿನಯದ ಮಾಸ್ಟರ್ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಲೋಕೇಶ್ ಕನಕರಾಜ್ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ಹಾಗೂ ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸ್ವಾತಂತ್ರ್ಯೋತ್ಸವ: ನೀವು ನೋಡಲೇಬೇಕಾದ 5 ವೆಬ್‌ಸಿರೀಸ್‌ಗಳಿವು..!

ಮಾಳವಿಕಾ ಮೋಹನನ್, ಶಾಂತನು ಭಾಗ್ಯರಾಜ್, ಅರ್ಜುನ್ ದಾಸ್, ಆಂಡ್ರಿಯಾ ಜೆರೆಮಯ್ಯ, ರಮ್ಯಾ ಸುಬ್ರಮಣಿಯನ್ ಅವರೂ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಕೊರೋನಾ ವೈರಸ್‌ನಿಂದಾಗಿ ಮಾಸ್ಟರ್ ಸಿನಿಮಾ ರಿಲೀಸ್ ತಡವಾಗಿದ್ದು, ಈಗಾಗಲೇ ಸಿನಿಮಾ ಹಾಡುಗಳು ಸೆನ್ಸೇಷನ್ ಕ್ರಿಯೇಟ್ ಮಾಡಿದೆ.