ದೇಶಾದ್ಯಂತ ಇಂದು(ಆ.15) 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೊರೋನಾದಿಂದಾಗಿ ಈ ಬಾರಿ ಸಾರ್ವಜನಿಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆಯೋ, ಅದ್ಧೂರಿ  ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಸುವ ಹಾಗಿಲ್ಲ. ಮನೆಯಲ್ಲೇ ಇದ್ದು ದೇಶ ಭಕ್ತಿಯ ಈ ವೆಬ್ ಸಿರೀಸ್‌ಗಳನ್ನು ನೀವು ವೀಕ್ಷಿಸಬಹುದು.

ಈ ಬಾರಿ ಸ್ವಾತಂತ್ರ್ಯೋತ್ಸವ ಸಂಭ್ರಮದ ಸಂದರ್ಭ ನೀವ್ಯಾಕೆ ಮನೆಯಲ್ಲೇ ಇದ್ದು ಈ ದೇಶ ಭಕ್ತಿ ವೆಬ್ ಸಿರೀಸ್ ನೋಡಬಾರದು..? ಇಲ್ಲಿವೆ ನೀವು ಮಿಸ್ ಮಾಡಲೇಬಾರದ ವೆನ್‌ ಸಿರೀಸ್

ಮಾಜಿ ಪ್ರೇಯಸಿಯ EMI ಪೇ ಮಾಡ್ತಿದ್ದ ಸುಶಾಂತ್: ಆರೋಪಕ್ಕೆ ಅಂಕಿತಾ ಗರಂ..!

ನೆಟ್‌ಫ್ಲಿಕ್ಸ್, ಅಮೆಝಾನ್ ಪ್ರೈಂ, ಎಎಲ್‌ಟಿ ಬಲಾಜಿ, ಡಿಸ್ನಿ ಹಾಟ್‌ ಸ್ಟಾರ್ ಕಳೆದ ಕೆಲವು ವರ್ಷಗಳಿಂದ ಉತ್ತಮ ಕಂಟೆಂಟ್‌ಗಳನ್ನು ವೀಕ್ಷಕರಿಗಾಗಿ ಒದಗಿಸುತ್ತಾ ಬಂದಿದೆ. ಈ ವಾರಾಂತ್ಯ ನೀವು ನೋಡಬಹುದಾದ ಕಲೆವು ವೆಬ್ ಸಿರೀಸ್ ಮಾಹಿತಿ ಇಲ್ಲಿದೆ.

ದಿ ಟೆಸ್ಟ್ ಕೇಸ್

ನಿಮ್ರಿತ್ ಕೌರ್‌ನ ದಿ ಟೆಸ್ಟ್ ಕೇಸ್ 2017ರಲ್ಲಿ ಬಿಡುಗಡೆಯಾದಾಗ ವೀಕ್ಷಕರಲ್ಲಿ ದೇಶಭಕ್ತಿಯ ಅಲೆ ಎಬ್ಬಿಸಿತ್ತು. ನಾಗೇಶ್ ಕುಕುನೂರ್ ನಿರ್ದೇಶನದ ಈ ವೆಬ್ ಸಿರೀಸ್ ಕ್ಯಾ. ಸಿಖ್ ಶರ್ಮಾ ಅವರ ಕಥೆ ಹೇಳುತ್ತದೆ. ಇವರು ಸ್ಪೆಷಲ್ ಫೋರ್ಸ್‌ಗೆ ಸೇರಲಿದ್ದ ಆರ್ಮಿ ಆಫೀಸರ್‌ಗಳ ಗುಂಪಿನಲ್ಲಿದ್ದ ಏಕೈಕ ಮಹಿಳೆಯಾಗಿದ್ದರು.

ಇದರಲ್ಲಿ ಅಕ್ಷಯ್ ಒಬೆರಾಯ್, ಅತುಲ್ ಕುಲಕರ್ಣಿ, ಅನೂಪ್ ಸೋನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಜೂಹಿ ಚಾವ್ಲಾ ವಾರ ಸ್ಪೆಷಲ್ ಎಪ್ಪಿಯರೆನ್ಸ್ ಇದೆ. ಈ ಸಿರೀಸ್ ಎಎಲ್‌ಟಿ ಬಾಲಾಜಿ ಹಾಗೂ ಝೀ5ನಲ್ಲಿ ವೀಕ್ಷಿಸಬಹುದು.

ಕೋಡ್ M

ಕಿರುತೆರೆಯಲ್ಲಿ ಜೆನ್ನಿಫರ್ ವಿಂಗತ್‌ನ್ನು ಪ್ರತಿಭಾನ್ವಿತ ನಟಿ ಎನ್ನುವುದಕ್ಕೆ ಕಾರಣವಿದೆ. ಬೇಹದ್ 2 ಧಾರವಾಹಿಯ ನಟಿ ಕೋಡ್‌ ಎಂ ಮೂಲಕ ಡಿಜಿಟಲ್‌ ಫ್ಲಾಟ್‌ಫಾರ್ಮ್‌ಗೆ ಕಾಲಿಟ್ಟಿದ್ದರು. ಮೇಜರ್ ಮೋನಿಕಾ ಮೆಹ್ರಾ ಪಾತ್ರದಲ್ಲಿ ಕಾಣಿಸಿಕೊಂಡ ಆಕೆ ವೀಕ್ಷಕರ ಮೇಲೆ ಭಾರೀ ಪರಿಣಾಮ ಬೀರಿದರು.

ಜೆನ್ನಿಫರ್ ಈ ಸಿನಿಮಾದಲ್ಲಿ ಆರ್ಮಿ ಲಾಯ್ ಆಗಿ ಕಾಣಿಸಿಕೊಂಡಿದ್ದರು. ತನ್ನ ವಿವಾಹ ಕೆಲವೇ ವಾರ ಮುಂಚೆ ಆಕೆ ಒಂದು ಮಹತ್ವದ ಹೈಪ್ರೊಫೈಲ್ ಕೇಸನ್ನು ವಾಸಿಉತ್ತಾರೆ. ಎನ್‌ಕೌಂಟರ್‌ಗೆ ಸಂಬಂಧಿಸಿದ ಸಿಂಪಲ್ ಕೇಸ್ ಆಗಿ ಆರಮಭದಲ್ಲಿ ಕಾಣಿಸುತ್ತದೆ. ಆದರೆ ಅದರ ಹಿಂದೆ ಬೇರೆಯೇ ಕಥೆ ಇರುತ್ತದೆ. ಈ ಸಿರೀಸ್ ಎಎಲ್‌ಟಿ ಬಾಲಾಜಿ ಹಾಗೂ ಝೀ5ನಲ್ಲಿ ವೀಕ್ಷಿಸಬಹುದು. ಇದರಲ್ಲಿ ರಜತ್ ಕಪೂರ್, ಸೀಮಾ ಬಿಸ್ವಾಸ್, ತನುಜ್ ವಿರ್ವಾನಿ ನಟಿಸಿದ್ದಾರೆ.

ದ ಫ್ಯಾಮಿಲಿ ಮ್ಯಾನ್

ದ ಫ್ಯಾಮಿಲಿ ಮ್ಯಾನ್ ಸಿನಿಮಾ ವೀಕ್ಷಕರನ್ನು ಕುತೂಹಲದ ತುತ್ತತುದಿಗೆ ತಂದು ನಿಲ್ಲಿಸುತ್ತದೆ. ಪತ್ತೇದಾರಿ ವೆಬ್‌ಸಿರೀಸ್ ಪತ್ತೆದಾರಿ ಅಧಕಾರಿಯಾಗಿ ಕೆಲಸ ಮಾಡುವ ಶ್ರೀಕಾಂತ್ ತಿವಾರಿ ಅವರ ಕಥೆ.

ನೀವು ಮನೋಜ್ ಬಾಜಪೇಜಿ ಫ್ಯಾನ್ ಆಗಿದ್ದರೆ ಇದನ್ನು ಆದಷ್ಟು ಬೇಗ ವೀಕ್ಷಿಸಿ. ನಟ ಮನೋಜ್ ಉಗ್ರರಿಂದ ದೇಶ ರಕ್ಷಿಸುವ ಮತ್ತು ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ರೋಚಕ ಕಥೆ ಇದು. ಇದು ಅಮೆಝಾನ್ ಪ್ರೈಂನಲ್ಲಿ ವೀಕ್ಷಿಸಬಹುದು.

ದಿ ಫೊರ್ಗಟನ್ ಆರ್ಮಿ - ಆಝಾದಿ ಕೇಲಿಯೇ

ಕಬೀರ್ ಖಾನ್‌ನ ದಿ ಫರ್ಗಟನ್ ಆರ್ಮಿ- ಆಝಾದಿ ಕೇಲಿಯೇ ನಿಜಘಟನೆ ಆಧಾರಿತ ವೆಬ್ ಸಿರೀಸ್. ಇದು ಸ್ವಾತಂತ್ರ್ಯಕ್ಕಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ನೇತೃತ್ವದಲ್ಲಿ  ಹೋರಾಡಿದ ಸೇನೆಯ ಮಹಿಳೆ ಮತ್ತು ಪುರುಷರ ಕಥೆ ಹೇಳುತ್ತದೆ.

 
 
 
 
 
 
 
 
 
 
 
 
 

They aimed for one goal: Free India #TheForgottenArmy, trailer out today @sunsunnykhez @sharvari @primevideoin

A post shared by Kabir Khan (@kabirkhankk) on Jan 6, 2020 at 9:30pm PST

ಇದರಲ್ಲಿ ಶಾರ್ವರಿ ವಾಘ್, ಸನ್ನಿ ಕೌಶಲ್‌ನ ಸಹೋದರನಾಗಿ ವಿಕ್ಕಿ ಕೌಶಲ್ ಕಾಣಿಸಿಕೊಳ್ಳುತ್ತಾರೆ.  ಕಬೀರ್ ಖಾನ್ ಇದೇ ಘಟನೆಗೆ ಸಂಬಂಧಿಸಿ ಎರಡು ದಶಕಗಳ ಹಿಂದೆ ದೂರದರ್ಶನಕ್ಕಾಗಿ ಡಾಕ್ಯುಮೆಂಟ್ ಕೂಡಾ ಮಾಡಿದ್ದರು. ದಇದು ರಿಲೀಸ್ ಆದಾಗ ಆಝಾದಿ ಕೇಲಿಯೇ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಇದನ್ನು ಅಮೆಝಾನ್ ಪ್ರೈಂನಲ್ಲಿ ವೀಕ್ಷಿಸಬಹುದು.

ಸ್ಪೆಷಲ್ ಒಪಿಎಸ್

ಥ್ರಿಲರ್ ಸಿನಿಮಾ ನಿರೀಕ್ಷೆಯಲ್ಲಿದ್ದರೆ ಕೆಕೆ ಮೆನೊನ್ ಅವರ ಸ್ಪೆಷಲ್ ಒಪಿಎಸ್ ನೊಡಲೇಬೇಕು. ಇದು ಸ್ಪೈ ಸಿರೀಸ್.  ಮುಂಬೈ 26/11 ದಾಳಿ ಸೇರಿದಂತೆ ಉಗ್ರ ದಾಳಿಯಲ್ಲಿ ಭಾರತದ ಇಂಟೆಲಿಜೆನ್ಸ್ ಅಧಿಕಾರಿಯ ಪಾತ್ರದ ಬಗ್ಗೆ ಈ ಸಿರೀಸ್ ಇದೆ.

ಇದನ್ನು ನೀರಜ್ ಪಾಂಡೆ ನಿರ್ದೇಶಿಸಿದ್ದು, ಡಿಸ್ನಿ ಹಾಗೂ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು. ಇದರಲ್ಲಿ ದಿವ್ಯಾ ದತ್ತಾ, ಸಯಾಮಿ ಖೇರ್, ಕರಣ್ ಟೇಕರ್, ವಿನಯ ಪತಕ್, ಮುಜಮಿಲ್ ಇಬ್ರಾಹಿಂ ನಟಿಸಿದ್ದಾರೆ.

74 ನೇ ಸ್ವತಂತ್ರೋತ್ಸವ ಸಂಭ್ರಮ: ಕರುನಾಡಿನಲ್ಲಿ ಸ್ವಾತಂತ್ರ್ಯ ಹೋರಾಟದ ಹೆಜ್ಜೆಗುರುತುಗಳು

"