Asianet Suvarna News Asianet Suvarna News

ಮತ್ತೆ ಕೃಷ್ಣನಾಗಿದ್ದೇ ನನಗೆ ದೊಡ್ಡ ಫ್ರೀಡಂ ಎಂದ ಸುಮೇಧ್..! ಫ್ರೀಡಂ ಬಗ್ಗೆ ಸೆಲೆಬ್ರಿಟಿಗಳ ವ್ಯಾಖ್ಯಾನವಿದು

ಹಲವು ತಿಂಗಳು ಮನೆಯಲ್ಲೇ ಉಳಿದ ನಂತರ ಜನರು ಫ್ರೀಡಂಗಾಗಿ ತವಕಿಸಿದ್ದಾರೆ. ಜೀವನದ ಸಣ್ಣಪುಟ್ಟ ಖುಷಿಗಳನ್ನೇ ಮರೆತಿದ್ದ ಜನ ಅದಕ್ಕಾಗಿ ಹಂಬಲಿಸಿದ್ದಾರೆ. ಸೆಲೆಬ್ರಿಟಿಗಳಿಗೂ ಲಾಕ್‌ಡೌನ್‌ ನಂತರ ಸ್ವಾತಂತ್ರ್ಯ ಎಂಬುದರ ಅರ್ಥ ಬದಲಾಗಿದೆ ಎನ್ನುತ್ತಾರೆ. ಹೀಗಿದೆ ಕೆಲವು ಸೆಲೆಬ್ರಿಟಿಗಳ ಪ್ರತಿಕ್ರಿಯೆ.

for these celebs the idea of being free has changed amid the pandemic
Author
Bangalore, First Published Aug 15, 2020, 1:02 PM IST

ಹಲವು ತಿಂಗಳು ಮನೆಯಲ್ಲೇ ಉಳಿದ ನಂತರ ಜನರು ಫ್ರೀಡಂಗಾಗಿ ತವಕಿಸಿದ್ದಾರೆ. ಜೀವನದ ಸಣ್ಣಪುಟ್ಟ ಖುಷಿಗಳನ್ನೇ ಮರೆತಿದ್ದ ಜನ ಅದಕ್ಕಾಗಿ ಹಂಬಲಿಸಿದ್ದಾರೆ. ಅನ್‌ಲಾಕ್‌ನಲ್ಲಿ ನಿಧಾನವಾಗಿ ಜನರು ಸಹಜ ಜೀವನದತ್ತ  ಮರಳುತ್ತಿದ್ದಾರೆ.

ಒಂದು ತುಂಡು ಪಿಝಾ, ಬೈಟು ಕಾಫಿಯಲ್ಲಿ ಭಾರೀ ಸ್ವಾತಂತ್ರ್ಯವಿದ್ದಂತೆ ಭಾಸವಾಗುತ್ತಿದೆ. ಕೊರೋನಾ ಮಧ್ಯೆ ಈ ಎಲ್ಲ ವಿಚಾರಗಳ ಪ್ರಾಮುಖ್ಯತೆಯನ್ನು ಜನರು ತಿಳಿದುಕೊಂಡಿದ್ದಾರೆ.

ಸ್ವಾತಂತ್ರ್ಯೋತ್ಸವ: ನೀವು ನೋಡಲೇಬೇಕಾದ 5 ವೆಬ್‌ಸಿರೀಸ್‌ಗಳಿವು..!

ಫ್ರೀಡಂನ ಅರ್ಥವೇ ಬದಲಾಗಿದೆ- ಸುಮ್ಮನೆ ಸಮುದ್ರ ನೋಡುತ್ಥಾ ಕೂರುವುದು, ಸ್ನೇಹಿತರ ಜೊತೆ ಕಾಫಿ, ಪಿಝಾ ತಿನ್ನುವುದು, ಪಾನಿಪೂರಿ, ಊಟದ ನಂತರ ವಾಕ್ ಮಾಡುವಂತಹ ಸಮಾನ್ಯ ಸಂಗತಿ ಬಹಳ ವಿಶೇಷವೆನಿಸುತ್ತಿವೆ. ಸೆಲೆಬ್ರಿಟಿಗಳಿಗೂ ಲಾಕ್‌ಡೌನ್‌ ನಂತರ ಸ್ವಾತಂತ್ರ್ಯ ಎಂಬುದರ ಅರ್ಥ ಬದಲಾಗಿದೆ ಎನ್ನುತ್ತಾರೆ. ಹೀಗಿದೆ ಕೆಲವು ಸೆಲೆಬ್ರಿಟಿಗಳ ಪ್ರತಿಕ್ರಿಯೆ.

ಸ್ವಚ್ಛ ಗಾಳಿ ಉಸಿರಾಡುವುದು, ಕಡಲು ನೋಡುತ್ತಾ ಕೂರುವುದೇ ನನಗೆ ಸ್ವಾತಂತ್ರ್ಯ: ಟೆರೆನ್ಸ್ ಲೂಯೀಸ್

ನಾನೊಬ್ಬ ಪ್ರಕೃತಿ ಪ್ರೇಮಿಯಾಗಿ ನನ್ನ ಸ್ನೇಹಿತರ ಜೊತೆ ಸಮುದ್ರದ ತೀರದಲ್ಲಿ ಕುಳಿತು ಕಾಫಿ ಹೀರುವುದಕ್ಕೆ ಸಾಧ್ಯವಾಗಿದ್ದೇ ಪುಣ್ಯ. ಈ ಅನುಭವ ಈಗ ಮೊದಲಿಗಿಂತಲೂ ಅಧ್ಬುತ ಮತ್ತು ಬಹಳ ಮುಖ್ಯ ಸಂಗತಿಯಾಗಿದೆ. ಒಂದು ಫ್ಲಾಸ್ಕ್‌ನಲ್ಲಿ ಕಾಫಿ ತೆಗೆದುಕೊಂಡು ಗೆಳೆಯರೊಂದಿಗೆ ತೀರದಲ್ಲಿ ಕುಳಿತು ಲೈಫ್‌ ಬಗ್ಗೆ ಮಾತನಾಡುತ್ತೇವೆ.

for these celebs the idea of being free has changed amid the pandemic9 ಗಂಟೆಯಾದಾಗ ಹವಾಲ್ದಾರ ಗಾರ್ಡ್‌ ಎಲ್ಲರನ್ನೂ ಕಳುಹಿಸುತ್ತಾರೆ. ನಿಬಂಧನೆ ಹಾಗೂ ಕರ್ಫ್ಯೂ ನಡುವೆ ಸಮುದ್ರದ ತೀರದಲ್ಲಿ ಒಡಾಡಲು ಸಾಧ್ಯವಾಗುತ್ತಿರುವುದು ನನ್ನ ಮಟ್ಟಿಗೆ ಫ್ರೀಂ ಎಂದಿದ್ದಾರೆ ಟೆರೆನ್ಸ್‌ ಲೂಯಿಸ್

ಮನೆಯಿಂದ ಸ್ವಲ್ಪ ದೂರ ಸೈಕ್ಲಿಂಗ್ ಮಾಡೋಕಾಗ್ತಿರೋದೆ ಫ್ರೀಡಂ: ಆದಿತ್ಯ ನಾರಾಯಣ್

ಲಾಕ್‌ಡೌನ್‌ನಿಂದಾಗಿ ಜಿಮ್ ಹೋಗುವುದು ಮೊಟಕಾಗಿತ್ತು. ಲಾಕ್‌ಡೌನ್ ತೆರವು ಮಾಡಿದ ನಂತರ ನಾನು ಮನೆ ಲೊಖಂಡ್‌ವಾಲಾದಿಂದ ಬಾಂದ್ರಾ ವರ್ಲಿ ಸೀ ತನಕ ಸೈಕ್ಲಿಂಗ್ ಮಾಡಿ ಮರಳುತ್ತಿದ್ದೇನೆ. ಇಷ್ಟು ತಿಂಗಳೂ ಮನೆಯಲ್ಲೇ ಇದ್ದು,ಸೈಕ್ಲಿಂಗ್ ಮಾಡೋಕಾಗೋದೇ ಸ್ವಾತಂತ್ರ್ಯ ಎಂದು ಅನಿಸುತ್ತಿದೆ.

for these celebs the idea of being free has changed amid the pandemicಸೈಕ್ಲಿಂಗ್‌ ನನಗೆ ಫ್ರೀಡಂನ ನಿಜವಾದ ಅರ್ಥ ತಿಳಿಸಿದೆ. ಜೀವನದ ಸಣ್ಣ ಪುಟ್ಟ ಖುಷಿಯ ಮಹತ್ವ ಅರ್ಥವಾಗುತ್ತಿದೆ ಎಂದಿದ್ದಾರೆ. ಹಿಂದಿರುಗಿ ಬರುವಾಗ ಜುಹು ಬೀಚ್‌ನಲ್ಲಿ ನಿಂತು ಸೂರ್ಯಾಸ್ತಮಾನ ನೋಡುತ್ತೇನೆ. ಲಾಕ್‌ಡೌನ್‌ ನಂತರ ಈ ಸನುಭಗಳನ್ನು ನಾನು ಎಂಜಾಯ್ ಮಾಡುತ್ತಿದ್ದೇನೆ ಎಂದಿದ್ದಾರೆ.

ವಾಲ್ಕ್ ಹೋಗುವುದು ಇಷ್ಟು ಅದ್ಭುತವಾಗಿರಬಹುದೆಂದು ಯಾವತ್ತೂ ಯೋಚಿಸಿರಲಿಲ್ಲ: ಶುಭಾಂಗಿ ಟಂಬಲೆ

ಲಾಕ್‌ಡೌನ್ ಸಂದರ್ಭ ಜಾಗಿಂಗ್ ಅಥವಾ ವಾಕಿಂಗ್ ಮಾಡಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದೆ.ಒಮ್ಮೆ ಮಾಸ್ಕ್‌ ಧರಿಸದೇ ಹಿರ ಬಂದಾಗ ಪೊಲೀಸರು ತಡೆದು ಮನೆಗೆ ಕಳಿಸಿದ್ದರು. ಈಗ ಮತ್ತೆ ಹೊರಗೆ ಜಾಗಿಂಗ್ ಮಾಡಲು ಸಾಧ್ಯವಾಗುತ್ತಿರುವುದು ನನಗೆ ಫ್ರೀಡಂ ಎನಿಸುತ್ತಿದೆ.

for these celebs the idea of being free has changed amid the pandemicಅದ್ಭುತ ಎನಿಸುತ್ತಿದೆ. ಲಾಕ್‌ಡೌನ್ ನಂತರ ಮೊದಲು ಹೊರಗೆ ಬಂದಾಗ, ಮಳೆ, ಹಸಿರು ಎಲ್ಲವೂ ಸುಂದರವಾಗಿ ಕಾಣಿಸುತ್ತಿದೆ. ಈ ಅನುಭವ ವಿವರಿಸಲು ಸಾಧ್ಯವಿಲ್ಲ. ಹೊರಗೆ ಬಂದು ನೆನೆದು, ಡ್ಯಾನ್ಸ್‌ ಮಾಡಿ ಮನೆಗೆ ಹೋದಾಗ ಸ್ವತಂತ್ರ ಹಕ್ಕಿಯಂತೆ ಭಾಸವಾಗುತ್ತಿತ್ತು ಎಂದಿದ್ದಾರೆ.

ಸ್ವಚ್ಛ ಸಮುದ್ರ ಮತ್ತು ಅಲೆಗಳ ಶಬ್ದ ನನ್ನನ್ನು ಸ್ವತಂತ್ರವಾಗಿಸಿದೆ: ಅರ್ಜುನ್ ಬಿಜ್‌ಲಾನಿ

ಲಾಕ್‌ಡೌನ್ ಸಂದರ್ಭ ನಮ್ಮ ಸ್ವತಂತ್ರವನನ್ನೆಲ್ಲ ಕಿತ್ತುಕೊಂಡಂತೆ ಅನಿಸಿತು. ಹಾಗೆಯೇ ಚಿಕ್ಕ ಚಿಕ್ಕ ವಿಷಯಗಳಲ್ಲಿ ಖುಷಿ ಕಂಡುಕೊಳ್ಳುವುದನ್ನೂ ಹೇಳಿಕೊಟ್ಟಿತು. ಈ ಮೊದಲು ನಗಣ್ಯ ಎನಿಸಿದ್ದ ವಿಚಾರಗಳು ಈಗ ಅದ್ಭುತ ಎನಿಸುತ್ತಿದೆ.

for these celebs the idea of being free has changed amid the pandemicಸ್ವಚ್ಛ ಸಮುದ್ರ ನೋಡಿ, ತೀರಕ್ಕೆ ಅಪ್ಪಳಿಸುವ ಅಲೆಗಳ ಸುದ್ದ ಕೇಳಿ ನಿಜವಾದ ಸ್ವಾತಂತ್ರ್ಯದ ಅನುಭವಾಗುತ್ತಿದೆ. ಲಾಕ್‌ಡೌನ್‌ನಲ್ಲಿ ನಾಲ್ಕು ಗೋಡೆ ಮಧ್ಯೆ ಸೀಮಿತವಾಗಿದ್ದು, ಗೋವಾದ ಈಗ ಆಕಾಶ, ಸಮುದ್ರ, ಸೂರ್ಯೋದಯ, ಸೂರ್ಯಾಸ್ತಮಾನ ಎಲ್ಲವೂ ಸುಂದರವಾಗಿ ಕಾಣಿಸುತ್ತಿದೆ.

ನನ್ನ ಸಹ ನಟರೂ, ಕಲಾವಿದರೊಂದಿಗೆ ಮತ್ತೆ ಸೇರಿದ್ದೇ ಫ್ರೀಡಂ: ಆದಿತಿ ಸಜ್ವಾನ್

ಅಕ್ಬರ್‌ನ ಬಾಲ್ ಬೀರಬಲ್‌ ಧಾರವಾಹಿಯ ಶೂಟಿಂಗ್‌ಗೆ ತಂಡದೊಂದಿಗೆ ಮತ್ತೆ ಜೊತೆಯಾಗಿದ್ದೇ ನನಗೆ ದೊಡ್ಡ ಫ್ರೀಡಂ. ಕೆಲಸ ನನಗೆ ಸ್ವಾತಂತ್ರ್ಯ ನೀಡುತ್ತದೆ ಎಂದು ಅರಿವಾಗುವುದರ ಜೊತೆ ಜನರ ಜೊತೆ ಸಂಪರ್ಕದಲ್ಲಿರುವುದು ಎಷ್ಟು ಮುಖ್ಯ ಎಂಬುದು ಅರಿವಾಗುತ್ತಿದೆ.

for these celebs the idea of being free has changed amid the pandemicಲಾಕ್‌ಡೌನ್ ನಂತ್ರ ಮತ್ತೆ ಕ್ಯಾಮೆರಾ ಫೇಸ್ ಮಾಡುತ್ತಿರುವುದೇ ಫ್ರೀಡಂ: ಚಾರು ಅಸೊಪಾ

ಒಬ್ಬ ಕಲಾವಿದನಿಗೆ ತನ್ನ ತಂಡದಿಂದ ದೂರ ಇರುವುದೇ ಕ್ವಾರೆಂಟೈನ್. ಈ ಕಷ್ಟದ ಸಂದರ್ಭದಲ್ಲಿ ಮನೆಯಲ್ಲಿ ಲಾಕ್ ಆಗಿರುವುದೇ ಕಷ್ಟ. ಸೆಟ್‌ಗೆ ಮರಳಿ ಬಂದು ಶೂಟ್‌ನಲ್ಲಿ ಭಾಗಿಯಾಗಿದ್ದೇ ದೊಡ್ಡ ಫ್ರೀಡಂ.

for these celebs the idea of being free has changed amid the pandemicಅಪ್ಪ-ಅಮ್ಮನನ್ನು ಸೇರಿದ್ದು ರೆಕ್ಕೆ ಬಂದಂತಾಗಿದೆ: ಹಿಮಾಂಶ್ ಕೊಹ್ಲಿ

ಕೊರೋನಾ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ನಮ್ಮ ಬಹಳ ಸ್ವಾತಂತ್ರ್ಯವನ್ನು ಹಸಿದುಕೊಂಡಿದೆ. ಮುಂಬೈನ ಅಪಾರ್ಟ್‌ಮೆಂಟ್‌ನಲ್ಲಿ ಏಕಾಂಗಿ ಎನಿಸುತ್ತಿತ್ತು. ದೆಹಲಿಗೆ ಬಂದು ಸೆಲ್ಫ್‌ ಕ್ವಾರೆಂಟೈನ್ ನಂತರ ಮನೆಯವರನ್ನು ಭೇಟಿಯಾಗಿದ್ದು, ನನಗೆ ಸಿಕ್ಕಿದ ಸ್ವಾತಂತ್ರ್ಯ.

for these celebs the idea of being free has changed amid the pandemicಅಪ್ಪ ಅಮ್ಮನ ಜೊತೆಯಾದಾಗ ರೆಕ್ಕೆ ಬಂದಂತನಿಸಿದೆ. ಲಾಕ್‌ಡೌನ್‌ನಲ್ಲಿ ಬಂಧಿ ಎನಿಸುತ್ತಿಲ್ಲ. ಅಪ್ಪನ ಆಫೀಸ್‌ಗೆ ಹೋದೆ, ದಿನಸಿ, ತರಕಾರಿ ತರಲು ಹೋದೆ. ಫ್ಯಾಮಿಲಿ ಜೊತೆ ಶಾರ್ಟ್ ಡ್ರೈವ್‌ ಹೋದೆ. ಈ ಅನುಭವಗಳು ಪ್ರೈಸ್‌ಲೆಸ್ ಎಂದಿದ್ದಾರೆ.

ಲಾಕ್‌ಡೌನ್ ನಂತರ ಮತ್ತೆ ಕೃಷ್ಣನಾಗಿದ್ದೇ ನನಗೆ ಫ್ರೀಡಂ: ಸುಮೇದ್ ಮುದ್‌ಗಲ್ಕರ್

ಮನಸಿನ ಸ್ವಾತಂತ್ರ್ಯ ಎಲ್ಲಕ್ಕಿಂತ ಮುಖ್ಯ ಎಂಬುದನ್ನು ಲಾಕ್‌ಡೌನ್ ಹೇಳಿಕೊಟ್ಟಿದೆ. ಮನೆಯಲ್ಲೇ ಕುಳಿತು ಎಲ್ಲೂ ಹೋಗಲಾಗದೆ, ನನಗೆ ಮತ್ತೆ ನನ್ನ ಕೃಷ್ಣ ಪಾತ್ರ ಮಾಡಲು ಆಸೆಯಾಗುತ್ತಿತ್ತು. ಅದಕ್ಕಾಗಿ ಹಂಬಲಿಸುತ್ತಿದ್ದೆ. ಮತ್ತೆ ಕೃಷ್ಣನ ವೇಷ ಧರಿಸಿದಾಗ ವಿಶೇಷ ಚೈತನ್ಯ ಅನುಭವವಾಗುತ್ತಿದೆ ಎಂದಿದ್ದಾರೆ.

for these celebs the idea of being free has changed amid the pandemic

Follow Us:
Download App:
  • android
  • ios