ಬಿ-ಟೌನ್ಗೆ ಅಪರಿಚಿತನಾಗಿದ್ದ ಯಶ್ 500 ಕೋಟಿ ರೂ. ಮಾಡಿದ್ರೆ ಶಾರುಖ್ ಪಠಾಣ್ಗೆ ಬೆಲೆ ಬೇಡ್ವಾ?; ಕಾಲೆಳೆದ ಅರ್ಜಿವಿ
ಪಠಾಣ್ ಸಿನಿಮಾದಲ್ಲಿ ಶಾರುಖ್ ನಟನೆಗಿಂತ ಫೈಟಿಂಗ್ ಜಾಸ್ತಿ. ಕೋಟಿ ಕೋಟಿ ಗಳಿಸುತ್ತಿದ್ದರೂ ಕಿಂಗ್ ಕಾಲೆಳೆದ ಆರ್‌ಜಿವಿ....

ಬಾಲಿವುಡ್ ಬಾಕ್ಸ್ ಆಫೀಸ್ ಮತ್ತೆ ಕೋಟಿ ಕೋಟಿ ಗಳಿಕೆ ನೋಡುವಂತೆ ಮಾಡಿದ್ದು ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯಿಸಿರುವ ಪಠಾಣ್ ಸಿನಿಮಾ. ಜನವರಿ 25ರಂದು ಹಿಂದಿ ಭಾಷೆಯಲ್ಲಿ ಪಠಾಣ್ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಕಂಡಿತ್ತು. ಕೇವಲ ಒಂದೇ ವಾರದಲ್ಲಿ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ನಾಲ್ಕು ವರ್ಷ ಶಾರುಖ್ ಬ್ರೇಕ್‌ಗೆ ಸರಿಯಾದ ಬೆಲೆ ಸಿಕ್ಕಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಶಾರುಖ್ ನಟನೆ ಮೆಚ್ಚಿಕೊಳ್ಳುತ್ತಿರುವ ಜನರ ನಡುವೆ ಯಶ್ ಮಾಡಿರುವ ಲೆಕ್ಕದ ಮುಂದೆ ಶಾರುಖ್ ಏನೂ ಇಲ್ಲ ಎಂದು ನಿರ್ದೇಶಕ ಆರ್‌ಜಿವಿ ಕಾಲೆಳೆದಿದ್ದಾರೆ.
ಪಠಾಣ್ ಬಗ್ಗೆ ಆರ್‌ಜಿವಿ:
'ನೋಡಿ ಬಾಲಿವುಡ್‌ಗೆ ಅಪರಿಚತನಾಗಿರುವ ಯಶ್ ಅನ್ನೋ ನಟ ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ 500 ಕೋಟಿ ರೂಪಾಯಿ ಗಳಿಸಬಹುದು ಅಂದ್ರೆ ಹಲವು ವರ್ಷಗಳಿಂದ ಬಾಲಿವುಡ್ ಚಿತ್ರರಂಗವನ್ನು ರೂಲ್ ಮಾಡುತ್ತಿರುವ ಶಾರುಖ್ ಖಾನ್‌ಗೆ 500 ಕೋಟಿ ರೂಪಾಯಿ ಯಾವ ಲೆಕ್ಕ? ಯಶ್‌ಗಿಂತ ಶಾರುಖ್ ಖಾನ್‌ಗೆ ಇರುವ ಹೆಸರು ಮತ್ತು ಗೌರವ ಬೇರೆ ಲೆವೆಲ್. ಯಶ್ ಇಷ್ಟೊಂದು ಬಿಸ್ಯುನೆಸ್ ಮಾಡಬುದು ಅಂದ್ರೆ ಶಾರುಖ್‌ಗೆ ಬೆಲೆ ಇಲ್ವಾ? ಕಾಂತಾರ ಅನ್ನೋ ಸಿನಿಮಾ ಹಿಟ್ ಅಗುತ್ತೆ, ಪುಷ್ಪ ಅನ್ನೋ ಸಿನಿಮಾ ಹಿಟ್ ಆಗುತ್ತೆ ಅಲ್ಲಿ ಯಾರಿಗೂ ರಿಷಬ್ ಶೆಟ್ಟಿ ಯಾರು ಅಲ್ಲು ಅರ್ಜುನ್ ಯಾರು ಅಂತ ಗೊತ್ತಿಲ್ಲ. ಆದರೆ ಶಾರುಖ್ ಖಾನ್‌ಗೆ ಸ್ಟಾರ್‌ಡಮ್ ಎಲ್ಲವೂ ಕಿತ್ತುಕೊಳ್ಳುತ್ತಿದೆ' ಎಂದು ರಾಮ್ ಗೋಪಾಲ್ ವರ್ಮಾ ಕನೆಕ್ಟ್ ದಿಲ್ ಸೇ ಸಂದರ್ಶನದಲ್ಲಿ ಮತನಾಡಿದ್ದಾರೆ.
ತಾಯಿ ಜೊತೆ ಅಡಲ್ಟ್ ಸಿನಿಮಾ ನೋಡಿದ ಆರ್‌ಜಿವಿ; ತಾಯಿ ಕಾಮೆಂಟ್ ಕೇಳಿ ನೆಟ್ಟಿಗರು ಶಾಕ್
'ಓಟಿಟಿ ಈಗ ರೂಲ್ ಮಾಡುತ್ತಿರುವ ಕಾರಣ ಥಿಯೇಟರ್‌ಗಳು ಎಷ್ಟೇ ಕಲೆಕ್ಷನ್ ಮಾಡಿದ್ದರೂ ಬೆಲೆ ಇಲ್ಲ. ಈಗ ಶಾರುಖ್ ಖಾನ್ ಒಂದು ರೀತಿ ಫೇಡಿಂಗ್ ಸ್ಟಾರ್. ಇನ್ನು ಮುಂದೆ ಬಾಲಿವುಡ್ ಸಿನಿಮಾ ಯಾವುದೇ ರೀತಿ ಕಮರ್ಷಿಯಲ್ ಬ್ಲಾಕ್ ಬಸ್ಟರ್ ಮಾಡಲು ಆಗುವುದಿಲ್ಲ ಏಕೆಂದರೆ ನಮ್ಮ ಸೌತ್ ಮಸಾಲ ನಿರ್ದೇಶಕರು ಟಾಪ್‌ನಲ್ಲಿರುತ್ತಾರೆ. ಕೆಜಿಎಫ್ ಚಾಪ್ಟರ್ 2 ಒಂದು ದಿನದಲ್ಲಿ ಗಳಿಸಿರುವ ಕಲೆಕ್ಷನ್ ಬ್ರೇಕ್ ಮಾಡಲು ಇನಿತರರಿಗೆ ಒಂದು ವರ್ಷ ಬೇಕಾಗುತ್ತದೆ. ಬಿ-ಟೌನ್‌ನಲ್ಲಿ ಕ್ರಿಯೇಟ್ ಆಗಿರುವ ಮೂಡ ನಂಬಿಕೆಗಳು ಬ್ರೇಕ್ ಅಗಲಿದೆ. ಅದಕ್ಕೆ ಪಠಾಣ್ ಸಾಕ್ಷಿ' ಎಂದು ಆರ್‌ಜಿವಿ ಹೇಳಿದ್ದಾರೆ.
'ಸಿನಿಮಾದಲ್ಲಿ ಒಬ್ಬರು ಸ್ಟಾರ್‌ಗಳು ಒಂದೇ ರೀತಿ ಫೈಟಿಂಗ್ ಮಾಡುತ್ತಾರೆ. ಒಬ್ಬರು ಹೊಡೆದ ಶೈಲಿಯಲ್ಲಿ ಮತ್ತೊಬ್ಬರು ಹೊಡೆಯುತ್ತಾರೆ. ಫೈಟಿಂಗ್ ಆದರೂ ಕೊಂಚ ವಿಭಿನ್ನವಾಗಿರಬೇಕಿತ್ತು. ಪಠಾಣ್ ಚಿತ್ರದ ಫೈಟಿಂಗ್ ನನಗೆ ಇಂಪ್ರೆಸ್ ಮಾಡಿಲ್ಲ' ಎಂದಿದ್ದರು ಆರ್‌ಜಿವಿ.
ಪ್ರೆಸ್‌ಮೀಟ್:
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಲ್ಲಿ ಸಿಲುಕಿಕೊಂಡ ನಂತರ ಮಾಧ್ಯಮಗಳು ಮತ್ತು ಅಭಿಮಾನಿಗಳಿಂದ ನಟ ದೂರ ಉಳಿದುಬಿಟ್ಟಿದ್ದರು. ತಮ್ಮ 49ನೇ ಹುಟ್ಟುಹಬ್ಬದ ದಿನ ಮನೆಯ ಬಾಲ್ಕಾನಿಯಿಂದ ಎಲ್ಲರಿಗೂ ಹಾಯ್ ಹೇಳಿ ಮಾತನಾಡಿಸಿದರು. ಅಲ್ಲಿಂದ ಸಿನಿಮಾ ಪ್ರಚಾರ ಕೂಡ ಅದ್ಧೂರಿಯಾಗಿ ಶುರುವಾಗಿತ್ತು. ಬಹಳ ದಿನಗಳ ನಂತರ ಪ್ರೆಸ್‌ಮೀಟ್‌ನಲ್ಲೂ ಭಾಗಿಯಾಗಿದ್ದರು.
Shah Rukh Khan: 'ಪಠಾಣ್' ಅಬ್ಬರದ ನಡುವೆಯೇ ಶಾರುಖ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್!
ಶಾರುಖ್ ಅವರ ವೃತ್ತಿಜೀವನದಲ್ಲಿ ಪಠಾಣ್ ಶಾರುಖ್ ಖಾನ್ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ. ಇದಕ್ಕೂ ಮುನ್ನ 2013ರಲ್ಲಿ ಅವರ ‘ಚೆನ್ನೈ ಎಕ್ಸ್ ಪ್ರೆಸ್’ ಚಿತ್ರ ಅತಿ ಹೆಚ್ಚು ಗಳಿಕೆಯಾಗಿತ್ತು. ಚೆನ್ನೈ ಎಕ್ಸ್‌ಪ್ರೆಸ್‌ನ ಒಟ್ಟಾರೆ ಸಂಗ್ರಹ 227.13 ಕೋಟಿ ರೂ. ಆದರೆ, ಪಠಾಣ್ ಇದುವರೆಗೆ 280 ಕೋಟಿ ರೂ ಗಳಿಸಿದೆ.ಪಠಾಣ್ ಬಾಲಿವುಡ್‌ನ ಅತಿದೊಡ್ಡ ವಾರಾಂತ್ಯದ ಆರಂಭಿಕ ಚಲನಚಿತ್ರ. ಇಲ್ಲಿಯವರೆಗೆ, ಮೊದಲ ವಾರಾಂತ್ಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಕೆಜಿಎಫ್ 2, ಇದು ಮೊದಲ ವಾರದಲ್ಲಿ 194 ಕೋಟಿ ರೂ. ಪಠಾಣ್ ದಾಖಲೆಯನ್ನು ಮುರಿದು ಮೊದಲ ವಾರದಲ್ಲಿ 280 ಕೋಟಿ ಗಳಿಸಿದೆ.ಪಠಾಣ್ ಕೇವಲ 5 ದಿನಗಳಲ್ಲಿ 280 ಕೋಟಿಗೂ ಹೆಚ್ಚು ಗಳಿಸಿದೆ. ಇದರೊಂದಿಗೆ ಇದು ಸಾರ್ವಕಾಲಿಕ 10ನೇ ಅತಿ ದೊಡ್ಡ ಬಾಲಿವುಡ್ ಚಿತ್ರ ಎನಿಸಿಕೊಂಡಿದೆ. ಇದಕ್ಕೂ ಮೊದಲು, ಅಜಯ್ ದೇವಗನ್ ಅವರ ತನ್ಹಾಜಿ 279.55 ಕೋಟಿ ಗಳಿಸಿದ್ದು, ಗಳಿಕೆಯಲ್ಲಿ ಟಾಪ್-10 ಚಿತ್ರಗಳಲ್ಲಿ 10 ನೇ ಸ್ಥಾನದಲ್ಲಿತ್ತು.