Asianet Suvarna News Asianet Suvarna News

ತಾಯಿ ಜೊತೆ ಅಡಲ್ಟ್‌ ಸಿನಿಮಾ ನೋಡಿದ ಆರ್‌ಜಿವಿ; ತಾಯಿ ಕಾಮೆಂಟ್‌ ಕೇಳಿ ನೆಟ್ಟಿಗರು ಶಾಕ್

 ತಾಯಿ ಸೂರ್ಯವತಿ ಜೊತೆ ಜಿಎಸ್‌ಟಿ ಸಿನಿಮಾ ನೋಡಿ ಆರ್‌ಜಿವಿ. ಮಗನ ಬಗ್ಗೆ ತಾಯಿ ಹೇಳಿದ ಮಾತುಗಳನ್ನು ಕೇಳಿ ನೆಟ್ಟಿಗರು ಶಾಕ್...

Netizens shock with Ram gopal varma mother suyavathi reaction for GST film vcs
Author
First Published Dec 19, 2022, 12:12 PM IST

ತೆಲುಗು ಚಿತ್ರರಂಗದ ಡಿಫರೆಂಟ್ ಡೈರೆಕ್ಟರ್ ರಾಮ್‌ ಗೋಪಾಲ್ ವರ್ಮಾ ದಿನಕ್ಕೊಂದು ವಿಚಾರಕ್ಕೆ ಕಾಂಟ್ರವರ್ಸಿ ಮಾಡಿಕೊಳ್ಳುತ್ತಾರೆ. ಸೂಪರ್ ಹಿಟ್‌ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡುತ್ತಿದ್ದ ನಟ ಇದ್ದಕ್ಕಿದ್ದಂತೆ ಅಡಲ್ಟ್‌ ಸಿನಿಮಾ ರೀತಿ ಪ್ರತಿ ವಿಚಾರವನ್ನು ಮುಂದಿಡುತ್ತಿರುವುದಕ್ಕೆ ಸಿನಿ ರಸಿಕರು ಬೇಸರ ವ್ಯಕ್ತ ಪಡಿಸಿದ್ದರು. ವರ್ಮಾ ಏನೇ ಮಾಡಿದ್ದರೂ ಹಿಗ್ಗಾಮುಗ್ಗಾ ಬೈಯುವ ಜನರು ನಡುವೆ, ಇಲ್ಲ ವರ್ಮಾ ಮಾಡುತ್ತಿರುವುದು ಸರಿ ಅವನು ಖುಷಿ ಎಂದು ಹೇಳುತ್ತಿರುವುದು ತಾಯಿ ಸೂರ್ಯಮ್ಮ ಒಬ್ಬರೆ. 

ಹೌದು! 2018ರಲ್ಲಿ ರಾಮ್‌ ಗೋಪಾಲ್ ವರ್ಮಾ ನಿರ್ದೇಶಿಸಿದ ಜಿಎಸ್‌ಟಿ ಸಿನಿಮಾ ಅಂದ್ರೆ ಗಾಡ್ ಸೆಕ್ಸ್‌ ಥ್ರೂತ್‌ ತುಂಬಾ ದೊಡ್ಡ ವಿವಾದಾ ಸೃಷ್ಟಿ ಮಾಡಿತ್ತು. ಇದೊಂದು ಶಾರ್ಟ್‌ ಫಿಲ್ಮ್ ಆಗಿದ್ದು ಅಮೆರಿಕಾದ ಪೋರ್ನ್‌ ಸ್ಟಾರ್ ಮಿಯಾ ಮಾಲ್ಕೋವಾ ಜೊತೆ ಈ ಅಡೆಲ್ಟ್‌ ಕಂಟೆಂಟ್‌ ಸಿನಿಮಾ ಚಿತ್ರೀಕರಣ ಮಾಡಿದ್ದು. ಒಂದೊಂದು ದೃಶ್ಯದಲ್ಲಿ ಮಿಯಾರನ್ನು ಸಂಪೂರ್ಣವಾಗಿ ಬೆತ್ತಲಾಗಿ ಈ ತೋರಿಸಲಾಗಿದೆ. ಅಲ್ಲದೆ ಮಹಿಳೆಯರ ಅಂಗಾಂಗವನ್ನು ವಿಚಿತ್ರ ವಿಚಿತ್ರವಾಗಿ ಕೋನಗಳಲ್ಲಿ ವರ್ಣಿಸಿದ್ದಾರೆ. ಈ ಸಿನಿಮಾವನ್ನು ಒಬ್ಬರ ನೋಡಿದ್ದರೆ ಸೇಫ್‌ ಎನ್ನುವ ನೆಟ್ಟಿಗರಿದ್ದಾರೆ ಆದರೆ ಆರ್‌ಜಿವಿ ತಮ್ಮ ತಾಯಿ ಜೊತೆ ಈ ಸಿನಿಮಾ ನೋಡಿದ್ದಾರೆ.

Netizens shock with Ram gopal varma mother suyavathi reaction for GST film vcs

ಜಿಎಸ್‌ಟಿ ಸಿನಿಮಾ ನೋಡಿ ಮಗ ಮಾಡುತ್ತಿರುವುದು ತಪ್ಪು ಎಂದು ಸೂರ್ಯಮ್ಮ ಹೇಳಬಹುದು ಎಂದು ನೆಟ್ಟಿಗರು ನಿರೀಕ್ಷೆ ಮಾಡಿದ್ದರು. ಆದರೆ ಸೂರ್ಯಮ್ಮ ಹೇಳಿರುವುದು ಬೇರೆ. 'ಜಿಎಸ್‌ಟಿ ಸಿನಿಮಾವನ್ನು ನಾನು ವರ್ಮಾ ಜೊತೆ ಕುಳಿತುಕೊಂಡು ನೋಡಿದ್ದೇನೆ. ಈ ಜನ್ಮದಲ್ಲಿ ವರ್ಮಾ ಬದಲಾಗುವುದಿಲ್ಲ. ತನಗೆ ಬದಲಾಗಬೇಕು ಅನಿಸಿದರೆ ಮಾತ್ರ ಬದಲಾಗಬಹುದು. ಚಿಕ್ಕಂದಿನಿಂದಲೂ ವರ್ಮಾ ಬಹಳ ಬುದ್ದಿವಂತ ಆದರೆ ಅಗ ಹೇಗೆ ಎಂದು ಗೊತ್ತಾಗುತ್ತಿರಲಿಲ್ಲ. ಏನೋ ವರ್ಮಾ ಸರಿಯಾಗಿ ಓದುತ್ತಿಲ್ಲ ಅಂದುಕೊಂಡಿದ್ದೆವು. ಆದರೆ ಆತನ ಜ್ಞಾನ ದೊಡ್ಡದು' ಎಂದು ಸೂರ್ಯವತಿ ಹೇಳಿದ್ದಾರೆ. 

ಮತ್ತೊಂದು ಹೊಸ ಮುಖ ಲಾಂಚ್ ಮಾಡುತ್ತಾರೆ RGV

ಮಗನನ್ನು ಇಷ್ಟೊಂದು ಹೊಗಳುತ್ತಿರುವುದನ್ನು ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ನೀವು ಹೇಳಿದ್ದು ಸರಿ ಅಲ್ಲ ವರ್ಮಾಗೆ ಬುದ್ದಿ ಹೇಳಿ ಎಂದು ಒತ್ತಾಯ ಮಾಡಿದ್ದಾರೆ. 'ವರ್ಮಾ ನನಗೆ ಒಬ್ಬ ಯೋಗಿ, ಒಬ್ಬ ವಿಜ್ಞಾನಿ ರೀತಿ ಕಾಣಿಸುತ್ತಾನೆ. ನನ್ನ ಮಗ ಬಹಳ ಒಳ್ಳೆಯವನು. ಆತ ಯಾರಿಗೂ ಕೆಟ್ಟದನ್ನು ಬಯಸುವುದಿಲ್ಲ. ಆತ ತನಗನ್ನಿಸಿದ್ದನ್ನು ಮಾಡುತ್ತಾರೆ ಹಾಗೂ ತನಗನ್ನಿದ್ದನ್ನು ಹೇಳುತ್ತಾನೆ. ಅದರಲ್ಲಿ ನನಗಂತೂ ಯಾವ ತಪ್ಪು ಕಾಣಿಸುವುದಿಲ್ಲ' ಎಂದಿದ್ದಾರೆ. 

ಬ್ಯೂಟಿ ಪಾದ ಹಿಡಿದ ವರ್ಮಾ:

ವರ್ಮಾ ತನ್ನದೇ ಯೂಟ್ಯೂಬ್ ಮಾಹಿನಿ ಮೂಲಕ ಅಡಲ್ಟ್ ಸಿನಿಮಾಗಳನ್ನು ರಿಲೀಸ್ ಮಾಡುವ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.ಇತ್ತೀಚಿಗಷ್ಟೆ ನಟಿ ಇನಾಯಾ ಸುಲ್ತಾನ್‌ ಜೊತೆ ಪಾರ್ಟಿಯಲ್ಲಿ ಕುಣಿದ ವಿಡಿಯೋ ಶೇರ್ ಮಾಡಿ ನೆಟ್ಟಿಗರು ಹುಬ್ಬೇರಿಸಿದ್ದರು. ಇದೀಗ ರಾಮ್ ಗೋಪಾಲ್ ವರ್ಮಾ ಶೇರ್ ಮಾಡಿರುವ ಮಾಡಿರುವ ಫೋಟೋಗಳು ಅಭಿಮಾನಿಗಳಿಗೆ ಶಾಕ್ ನೀಡಿದೆ. ನಟಿಯ ಕಾಲು ಬುಡದಲ್ಲಿ ಕುಳಿತು ಆಕೆಯ ಪಾದ ಹಿಡಿದು ಗುರಾಯಿಸಿ ನೋಡುತ್ತಿರುವ ಫೋಟೋವನ್ನು ಸ್ವತಃ ರಾಮ್ ಗೋಪಾಲ್ ವರ್ಮಾ ಅವರೇ ಶೇರ್ ಮಾಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಂದಹಾಗೆ ರಾಮ್ ಗೋಪಾಲ್ ವರ್ಮಾ ಪಾದ ಹಿಡಿದು ಕುಳಿತಿರುವ ನಟಿ ಮತ್ಯಾರು ಅಲ್ಲ ಬಿಗ್ ಬಾಸ್ ಖ್ಯಾತಿಯ ಅಶು ರೆಡ್ಡಿ.ಅಂದಹಾಗೆ ಫೋಟೋ ಶೇರ್ ಮಾಡಿ ಆರ್ ಜಿ ವಿ, ಅಶು ರೆಡ್ಡಿ ಡಬಲ್ ಡೇಂಜರಸ್ ಎಂದು ಹೇಳಿದ್ದಾರೆ. ನಟಿ ಅಶು ರೆಡ್ಡಿ ಮಂಚದ ಮೇಲೆ ಕುಳಿತಿದ್ದಾರೆ. ರಾಮ್ ಗೋಪಾಲ್ ವರ್ಮಾ ಆಕೆಯ ಪಾದದ ಬಳಿ ಕುಳಿತಿರುವ ಫೋಟೋ ಹಂಚಿಕೊಂಡು, 'ನಾನೇ ತುಂಬಾ ಡೇಂಜರಸ್ ಆದರೆ ಅಶು ರೆಡ್ಡಿ ನನಗಿಂತ ಡಬಲ್ ಡೇಂಜರಸ್' ಎಂದು ಹೇಳಿದ್ದಾರೆ. ಸಂದರ್ಶನ ವೇಳೆ ಆರ್ ಜಿ ವಿ ನಟಿಯ ಕಾಲು ಒತ್ತುತ್ತಿದ್ದಾರೆ. ಪೋಟೋಗಳನ್ನು ಶೇರ್ ಮಾಡಿದ ಬಳಿಕ ರಾಮ್ ಗೋಪಾಲ್ ವರ್ಮಾ ವಿಡಿಯೋವನ್ನು ಶೇರ್ ಮಾಡಿದರು.

Follow Us:
Download App:
  • android
  • ios