ಬಾಕ್ಸ್ ಆಫೀಸ್ ಕಲೆಕ್ಷನ್ ಲಿಸ್ಟ್ ಬಿಡುಗಡೆ: ಶಾರುಖ್ ಅಭಿಮಾನಿಗಳಿಗೆ ಭಾರೀ ನಿರಾಸೆ!
ಬಾಲಿವುಡ್ ಚಿತ್ರಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಲಿಸ್ಟ್ ಬಿಡುಗಡೆಯಾಗಿದ್ದು, ಶಾರುಖ್ ಖಾನ್ ಅಭಿಮಾನಿಗಳಿಗೆ ಸದ್ಯ ನಿರಾಸೆಯಾಗಿದೆ. ಇದಕ್ಕೆ ಕಾರಣವೇನು?
ಜನವರಿ 25ರಂದು ಬಿಡುಗಡೆಯಾಗಿದ್ದ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ನಟನೆಯ ಪಠಾಣ್ (Pathaan) ಚಿತ್ರ ಬಾಲಿವುಡ್ನ ಹಲವು ದಾಖಲೆಗಳನ್ನು ಮುರಿದು ಭರ್ಜರಿ ಯಶಸ್ಸು ಗಳಿಸಿದ್ದರೂ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಇದುವರೆಗೂ ನಂ.1 ಸ್ಥಾನ ಗಳಿಸಲಿಲ್ಲ. ಒಂದರ ಮೇಲೊಂದರಂತೆ ಫ್ಲಾಪ್ ಸಿನಿಮಾ ನೀಡಿದ್ದ ಶಾರುಖ್ ಖಾನ್, ನಾಲ್ಕು ವರ್ಷಗಳ ಬಳಿಕ ಕಮ್ಬ್ಯಾಕ್ ಮಾಡಿ ಪಠಾಣ್ನಲ್ಲಿ ಭರ್ಜರಿ ಯಶಸ್ಸು ಸಾಧಿಸಿದ್ದಾರೆ. ಇತ್ತೀಚಿನ ಚಿತ್ರದಲ್ಲಿ ಹೆಚ್ಚಿನ ಯಶಸ್ಸು ಸಿಗದೇ ಪರದಾಡುತ್ತಿದ್ದ ದೀಪಿಕಾ ಪಡುಕೋಣೆ (Deepika Padukone) ಕೂಡ ಈ ಚಿತ್ರದಿಂದ ಫುಲ್ ಖುಷ್ ಆಗಿದ್ದಾರೆ. ಇವರಿಬ್ಬರ ಕೆಮೆಸ್ಟ್ರಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಚಿತ್ರ ಬಿಡುಗಡೆಯಾಗಿ 11 ದಿನಗಳಲ್ಲಿ ಭಾರತ ಒಂದರಲ್ಲಿಯೇ 401 ಕೋಟಿ ರೂಪಾಯಿ ದಕ್ಕಿಸಿಕೊಂಡಿದೆ. 387 ಕೋಟಿ ರೂಪಾಯಿ ಗಳಿಸಿರುವ ಆಮೀರ್ ಖಾನ್ ಅಭಿನಯದ ದಂಗಲ್ ಚಿತ್ರವನ್ನು ಪಠಾಣ್ ಹಿಂದಿಕ್ಕಿದೆ.
ಇದರ ಹೊರತಾಗಿಯೂ ಶಾರುಖ್ ಅಭಿಮಾನಿಗಳು ಫುಲ್ ಖುಷ್ ಆಗಿಲ್ಲ. ಇದಕ್ಕೆ ಕಾರಣ, ಇಷ್ಟೆಲ್ಲಾ ದಾಖಲೆ ಮಾಡಿರುವ ಪಠಾಣ್ ದಿನದಿಂದ ದಿನಕ್ಕೆ ಟಾಪರ್ ಸ್ಥಾನಕ್ಕೆ ಏರುತ್ತಿದ್ದರೂ ಇದುವರೆಗೂ ನಂ.1 ಪಟ್ಟ ಗಿಟ್ಟಿಸಿಕೊಂಡಿಲ್ಲ. ಬಾಲಿವುಡ್ಗೆ ಹೋಲಿಸಿದರೆ ಸೌತ್ ಸಿನಿಮಾಗಳ ಮೇಲೆಯೇ ಜನರು ಹೆಚ್ಚು ಒಲವು ತೋರಿಸುತ್ತಿದ್ದಾರೆ ಎಂದು ಸಿನಿ ವಿಮರ್ಶಕರು ಹೇಳುತ್ತಿರುವಂತೆಯೇ ದಕ್ಷಿಣ ಸಿನಿಮಾವನ್ನು ಪಠಾಣ್ ಹಿಂದಿಕ್ಕಲು ಸದ್ಯದ ಪರಿಸ್ಥಿತಿಯವರೆಗೂ ಸಾಧ್ಯವಾಗಲಿಲ್ಲ. ಇದಕ್ಕೆ ಉದಾಹರಣೆಯೆಂದರೆ, ರಾಜಮೌಳಿ ನಿರ್ದೇಶನದ ಬಾಹುಬಲಿ 2 ಚಿತ್ರದ ಹಿಂದಿ ಅವತರಣಿಕೆ ಮೊದಲ ದಿನವೇ ಭಾರಿ ಕಲೆಕ್ಷನ್ (Collection) ಮಾಡಿತ್ತು. ಇನ್ನು ರಾಜಮೌಳಿ ನಿರ್ದೇಶಿಸಿದ RRR ಹಿಂದಿ ಕೂಡ ಮೊದಲ ದಿನವೇ 20 ಕೋಟಿ ರೂ ಗಳಿಸಿತ್ತು. ಹಿಂದಿಯಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾ 53.95 ಕೋಟಿ ಕಲೆಕ್ಷನ್ ಮಾಡಿತ್ತು. ಈ ಮೂಲಕ ಕೆಜಿಎಫ್ ಹಿಂದಿಯಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದು ದಕ್ಷಿಣ ಸಿನಿಮಾದ ಹೆಗ್ಗಳಿಕೆ. ಆದರೆ ಪಠಾಣ್ ಚಿತ್ರ ಈ ದಾಖಲೆಯನ್ನು ಮುರಿದಿದ್ದರೂ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ನಂ.1 ಸ್ಥಾನ ಗಳಿಸಲಿಲ್ಲ. ಹಾಗಿದ್ದರೆ ಹಿಂದಿ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ಟಾಪರ್ ಯಾರು ಎಂದು ನಿಮಗೆ ಕುತೂಹಲ ಇರಬೇಕು ಅಲ್ಲವೆ?
ಪಠಾಣ್ನ ಮೊದಲಾರ್ಧ ಮಾತ್ರ ಥಿಯೇಟರ್ನಲ್ಲಿ ನೋಡಿ ಎಂದ ಶಾರುಖ್!
ಬಾಹುಬಲಿ 2, ಕೆಜಿಎಫ್ 2 (Bahubali 2, KGF 2): ಪ್ರಭಾಸ್, ಅನುಷ್ಕಾ ಶೆಟ್ಟಿ ನಟನೆಯ, ರಾಜಮೌಳಿ ನಿರ್ದೇಶನದ 'ಬಾಹುಬಲಿ 2' ಇದುವರೆಗೆ ಟಾಪ್ 1 ಸ್ಥಾನ ಬಿಟ್ಟುಕೊಟ್ಟಿಲ್ಲ. ಎಲ್ಲಾ ಭಾಷೆಗಳಲ್ಲಿ ಒಟ್ಟು 1800 ಕೋಟಿ ಕಲೆಕ್ಷನ್ ಮಾಡಿದೆ. ಬಾಹುಬಲಿ ಹಿಂದಿ ಅವತರಣಿಕೆ ದೇಶದಲ್ಲಿ 550 ಕೋಟಿ ರೂ.ವರೆಗೆ ಕಲೆಕ್ಷನ್ ಮಾಡಿದೆ. ಚಿತ್ರ ಬಿಡುಗಡೆಯಾಗಿ 5 ವರ್ಷಗಳಾದರೂ ಮೊದಲ ಸ್ಥಾನ ಕಾಯ್ದುಕೊಂಡಿದೆ. ಇನ್ನು ಕನ್ನಡದ ನಟ ಯಶ್ ನಟಿಸಿರುವ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಸಂಚಲನ ಮೂಡಿಸಿದ್ದು ಈಗ ಹಳೆಯ ವಿಷಯ. ಇದರ ಹಿಂದಿ ಅವತರಣಿಕೆಯು 435.2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಟಾಪ್ 2 ಸ್ಥಾನದಲ್ಲಿದೆ.
ಪಠಾಣ್, 'ದಂಗಲ್' (Pathaan, Dangal)
ಇನ್ನು ಪಠಾಣ್ ವಿಷಯಕ್ಕೆ ಬರುವುದಾದರೆ ಇದು ಟಾಪ್-3 ಸ್ಥಾನದಲ್ಲಿದೆ. ಈ ಸಿನಿಮಾ ಮೊದಲ ದಿನವೇ ದಾಖಲೆಯ ಕಲೆಕ್ಷನ್ ಮಾಡಿದ್ದರೂ ಸದ್ಯ ಟಾಪ್-3 ಸ್ಥಾನದಲ್ಲಿದೆ. ಮೊದಲ ದಿನವೇ ಪಠಾಣ್ 55 ಕೋಟಿಗೂ ಹೆಚ್ಚು ಗಳಿಕೆ ಮಾಡಿ ದಾಖಲೆ ನಿರ್ಮಿಸಿದೆ. ಸಿನಿಮಾ ಬಿಡುಗಡೆಯಾದ 7 ದಿನಗಳಲ್ಲಿ ರೂ. 300 ಕೋಟಿ ಕ್ಲಬ್ ಸೇರಿದ ಮೊದಲ ಬಾಲಿವುಡ್ ಸಿನಿಮಾ ಎಂಬ ಶ್ರೇಯಸ್ಸನ್ನೂ ಗಳಿಸಿದ್ದರೂ, ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರಕ್ಕೆ ಬಂದರೆ 3ನೇ ಸ್ಥಾನದಲ್ಲಿದೆ. ಆಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರ ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ 2000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು ದೇಶಾದ್ಯಂತ ಇದರ ಪಾಲು 387.39 ಕೋಟಿ ರೂ. ಆದ್ದರಿಂದ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ಇದಕ್ಕೆ 4ನೇ ಸ್ಥಾನ.
ಸಂಜು, ಪಿಕೆ (Sanju, PK): ರಣಬೀರ್ ಕಪೂರ್ ಅಭಿನಯದ ರಾಜ್ಕುಮಾರ್ ಹಿರಾನಿ ನಿರ್ದೇಶನದ 'ಸಂಜು' ಚಿತ್ರವು ನಟ ಸಂಜಯ್ ದತ್ ಅವರ ಜೀವನವನ್ನು ಆಧರಿಸಿ ನಿರ್ಮಿಸಲಾಗಿದೆ. ಈ ಸಿನಿಮಾ ರೂ. 100 ಕೋಟಿ ಕ್ಲಬ್ ಸೇರಿದೆ. ಒಟ್ಟಾರೆಯಾಗಿ, 'ಸಂಜು' ಬಯೋಪಿಕ್ ದೇಶದಲ್ಲಿ ರೂ.370 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ಇದಕ್ಕೆ ಐದನೇ ಸ್ಥಾನ. ಇನ್ನು ಆರನೆ ಸ್ಥಾನದಲ್ಲಿ ಇರುವುದು ಅಮೀರ್ ಖಾನ್ ಅಭಿನಯದ ರಾಜ್ ಕುಮಾರ್ ಹಿರಾನಿ ನಿರ್ದೇಶನದ 'ಪಿಕೆ'. ಇದು ವಿಶ್ವಾದ್ಯಂತ 854 ಕೋಟಿ ಕಲೆಕ್ಷನ್ ಮಾಡಿದೆ. ಈ ಚಿತ್ರ ಬಾಲಿವುಡ್ನಲ್ಲಿ ರೂ. 350 ಕೋಟಿ ಸಂಗ್ರಹಿಸಿದೆ.
ಮಗಳೇ ಎಂದು ಬಾಯ್ತುಂಬ ಕರೆದವಳನ್ನೇ ಮದ್ವೆಯಾದ ಈ ಬಾಲಿವುಡ್ ಸ್ಟಾರ್!
ನಂತರದ ಸ್ಥಾನದಲ್ಲಿರುವುದು ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ 'ಟೈಗರ್ ಜಿಂದಾ ಹೈ'. ಇದು ಭಾರತೀಯ ಬಾಕ್ಸ್ ಆಫೀಸ್ನಲ್ಲಿ 339 ಕೋಟಿ ಕಲೆಕ್ಷನ್ ಮಾಡಿದ್ದರೆ, 'ಪದ್ಮಾವತ್' (Padmavath) ಸಿನಿಮಾ 302 ಕೋಟಿ ರೂ. ಕಲೆಕ್ಷನ್ ಮಾಡಿದೆ. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಸಲ್ಮಾನ್ ಖಾನ್ ಅಭಿನಯದ 'ಸುಲ್ತಾನ್' 300 ಕೋಟಿ ಬಾಚಿಕೊಂಡಿದೆ.