ಮಗಳೇ ಎಂದು ಬಾಯ್ತುಂಬ ಕರೆದವಳನ್ನೇ ಮದ್ವೆಯಾದ ಈ ಬಾಲಿವುಡ್ ಸ್ಟಾರ್!
ತಮಗಿಂತ 10 ವರ್ಷ ಚಿಕ್ಕವಳಾದ ಕರೀನಾ ಕಪೂರ್ ಅವರನ್ನು ಎರಡನೆಯ ಪತ್ನಿ ಮಾಡಿಕೊಂಡ ಸೈಫ್ ಅಲಿ ಖಾನ್ ಹಿಂದೊಮ್ಮೆ ಆಕೆಯನ್ನು ಮಗಳೇ ಎಂದು ಕರೆದಿದ್ದರು. ಏನಿದು ಸ್ಟೋರಿ?
ಅದು 2012ರ ಅಕ್ಟೋಬರ್ 16. ಬಾಲಿವುಡ್ ಜೋಡಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ (Kareena -Saif Ali Khan) ಅವರ ಮದುವೆಯೆಂದಾಗ ಬಹಳಷ್ಟು ಮಂದಿ ಶಾಕ್ ಆಗಿದ್ದರು. ಇವರಿಬ್ಬರ ನಡುವಿನ ಗುಸುಗುಸು ಸುದ್ದಿಯಾಗಿದ್ದರೂ ಕರೀನಾ ಮಾತ್ರ ಸೈಫ್ ಅಲಿ ಖಾನ್ (Saif Ali Khan) ಅವರನ್ನು ಮದುವೆಯಾಗಲು ಸಾಧ್ಯವೇ ಇಲ್ಲ ಎಂದುಕೊಂಡವರೇ ಹೆಚ್ಚು. ಇದಕ್ಕೆ ಒಂದು ಕಾರಣ ಇಬ್ಬರದ್ದೂ ಬೇರೆ ಬೇರೆ ಧರ್ಮ ಎನ್ನುವುದು ಒಂದು ಕಾರಣ. ಆದರೆ ಅದಕ್ಕಿಂತಲೂ ಮಿಗಿಲಾಗಿ, ಸೈಫ್ ಅಲಿ ಖಾನ್ ಕರೀನಾರಿಗಿಂತಲೂ 10 ವರ್ಷ ದೊಡ್ಡವರು ಮಾತ್ರವಲ್ಲದೇ ಇದಾಗಲೇ ಇನ್ನೊಂದು ಮದುವೆಯಾಗಿ ಮಕ್ಕಳನ್ನೂ ಪಡೆದಿದ್ದರು ಎನ್ನುವ ಕಾರಣಕ್ಕೆ. ಆದರೆ ಅಭಿಮಾನಿಗಳು ಇಷ್ಟೆಲ್ಲಾ ತಲೆ ಕೆಡಿಸಿಕೊಂಡಿರುವ ನಡುವೆಯೇ ಈ ಜೋಡಿ ಮನೆಯಿಂದ ಓಡಿಹೋಗಲು ಸಿದ್ಧತೆಗಳನ್ನು ಸಹ ಮಾಡಿಕೊಂಡಾಗಿತ್ತು. ಈ ಬಗ್ಗೆ ಖುದ್ದು ಕರೀನಾ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು.
ಇದೀಗ ಈ ಜೋಡಿಯ ಬಗ್ಗೆ ಇನ್ನೊಂದು ಕುತೂಹಲದ ಮಾಹಿತಿಯೊಂದು ಹೊರಬಂದಿದೆ. ಅದೇನೆಂದರೆ ಸೈಫ್ ಅಲಿ ಖಾನ್ ಹಿಂದೊಮ್ಮೆ ಕರೀನಾ ಅವರನ್ನು ಬೇಟಿ... (ಮಗಳೇ) ಎಂದು ಬಾಯಿ ತುಂಬಾ ಕರೆದಿದ್ದರು. ನಂತರ ಅವರನ್ನೇ ಮದುವೆಯಾದರು ಎನ್ನುವ ಅಂಶ! ಎಲ್ಲರಿಗೂ ತಿಳಿದಿರುವಂತೆ ಸೈಫ್ ಅಲಿ ಖಾನ್ ಅವರ ಮೊದಲ ಪತ್ನಿ ಅಮೃತಾ ಸಿಂಗ್. ಇವರು ಸೈಫ್ ಅವರಿಗಿಂತಲೂ 12 ವರ್ಷ ದೊಡ್ಡವರು. ಇವರ ಭೇಟಿ, ಲವ್ ಆಗಿದ್ದೇ ರೋಚಕ. ಅಮೃತಾ ಸಿಂಗ್ ಅವರು ಅದಾಗಲೇ ಬಾಲಿವುಡ್ನಲ್ಲಿ ಮಿಂಚಿದ್ದರು. ಆದರೆ ಸೈಫ್ ಅಲಿ ಖಾನ್ಗೆ ಬಾಲಿವುಡ್ನಲ್ಲಿ ನೆಲೆ ಕಂಡುಕೊಳ್ಳಬೇಕಿತ್ತು. ಈ ಸಂದರ್ಭದಲ್ಲಿ ಸೈಫ್ ಅಲಿ ಖಾನ್, ಅಮೃತಾ ಸಿಂಗ್ (Amruta Singh) ಅವರನ್ನು ಭೇಟಿಯಾಗಿದ್ದರು. ಇಬ್ಬರ ಫೋಟೋಶೂಟ್ ನಡೆಯಿತು. ಇದೇ ಸಂದರ್ಭದಲ್ಲಿ ಬಾಲಿವುಡ್ ಕನಸು ಕಾಣುತ್ತಿದ್ದ ಸೈಫ್ ಕಣ್ಣು ಅಮೃತಾ ಅವರ ಸೌಂದರ್ಯದ ಮೇಲೆ ಹೋಯಿತು. ತಮ್ಮ ಮನೆಗೆ ಊಟಕ್ಕೆ ಬರುವಂತೆ ಅಮೃತಾ ಅವರನ್ನು ಸೈಫ್ ಅಲಿ ಕರೆದಿದ್ದರಂತೆ. ಆದರೆ ಅದಕ್ಕೆ ಒಪ್ಪದಿದ್ದ ಅಮೃತಾ ಸಿಂಗ್, ಬೇಕಿದ್ದರೆ ತಮ್ಮ ಮನೆಗೇ ಬನ್ನಿ ಅಂದಿದ್ದರಂತೆ. ಯಾರು ಎಲ್ಲಿಗೆ ಬಂದರೇನು? ತಮ್ಮ ಕೆಲಸ ಆದರಾಯಿತು ಎಂದುಕೊಂಡಿದ್ದ ಸೈಫ್ ಅಮೃತಾ ಅವರ ಮನೆಗೆ ಹೋಗಿದ್ದರು. ಆ ಸಮಯದಲ್ಲಿ ಅಮೃತಾ ಸಿಂಗ್ ಮೇಕಪ್ ಹಾಕಿರಲಿಲ್ಲ. ಮೇಕಪ್ಗಿಂತಲೂ ಅವರ ಸಹಜ ಸೌಂದರ್ಯವೇ ಸೈಫ್ ಅಲಿಗೆ ಇಷ್ಟವಾಯಿತಂತೆ.
ಡಿವೋರ್ಸ್ ಆಗಿಲ್ಲ, ಮತ್ತೊಂದು ಮಗದೊಂದು ಮದುವೆಯಾದ ಬಾಲಿವುಡ್ ಸ್ಟಾರ್ಸ್
ಹೀಗೆ ಅಮೃತಾ ಅವರನ್ನು ಸೈಫ್ ಹಾಡಿ ಹೊಗಳುತ್ತಲೇ ಅವರೂ ಕರಗಿ ಹೋದರು. ದಿನ ಕಳೆದಂತೆ ಇವರಿಬ್ಬರ ನಡುವೆ ಸ್ನೇಹ ಬೆಳೆದು, ಅದು ಪ್ರೀತಿಗೆ ತಿರುಗಿತು. ಊಟಕ್ಕೆ ಹೋಗಿದ್ದ ಸೈಫ್ ಎರಡು ದಿನ ಅಮೃತಾ ಅವರ ಮನೆಯಲ್ಲಿಯೇ ಉಳಿದುಕೊಂಡರು. ಪ್ರೀತಿ ಗಾಢವಾಗುತ್ತಿದ್ದಂತೆಯೇ (love) ತಮ್ಮನ್ನು ಬಿಟ್ಟು ಎಲ್ಲಿಗೂ ಹೋಗಬಾರದು ಎಂದು ಅಮೃತಾ, ಸೈಫ್ ಅಲಿ ಅವರಿಗೆ ಕಂಡೀಷನ್ ಹಾಕಿ ಕಾರನ್ನು ಗಿಫ್ಟ್ ನೀಡಿದ್ದರು. ನಂತರ 1991ರಲ್ಲಿ ಇವರ ಮದುವೆಯಾಯಿತು. ಆ ಸಂದರ್ಭದಲ್ಲಿ ಅಮೃತಾ ಅವರಿಗೆ 33 ವರ್ಷ ವಯಸ್ಸಾಗಿದ್ದರೆ, ಸೈಫ್‌ಗೆ 21 ವರ್ಷ.
ಈ ಮದುವೆಗೆ ಕಪೂರ್ ಕುಟುಂಬವೂ ಆಗಮಿಸಿತ್ತು. ಆಗಿನ್ನೂ ಕರೀನಾಗೆ 11 ವರ್ಷ ವಯಸ್ಸು. ಕರೀನಾ (Kareena Kapoor) ಕೂಡ ಮದುವೆಗೆ ಹೋಗಿದ್ದರು. ಕರೀನಾ ಮದುವೆಗೆ ವಿಷ್ ಮಾಡಿದಾಗ, ಸೈಫ್ ಅಲಿ ಖಾನ್ ಆ ಬಾಲಕಿಯನ್ನು ನೋಡಿ, ಥ್ಯಾಂಕ್ಯೂ ಬೇಟಾ (ಧನ್ಯವಾದ ಮಗಳೇ...) ಎಂದು ಹೇಳಿದ್ದರು! ಆದರೆ ಮಗಳೇ ಎಂದು ಹೇಳಿದಾಕೆಯನ್ನೇ ಮುಂದೊಂದು ದಿನ ಪತ್ನಿಯಾಗಿ ಸ್ವೀಕರಿಸುತ್ತೇನೆ ಎಂದು ಅವರು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಹೀಗೆ ಮಗಳು ಎಂದಾಕೆ ಸೈಫ್ ಅವರಿಗೆ ಎರಡನೆಯ ಪತ್ನಿಯಾಗಿ ಬಂದು ದಶಕವೇ ಕಳೆದಿದೆ.
ಅಬ್ಬಬ್ಬಾ...! ಈ ನಟನ ಲವ್ ಬ್ರೇಕಪ್ ಪತ್ರ 13 ಲಕ್ಷ ರೂ.ಗೆ ಮಾರಾಟ...
ಅಂದಹಾಗೆ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ನಡುವಿನ ವಿಚ್ಛೇದನದ ನಿಜವಾದ ವಿಷಯ ಮಾತ್ರ ಇದುವರೆಗೂ ಗುಟ್ಟಾಗಿಯೇ ಉಳಿದಿದೆ. ಸಾರಾ ಅಲಿ ಖಾನ್, ಇಬ್ರಾಹಿಂ ಅಲಿ ಖಾನ್ (Ibrahim Ali Khan) ಎಂಬ ಮಕ್ಕಳಾದ ಮೇಲೆ ಸೈಫ್ ಅಲಿ ಅವರಿಗೆ ಇಟಾಲಿಯನ್ ಡಾನ್ಸರ್ ರೋಸಾ ಕ್ಯಾಟಲೋನಾ ಜೊತೆ ಅನೈತಿಕ ಸಂಬಂಧವಿತ್ತು ಎಂಬ ಕಾರಣಕ್ಕೆ ಅಮೃತಾ ಅವರು ವಿಚ್ಛೇದನ ನೀಡಿದರು ಎಂದು ಹೇಳಲಾಗುತ್ತಿದ್ದರೂ, ಅಮೃತಾ ಅವರ ವಿಚಿತ್ರ ಸ್ವಭಾವದಿಂದ ತಾವು ಡಿವೋರ್ಸ್ ಕೊಟ್ಟಿರುವುದಾಗಿ ಸೈಫ್ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ 2005ರಲ್ಲಿ ಇವರ ಡಿವೋರ್ಸ್ ಆಯಿತು. ಅದಕ್ಕೂ ಮುನ್ನ ಅಂದರೆ 2003ರಲ್ಲಿ ಕರೀನಾ ಕಪೂರ್, ಸೈಫ್ ಅಲಿ ಖಾನ್ ಎಲ್ಒಸಿ ಕಾರ್ಗಿಲ್ (LOC Kargil), 'ಓಂಕಾರ್' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಅಲ್ಲಿ ಅವರ ನಡುವೆ ಪ್ರೀತಿ ಉಂಟಾಗಿತ್ತು. 2008ರಲ್ಲಿ 'ತಶಾನ್' ಸಿನಿಮಾ ಸೆಟ್‌ನಲ್ಲಿ ಇದು ಹೆಚ್ಚಾಯಿತು. ಇದೇ ವೇಳೆ ಸೈಫ್ ತಮ್ಮ ಕೈಮೇಲೆ ಕರೀನಾರ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದರು. ನಂತರ ಇಬ್ಬರೂ ಲಿವ್ ಇನ್ನಲ್ಲಿ ಇದ್ದರು. ಕೊನೆಗೂ ಇಬ್ಬರ ಮದುವೆಯಾಗಿದೆ. ಇವರಿಬ್ಬರು 2012ರಲ್ಲಿ ಮದುವೆಯಾಯಿತು. 2016ರಲ್ಲಿ ಈ ಜೋಡಿಗೆ ತೈಮೂರ್ ಎಂಬ ಮಗ ಜನಿಸಿದರೆ 2020ರಲ್ಲಿ ಜೆಹ್ ಅಲಿ ಖಾನ್ ಜನಿಸಿದರು. ಸದ್ಯ ಸೈಫ್ ಅಲಿಗೆ ನಾಲ್ವರು ಮಕ್ಕಳು. ಅವರು ಮೊದಲ ಪತ್ನಿಯ ಮಕ್ಕಳ ಜೊತೆಗೂ ಸಮಯ ಕಳೆಯುತ್ತಾರೆ.