Asianet Suvarna News Asianet Suvarna News

ಯಾರದ್ದೋ ಮುಖ, ಯಾರದ್ದೋ ಶರೀರ: ರಶ್ಮಿಕಾ ಮಂದಣ್ಣ ಡೀಪ್​ಫೇಕ್​ ಆರೋಪಿ ಕೊನೆಗೂ ಅರೆಸ್ಟ್​

ರಶ್ಮಿಕಾ ಮಂದಣ್ಣ ಮುಖವನ್ನು ಮಾರ್ಫ್​ ಮಾಡಿ ಹರಿಬಿಟ್ಟ ಡೀಪ್​ಫೇಕ್​ ವಿಡಿಯೋದ ಮುಖ್ಯ ಆರೋಪಿ ಕೊನೆಗೂ ಪೊಲೀಸರ ವಶಕ್ಕೆ ಸಿಕ್ಕಿದ್ದಾನೆ. 
 

Rashmika Mandannas deepfake video Delhi Police arrests main accused suc
Author
First Published Jan 20, 2024, 4:57 PM IST

ಕೆಲ ತಿಂಗಳ ಹಿಂದೆ, ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್​ ಫೇಕ್​ ವಿಡಿಯೋ ದೇಶಾದ್ಯಂತ ಭಾರಿ ಹಲ್​ಚಲ್​ ಸೃಷ್ಟಿಸಿತ್ತು. ಯಾರದ್ದೋ ದೇಹಕ್ಕೆ ಇನ್ನಾದರೋ ಮುಖ ಹಾಕಿ ಮೀಮ್ಸ್​ ಮಾಡುವುದು ಮಾಮೂಲು. ಆದರೆ, ಅಶ್ಲೀಲ ಎನ್ನುವ ವಿಡಿಯೋ ಒಂದಕ್ಕೆ ಇನ್ನೊಬ್ಬರ ಮುಖವನ್ನು ಹಾಕಿ ವಿಡಿಯೋ ಮಾಡುವ ಭಯಾನಕ ತಂತ್ರ ಈ ಡೀಪ್​ ಫೇಕ್​. ಇದಾಗಲೇ ಕೆಲವರಿಗೆ ಈ ಕೆಟ್ಟ ಅನುಭವವಾಗಿದ್ದರೂ, ನಟಿ ರಶ್ಮಿಕಾ ಮಂದಣ್ಣ ಅವರ ಪ್ರಕರಣದಿಂದಾಗಿ ಇದು ಭಾರಿ ಸುದ್ದಿಗೆ ಗ್ರಾಸವಾಯಿತು.   ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಬಳಸಿ ಇದನ್ನುಮಾಡಲಾಗಿದೆ.  ಕಪ್ಪು ಬಟ್ಟೆ ಧರಿಸಿದ ಮಹಿಳೆಯೊಬ್ಬರು ಲಿಫ್ಟ್‌ಗೆ ಪ್ರವೇಶಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಮಹಿಳೆಯ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ನಟಿ ರಶ್ಮಿಕಾ ಮಂದನಾ ಅವರ ಮುಖವನ್ನು ಹೋಲುತ್ತದೆ. ವೀಡಿಯೋ ಆನ್‌ಲೈನ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ನಟಿಯೊಬ್ಬಳು ಈ ರೀತಿ ಡ್ರೆಸ್​ ಹಾಕಿದರೆ ಅದೇನು ದೊಡ್ಡ ವಿಷಯವೇ ಅಲ್ಲ. ಈ ರೀತಿ ದೇಹ ಪ್ರದರ್ಶನ ಮಾಡುವುದು ಸರ್ವೇ ಸಾಮಾನ್ಯ ಎನಿಸಿದೆ. ಆದರೆ ಸಾಮಾನ್ಯ ಮಹಿಳೆಯರ ವಿಷಯದಲ್ಲಿಯೂ ಹೀಗೆಯೇ ಆದರೆ ಮಾನ ಮರ್ಯಾದೆಗೆ ಅಂಜುವವರು ಯಾವ ಹಂತಕ್ಕಾದರೂ ಹೋಗಬಹುದು ಎಂಬ ಬಗ್ಗೆ ಈ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರೂ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.  

ಬ್ರಿಟಿಷ್ ಇಂಡಿಯನ್ ಮತ್ತು ಇನ್‌ಸ್ಟಾಗ್ರಾಮ್ ಪ್ರಭಾವಿ ಜಾರಾ ಪಟೇಲ್ ಎಂಬಾತ ಮೂಲ ವೀಡಿಯೊವನ್ನು ರಶ್ಮಿಕಾ ಅವರ ಮುಖದೊಂದಿಗೆ ಮಾರ್ಫ್ ಮಾಡಲಾಗಿತ್ತು. ಇದಾಗಲೇ ಜಾರಾ ಅವರು ಇದರಲ್ಲಿ ತಮ್ಮ ಕೈವಾಡ ಏನೂ ಇಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಜೊತೆಗೆ ಈ ರೀತಿಯಾದುದಕ್ಕೆ ಅವರು ವಿಷಾದ ಕೂಡ ವ್ಯಕ್ತಪಡಿಸಿದ್ದರು.  ಈ ವಿಡಿಯೋದ ಮಾರ್ಫಿಂಗ್‌ನಲ್ಲಿ ತಾವು ಭಾಗಿಯಾಗಿಲ್ಲ ಎಂದು Instagram ಕೂಡ ಹೇಳಿತ್ತು.

ಮುಂದಿನ ತಿಂಗಳು ರಶ್ಮಿಕಾ ಜತೆ ನಿಶ್ಚಿತಾರ್ಥ ನಿಜನಾ? ಕೊನೆಗೂ ಮೌನ ಮುರಿದ ವಿಜಯ್ ದೇವರಕೊಂಡ!

ರಶ್ಮಿಕಾ ಮಂದಣ್ಣ ಬಳಿಕ ಬಾಲಿವುಡ್​ ನಟಿಯರಾದ ಕಾಜೋಲ್​, ಆಲಿಯಾ ಸೇರಿದಂತೆ ಕೆಲವರ ಇದೇ ರೀತಿಯ ವಿಡಿಯೋಗಳು ವೈರಲ್​ ಆದವು.  ಇಂಥ ವಿಡಿಯೋ ಹರಿಬಿಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡರೆ, ಮುಂದೆ ಈ ರೀತಿ ಮಾಡಲು ಜನರು ಹೆದರುತ್ತಾರೆ ಎನ್ನುವ ಕಾರಣಕ್ಕೆ ಪೊಲೀಸರು ಕೂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಇದೀಗ ರಶ್ಮಿಕಾ ಮಂದಣ್ಣ ವಿಡಿಯೋ ಹರಿಬಿಟ್ಟವನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಆದರೆ ಈತನ ಗುರುತನ್ನು ಇದುವರೆಗೆ ಬಹಿರಂಗಗೊಳಿಸಲಿಲ್ಲ. ಈ ಹಿಂದೆ  ಬಿಹಾರದ 19 ವರ್ಷದ ಯುವಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಆತನನ್ನೇ ಅರೆಸ್ಟ್​ ಮಾಡಲಾಗಿದೆಯೋ, ಅಥವಾ ಬೇರೆ ಆರೋಪಿಯೋ ಎನ್ನುವುದು ಇನ್ನೂ ಬಹಿರಂಗಗೊಂಡಿಲ್ಲ.

ಬಿಹಾರದ ಯುವಕನನ್ನು ಈ ಹಿಂದೆ ತೀವ್ರ ವಿಚಾರಣೆಗೆ ಗುರಿಪಡಿಸಲಾಗಿತ್ತು. ರಶ್ಮಿಕಾ ಅವರ ಡೀಪ್ ಫೇಕ್ ವೀಡಿಯೊವನ್ನು ಮೊದಲು ಈತನ  ಖಾತೆಯಿಂದ ನೆಟ್‌ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ತನಿಖೆ ವೇಳೆ ಕಂಡುಬಂದಿತ್ತು. ಅದರ ನಂತರ, ವೀಡಿಯೊವನ್ನು ಅನೇಕ ಜನರು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿತ್ತು. ಈ ವಿಡಿಯೋವನ್ನು ಬೇರೊಂದು ಸಾಮಾಜಿಕ ಜಾಲತಾಣದಿಂದ ಡೌನ್‌ಲೋಡ್ ಮಾಡಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವುದಾಗಿ ಯುವಕ ಒಪ್ಪಿಕೊಂಡಿದ್ದಾನೆ ಎನ್ನಲಾಗಿತ್ತು. ಆದರೆ ಆಗ  ಈ ಪ್ರಕರಣದಲ್ಲಿ  ಯಾರನ್ನೂ ಬಂಧಿಸಿರಲಿಲ್ಲ, ಇದೀಗ ಆ ಯುವಕನನ್ನೇ ಬಂಧಿಸಲಾಗಿದೆಯೋ ಎಂಬ ಮಾಹಿತಿ ಇನ್ನಷ್ಟು ಬಹಿರಂಗಗೊಳ್ಳಬೇಕಿದೆ. ಈಗ ಅರೆಸ್ಟ್​ ಆಗಿರುವ ವ್ಯಕ್ತಿ ಮುಖ್ಯ ಆರೋಪಿಯಾಗಿದ್ದು, ಆಂಧ್ರಪ್ರದೇಶದ ಎಂದೂ ಹೇಳಲಾಗುತ್ತಿದೆ. ಇನ್ನಷ್ಟೇ ವಿಷಯ ಬೆಳಕಿಗೆ ಬರಬೇಕಿದೆ. 

ಪಕ್ಕದಲ್ಲಿ ರಶ್ಮಿಕಾ ಇರುವಾಗ್ಲೇ ಆಲಿಯಾ ಚಪ್ಪಲಿ ತೆಗೆದು ಎಸೆದದ್ದೇಕೆ? 'ಅನಿಮಲ್'​ ರಿವೇಂಜಾ ಕೇಳ್ತಿದ್ದಾರೆ ನೆಟ್ಟಿಗರು!

Follow Us:
Download App:
  • android
  • ios