ಸತತ ಸೂಪರ್ ಹಿಟ್ ಸಿನಿಮಾ ನೀಡಿರುವ ರಶ್ಮಕಾ ಮಂದಣ್ಣ ಅಮೆರಿಕನ್ನರ ಕ್ರಶ್ ಆಗಿದ್ದಾರೆ. ಅಮೆರಿಕದಲ್ಲೂ ರಶ್ಮಿಕಾ ಮಂದಣ್ಣ ಪಾಪ್ಯುಲರ್ ಆಗಿ ಹೊರಹೊಮ್ಮಿದ್ದಾರೆ.ಸೂಪರ್ ಹಿಟ್ ಸಿನಿಮಾ ಕೊಟ್ಟ ರಶ್ಮಿಕಾ ಹಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ತಾರಾ?
ಬೆಂಗಳೂರು(ಏ.30) ಭಾರತೀಯ ಸಿನಿಮಾ ರಂಗದಲ್ಲಿ ರಶ್ಮಿಕಾ ಮಂದಣ್ಣ ಯಶಸ್ವಿ ನಟಿ. ಕನ್ನಡ ಸೇರಿದಂತೆ ದಕ್ಷಿಣ ಭಾರತದಲ್ಲಿ ಸೂಪರ್ ಹಿಟ್ ಸಿನಿಮಾ ನೀಡಿ ಬಳಿಕ ಬಾಲಿವುಡ್‌ನಲ್ಲೂ ಅದೇ ಯಶಸ್ಸು ಮುಂದುವರಿಸಿದ ನಟಿ. ಇದೀಗ ರಶ್ಮಿಕಾ ಮಂದಣ್ಣ ಸತತ ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಇದರ ನಡುವೆ ರಶ್ಮಿಕಾ ಮಂದಣ್ಣ ಹಾಲಿವುಡ್ ಸಿನಿಮಾಗೆ ಹಾರುತ್ತಾರಾ ಅನ್ನೋ ಪ್ರಶ್ನೆಗಳು ಎದ್ದಿದೆ. ಇದಕ್ಕೆ ಕಾರಣ ರಶ್ಮಿಕಾ ಮಂದಣ್ಮ ಅಮೆರಿಕನ್ನರ ಹೃದಯದಲ್ಲೂ ತುಂಬಾ ಪಾಪ್ಯುಲರ್. ಇದೀಗ ರಶ್ಮಿಕಾ ಮಂದಣ್ಣ ಅಮರಿಕದ ಜನಪ್ರಿಯ ಬ್ರ್ಯಾಂಡ್‌ನ ಅಂತಾರಾಷ್ಟ್ರೀಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಹಾಲಿವುಡ್‌ನಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಕ್ರಾಕ್ಸ್ ಅಂತಾರಾಷ್ಟ್ರೀಯ ಬ್ರ್ಯಾಂಡ್ ಅಂಬಾಸಿಡರ್
ರಶ್ಮಿಕಾ ಮಂದಣ್ಣ ಕಿರೀಟಕ್ಕೆ ಮತ್ತೊಂದು ಗರಿ ಸೇರಿಕೊಂಡಿದೆ. ಅಮೆರಿಕದ ಜನಪ್ರಿಯ ಫೂಟ್‌ವೆರ್, ಭಾರತ ಸೇರಿದಂತೆ ಎಲ್ಲೆಡೆ ಜನಪ್ರಿಯವಾಗಿರುವ ಕ್ರಾಕ್ಸ್ ಫೂಟ್‌ವೆರ್‌ನ ಜಾಗತಿಕ ಬ್ರ್ಯಾಂಡ್ ಅಂಬಾಸಿಡರ್ ಇದೀಗ ರಶ್ಮಿಕಾ ಮಂದಣ್ಣ. ರಶ್ಮಿಕಾ ಮಂದಣ್ಣ ಕ್ರಾಕ್ಸ್ ಫೂಟ್‌ವೆರ್ ಬ್ರ್ಯಾಂಡ್ ಪ್ರಮೋಶನ್ ವಿಡಿಯೋಗಳು ಹೊರಬಂದಿದೆ. ಒಂದು ವಿಡಿಯೋವನ್ನು ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಭಿಮಾನಿಗಳಿಗೆ ವಿಡಿಯೋ ಮೂಲಕ ಮಹತ್ವದ ಮೆಸೇಜ್ ಕೊಟ್ಟ ರಶ್ಮಿಕಾ ಮಂದಣ್ಣ
ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಆರಂಭಗೊಂಡ ರಶ್ಮಿಕಾ ಮಂದಣ್ಣ ಪಯಣ ಭಾರದದ ನ್ಯಾಶಲ್ ಕ್ರಶ್ ಆಗಿ, ಬಾಲಿವುಡ್ ನಾಯಕಿಯಾಗಿ, ದೇಶಾದ್ಯಂತ ನೆಚ್ಚಿನ ನಟಿಯಾಗಿ ಹೊರಹೊಮ್ಮಿದ್ದಾರೆ. ಭಾರತದ ಎಲ್ಲೆಡೆ ರಶ್ಮಿಕಾ ಮಂದಣ್ಣಗೆ ಅಭಿಮಾನಿಗಳಿದ್ದಾರೆ. ಇನ್ನು ಸ್ಟೈಲ್, ಪರ್ಸನಾಲಿಟಿ, ಆಕರ್ಷಣೆ ಸೇರಿದಂತೆ ಕ್ರಾಕ್ಸ್ ಬ್ರ್ಯಾಂಡ್‌ಗೆ ಪ್ರಮೋಶನ್‌ಗೆ ರಶ್ಮಿಕಾಗಿಂತ ಉತ್ತಮ ನಟಿ ಮತ್ತೊಬ್ಬರಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಜಾಗತಿಕ ಸ್ಟಾರ್ ಆಗಿರುವ ರಶ್ಮಿಕಾ ಮಂದಣ್ಣ ಇದೀಗ ಅಮೆರಿಕನ್ ಫೂಟ್‌ವೆರ್ ಉತ್ಪನ್ನದ ಅಂತಾರಾಷ್ಟ್ರೀಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಅಮೆರಿಕದಲ್ಲೂ ರಶ್ಮಿಕಾ ಮಂದಣ್ಣ ಜನಪ್ರಿಯತೆ ಹೆಚ್ಚುತ್ತಿದೆ. ಹೀಗಾಗಿ ಅಭಿಮಾನಿಗಳು ರಶ್ಮಿಕಾ ಮಂದಣ್ಣ, ಹಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವಂತಾಗಲಿ ಎಂದು ಆಶಿಸಿದ್ದಾರೆ.ಇದೇ ವೇಳೆ ಹಲವರು ಅಮೆರಿಕನ್ ಬ್ರ್ಯಾಂಡ್‌ನ ಜಾಗತಿಗ ಬ್ರ್ಯಾಂಡ್ ಅಬಾಸಿಡರ್ ಆಗಿರುವ ರಶ್ಮಿಕಾ ಮಂದಣ್ಣ, ಹಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ದಿನ ದೂರವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಲ್ಮಾನ್ ಖಾನ್ ಸಿಕಂದರ್ ಸಿನಿಮಾ
ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಬಾಲಿವುಡ್ ಸಿನಿಮಾ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಈ ಸಿನಿಮಾ ಸಲ್ಮಾನ್ ಖಾನ್‌ಗೆ ಮತ್ತೊಂದು ಯಶ್ಸಸು ತಂದುಕೊಡುತ್ತ ಎಂದು ಭಾವಿಸಲಾಗಿತ್ತು. ಜೊತೆಗೆ ಸತತ ಸೂಪರ್ ಹಿಟ್ ಸಿನಿಮಾ ನೀಡುತ್ತಿದ್ದ ರಶ್ಮಿಕಾ ಮಂದಣ್ಣ ಈ ಬಾರಿಯೂ ಹೊಸ ದಾಖಲೆ ಬರೆಯಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಸಿಕಂದರ್ ಸಿನಿಮಾ ನಿರೀಕ್ಷಿತ ಮಟ್ಟ ತಲುಪಲಿಲ್ಲ.
ಸಿಕಂದರ್ ಸಿನಿಮಾ ಬಳಿಕ ರಶ್ಮಿಕಾ ಮಂದಣ್ಣ ತಮ್ಮ ಹುಟ್ಟು ಹಬ್ಬವನ್ನು ಓಮನ್‌ನಲ್ಲಿ ಆಚರಿಸಿಕೊಂಡಿದ್ದರು. ಈ ವೇಳೆ ರಶ್ಮಿಕಾ ಮಂದಮ್ಣ ತಮ್ಮ ಆತ್ಮೀಯ ಗೆಳೆಯ, ನಟ ವಿಜಯ ದೇವರಕೊಂಡ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು ಅನ್ನೋ ಮಾತುಗಳು ಕೇಳಿಬಂದಿತ್ತು. ಜೊತೆ ಇಬ್ಬರು ತಮ್ಮ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡ ಪೋಸ್ಟ್ ಕೆಲ ಅನುಮಾನಗಳಿಗೆ ಕಾರಣವಾಗಿತ್ತು.
ಹುಟ್ಟ ಹಬ್ಬ ಬಳಿಕ ಸಿನಿಮಾ ಶೂಟಿಂಗ್‌ನಲ್ಲಿ ರಶ್ಮಿಕಾ ಮಂದಣ್ಣ ಬ್ಯೂಸಿ
ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಹುಟ್ಟು ಹಬ್ಬಕ್ಕೆ ಒಂದೆರೆಡು ದಿನ ಬ್ರೇಕ್ ಪಡೆದುಕೊಂಡಿದ್ದ ರಶ್ಮಿಕಾ ಮಂದಣ್ಣ ಬಳಿಕ ನೇರವಾಗಿ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ.
ಆಪ್ತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಬೆನ್ನಲ್ಲೇ ರಶ್ಮಿಕಾ ಮಂದಣ್ಣಗೆ ಬಿಗ್ ಶಾಕ್


