userpic
user icon

ನಟಿ ರಶ್ಮಿಕಾ ಮಂದಣ್ಣಗೆ ಗುಲಾಬಿ ಕೊಟ್ಟಿದ್ದು ಯಾರು? ಶ್ರೀವಲ್ಲಿಯ ಹೂವಿನ ಗುಟ್ಟು!

Mahmad Rafik  | Updated: Apr 22, 2025, 11:51 AM IST

ನಟಿ ರಶ್ಮಿಕಾ ಮಂದಣ್ಣ ಹೊಸ ಫೋಟೋಗಳು ವೈರಲ್ ಆಗಿವೆ. ಈ ಫೋಟೋದಲ್ಲಿ ರಶ್ಮಿಕಾ ಗುಲಾಬಿ ಹೂವು ಹಿಡಿದು ನಿಂತಿದ್ದಾರೆ. ಗುಲಾಬಿ ಹೂವನ್ನು ಹುಡುಗಿಯರು ಹಿಡಿದು ನಿಂತಿದ್ದಾರೆ ಎಂದಾದರೆ ಅದನ್ನು ಯಾರೋ ಕೊಟ್ಟಿರುತ್ತಾರೆ ಅನ್ನೋ ಡೌಟ್ ಬರುತ್ತೆ. ಆದ್ರೆ ಇದಕ್ಕೆ ರಶ್ಮಿಕಾ ಉತ್ತರ ಕೊಟ್ಟಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೆ ಗುಲಾಬಿ ಹೂವು ಕೊಟ್ಟಿದ್ದು ಬೇರೆ ಯಾರೋ ಅಲ್ಲ. ಅವರೇ ಗುಲಾಬಿ ಹೂವು ಖರೀದಿಸಿದ್ದಾರೆ. ತಮಗೆ ತಾವೇ ಗಿಫ್ಟ್ ಕೊಟ್ಟುಕೊಂಡಿದ್ದಾರೆ. ಕೊನೆಯ ಬಾರಿಗೆ ನಿಮಗೆ ಹೂ ಸಿಕ್ಕಿದ್ದು ಯಾವಾಗ? ನಿಮ್ಮನ್ನು ಆಗಾಗ್ಗೆ ಪ್ರಶಂಸಿಸಲು ಮತ್ತು ಧನ್ಯವಾದ ಹೇಳಲು ಹೂವನ್ನು ಕೊಟ್ಟುಕೊಳ್ಳಬೇಕು. ಏಕೆಂದರೆ ನೀವು ಜಗತ್ತಿನ ಎಲ್ಲಾ ಪ್ರೀತಿ ಮತ್ತು ದಯೆಗೆ ಅರ್ಹರು ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

Must See