ಸತತ ಹಿಟ್ ನೀಡಿದ ರಶ್ಮಿಕಾ ಮಂದಣ್ಣಾಗೆ ಸಿಕಂದರ್ ನಿರೀಕ್ಷಿತ ಯಶಸ್ಸು ನೀಡಲಿಲ್ಲ. ಇದರ ಪರಿಣಾಮ ಇದೀಗ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿರುವ ಪ್ರಭಾಸ್ ನಾಯಕನಾಗಿರುವ ಸ್ಪಿರಿಟಿ ಸಿನಿಮಾದಿಂದ ರಶ್ಮಿಕಾ ಮಂದಣ್ಣ ಹೊರಬಿದ್ದಿದ್ದಾರೆ ಅನ್ನೋ ವರದಿ ಬಹಿರಂಗವಾಗಿದೆ.

ಹೈದರಾಬಾದ್(ಏ.09) ರಶ್ಮಿಕಾ ಮಂದಣ್ಣ ಸತತ ಸೂಪರ್ ಹಿಟ್ ಸಿನಿಮಾ ನೀಡಿ ಭಾರತದ ಸಕ್ಸಸ್‌ಪುಲ್ ನಟಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಆ್ಯನಿಮಲ್, ಪುಷ್ಪಾ2, ಛಾವ ಸಿನಿಮಾ ರಶ್ಮಿಕಾ ಕರಿಯರ್‌ಗೆಬಹುದೊಡ್ಡ ತಿರುವು ನೀಡಿದ ಸಿನಿಮಾಗಳು. ಆದರೆ ಇದರ ಬೆನ್ನಲ್ಲೇ ಬಿಡುಗಡೆಯಾದ ಸಲ್ಮಾನ್ ಖಾನ್ ಜೊತೆಗಿನ ಸಿಕಂದರ್ ಸಿನಿಮಾ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಸಿಕಂದರ್ ಸಿನಿಮಾ ಹಿನ್ನಡೆಯಿಂದ ರಶ್ಮಿಕಾ ಸಿನಿ ಕರಿಯರ್‌ಗೂ ಹಿನ್ನಡೆಯಾಗಿದೆ. ಪ್ರಭಾಸ್ ಮುಂದಿನ ಸಿನಿಮಾದಿಂದ ರಶ್ಮಿಕಾ ಮಂದಣ್ಣ ಹೊರಬಿದ್ದಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.

ಪ್ರಭಾಸ್‌ಗೆ ನಾಯಕಿ
ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಸ್ಪಿರಿಟಿ ಸಿನಿಮಾ ನಿರ್ಮಾಣವಾಗುತ್ತಿದೆ. ಪ್ರಭಾಸ್ ನಾಯಕನಾಗಿ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ನಾಯಕಿಯ ಆಯ್ಕೆ ನಡೆಯುತ್ತಿದೆ. ಸಿಕಂದರ್ ಬಿಡುಗಡೆಗೂ ಮುನ್ನ ಈ ಸಿನಿಮಾಗ ರಶ್ಮಿಕಾ ನಾಯಕಿ ಅನ್ನೋ ಮಾತುಗಳು ಕೇಳಿಬಂದಿತ್ತು. ರಶ್ಮಿಕಾ ಮಂದಣ್ಣ ಜೊತೆ ಒಂದು ಸುತ್ತಿನ ಮಾತುಕತೆಯೂ ನಡೆದಿತ್ತು ಎನ್ನಲಾಗುತ್ತಿದೆ. ಚಿತ್ರ ತಂಡ ಈ ಕುರಿತು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ. ಆದರೆ ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಸೋಲಿನಿಂದ ಈ ಸಿನಿಮಾದಿಂದ ರಶ್ಮಿಕಾ ಬದಲು ಬೇರೆ ನಾಯಕಿಯನ್ನು ಆಯ್ಕೆ ಮಾಡಿಕೊಳ್ಳಲು ಚಿತ್ರ ತಂಡ ಮುಂದಾಗಿದೆ.

ದೇವರಕೊಂಡ ಜೊತೆ ಬರ್ತ್‌ಡೇ ಆಚರಿಸಿದ್ರಾ ರಶ್ಮಿಕಾ ಮಂದಣ್ಣ? ಇಬ್ಬರ ಬೀಚ್ ಫೋಟೋ ವೈರಲ್

4 ಕೋಟಿ ರೂ ಸಂಭಾವನೆ
ಸ್ಪಿರಿಟಿ ಸಿನಿಮಾದಲ್ಲಿ ನಟಿಸಲು ರಶ್ಮಿಕಾ ಮಂದಣ್ಣಗೆ 4 ಕೋಟಿ ರೂಪಾಾಯಿ ಸಂಭಾವನೆ ನೀಡಲು ಮುಂದಾಗಿತ್ತು. ಆದರೆ ಸಿಕಂದರ್ ಸೋಲಿನಿಂದ ಇದೀಗ ಚಿತ್ರ ತಂಡ ಕಡಿಮೆ ಬಜೆಟ್‌‌ನಲ್ಲಿ ಬೇರೆ ನಾಯಕಿ ಆಯ್ಕೆಮಾಡಲು ಸಿನಿಮಾ ತಂಡ ಮುಂದಾಗಿದೆ ಅನ್ನೋ ವರದಿ ಹೊರಬಿದ್ದಿದೆ.

ಸ್ಪಿರಿಟಿ ಸಿನಿಮಾದಿಂದ ರಶ್ಮಿಕಾ ಮಂದಣ್ಣ ಹೊರಬಿದ್ದಿದ್ದಾರೋ ಇಲ್ಲವೋ ಅನ್ನೋ ಕುರಿತು ಅಧಿಕೃತ ಹೇಳಿಕೆ ಬಿಡುಡೆಯಾಗಿಲ್ಲ. ಅಥವಾ ನಿರ್ದೇಶಕರಾಗಲಿ, ನಟ ನಟಿಯರಾಗಲಿ ಈ ಕುರಿತು ಯಾವುದೇ ಮಾತುಗಳನ್ನು ಹೇಳಿಲ್ಲ. ಇನ್ನು ರಶ್ಮಿಕಾ ಮಂದಣ್ಣ ಜೂನ್ ವರೆಗೆ ಹಲವು ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೂನ್ ಬಳಿಕ ರಶ್ಮಿಕಾ ಮಂದಣ್ಣ ಬೇರೆ ಸಿನಿಮಾಗಳ ಡೇಟ್ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹುಟ್ಟಹಬ್ಬ ಆಚರಣೆ
ರಶ್ಮಿಕಾ ಮಂದಣ್ಣ ಇತ್ತೀಚೆಗೆ 29ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಓಮನ್‌ನಲ್ಲಿ ರಶ್ಮಿಕಾ ಮಂದಣ್ಣ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಸುಂದರ ಬೀಚ್ ರೆಸಾರ್ಟ್‌ನಲ್ಲಿ ರಶ್ಮಿಕಾ ಮಂದಣ್ಣ ಅದ್ಧೂರಿಯಾಗಿ ಬರ್ತ್‌ಡೇ ಸೆಲೆಬ್ರೆಟ್ ಮಾಡಿದ್ದಾರೆ. ವಿಶೇಷ ಅಂದರೆ ರಶ್ಮಿಕಾ ಮಂದಣ್ಣ ತಮ್ಮ ಆತ್ಮೀಯ ಗೆಳೆಯ ವಿಜಯ್ ದೇವರಕೊಂಡ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇಬ್ಬರ ಬೀಚ್ ಫೋಟೋಗಳು ವೈರಲ್ ಆಗಿತ್ತು. 

ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ರಶ್ಮಿಕಾ ಮಂದಣ್ಣ, ಮಹಿಳಾ ಪ್ರಧಾನ ಸಿನಿಮಾ ಟೀಸರ್ ಔಟ್