ರಶ್ಮಿಕಾ ಮಂದಣ್ಣ ಮತ್ತು ಶಾರುಖ್ ಖಾನ್ ಇಬ್ಬರೂ ಒಟ್ಟಿಗೇ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇದು ರಶ್ಮಿಕಾ ಫ್ಯಾನ್ಸ್​ಗೆ ಖುಷಿ ತಂದಿದೆ. ಅಷ್ಟಕ್ಕೂ ಏನಿದು ವಿಷಯ?  

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರಿಗೆ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್​ನಲ್ಲೂ ಬೇಡಿಕೆ ಹೆಚ್ಚಾಗಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾ ರಂಗವನ್ನು ರೂಲ್ ಮಾಡುತ್ತಿದ್ದಾರೆ. ಹೀಗಾಗಿ ಮೂರು ಮೂರು ರಾಜ್ಯಗಳಲ್ಲಿ ಮನೆ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಕ್ಟಿವ್ ಆಗಿರುವ ರಶ್ಮಿಕಾ ಮಂದಣ್ಣ ದಿನಕ್ಕೊಂದು ನೆಗೆಟಿವ್ ಟ್ರೋಲ್ ಎದುರಿಸುತ್ತಾರೆ. ಆದರೂ ಇದ್ಯಾವುದಕ್ಕೂ ಈಕೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ನ್ಯಾಷನಲ್ ಕ್ರಷ್​ ಎಂದೆನಿಸಿಕೊಂಡರೂ, ಕಾಂಟ್ರವರ್ಸಿ ಲೇಡಿ ಎಂದೇ ಕರೆಸಿಕೊಳ್ಳುತ್ತಿರುವವರು ನಟಿ ರಶ್ಮಿಕಾ ಮಂದಣ್ಣ (Rashmika Mandanna). ಬಾಲಿವುಡ್ ಅಂಗಳದ ನೀರು ಕುಡಿದ ಮೇಲೆ ಇದೀಗ ರಶ್ಮಿಕಾ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಅಭಿಮಾನಿಗಳ (Fans)ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಒಳ್ಳೊಳ್ಳೆ ಆಫರ್​ಗಳು ಸಿಗುತ್ತಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಯಾಂಡಲ್‌ವುಡ್‌, ಟಾಲಿವುಡ್‌, ಕಾಲಿವುಡ್‌, ಬಾಲಿವುಡ್‌... ಹೀಗೆ ವಿಭಿನ್ನ ಭಾಷಾ ಚಿತ್ರಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ ನಟಿ. ಸ್ಯಾಂಡಲ್‍ವುಡ್ ಸಾನ್ವಿ, ಟಾಲಿವುಡ್ ಶ್ರೀವಲ್ಲಿ (Tollywood Shreevalli) ಎಂದೆಲ್ಲಾ ಕರೆಸಿಕೊಳ್ತಿರೋ ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‍ನಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಅವರು ಅಲ್ಲಿನ ಸ್ಟಾರ್​ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ ಬೈ’ ಚಿತ್ರದಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ‘ಮಿಷನ್​ ಮಜ್ನು’ ಚಿತ್ರದಲ್ಲಿ ಸಿದ್ದಾರ್ಥ್​ ಮಲ್ಹೋತ್ರಾಗೆ ಜೋಡಿಯಾಗಿದ್ದ ರಶ್ಮಿಕಾ ಅವರು, ‘ಅನಿಮಲ್​’ ಸಿನಿಮಾದಲ್ಲಿ ರಣಬೀರ್​ ಕಪೂರ್​ ಜೊತೆ ನಟಿಸಿದ್ದಾರೆ. ಆ ಸಿನಿಮಾ ಡಿಸೆಂಬರ್​ 1ರಂದು ಬಿಡುಗಡೆ ಆಗಲಿದೆ. ಇಂತಿಪ್ಪ ರಶ್ಮಿಕಾ ಅವರಿಗೆ ಈಗ ಬಾಲಿವುಡ್​ ಬಾದ್​ಶಾ ಶಾರುಖ್​ ಖಾನ್​ ಕೊತೆ ತೆರೆ ಹಂಚಿಕೊಳ್ಳುವ ಅವಕಾಶ ಒದಗಿಬಂದಿದೆ. ವಯಸ್ಸು 57 ಆದರೂ ನಿನ್ನೆ ಮೊನ್ನೆ ಬಂದ ಹೀರೋಯಿನ್​ ಜೊತೆಯೂ ರೊಮ್ಯಾನ್ಸ್​ ಮಾಡುತ್ತಾ ಯುವ ನಟರನ್ನೂ ನಾಚಿಸುತ್ತಿರೋ ಶಾರುಖ್​ಗೆ ಪಠಾಣ್​ ಯಶಸ್ಸಿನ ಬಳಿಕ ಭರ್ಜರಿ ಆಫರ್​ ಸಿಗುತ್ತಿದೆ. ಜವಾನ್​ (Jawan) ಚಿತ್ರದ ಮೇಲೂ ನಿರೀಕ್ಷೆ ಹೆಚ್ಚಿದೆ. ಈ ನಡುವೆಯೇ ಶಾರುಖ್​ ಖಾನ್​ ಜೊತೆ ಸಿನಿಮಾ ಮಾಡಬೇಕು ಎಂದು ನಿರ್ಮಾಪಕರು ಕಾಯುತ್ತಿದ್ದರಂತೆಯೇ ಇವರ ಜೊತೆ ನಟಿಸಲು ವಯಸ್ಸಿನ ಅಂತರವಿಲ್ಲದೇ ಹಲವು ನಟಿಯರು ಆಸೆ ಪಡುವುದು ಸಹಜ. ಆದರೆ ಈಗ ರಶ್ಮಿಕಾ ಅವರ ಈ ಆಸೆ ಇದೀಗ ನೆರವೇರಿದೆ.

ಗುಟ್ಟಾಗಿ ಮದ್ವೆಯಾದ್ರಂತೆ ನಟಿ ರಶ್ಮಿಕಾ ಮಂದಣ್ಣ! ಹುಡುಗನ ಬಗ್ಗೆ ರಿವೀಲ್​ ಮಾಡಿದ ನಟಿ

ಅಷ್ಟಕ್ಕೂ ಶಾರುಖ್​ ಖಾನ್​ (Shah Rukh Khan) ಜೊತೆ ಯಾವುದೇ ಚಿತ್ರದಲ್ಲಿ ರಶ್ಮಿಕಾ ತೆರೆ ಹಂಚಿಕೊಳ್ಳುತ್ತಿಲ್ಲ. ಬದಲಿಗೆ ಜಾಹೀರಾತೊಂದರಲ್ಲಿ ಶಾರುಖ್​ ಖಾನ್​ ಜೊತೆ ನಟಿಸುವ ಅವಕಾಶ ರಶ್ಮಿಕಾ ಅವರಿಗೆ ಸಿಕ್ಕಿದೆ ಎನ್ನಲಾಗುತ್ತಿದೆ. ಖ್ಯಾತ ಹಿಂದಿ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ನಿರ್ಮಿಸುತ್ತಿರುವ ಜಾಹೀರಾತಿನಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ರಶ್ಮಿಕಾ ಮಂದಣ್ಣಗೆ ಇದೀಗ ಬಂಪರ್ ಆಫರ್​ ಸಿಕ್ಕಿದೆ. 

ಇನ್ನು ರಶ್ಮಿಕಾ ಅವರ ಚಿತ್ರದ ಕುರಿತು ಹೇಳುವುದಾದರೆ, ಇವರ ಬಳಿ ಕೆಲ ಸಿನಿಮಾಗಳಿವೆ. ಪುಷ್ಪ 2 ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ರೇನ್​ಬೋ ಸಿನಿಮಾ ಶೂಟಿಂಗ್​​ನಲ್ಲೂ ಬಿಜಿ ಆಗಿದ್ದಾರೆ. ಆದರೆ ಕೊಡಗಿನ ಬೆಡಗಿಯಾಗಿರೋ ರಶ್ಮಿಕಾ ಕೈಲಿ ಸದ್ಯ ಯಾವುದೇ ಕನ್ನಡ ಚಿತ್ರ ಇಲ್ಲ. ಆಕೆ ಇದನ್ನು ಬೇಗನೆ ಒಪ್ಪಿಕೊಳ್ಳಲಿ ಎನ್ನುತ್ತಿದ್ದಾರೆ ಸ್ಯಾಂಡಲ್​ವುಡ್​​ ಪ್ರಿಯರು.

ಚಿಕಿತ್ಸೆಗೆ ನಟನಿಂದ 25 ಕೋಟಿ ಸಾಲ ಪಡೆದ್ರಾ ನಟಿ ಸಮಂತಾ? ಏನಿದು ವಿಷ್ಯ?