ಚಿಕಿತ್ಸೆಗೆ ನಟನಿಂದ 25 ಕೋಟಿ ಸಾಲ ಪಡೆದ್ರಾ ನಟಿ ಸಮಂತಾ? ಏನಿದು ವಿಷ್ಯ?

ಟಾಲಿವುಡ್ ಸ್ಟಾರ್ ನಟಿ ಸಮಂತಾ ರುತ್​ ಪ್ರಭು ತಮ್ಮ ಮೈಯೋಸಿಟಿಸ್ ಕಾಯಿಲೆ ಚಿಕಿತ್ಸೆಗಾಗಿ ನಟನೊಬ್ಬನಿಂದ 25 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದಾರಾ?
 

Samantha  Received Help Of  25 Crores From A Telugu Star suc

ಟಾಲಿವುಡ್ ಸ್ಟಾರ್ ನಟಿ ಸಮಂತಾ ರುತ್​ ಪ್ರಭು, ಕಳೆದ ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇದರ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಮೈಯೋಸಿಟಿಸ್ (Myositis) ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುವ ನಡುವೆಯೇ ಚೇತರಿಸಿಕೊಳ್ಳುತ್ತಲೇ  ಸಿನಿಮಾ ಕೆಲಸಗಳಲ್ಲೂ ಬ್ಯುಸಿಯಾಗಿದ್ದರು.  ವರ್ಕೌಟ್ ಪ್ರಾರಂಭಿಸುವ ಮೂಲಕ  ಕೈಯಲ್ಲಿ ಡ್ರಿಪ್ ಇದ್ದರೂ ಜಿಮ್​ನಲ್ಲಿ  ಬೆವರು ಇಳಿತ್ತಿದ್ದ ವಿಡಿಯೋಗಳು ವೈರಲ್​ ಆಗಿದ್ದವು.  ಚಿಕಿತ್ಸೆಯ ಸಮಯದಲ್ಲಿ ಸಮಂತಾ ಕ್ಯಾಮೆರಾ ಮುಂದೆ ಬರದೆ, ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಅನೇಕ ತಿಂಗಳೇ ಆಗಿತ್ತು. ಶಾಕುಂತಲಂ ಸಿನಿಮಾ ಪ್ರಮೋಷನ್ ಸಮಯದಲ್ಲಿ ಸಮಂತಾ ಕ್ಯಾಮೆರಾ ಮುಂದೆ ಬಂದು ಕಣ್ಣೀರು ಹಾಕಿದ್ದರು. ಆದರೆ ಇದರ ನಡುವೆಯೇ ವಿಜಯ್ ದೇವರಕೊಂಡ ಜೊತೆ ಖುಷಿ (Khushi) ಚಿತ್ರದಲ್ಲಿ ಮತ್ತು ವರುಣ್ ಧವನ್ ಜೊತೆ ಸಿಟಾಡೆಲ್ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಈಗ ಇವುಗಳ ಶೂಟಿಂಗ್ ಮುಗಿದ ಬಳಿಕ ನಟಿ ಬ್ರೇಕ್ ತೆಗೆದುಕೊಂಡು ಆರೋಗ್ಯದ ಬಗ್ಗೆ ಕಾಳಜಿ ತೋರುತ್ತಿದ್ದಾರೆ. ಮೊನ್ನೆಯಷ್ಟೇ ಬಾಲಿಯಲ್ಲಿ ಎಂಜಾಯ್ ಮಾಡುತ್ತಿದ್ದ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದರು.

ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಈ ಬಗ್ಗೆ  ಕೆಲ ತಿಂಗಳ ಹಿಂದೆ ಮಾಹಿತಿ ನೀಡಿದ್ದರು. IVIg ಥೆರಪಿ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದರು.  IVIG  ಥೆರಪಿಯು ದುರ್ಬಲಗೊಂಡಿರುವ ವ್ಯಕ್ತಿ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುವ ಒಂದು ಚಿಕಿತ್ಸೆಯಾಗಿದ್ದು ಅದನ್ನು ತಾವು ಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಈ ಚಿಕಿತ್ಸೆಯ ಪ್ರಕ್ರಿಯೆ ಸುಮಾರು 2 ರಿಂದ 4 ಗಂಟೆಗಳವರೆಗೆ ತೆಗೆದುಕೊಳ್ಳಬಹುದು ಮತ್ತು ಚಿಕಿತ್ಸೆ ಸಮಯದಲ್ಲಿ, ತಯಾರಾದ ಇಮ್ಯುನೊಗ್ಲಾಬ್ಯುಲಿನ್ ಅನ್ನು ರಕ್ತನಾಳಗಳಲ್ಲಿ ತುಂಬಿಸಲಾಗುತ್ತದೆ ಎಂಬ ಮಾಹಿತಿ ನೀಡಲಾಗಿತ್ತು. ಈ ಚಿಕಿತ್ಸೆ ಪಡೆದುಕೊಳ್ಳುವ ಫೋಟೋಗಳನ್ನು ಕೂಡ ಸಮಂತಾ  ಶೇರ್ ಮಾಡಿದ್ದರು. 

ಸಮಂತಾ ಜತೆ ಸೆಲ್ಫಿ ಕ್ಲಿಕ್ಕಿಸಿ ಸನ್​ಗ್ಲಾಸ್​ನೊಂದಿಗೆ ಕೋತಿ ಎಸ್ಕೇಪ್! ಮೈನಸ್​ 4 ಡಿಗ್ರಿಯಲ್ಲಿ ನಟಿಯ ಐಸ್​ಬಾತ್​!

ಸದ್ಯ ನಟನೆಯಿಂದ ಅಲ್ಪಕಾಲಿಕ ಬ್ರೇಕ್ (break) ತೆಗೆದುಕೊಂಡಿರುವ ನಟಿಯ ಬಗ್ಗೆ ಬಿಗ್​ ಅಪ್​ಡೇಟ್ಸ್​ ಒಂದು ಬರುತ್ತಿದೆ. ಅದೇನೆಂದರೆ, ಸಮಂತಾ ಅವರು ತಮ್ಮ ವೈದ್ಯಕೀಯ ಚಿಕಿತ್ಸೆಗಾಗಿ ಖ್ಯಾತ ನಾಯಕ ಒಬ್ಬರಿಂದ 25 ಕೋಟಿ ರೂಪಾಯಿ ಸಾಲ ಪಡೆದಿದ್ದರು ಎನ್ನುವುದು! ಸದ್ಯ ಈ ಸುದ್ದಿ ಸಕತ್​  ವೈರಲ್ ಆಗುತ್ತಿದೆ. ಇದು ಹಲವು ರೀತಿಯ ಚರ್ಚೆಗಳಿಗೆ ಅನುವು ಮಾಡಿಕೊಟ್ಟಿದೆ. ಇದು ಅಷ್ಟೊಂದು ದುಬಾರಿ ಚಿಕಿತ್ಸೆಯಾಗಿತ್ತಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ತಮಗೆ ಸಮಸ್ಯೆ ಇರುವುದು ತಿಳಿಯುತ್ತಲೇ ಸಮಂತಾ ಅವರು ಕೆಲವು ಚಿತ್ರಗಳಿಂದ ಹಿಂದಕ್ಕೆ ಸರಿದಿದ್ದರು, ಮಾತ್ರವಲ್ಲದೇ ಕೆಲವು ಚಿತ್ರಕ್ಕೆ ಅದಾಗಲೇ ಸಹಿ ಹಾಕಲಾಗಿತ್ತು. ಆದರೆ ಶೂಟಿಂಗ್​ ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ  ನಿರ್ಮಾಪಕರಿಂದ ತಾವು ಪಡೆದಿದ್ದ ಮುಂಗಡ ಹಣವನ್ನು ವಾಪಸ್ ಕೂಡ ಮಾಡಿದ್ದರು. ನಂತರ ಆಯುರ್ವೇದ ಚಿಕಿತ್ಸೆ ಮೊರೆ ಹೋಗಿದ್ದರು. ಇದರ ನಡುವೆ ಈಕೆ ಇಷ್ಟೊಂದು ಹಣವನ್ನು ಸಾಲ ಪಡೆದಿರುವ ಬಗ್ಗೆ ಬಿ-ಟೌನ್​ನಲ್ಲಿ ಸುದ್ದಿಯಾಗುತ್ತಿದೆ. 

 
 ಆ ನಟ ತೆಗಲು ಸ್ಟಾರ್​ ಎನ್ನಲಾಗಿದ್ದು, ಯಾರು ಎನ್ನುವ ಬಗ್ಗೆ ಸದ್ಯ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸದ್ಯ ಬಾಲಿಯಲ್ಲಿ ನಟಿ ಎಂಜಾಯ್​ ಮಾಡುತ್ತಿದ್ದಾರೆ. ಬಾಲಿಯಲ್ಲಿ ನಟಿ ಕೊರೆಯುವ ಚಳಿಯಲ್ಲಿ ಮೈನಸ್​ 4 ಡಿಗ್ರಿಯಲ್ಲಿ ಆರು ನಿಮಿಷಗಳ (Six Minutes ) ಕಾಲ ಕುಳಿತಿದ್ದು, ಅದರ ವಿಡಿಯೋ ಕೂಡ ಶೇರ್​ ಮಾಡಿಕೊಂಡಿದ್ದರು.  ಇದು  ಐಸ್ ಸ್ನಾನವಾಗಿದೆ.  ಸ್ನಾಯು ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಇದು ಸಹಕಾರಿಯಾಗುತ್ತದೆ ಎಂದಿದ್ದರು.  ಅಲ್ಲಿಂದ ಮರಳಿದ ಬಳಿಕ ನಟಿ ಸಮಂತಾ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆ ಎನ್ನಲಾಗಿದೆ. 

ಖ್ಯಾತ ನಟನಿಗೆ ಇದೆಂಥ ಸಾವು? ಭಿಕ್ಷೆ ಬೇಡುತ್ತ ಬೀದಿಯಲ್ಲಿಯೇ ಹೆಣವಾದ ಮೋಹನ್!

Latest Videos
Follow Us:
Download App:
  • android
  • ios