'ವಾರಿಸು' ಚಿತ್ರದಲ್ಲಿ ನನ್ನ ಪಾತ್ರಕ್ಕೆ ಮಹತ್ವವಿಲ್ಲ; ದಳಪತಿ ಸಿನಿಮಾಗೆ ಸಹಿ ಮಾಡಿದ ಕಾರಣ ಬಿಚ್ಚಿಟ್ಟ ರಶ್ಮಿಕಾ

ದಳಪತಿ ವಿಜಯ್ ಅವರ 'ವಾರಿಸು'ಚಿತ್ರದಲ್ಲಿ ನನ್ನ ಪಾತ್ರಕ್ಕೆ ಮಹತ್ವವಿಲ್ಲ ಎಂದು ನಟಿ ರಶ್ಮಿಕಾ ಮಂದಣ್ಣ ಬಹಿರಂಗ ಪಡಿಸಿದ್ದಾರೆ. 

Rashmika Mandanna Says she had nothing to do in Varisu and she  reveals why signed on to Vijay film sgk

ನಟಿ ರಶ್ಮಿಕಾ ಮಂದಣ್ಣ ಸದ್ಯ ಮಿಷನ್ ಮಜ್ನು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಇದು ರಶ್ಮಿಕಾ ಅವರ 2ನೇ ಹಿಂದಿ ಸಿನಿಮಾವಾಗಿದೆ. ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಕಣ್ಣು ಕಾಣದ ಪಾಕಿಸ್ತಾನದ ಯುವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ವಾರಿಸು ಸಿನಿಮಾದಲ್ಲಿ ರಶ್ಮಿಕಾ ಪಾತ್ರಕ್ಕೆ ಮಹತ್ವವಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಈ ಬಗ್ಗೆ ರಶ್ಮಿಕಾ ಬಹಿರಂಗ ಪಡಿಸಿದ್ದಾರೆ. ಆಂಗ್ಲ ಮಾಧ್ಯಕ್ಕೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ವಾರಿಸು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

ತಮಿಳು ಸ್ಟಾರ್ ನಟ ದಳಪತಿ ವಿಜಯ್ ನಟನೆಯ ವಾರಿಸು ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಜಯ್ ಅಭಿಮಾನಿಗಳಿಗಂತೂ ದೊಡ್ಡ ಹಬ್ಬ. ಆದರೆ ಈ ಸಿನಿಮಾದಲ್ಲಿ ರಶ್ಮಿಕಾ  ಪಾತ್ರಕ್ಕೆ ಹೆಚ್ಚು ಮಹತ್ವವವಿಲ್ಲ, ಎರಡು ಹಾಡುಗಳು ಬಿಟ್ಟರೆ ಮತ್ತೋನು ಇಲ್ಲ ಎನ್ನುವ ಮಾತು ಕೇಳಿಬಂದಿತ್ತು. ಈ ಬಗ್ಗೆ ರಶ್ಮಿಕಾ ಮೌನ ಮುರಿದಿದ್ದಾರೆ. ವಾರಿಸು ಚಿತ್ರದಲ್ಲಿ ತನ್ನ ಪಾತ್ರಕ್ಕೆ ಮಹತ್ವವಿಲ್ಲ ಎಂದು ಹೇಳಿದ್ದಾರೆ. ತಾನು ಒಂದೇ ರೀತಿಯ ಪಾತ್ರಗಳಿಗೆ ಫಿಕ್ಸ್ ಆಗಬಾರದು ಎಂದು ಹೇಳಿದ್ದಾರೆ.  

ಫಿಲ್ಮ್ ಕಂಪ್ಯಾನಿಯನ್‌ಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾಗೆ ದಳಪತಿ ವಿಜಯ್ ನಟನೆಯ ವಾರಿಸು ಸಿನಿಮಾದಲ್ಲಿ ನಿಮ್ಮ ಪಾತ್ರಕ್ಕೆ ಮಹತ್ವವಿಲ್ಲ ಆದರೂ ಯಾಕೆ ಮಾಡಿದ್ದು ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ರಶ್ಮಿಕಾ, 'ಈ ಚಿತ್ರ ಆಯ್ಕೆ ಮಾಡುವುದು ನನ್ನ ಆಯ್ಕೆ. ಈ ಸಿನಿಮಾದಲ್ಲಿ ಎರಡು ಹಾಡುಗಳಿವೆ ಅಷ್ಟೆ. ಇದು ನನಗೆ ಗೊತ್ತಿತ್ತು. ಇದು ನಿಜಕ್ಕೂ ಜೋಕ್ ಆನಿಸುತ್ತದೆ. ಎರಡು ಹಾಡುಗಳು ಬಿಟ್ಟು ಬೇರೇನು ಮಾಡಬೇಕಾಲಿಲ್ಲ ಎಂದು ನಾನು ವಿಜಯ್ ಸರ್‌ಗೆ ಹೇಳಿದ್ದೆ. ಇದು ನನ್ನ ಪ್ರಜ್ಞಾಪೂರ್ವಕ  ನಿರ್ಧಾರ. ನಾನು ವಿಜಯ್ ಅವರೊಂದಿಗೆ ಕೆಲಸ ಮಾಡಲು ಬಯಸಿದ್ದರಿಂದ ಈ ಚಿತ್ರದ ಭಾಗವಾದೆ. ನನಗೆ ವಿಜಯ್ ಸರ್ ತುಂಬಾ ಇಷ್ಟ. ನನಗೆ ನಟಿಯಾಗಿ ನಾನು ಶೂಟಿಂಗ್ ಹೋಗಿ ಅವರಿಂದ ಸಣ್ಣ ವಿಷಯಗಳನ್ನು ಕಲಿಯುವುದು ತುಂಬಾ ಮುಖ್' ಎಂದು ಹೇಳಿದ್ದಾರೆ.

ಚಿತ್ರರಂಗದ ದಾರಿ ತೋರಿಸಿದ್ದೇ ರಕ್ಷಿತ್-ರಿಷಬ್; ಅಚ್ಚರಿ ಮೂಡಿಸಿದ ರಶ್ಮಿಕಾ ಮಾತು, ಬದಲಾವಣೆ ಯಾಕೆಂದ ನೆಟ್ಟಿಗರು

 ವಾರಿಸು ಸಿನಿಮಾದಲ್ಲಿ ರಶ್ಮಿಕಾ ಎರಡು ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ದಳಪತಿ ಜೊತೆ ಎರಡು ಹಾಡುಗಳಲ್ಲಿ ಹೆಜ್ಜೆ ಹಾಕಿದ್ದಾರೆ. 'ನಾನು ಈ ಸಿನಿಮಾದಲ್ಲಿ ಏನು ಇಲ್ಲದಿದ್ದರೂ ವಾರಿಸು ಸಿನಿಮಾದ ಭಾಗವಾಗಲು ಬಯಸಿದ್ದೆ. ನಾನು ನಟಿಯಾಗಿ ಎಲ್ಲಾ ರೀತಿಯ ಪಾತ್ರ ಮಾಡಲು ಬಯಸುತ್ತೇನೆ. ನನಗೆ ಒಂದೇ ರೀತಿಯ ಪಾತ್ರಗಳಿಗೆ ಫಿಕ್ಸ್ ಆಗಲು ಇಷ್ಟವಿಲ್ಲ' ಎಂದು ರಶ್ಮಿಕಾ ಹೇಳಿದ್ದಾರೆ.   

ನನ್ನ ಮೇಲೆ ಕಲ್ಲು ಹಾಕಿ, ಫ್ಯಾಮಿಲಿ ಮೇಲಲ್ಲ; 8 ವರ್ಷದ ತಂಗಿ ಟ್ರೋಲ್‌ ಕಂಡು ರಶ್ಮಿಕಾ ಮಂದಣ್ಣ ಭಾವುಕ

ರಶ್ಮಿಕಾ ಸದ್ಯ ಹಿಂದಿ ಮತ್ತು ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ಸದ್ಯ ಮಿಷನ್ ಮಜ್ನು ಮೂಲಕ ಅಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾ ಬಳಿಕ ರಶ್ಮಿಕಾ ಅನಿಮಲ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಣಬೀರ್ ಕಪೂರ್ ಜೊತೆ ರಶ್ಮಿಕಾ ನಟಿಸಿದ್ದು ಫಸ್ಟ್ ಲುಕ್ ಈಗಾಗಲೇ ವೈರಲ್ ಆಗಿತ್ತು. ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕಂಡಿದ್ದಾರೆ. ಇನ್ನು ತೆಲುಗಿನಲ್ಲಿ ಬಹುನಿರೀಕ್ಷೆಯ ಪುಷ್ಪ-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊದಲ ಭಾಗ ದೊಡ್ಡ ಹಿಟ್ ಕಾರಣ ಎರಡನೇ ಭಾಗದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. 

Latest Videos
Follow Us:
Download App:
  • android
  • ios