ನನ್ನ ಮೇಲೆ ಕಲ್ಲು ಹಾಕಿ, ಫ್ಯಾಮಿಲಿ ಮೇಲಲ್ಲ; 8 ವರ್ಷದ ತಂಗಿ ಟ್ರೋಲ್ ಕಂಡು ರಶ್ಮಿಕಾ ಮಂದಣ್ಣ ಭಾವುಕ
ಸ್ಕೂಲ್‌ನಲ್ಲಿ ಸ್ನೇಹಿತರು ಟ್ರೋಲ್ ಬಗ್ಗೆ ಮಾತನಾಡುವುದನ್ನು ಕೇಳಿಸಿಕೊಂಡು ಹೆದರಿಕೊಳ್ಳುವ ತಂಗಿ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ....
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸಿನಿ ಜರ್ನಿ ಆರಂಭಿಸಿ 6 ವರ್ಷ ಕಳೆದಿದೆ. ಟ್ರೋಲ್ ಮಾಡುವವರಿಗೆ ಪ್ರತಿಕ್ರಿಯಿಸಿದರೆ ತಪ್ಪಾಗುತ್ತದೆ ಮತ್ತೊಂದು ರೀತಿಯಲ್ಲಿ ರಿಯಾಕ್ಟ್ ಮಾಡುತ್ತಾರೆಂದು ಸುಮ್ಮನಿದ್ದರು ಆದರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಅದರಲ್ಲೂ ಸಹೋದರಿ ಮೇಲೆ ಪರಿಣಾಮ ಬೀರುತ್ತಿದೆ ಎಂದು ಧ್ವನಿ ಎತ್ತಲು ಆರಂಭಿಸಿದ್ದಾರೆ.
'ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಟ್ರೋಲ್‌ಗಳು ಆರಂಭವಾದವು. ಯಾವುದಕ್ಕೂ ಪ್ರತಿಕ್ರಿಯೆ ಕೊಡದೆ ನಾನು ಎಲ್ಲರಿಗೂ ಗೌರವ ಕೊಡುತ್ತಿರುವೆ. ಮನಸ್ಸಿನಲ್ಲಿ ಇಟ್ಟುಕೊಂಡು ಸುಮ್ಮನಿರುವೆ. ತುಂಬಾ ಸೈಲೆಂಟ್ ಆಗಿದ್ದದೇ ಈಗ ತಪ್ಪಾಗಿ ಕಾಣಿಸುತ್ತಿದೆ. ಇಷ್ಟು ದಿನ ನನ್ನ ಮೇಲೆ ಮಾತ್ರ ಪರಿಣಾಮ ಬೀರುತ್ತಿತ್ತು ಆದರೆ ಈಗ ನನ್ನ ಫ್ಯಾಮಿಲಿ ಅದರಲ್ಲೂ ತಂಗಿ ಮೇಲೆ ಪರಿಣಾಮ ಬೀರುತ್ತಿರುವುದು ಇಷ್ಟವಾಗುತ್ತಿಲ್ಲ. ದಿನ ಬೆಳಗ್ಗೆ ಎದು ಮಾಧ್ಯಮಗಳಲ್ಲಿ ಮಗಳ ಬಗ್ಗೆ ಕೆಟ್ಟದಾಗಿ ತಪ್ಪಾಗಿ ಬರೆದಿರುವುದನ್ನು ಓದಲು ಪೋಷಕರಿಗೆ ಬೇಸರವಾಗುತ್ತದೆ. ಮುನ್ನಿ ನ್ಯೂಸ್‌ನಲ್ಲಿ ನಾವು ಹೀಗೆ ನೋಡಿದ್ವಿ ಇದು ಸತ್ಯನಾ ಎಂದು ಕೇಳುತ್ತಾರೆ. ನಾನು ನಿಮ್ಮ ಮಗಳು ಈ ರೀತಿ ಏನೇ ಇದ್ದರೂ ನಾನೇ ಬಂದು ನಿಮಗೆ ತಿಳಿಸುವೆ ಎಂದು ಸಮಾಧಾನ ಮಾಡುವೆ.' ಎಂದು ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ಟ್ರೋಲ್ ಬಗ್ಗೆ ಮಾತನಾಡಿದ್ದಾರೆ.
ತಂಗಿ ಬಗ್ಗೆ ಟ್ರೋಲ್:
'ಸ್ಕೂಲ್‌ನಲ್ಲಿ ನನ್ನ ಫ್ರೆಂಡ್ಸ್ ಈ ರೀತಿ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ತಂಗಿ ಕರೆ ಮಾಡಿ ಹೇಳುತ್ತಾಳೆ. ನನ್ನ ತಂಗಿ ಮೆಂಟಲ್ ಹೆಲ್ತ್‌ನ ನೋಡಿಕೊಳ್ಳಬೇಡು ಆಕೆಯನ್ನು ಕಾಪಾಡಿಕೊಳ್ಳಬೇಕು. ಮೀಡಿಯಾದವರು ಹೀಗೆ ಹೇಳುತ್ತಿದ್ದಾರೆ ಈ ರೀತಿ ಟ್ರೋಲ್ ನೋಡಿದೆ ಎಂದು ನನ್ನ 8 ವರ್ಷ ತಂಗಿ ಕರೆ ಮಾಡಿದಾಗ ಮನಸ್ಸಿಗೆ ನೋವಾಗುತ್ತದೆ. ಆಕೆ ಪುಟ್ಟ ಹುಡುಗಿ ಕೇವಲ 8 ವರ್ಷ ಈ ರೀತಿ ಅವಳಿಗೆ ಮಾಡಬೇಡಿ.' ಎಂದು ಹೇಳಿದ್ದಾರೆ.
ಟ್ರೋಲ್ ಎಲ್ಲಾ ಕಡೆ ಇದೆ:
'ಪಬ್ಲಿಕ್ ಫಿಗರ್ ಆಗಿದ್ದರೆ ಮಾತ್ರ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಬರೆಯುತ್ತಾರೆ ಅಂದುಕೊಳ್ಳಬಾರದು ಸಣ್ಣ ಪುಟ್ಟ ಆಫೀಸ್ ಮಟ್ಟದಲ್ಲೂ ಇದೆಲ್ಲಾ ನಡೆಯುತ್ತದೆ. ಕಾಲೇಜ್‌ಗಳಲ್ಲಿ ಇದೆಲ್ಲಾ ನಡೆಯುತ್ತದೆ. ಪ್ರತಿ ಸಲವೂ ಯಾಕೆ ಒಬ್ಬರನ್ನು ಕೆಳಗೆ ಹಾಕುವುದಕ್ಕೆ ನೋಡುತ್ತಾರೆ? ಮತ್ತೊಬ್ಬರನ್ನು ಹೊಗಳಿದರೆ ಅವರು ಎಷ್ಟು ಚೆನ್ನಾಗಿ ಬೆಳೆಯುತ್ತಾರೆ ಪ್ರಪಂಚ ಎಷ್ಟು ಸುಂದರವಾಗಿರುತ್ತದೆ. ಕೆಲವೊಂದು ಸಲ ನಾನು ತಪ್ಪು ಮಾಡಿರುವುದಿಲ್ಲ ಆದರೂ ಜನರು ನನ್ನನ್ನು ಅಟ್ಯಾಕ್ ಮಾಡುವ ರೀತಿಯಲ್ಲಿ ಮಾತನಾಡುತ್ತಾರೆ. ನನ್ನ ಸ್ನೇಹಿತರು ಕರೆ ಮಾಡಿ ಅವರು ಕೇಳಿಸಿಕೊಂಡಿರುವ ಗಾಸಿಪ್‌ಗಳ ಬಗ್ಗೆ ಚರ್ಚೆ ಮಾಡುತ್ತಾರೆ. 6 ವರ್ಷಗಳ ಕಾಲ ಈ ಜರ್ನಿಯಲ್ಲಿರುವೆ ಸಾಕಿಷ್ಟು. ಇದನ್ನು ನಾನು ತೆಗೆದುಕೊಳ್ಳುವುದಿಲ್ಲ ರಿಯಾಕ್ಟ್ ಮಾಡಬೇಕು ಎಂದು ಉತ್ತರ ಕೊಡುತ್ತಿರುವೆ' ಎಂದಿದ್ದಾರೆ ರಶ್ಮಿಕಾ.
ಎಷ್ಟೇ ಬಕೆಟ್ ಹಿಡಿದ್ರೂ ನೀನ್ ಮಾಡಿದ್ದು ಮರೆಯಲ್ಲ; ಸಂಕ್ರಾಂತಿ ಹಬ್ಬಕ್ಕೆ ಶುಭಕೋರಿ ರಶ್ಮಿಕಾ ಮಂದಣ್ಣ ಟ್ರೋಲ್
ಜನರು ಬದಲಾಗುವುದಿಲ್ಲ:
'ಸೋಷಿಯಲ್ ಮೀಡಿಯಾದಲ್ಲಿ ನಾನು ಪೋಸ್ಟ್ ಹಾಕಿದ ನಂತರ ಏನೂ ಬದಲಾಗಿಲ್ಲ. ಯುವಕರ ಮನಸ್ಥಿತಿ ಮೇಲೆ ಮೀಡಿಯಾ ದೊಡ್ಡ ಪರಿಣಾಮ ಬೀರುತ್ತಿದೆ. ರಶ್ಮಿಕಾ ಮಂದಣ್ಣ ಹೀಗೆ ಮಾಡಿದಳು ಹಾಗೆ ಮಾಡಿದಳು ಎಂದು ಕಾಮೆಂಟ್ ಮಾಡಿ ಪುಟ್ಟ ಮಕ್ಕಳು ಮನಸ್ಸು ಕೆಡಿಸುತ್ತಿದ್ದಾರೆ. ನನ್ನ ತಂಗಿಗೆ ಇಂಡಷ್ಟ್ರಿ ಬಗ್ಗೆ ಏನೂ ಗೊತ್ತಿಲ್ಲ ಆದರೆ ನ್ಯೂಸ್‌ಗಳು ಅರ್ಥವಾಗುತ್ತದೆ. ಸತ್ಯ ಗೊತ್ತಿಲ್ಲ ಅಂದ್ರೆ ಹೆದರಿಕೊಂಡು ಕರೆ ಮಾಡುತ್ತಾರೆ. ಮಕ್ಕಳು ಹೀಗೆ ಬದುಕಬೇಕು ಈ ರೀತಿ ತಿನ್ನಬೇಕು ಹಾಗೆ ಹೀಗೆ ಎಂದು ಯಾರು ಮಕ್ಕಳಿಗೆ ಒಳ್ಳೆಯ ವಿಚಾರ ಹೇಳಿ ಕೊಡುತ್ತಿಲ್ಲ. ಬದಲಿಗೆ ನನ್ನ ಮೇಲೆ ಕಲ್ಲು ಎಸೆಯುವ ಕೆಲಸ ಮಾಡುತ್ತಿದ್ದಾರೆ. ಇಂದು ನಾನು ಮತ್ತೊಂದು ದಿನ ಮತ್ತೊಬ್ಬಳು. ನನ್ನ ಮೇಲೆ ಕಲ್ಲು ಹಾಕಿ ಆದರೆ ಆ ಪುಟ್ಟ ಹುಡುಗಿ ಜೀವನ ಎಂಜಾಯ್ ಮಾಡಲು ಬಿಡಿ.' ಎಂದು ರಶ್ಮಿಕಾ ಹೇಳಿದ್ದಾರೆ.