ಚಿತ್ರರಂಗದ ದಾರಿ ತೋರಿಸಿದ್ದೇ ರಕ್ಷಿತ್-ರಿಷಬ್; ಅಚ್ಚರಿ ಮೂಡಿಸಿದ ರಶ್ಮಿಕಾ ಮಾತು, ಬದಲಾವಣೆ ಯಾಕೆಂದ ನೆಟ್ಟಿಗರು

ಚಿತ್ರರಂಗದ ದಾರಿ ತೋರಿಸಿದ್ದೇ ರಕ್ಷಿತ್-ರಿಷಬ್ ಎಂದು ರಶ್ಮಿಕಾ ಮಂದಣ್ಣ ಹೇಳಿರುವ ಮಾತು ಅಚ್ಚರಿ ಮೂಡಿಸಿದ್ದು ಬದಲಾವಣೆ ಯಾಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. 

RakshiTh shetty and Rishab Shetty showed me path into the industry says rashmika Mandanna sgk

ಕನ್ನಡ ಸಿನಿಮಾರಂಗದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಇದೀಗ ಬೇರೆ ಬೇರೆ ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್ ಮತ್ತು ಹಿಂದಿಯಲ್ಲಿ ಹೆಚ್ಚು ಸಿನಮಾಗಳನ್ನು ಮಾಡುತ್ತಿರುವ ರಶ್ಮಿಕಾ ಅತ್ಯಂತ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ರಶ್ಮಿಕಾ ಏನ್ ಮಾಡಿದರೂ, ಯಾವುದೇ ಸಿನಿಮಾ ಮಾಡಿದರೂ, ಏನ್ ಮಾತನಾಡಿದರೂ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಾರೆ. ಹಾಗಂತ ರಶ್ಮಿಕಾ ಹೆಚ್ಚು ತಲೆಕೆಡಿಸಿಕೊಂಡು ಕುಳಿತಿಲ್ಲ. ಟ್ರೋಲ್ ಹೆಚ್ಚಾದಾಗಲೂ ಅವರ ವೃತ್ತಿ ಜೀವನವೂ ಅಷ್ಟೆ ಎತ್ತರಕ್ಕೆ ಸಾಗಿತು. ಕಿರಿಕ್ ಪಾರ್ಟಿ ಮೂಲಕ ಸಿನಿಮಾರಂಗಕ್ಕೆ ಬಂದ ರಶ್ಮಿಕಾ ಪರ ಭಾಷೆಗಳಲ್ಲಿ ಬ್ಯುಸಿಯಾಗುತ್ತಿದ್ದಂತೆ ಕನ್ನಡ ಮರೆತರು, ಚಿತ್ರರಂಗಕ್ಕೆ ಪರಿಚಯಿಸಿದವರನ್ನು ಮರೆತರು ಎಂದು ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಈಗಲೂ ಈ ವಿಚಾರವಾಗಿ ರಶ್ಮಿಕಾ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಲೇ ಇದೆ. 

ಇತ್ತೀಚಿಗಷ್ಟೆ ರಶ್ಮಿಕಾ ಕಾಂತಾರ ಸಿನಿಮಾ ನೋಡಿಲ್ಲ ಎಂದು ಹೇಳಿ ಟ್ರೋಲ್ ಆಗಿದ್ದರು, ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರು. ಸಿನಿಮಾರಂಗಕ್ಕೆ ಪರಿಚಯಿಸಿದ ನಿರ್ದೇಶಕರ ಸಿನಿಮಾ ನೋಡದೆ ಅವಮಾನಿಸಿದ್ದೀರಾ ಎಂದು ರಶ್ಮಿಕಾ ವಿರುದ್ಧ ಅನೇಕರು ಕಿಡಿ ಕಾರಿದ್ದರು. ಬಳಿಕ ಹಿಂದಿ ಸಂದರ್ಶನದಲ್ಲಿ ರಶ್ಮಿಕಾ ತನ್ನನ್ನು ಸಿನಿಮಾರಂಗಕ್ಕೆ ಪರಿಚಯಿಸಿದ ನಿರ್ಮಾಣ ಸಂಸ್ಥೆಯ ಹೆಸರು ಹೇಳದೆ ಸನ್ನೆ ಮೂಲಕ ಮಾತನಾಡಿದ್ದರು. ಇದು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತೆ ಆಗಿತ್ತು. ಹತ್ತಿನ ಏಣಿಯನ್ನು ಯಾವತ್ತು ಒದೆಯಬಾರದು ಎಂದು ನೆಟ್ಟಿಗರು ಬುದ್ದಿ ಹೇಳಿದ್ದರು. ರಶ್ಮಿಕಾ ಸನ್ನೆ ಮಾಡಿ ಮಾತನಾಡಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಳಿಕ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಸರಿಯಾಗೆ ತಿರುಗೇಟು ನೀಡಿದ್ದರು. ಸನ್ನೆ ಮಾಡುವ ಮೂಲಕವೇ ಉತ್ತರ ನೀಡಿದ್ದರು. ರಿಷಬ್ ಮತ್ತು ರಶ್ಮಿಕಾ ನಡುವೆ ಶೀತಲ ಸಮರ ಮುಂದುವರೆದಿತ್ತು.

ನನಗೆ ಅವಕಾಶ ಕೊಟ್ಟಿದ್ದು ರಕ್ಷಿತ್-ರಿಷಬ್

ಆದರೀಗ ರಶ್ಮಿಕಾ, ರಕ್ಷಿತ್ ಮತ್ತು ರಿಷಬ್ ಅವರನ್ನು ದಢೀರ್ ಹೊಗಳಲು ಪ್ರಾರಂಭಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಈ ಬದಲಾವಣೆ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಇತ್ತೀಚಿಗಷ್ಟೆ ರಶ್ಮಿಕಾ ತೆಲುಗು ಯೂಟ್ಯೂಬ್ ವಾಹಿನಿಗೆ ಸಂದರ್ಶನ ನೀಡಿದ್ದಾರೆ. ಆಗ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಅವರನ್ನು ಹಾಡಿಹೊಗಳಿದ್ದಾರೆ. ಚಿತ್ರಕ್ಕೆ ಬರಲು ಕಾರಣನೇ ಅವರಿಬ್ಬರು ಎಂದು ಹೇಳಿದ್ದಾರೆ. 

ಎಷ್ಟೇ ಬಕೆಟ್ ಹಿಡಿದ್ರೂ ನೀನ್ ಮಾಡಿದ್ದು ಮರೆಯಲ್ಲ; ಸಂಕ್ರಾಂತಿ ಹಬ್ಬಕ್ಕೆ ಶುಭಕೋರಿ ರಶ್ಮಿಕಾ ಮಂದಣ್ಣ ಟ್ರೋಲ್

ನಿರೂಪಕಿ ಕೇಳೆದ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, 'ರಕ್ಷಿತ್ ಮತ್ತು ರಿಷಬ್ ಚಿತ್ರರಂಗದ ದಾರಿ ತೋರಿಸಿದವರು. ನನಗೆ ಅವಕಾಶ ಕೊಟ್ಟಿದ್ದು ಅವರೇ. ಇವತ್ತಿಗೂ ನಾನು ನನ್ನ ವೃತ್ತಿ ಜೀವನದಲ್ಲಿ ಅತ್ಯುತ್ತಮ ವ್ಯಕ್ತಿಗಳ ಜೊತೆ ಕಲೆಸ ಮಾಡಿದ್ದೀನಿ' ಎಂದು ಹೇಳಿದ್ದಾರೆ. ರಶ್ಮಿಕಾ ಅವರ ಈ ಮಾತು ಕನ್ನಡ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ರಿಷಬ್ ಮತ್ತು ರಕ್ಷಿತ್ ಅಭಿಮಾನಿಗಳು ಶಾಕ್ ಆಗಿದ್ದಾರೆ. ದಿಢೀರ್ ಬದಲಾವಣೆ ಯಾಕೆ ಎಂದು ಕೇಳುತ್ತಿದ್ದಾರೆ. ಕಾಂತಾರ ಸಕ್ಸಸ್ ಬಳಿಕ ರಿಷಬ್ ಬೆಲೆ ಗೊತ್ತಾಯಿತಾ ಎಂದು ಇನ್ನು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಮೊದಲ ಬಾರಿಗೆ ರಿಷಬ್ ಮತ್ತು ರಕ್ಷಿತ್ ಬಗ್ಗೆ ಮಾತನಾಡಿದ್ದು ಎಂದು ಹೇಳುತ್ತಿದ್ದಾರೆ. 

ಪಾಸಿಟಿವ್ or ನೆಗೆಟಿವ್ ನನ್ನ ಬಗ್ಗೆ ಮಾತಾಡ್ತಿರಲ್ಲ ಸಾಕು; ಗಾಸಿಪ್, ಟ್ರೋಲ್‌ಗೆ ರಶ್ಮಿಕಾ ರಿಯಾಕ್ಷನ್

ಅದೇ ಸಂದರ್ಶನದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಗ್ಗೆಯೂ ಮಾತನಾಡಿದ್ದಾರೆ. ಅಂಜನಿ ಪುತ್ರ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಿದ್ದರು. ವುನೀತ್ ಜೊತೆ ನಟಿಸಿದ್ದು ತನ್ನ ಪುಣ್ಯ ಎಂದು ಹೇಳಿದ್ದಾರೆ. ರಶ್ಮಿಕಾ ಮಾತುಗಳು ಅನೇಕರಿಗೆ ಅಚ್ಚರಿ ಮೂಡಿಸುತ್ತಿದೆ. ರಶ್ಮಿಕಾ ಅವರಲ್ಲಿ ಈ ಬದಲಾವಣೆ ಯಾಕೆ ಎಂದು ನೆಟ್ಟಿಗರು ಯೋಚಿಸುತ್ತಿದ್ದಾರೆ. ಅಂದಹಾಗೆ ರಶ್ಮಿಕಾ ಸದ್ಯ ಹಿಂದಿಯ ಮಿಷನ್ ಮಜ್ನು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.  

Latest Videos
Follow Us:
Download App:
  • android
  • ios