ಪಾಸಿಟಿವ್ or ನೆಗೆಟಿವ್ ನನ್ನ ಬಗ್ಗೆ ಮಾತಾಡ್ತಿರಲ್ಲ ಸಾಕು; ಗಾಸಿಪ್, ಟ್ರೋಲ್‌ಗೆ ರಶ್ಮಿಕಾ ರಿಯಾಕ್ಷನ್
ನಟಿ ರಶ್ಮಿಕಾ ಮಂದಣ್ಣ ಗಾಸಿಪ್ ಮತ್ತು ಟ್ರೋಲ್ ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪಾಸಿಟಿವ್ or ನೆಗೆಟಿವ್ ನನ್ನ ಬಗ್ಗೆ ಮಾತಾಡ್ತಿರಲ್ಲ ಸಾಕು ಎಂದು ಹೇಳಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಖ್ಯಾತಿ ಹೆಚ್ಚಾಗುತ್ತಿದ್ದಂತೆ ಟ್ರೋಲ್ ಮತ್ತು ನಕಾರಾತ್ಮಕತೆಯೂ ಹೆಚ್ಚಾಯಿತು. ಕನ್ನಡ ಸಿನಿಮಾರಂಗದ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ ರಶ್ಮಿಕಾ ಇದೀಗ ಟಾಲಿವುಡ್, ಕಾಲಿವುಡ್ ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಸದ್ಯ ಸಿನಿಮಾರಂಗ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಖ್ಯಾತಿ ಜೊತೆಗೆ ರಶ್ಮಿಕಾ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ರಶ್ಮಿಕಾ ವಿರುದ್ಧ ಅನೇಕರ ಆಕ್ರೋಶ ಹೊರಹಾಕಿತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿನ ನಕಾರಾತ್ಮಕತೆಯ ಬಗ್ಗೆ ರಶ್ಮಿಕಾ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
ಆಂಗ್ಲ ಮಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ನೆಗೆಟಿವಿಟಿ ಬಗ್ಗೆ ಮಾತನಾಡಿದ್ದಾರೆ. 'ದಿನ ಕೊನೆಯಲ್ಲಿ ನಾವು ಮನರಂಜನೆ ನೀಡುತ್ತೇವೆ. ಜನರನ್ನು ರಂಜಿಸಲು ಸಿನಿಮಾ ಮಾಡುತ್ತೇವೆ. ನಾವು ಸೃಜನಶೀಲ ಕ್ಷೇತ್ರಕ್ಕೆ ಬರಲು ಇದು ಮುಖ್ಯ ಕಾರಣವಾಗಿದೆ. ನಿಮ್ಮ ಕೆಲಸವನ್ನು ಹೇಗೆ ಗ್ರಹಿಸುತ್ತಾರೆ ಎಂಬುದರ ಮೇಲೆ ಇದು ಅಲಂಬಿತವಾಗಿದೆ. ಜನರು ನಾವು ಯಾರೆಂದು ನಮ್ಮನ್ನು ಪ್ರೀತಿಸುತ್ತಾರೆ. ನೀವು ಒಳ್ಳೆಯ ಸಿನಿಮಾ ಮಾಡಿದ್ರೆ ಜನರು ನಿಮ್ಮನ್ನು ಇಷ್ಟ ಪಡುತ್ತಾರೆ. ಉತ್ತಮ ಸಿನಿಮಾ ಮಾಡಿಲ್ಲ ಅಂದರೆ ಏನ್ ಮಾಡಿದ್ದೀರಾ ಎಂದು ಕೇಳುತ್ತಾರೆ. ನಮ್ಮ ಜೀವನ ಒಂದೇ ಸಿನಿಮಾದ ಮೇಲೆ ನಿಂತಿಲ್ಲ. ಇದೊಂದು ಪಯಣ' ಎಂದು ಹೇಳಿದ್ದಾರೆ.
ಟ್ರೋಲ್ ಮತ್ತು ನೆಗೆಟಿವಿಟಿ ತನ್ನ ಜೀವನ ಮತ್ತು ವೃತ್ತಿ ಜೀವನದ ಮೇಲೆ ಹೇಗೆ ಪರಿಣಾಮ ಬೀರಿತು ಎಂದು ರಶ್ಮಿಕಾ ಮಾತನಾಡಿದ್ದಾರೆ. ಈಗ ಹೇಗೆ ಎದುರಿಸಬೇಕೆಂದು ಕಲಿತಿದ್ದೇನೆ ಎಂದು ರಶ್ಮಿಕಾ ಹೇಳಿದರು. 'ಇದು ನಮ್ಮ ಕೆಲಸದ ಜೊತೆಯೇ ಬರುತ್ತಿದೆ. 10 ವರ್ಷಗಳ ಹಿಂದೆ ಪಾಪರಾಜಿ ಮತ್ತು ಸಾಮಾಜಿಕ ಮಾಧ್ಯಮಗಳು ಇರಲಿಲ್ಲ. ಆಗ ಜನ ಸ್ಟಾರ್‌ಗಳನ್ನು ನೋಡಲು ಚಿತ್ರಮಂದಿರಕ್ಕೆ ಹೋಗಬೇಕಿತ್ತು. ಆದರೆ ಈಗ ಹಾಗಿಲ್ಲ. ಇದು ನಮ್ಮ ದೃಶ್ಯದ ಒಂದು ಭಾಗವಾಗಿದೆ. ನಾವು ಇದನ್ನು ಒಪ್ಪಿಕೊಳ್ಳಬೇಕು ಮತ್ತು ಮುಂದುವರೆಯ ಬೇಕು' ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ವಾರಿಸು ಲಾಸ್ ಮೇಲೆ ಲಾಸ್, ರಶ್ಮಿಕಾ ಬ್ಯಾನ್ ಕಾರಣವಾ?
ಗಾಸಿಪ್ ಬಗ್ಗೆ ಪ್ರತಿಕ್ರಿಯೆ ನೀಡಿದ ರಶ್ಮಿಕಾ, ನಾವು ಕಲಾವಿದರು ಹಾಗಾಗಿ ನಮ್ಮ ಕೆಲಸದ ಬಗ್ಗೆ ಮಾತ್ರ ಮಾತಾಡಿ ಎಂದು ಹೇಳಲು ಸಾಧ್ಯವಿಲ್ಲ. ನಾವು ಸಾರ್ವಜನಿಕ ವ್ಯಕ್ತಿಗಳು. ನೀವು ನಮ್ಮ ಬಗ್ಗೆ ಏನು ಯೋಚಿಸುತ್ತೀರಿ ಎನ್ನುವುದನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ. ನಿಮ್ಮ ಮನಸ್ಸನ್ನು ನಾವು ನಿಯಂತ್ರಸಲು ಸಾಧ್ಯವಿಲ್ಲ. ಅದೇ ಸಮಯಕ್ಕೆ ನಿಮ್ಮ ಸುತ್ತಲೂ ಇರುವ ಪ್ರೀತಿ ಮತ್ತು ಕುತೂಹಲವು ನಿಮ್ಮನ್ನು ಮುಂದುವರಿಸುತ್ತದೆ. ಜನರು ನಿಮ್ಮ ಬಗ್ಗೆ ಕುತೂಹಲ ಹೊಂದಿಲ್ಲ ಎಂದರೆ ಯಾರು ನಿಮ್ಮ ಬಗ್ಗೆ ಮಾತನಾಡಲ್ಲ. ನೆಗೆಟಿವ್ ಅಥವಾ ಪಾಸಿಟಿವ್ ಆಗಿರಲಿ ದಿನದ ಕೊನೆಯಲ್ಲಿ ನನ್ನ ಬಗ್ಗೆ ಮಾತನಾಡಿದ್ದೀರಿ ಅಷ್ಟೆ' ಎಂದು ಹೇಳಿದ್ದಾರೆ.
ಮೊದಲ ದಿನವೇ 'ವರಿಸು' ಆನ್ಲೈನ್ನಲ್ಲಿ ಲೀಕ್, ಇದಕ್ಕೂ ರಶ್ಮಿಕಾನೇ ದೂಷಿಸ್ತಾರೆ ನೆಟ್ಟಿಗರು!
ರಶ್ಮಿಕಾ ಕೊನೆಯದಾಗಿ ತಮಿಳಿನ ವಾರಿಸು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ದಳಪತಿ ವಿಜಯ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ರಶ್ಮಿಕಾ ನಟನೆಯ 2ನೇ ತಮಿಳು ಸಿನಿಮಾವಾಗಿದೆ. ಸದ್ಯ ರಶ್ಮಿಕಾ ಮಿಷನ್ ಮಜ್ನು ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಸಿನಿಮಾ ಜೊತೆಗೆ ಅನಿಮಲ್ ಮತ್ತು ಪುಷ್ಪ-2 ಸಿನಿಮಾಗಳಿವೆ.