Asianet Suvarna News Asianet Suvarna News

ಕರ್ನಾಟಕದಲ್ಲಿ ವಾರಿಸು ಲಾಸ್ ಮೇಲೆ ಲಾಸ್, ರಶ್ಮಿಕಾ ಬ್ಯಾನ್ ಕಾರಣವಾ?

ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ವಾರಿಸು ಸಿನಿಮಾ ಕರ್ನಾಟಕದಲ್ಲಿ ಸ್ಕ್ರೀನ್‌ ಮೇಲೆ ಸ್ಕ್ರೀನ್‌ಗಳನ್ನು ಕಳೆದುಕೊಳ್ಳುತ್ತಿದೆ. ವಿಜಯ್ ಸಿನಿಮಾ ಬರುತ್ತೆ ಅಂದ್ರೆ ಕರ್ನಾಟಕದಲ್ಲಿ ಆ ಹವಾನೇ ಬೇರೆ ಇತ್ತು. ಆದರೆ ಈಗ ಫುಲ್‌ ಉಲ್ಟಾ ಪಲ್ಟಾ ಆಗ್ತಿದೆ. ವಾರೀಸು ಸಿನಿಮಾ ಶೋ ಮೇಲೆ ಶೋಗಳನ್ನು ಕಳ್ಕೊಳ್ತಿದೆ. ಇದಕ್ಕೆ ರಶ್ಮಿಕಾ ಬ್ಯಾನ್ ಕಾರಣ ಅಂತ ಊಹಿಸಲಾಗ್ತಿದೆ.

 

Due to Rashmika reason Varisu movie lost nearly 300 screens in Karnataka
Author
First Published Jan 14, 2023, 2:04 PM IST

ತಲಪತಿ ವಿಜಯ್‌ ಮತ್ತು ರಶ್ಮಿಕಾ ಮಂದಣ್ಣ ತಾರಾಗಣ ಇರೋ ವಾರಿಸು ಸಿನಿಮಾಕ್ಕೆ ದೇಶದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ಬರ್ತಿದೆ. ಆ ಸಿನಿಮಾ ಬಗ್ಗೆ ಜನ ಪಾಸಿಟಿವ್‌ ಆಗಿ ಕಮೆಂಟ್ ಮಾಡ್ತಿದ್ದಾರೆ. ಸಂಕ್ರಾಂತಿ ಹಬ್ಬಕ್ಕೂ ಮೊದಲು ಅಂದರೆ ಜ.೧೧ಕ್ಕೆ ರಿಲೀಸ್ ಆಗಿರೋ ಈ ಸಿನಿಮಾ ಈಗಾಗಲೇ ವಿಶ್ವಾದ್ಯಂತ ಹತ್ತಿರತ್ತಿರ ೫೦ ಕೋಟಿ ರೂಪಾಯಿ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ. ನಮ್ಮ ದೇಶದಲ್ಲಿ ಈ ಸಿನಿಮಾ ಹತ್ತಿರತ್ತಿರ ೩೦ ಕೋಟಿ ಬಾಚಿಕೊಂಡಿದೆ. ನಾಳೆ ಸಂಕ್ರಾಂತಿ ಹಬ್ಬ. ಆಗ ಈ ಗಳಿಕೆ ಇನ್ನಷ್ಟು ಎತ್ತರಕ್ಕೆ ಏರೋ ಸಾಧ್ಯತೆ ಇದೆ. ವಿಜಯ್ ಸಿನಿಮಾ ಅಂದರೆ ಮಿನಿಮಮ್ ಗ್ಯಾರಂಟಿ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆ ಮಿನಿಮಮ್ ಗ್ಯಾರಂಟಿ ಮೊತ್ತವನ್ನು ಸಿನಿಮಾ ಈಗಾಗಲೇ ಗಳಿಸೋದರಲ್ಲಿ ಯಶಸ್ವಿಯಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಈ ಸಿನಿಮಾ ಬಗೆಗಿನ ನಿರೀಕ್ಷೆ ಉಲ್ಟಾ ಪಲ್ಟಾ ಆಗಿದೆ.

ಈ ಹಿಂದೆ ವಿಜಯ್‌ ಸಿನಿಮಾ ಅಂದ್ರೆ ಕರ್ನಾಟಕದ ಜನತೆ ಸಿನಿಮಾ ನೋಡೋದಕ್ಕೆ ಮುಗಿ ಬೀಳ್ತಿದ್ರು. ಉಳಿದ ಕಡೆಯ ಕಲೆಕ್ಷನ್‌ನದು ಒಂದು ಲೆಕ್ಕವಾದರೆ ಕರ್ನಾಟಕದಲ್ಲಿ ವಿಜಯ್‌ ಸಿನಿಮಾ ಗಳಿಕೆಯದ್ದೇ ಮತ್ತೊಂದು ಲೆಕ್ಕ ಅನ್ನೋ ರೇಂಜಿಗೆ ವಿಜಯ್‌ ಹವಾ ಇತ್ತು. ಅಫ್‌ಕೋರ್ಸ್ ಕೆಜಿಎಫ್‌ ೨ ಸಿನಿಮಾ ಆ ಮನಸ್ಥಿತಿಯನ್ನು ಕಿತ್ತು ಹಾಕಿತ್ತು. ಆದರೆ ಈ ಬಾರಿ ಹಾಗಾಗಲಿಕ್ಕಿಲ್ಲ ಅಂದುಕೊಂಡೇ ರಾಜ್ಯದಲ್ಲಿ ವಾರಿಸು ಸಿನಿಮಾಕ್ಕೆ ಹೆಚ್ಚಿನ ಸ್ಕ್ರೀನ್‌ಗಳನ್ನು ಇಡಲಾಗಿತ್ತು. ಆದರೆ ಈ ಬಾರಿ ಮತ್ತೊಬ್ಬ ಕನ್ನಡ ಮೂಲದ ನಟಿಯ ಕಾರಣ ಕಲೆಕ್ಷನ್‌ಗೆ ಶೋ ಸಂಖ್ಯೆ ಇಳಿತಕ್ಕೆ ಕಾರಣ ಅಂತ ವರದಿ ಆಗಿದೆ.

ಪಠಾಣ್​ ಟ್ರೇಲರ್ ಬಿಡುಗಡೆ ಬೆನ್ನಲ್ಲೇ ಶಾರುಖ್​, ಜಾನ್​ ಅಬ್ರಹಾಂ ನಡುವೆ ಬಿರುಕು?

ಹೌದು ತಲಪತಿ ವಿಜಯ್‌ ಸಿನಿಮಾ ಕರ್ನಾಟಕದಲ್ಲಿ ಆರಂಭದಲ್ಲಿ ಸುಮಾರು ೭೫೦ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿತ್ತು. ಆದರೆ ಮರುದಿನವೇ ಸ್ಕ್ರೀನ್‌ಗಳ ಸಂಖ್ಯೆಯಲ್ಲಿ ಕುಸಿತ ಆಯ್ತು. ಸುಮಾರು ೩೦೦ ಸ್ಕ್ರೀನ್‌ಗಳಲ್ಲಿ ಈ ಸಿನಿಮಾವನ್ನು ತೆಗೆದುಹಾಕಲಾಯ್ತು. ಅಂದರೆ ರಿಲೀಸ್‌ ದಿನ ಸಿನಿಮಾ ೭೫೭ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಂಡರೆ ಮರುದಿನವೇ ಸ್ಕ್ರೀನ್‌ಗಳ ಸಂಖ್ಯೆ ೪೬೬ ಸ್ಕ್ರೀನ್‌ಗಳಿಗೆ ಇಳಿಯಿತು. ಯಾಕೆ ಹೀಗಾಯ್ತು ಅಂತ ಕೇಳಿದರೆ ಅದಕ್ಕೆ ಹೆಚ್ಚಿನವರು ರಶ್ಮಿಕಾ ಮಂದಣ್ಣ ಕಡೆಗೆ ಬೊಟ್ಟು ಮಾಡ್ತಿದ್ದಾರೆ. ಹೌದು ಈ ಮಹಾತಾಯಿ ಕೊಟ್ಟಿರೋ ಒಂದು ಉಡಾಫೆಯ ಸ್ಟೇಟ್‌ಮೆಂಟ್‌ ಆಕೆಗೆ ಮಾತ್ರ ಅಲ್ಲ, ಆಕೆ ನಟಿಸಿರೋ ಸಿನಿಮಾಕ್ಕೂ ಈಗ ಹೊಡೆತ ನೀಡಿದೆ ಎನ್ನಲಾಗ್ತಿದೆ.

ರಶ್ಮಿಕಾ ಮಂದಣ್ಣ ಮನರಂಜನಾ ಕ್ಷೇತ್ರಕ್ಕೆ ಎಂಟ್ರಿ (Entry)ಕೊಟ್ಟಿದ್ದು ರಕ್ಷಿತ್‌ ಶೆಟ್ಟಿ ಜೊತೆಗೆ 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ. ಈ ಚಿತ್ರವನ್ನು ರಿಷಬ್‌ ಶೆಟ್ಟಿ ನಿರ್ದೇಶಿಸಿದ್ದರು. ಆದರೆ ಕಳೆದ ವರ್ಷ ಸಂದರ್ಶನವೊಂದರಲ್ಲಿ ರಶ್ಮಿಕಾ ಈ ಸಿನಿಮಾದ ಹೆಸರನ್ನೂ ಹೇಳದೆ ಕೋಟ್‌ ಸನ್ನೆ ಮೂಲಕ ಅವಮಾನಿಸುವಂಥಾ ಮಾತನ್ನಾಡಿದ್ದರು. ಇದು ಕನ್ನಡ ಮಾತ್ರ ಅಲ್ಲ, ದಕ್ಷಿಣ ಭಾರತೀಯ ಸಿನಿಮಾ ರಂಗದವರಿಗೆಲ್ಲ ಬೇಸರ ತಂದಿತ್ತು. ಬಹಳ ಮಂದಿ ರಶ್ಮಿಕಾ ಅವರ ಈ ಮಾತನ್ನು ವಿರೋಧಿಸಿದರು. ಕರ್ನಾಟಕದಲ್ಲಿ ಈಕೆಯನ್ನು ಬ್ಯಾನ್‌ ಮಾಡ್ತೀವಿ ಅನ್ನೋ ಮಾತುಗಳು ಬಂದವು. ಆರಂಭದಲ್ಲಿ ಇದಕ್ಕೆ ತಲೆ ಕೆಡಿಸಿಕೊಳ್ಳದಿದ್ದ ರಶ್ಮಿಕಾ ಆಮೇಲೆ ಬೇಸರದ ಸ್ಟೇಟ್‌ಮೆಂಟ್ ಹಾಕಿದ್ದರು. ಆದರೆ ರಶ್ಮಿಕಾ ವಿರುದ್ಧದ ಹವಾ ಮುಂದುವರಿದ ಹಾಗಿದೆ. ರಾಜ್ಯದಲ್ಲಿ ಆಕೆಯ ಸಿನಿಮಾ ಬ್ಯಾನ್(Ban) ಮಾಡೋದು ಸಾಧ್ಯವಿಲ್ಲವಾದರೂ ಈ ಥರ ಉತ್ತರ ಕೊಡೋ ಮೂಲಕ ರಶ್ಮಿಕಾ ವಿರುದ್ಧದ ಅಲೆ ಕರ್ನಾಟದಲ್ಲಿರೋದು ಅಕ್ಷರಶಃ ಸಾಬೀತಾದ ಹಾಗಾಗಿದೆ ಎನ್ನಲಾಗಿದೆ.

ಸೋ ಕನ್ನಡದ ಸಿನಿಮಾ ಬಗ್ಗೆ ಹಗುರವಾಗಿ ಮಾತನಾಡಿದರೆ ಏನಾಗುತ್ತೆ ಅನ್ನೋದಕ್ಕೆ ಇದೊಂದು ಉದಾಹರಣೆ(Example) ರೀತಿ ಇದೆ. ಹಾಗಂತ ಇದೊಂದೇ ಕಾರಣ ಅಂತಲೂ ಹೇಳಲಾಗದು. ಆದರೆ ಮುಖ್ಯ ಕಾರಣ ಇದೇ ಅಂತ ಎಲ್ಲೆಡೆ ಮಾತು ಕೇಳಿ ಬರ್ತಿದೆ.

ದಿಗ್ಗಜ ನಟನ ಸರ್ಪ್ರೈಸ್ ಗಿಫ್ಟ್ ನೋಡಿ ಖುಷಿಯಾದೆ; ರಿಷಬ್ ಶೆಟ್ಟಿಗೆ ವಿಶೇಷ ಪತ್ರ ಬರೆದ ಕಮಲ್ ಹಾಸನ್

Follow Us:
Download App:
  • android
  • ios