Asianet Suvarna News Asianet Suvarna News

ಮೊದಲ ದಿನವೇ 'ವರಿಸು' ಆನ್​ಲೈನ್​ನಲ್ಲಿ ಲೀಕ್​, ಇದಕ್ಕೂ ರಶ್ಮಿಕಾನೇ ದೂಷಿಸ್ತಾರೆ ನೆಟ್ಟಿಗರು!

ವಿವಾದಕ್ಕೆ ಗುರಿಯಾಗಿರುವ ರಶ್ಮಿಕಾ ಮಂದಣ್ಣನವರಿಂದಾಗಿ ವರಿಸು ಚಿತ್ರಕ್ಕೆ ಪೆಟ್ಟು ಬೀಳುತ್ತದೆ ಎಂದುಕೊಂಡರೆ ಈಗ ಇನ್ನೊಂದು ಭಾರಿ ಶಾಕ್​ ಚಿತ್ರತಂಡಕ್ಕೆ ಎದುರಾಗಿದೆ... 
 

Varisu Full Movie Leaked online shock to film
Author
First Published Jan 13, 2023, 11:52 AM IST

ದಳಪತಿ ವಿಜಯ್​ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ವರಿಸು ಸಿನಿಮಾ ನಿನ್ನೆ (ಜ.11) ರಿಲೀಸ್​ ಆಗಿತ್ತು. ಆದರೆ ರಿಲೀಸ್​ ಆಗಿದ ದಿನವೇ ಭಾರಿ ಶಾಕ್​ ಕೊಟ್ಟು ಬಿಟ್ಟಿದೆ. ಭಾರಿ ಟ್ರೋಲ್​ಗೆ  ಒಳಗಾಗುತ್ತಿರುವ ರಶ್ಮಿಕಾ ಅವರು ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೊದಲೇ ಈ ಚಿತ್ರದ ಬಗ್ಗೆ ನೆಗೆಟಿವ್​ ಕಮೆಂಟ್​ಗಳ (Negative comments)ಸುರಿಮಳೆಯಾಗುತ್ತಿದ್ದ ಬೆನ್ನಲ್ಲೇ ಈಗ ಮತ್ತೆ ಚಿತ್ರತಂಡಕ್ಕೆ ಬರಸಿಡಿಲು ಬಡಿದಿದೆ. ಅದೇನೆಂದರೆ, ಚಿತ್ರ ಬಿಡುಗಡೆಯಾದ ದಿನವೆ ದಿನ ಆನ್​ಲೈನ್​ನಲ್ಲಿ ಲೀಕ್ ಆಗಿಬಿಟ್ಟಿದೆ. ಡೌನ್​ಲೋಡ್ ಆಪ್ಷನ್​ ಕೂಡ  ಲಭ್ಯವಾಗಿದ್ದು ಇದು ಚಿತ್ರಕ್ಕೆ ಭಾರಿ ಹೊಡೆತ ನೀಡಿದೆ.

ನಿನ್ನೆ ಈ ಚಿತ್ರದ ಬಿಡುಗಡೆಯಾದಾಗ ವಿಜಯ್​ ಅವರ ಅಭಿಮಾನಿಗಳು ಇದನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದರು. ತಮಿಳಿನ ಈ ಚಿತ್ರ ಕೆಲವೇ ದಿನಗಳಲ್ಲಿ  ಹಿಂದಿ ಹಾಗೂ ತೆಲುಗಿನಲ್ಲಿಯೂ ರಿಲೀಸ್ (Release) ಆಗುತ್ತಿದೆ ಎಂದು ಚಿತ್ರತಂಡ ಹೇಳಿತ್ತು. ತಮಿಳಿನ ಚಿತ್ರಕ್ಕೆ  ಒಳ್ಳೆಯ ರಿಸ್ಪಾನ್ಸ್​ ಸಿಕ್ಕಿತ್ತು. ಹಲವು ಹೇಳಿಕೆಗಳನ್ನು ನೀಡುತ್ತಾ, ಹಲವರ ಕೆಂಗಣ್ಣಿಗೆ ಗುರಿಯಾಗಿದ್ದ ರಶ್ಮಿಕಾ ಅವರಿಂದ ಈ ಚಿತ್ರಕ್ಕೆ ಹಿನ್ನಡೆಯಾಗುವುದಾಗಿ ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿತ್ತು. ಇದರ ನಡುವೆಯೇ, ವರಿಸು ಚಿತ್ರ ಮೊದಲ ದಿನ ಕರ್ನಾಟಕದಲ್ಲಿ 5.65 ಕೋಟಿ ಗಳಿಕೆ ಮಾಡಿತ್ತು. 

ಬ್ಯಾಕ್​ ಟು ಬ್ಯಾಕ್​ ಸೂಪರ್​ಹಿಟ್​ ಚಿತ್ರ ಕೊಟ್ಟಿರೋ ವಿಜಯ್​ಗೆ ಮುಳುವಾಗ್ತಾರಾ ರಶ್ಮಿಕಾ?

ಬೈಕಾಟ್​ ಬಿಸಿಯನ್ನೂ ಅನುಭವಿಸುತ್ತಿರುವ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಈ ಚಿತ್ರದಲ್ಲಿ ಸಿಕ್ಕಿರುವುದು ಕೇವಲ ಎರಡು ಸ್ಟಾರ್​ ಆಗಿದ್ದರಿಂದ ಚಿತ್ರ ತೋಪೆದ್ದು ಹೋಗುತ್ತಾ? ರಶ್ಮಿಕಾ ಅವರನ್ನು ಚಿತ್ರಕ್ಕೆ ಹಾಕಿಕೊಂಡು ನಿರ್ದೇಶಕರು ತಪ್ಪು ಮಾಡಿದ್ರಾ ಎಂದೆಲ್ಲಾ ಸುದ್ದಿಗಳು ಹರಿದಾಡುತ್ತಿದ್ದವು. ಆದ್ದರಿಂದ ಬಿಡುಗಡೆಗೆ ಮುನ್ನವೇ ಚಿತ್ರತಂಡಕ್ಕೆ ರಶ್ಮಿಕಾ ಅವರಿಂದಾಗಿ ಭಯವೂ ಶುರುವಾಗಿತ್ತು. ಇನ್ನೊಂದೆಡೆ ತಮಿಳಿಗರು ಕೂಡ ರಶ್ಮಿಕಾ ಅವರನ್ನು ಅಕ್ಸೆಪ್ಟ್​ ಮಾಡಿಕೊಳ್ಳುತ್ತಿಲ್ಲ ಎನ್ನುವ ಕಾರಣ ಚಿತ್ರ ಸಕ್ಸಸ್​ (success) ಆಗುವ ಬಗ್ಗೆ ಸಂದೇಹ ಶುರುವಾಗಿತ್ತು.

ಅದೇ ಇನ್ನೊಂದೆಡೆ, ವರಿಸು ಜೊತೆ  ತುನಿವು (Tunivu) ಸಿನಿಮಾ ಕೂಡ ರಿಲೀಸ್ ಆಗಿದ್ದು ಬಾಕ್ಸ್ ಆಫೀಸ್​ನಲ್ಲಿ ಯಾವ ಸಿನಿಮಾ ಹೆಚ್ಚು ಕಲೆಕ್ಷನ್​ ಮಾಡಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾದಿದ್ದರು. ಆದರೆ ಈಗ ಮತ್ತೊಂದು ಎಡವಟ್ಟು ಆಗಿಬಿಟ್ಟಿದೆ. ಇಡೀ ಚಿತ್ರ ಮೊದಲ ದಿನವೇ ಲೀಕ್​ (Leak) ಆಗಿಬಿಟ್ಟಿದೆ. ಸಿನಿಮಾ ಎಚ್​ಡಿ ಕಾಪಿ ಆನ್​​ಲೈನ್​ನಲ್ಲಿ ಲೀಕ್ ಆಗಿದೆ. ಟೊರೆಂಟೋ ಸೈಟ್​ಗಳಲ್ಲಿ ಇದು ಲಭ್ಯವಾಗಿದೆ. ಫಿಲ್ಮಿಝಿಲ್ಲಾ, ಮೂವಿರೂಲ್ಸ್, ಟೆಲಿಗ್ರಾಮ್, ತಮಿಳ್ ರಾಕರ್ಸ್​ ಸೇರಿ ಹಲವು  ಟೊರೆಂಟೋ ಸೈಟ್​​ಗಳಲ್ಲಿ ವರಿಸು  ಡೌನ್​ಲೋಡ್​ಗೆ (Varisu Download) ಚಿತ್ರ ಲಭ್ಯವಾಗಿದೆ. ಇದು ಸುದ್ದಿಯಾಗುತ್ತಿದ್ದಂತೆಯೇ, ಜನರು ವರಿಸು ಫ್ರೀ ಡೌನ್​ಲೋಡ್, ವರಿಸು ಎಂಪಿ4 ಎಚ್​ಡಿ ಡೌನ್​ಲೋಡ್, ವರಿಸು ತಮಿಳ್ ರಾಕರ್ಸ್, ವರಿಸು ಟೆಲಿಗ್ರಾಂ ಲಿಂಕ್ಸ್, ವರಿಸು ಮೂವಿ ಫ್ರೀ ಎಚ್​ಡಿ ಡೌನ್​ಲೋಡ್, ವರಿಸು ಫ್ರೀ ಡೌನ್​ಲೋಡ್ (Varisu Free download) ಲಿಂಕ್ ಎಂಬೀ ಕೀ ವರ್ಡ್​ಗಳ ಮೂಲಕ ಹುಡುಕಾಟವನ್ನೂ ಶುರು ಮಾಡಿಬಿಟ್ಟಿದ್ದಾರೆ.
Mission majnu; ಮತ್ತೆ ಪಾಕಿಸ್ತಾನಿ ಯುವತಿ ಪಾತ್ರದಲ್ಲಿ ರಶ್ಮಿಕಾ; ಸಿದ್ದಾರ್ಥ್ ಜೊತೆ ಸಖತ್ ರೊಮ್ಯಾನ್ಸ್

ಆರಂಭದ ಲೆಕ್ಕಾಚಾರ ಗಮನಿಸಿದರೆ ವರಿಸು ಸಿನಿಮಾ ತುನಿವು ಸಿನಿಮಾವನ್ನು ಹಿಂದಿಕ್ಕಿ ಓಡುತ್ತಿತ್ತು. ಅದರೆ ಇದು ಉಚಿತವಾಗಿ ಆನ್​ಲೈನ್​ನಲ್ಲಿ ಸಿಗುತ್ತಿದೆ ಎಂಬ ಕಾರಣಕ್ಕೋ ಅಥವಾ ರಶ್ಮಿಕಾ ಮಂದಣ್ಣನವರ ಕಾರಣಕ್ಕೋ ಗೊತ್ತಿಲ್ಲ. ಎರಡನೇ ದಿನಕ್ಕೇ ವರಿಸು ಮುಗ್ಗರಿಸಿದೆ. ಎರಡನೇ ದಿನಕ್ಕೆ ಸುಮಾರು 300 ಶೋ (300 shows) ಕಳೆದುಕೊಂಡಿದೆ. ವರಿಸು ಬೆಂಗಳೂರಿನಲ್ಲಿ ಮೊದಲ ದಿನ  757 ಪ್ರದರ್ಶನಗಳನ್ನು ಪಡೆದುಕೊಂಡಿದ್ದರೆ,  ಎರಡನೇ ದಿನ ಸಿಕ್ಕಿರುವುದು  466 ಪ್ರದರ್ಶನ ಮಾತ್ರ. ಲೆಕ್ಕಾಚಾರ ನೋಡುವುದಾದರೆ  ದಿನದ ದಾಖಲೆಗಿಂತ 291 ಪ್ರದರ್ಶನಗಳನ್ನು ಕಳೆದುಕೊಂಡಿದೆ.  ಇನ್ನು ತುನಿವು  ಮೊದಲ ದಿನ  568 ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಪಡೆದುಕೊಂಡಿದ್ದರೆ,  ಎರಡನೇ ದಿನ  397 ಪ್ರದರ್ಶನಗಳನ್ನು ಪಡೆದುಕೊಂಡಿದೆ. ಎರಡನೆಯ ದಿನ ಷೋ ಪ್ರಮಾಣ ಕಡಿಮೆ ಇದ್ದರೂ ಲೆಕ್ಕಾಚಾರ ಮಾಡಿದರೆ ಇದು ಕಳೆದುಕೊಂಡಿರುವ ಷೋ ಪ್ರಮಾಣ, ವರಿಸುಗಿಂತ ಕಡಿಮೆ ಎಂದು ನೋಡಬಹುದು. ವರಿಸು ಚಿತ್ರದ ಮೊದಲ ದಿನದ ಕಲೆಕ್ಷನ್​ (Collection) ಕರ್ನಾಟಕದಲ್ಲಿ  5.65 ಕೋಟಿಯಾದ್ರೆ  ತುನಿವು ಸಿನಿಮಾ ಗಳಿಸಿದ್ದು 4.77 ಕೋಟಿ ರೂ. ಆದರೆ ಈಗ ಲೀಕ್​ ಆಗಿರುವ ಹಿನ್ನೆಲೆಯಲ್ಲಿ ವರಿಸುಗೆ ಭಾರಿ ಹೊಡೆತ ಬಿದ್ದಿದೆ. ಇದೆಲ್ಲಾ ರಶ್ಮಿಕಾ ಮಂದಣ್ಣ ಕಾಲ್ಗುಣ ಎಂದು ನೆಟ್ಟಿಗರು ಆಪಾದಿಸುತ್ತಿದ್ದಾರೆ. 
 

Follow Us:
Download App:
  • android
  • ios