Asianet Suvarna News Asianet Suvarna News

ಅಳುವ ಬಗ್ಗೆ ರಶ್ಮಿಕಾಗೆ ಅಮ್ಮನ ಪಾಠ: ಇಲ್ಲಸಲ್ಲದ ಅಡ್ವೈಸ್​ ಕೊಟ್ಟು ಜನರ ತಲೆಕೆಡಿಸಬೇಡಿ ಎಂದ ಫ್ಯಾನ್ಸ್​!

ಎಲ್ಲರ ಎದುರು ಅತ್ತರೆ ಏನಾಗುತ್ತದೆ ಎಂದು ತಮ್ಮ ಅಮ್ಮ ಮಾಡಿದ ಪಾಠದ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದು, ಈ ಅಡ್ವೈಸ್​​ ಸ್ವಲ್ಪವೂ ಸರಿಯಿಲ್ಲ ಅಂತಿದ್ದಾರೆ ಫ್ಯಾನ್ಸ್​.
 

Rashmika Mandanna said about the lesson given by her mother about crying suc
Author
First Published Sep 19, 2023, 2:28 PM IST

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರಿಗೆ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್​ನಲ್ಲೂ ಬೇಡಿಕೆ ಹೆಚ್ಚಾಗಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾ ರಂಗವನ್ನು ರೂಲ್ ಮಾಡುತ್ತಿದ್ದಾರೆ.  ಹೀಗಾಗಿ ಮೂರು ಮೂರು ರಾಜ್ಯಗಳಲ್ಲಿ ಮನೆ ಮಾಡಿಕೊಂಡಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿ ಅಕ್ಟಿವ್ ಆಗಿರುವ ರಶ್ಮಿಕಾ ಮಂದಣ್ಣ ದಿನಕ್ಕೊಂದು ನೆಗೆಟಿವ್ ಟ್ರೋಲ್ ಎದುರಿಸುತ್ತಾರೆ. ಆದರೂ ಇದ್ಯಾವುದಕ್ಕೂ ಈಕೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ನ್ಯಾಷನಲ್ ಕ್ರಷ್​ ಎಂದೆನಿಸಿಕೊಂಡರೂ, ಕಾಂಟ್ರವರ್ಸಿ ಲೇಡಿ ಎಂದೇ ಕರೆಸಿಕೊಳ್ಳುತ್ತಿರುವವರು ನಟಿ ರಶ್ಮಿಕಾ ಮಂದಣ್ಣ (Rashmika Mandanna). ಬಾಲಿವುಡ್ ಅಂಗಳದ ನೀರು ಕುಡಿದ ಮೇಲೆ ಇದೀಗ ರಶ್ಮಿಕಾ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕದಿಯುತ್ತಿದ್ದಾರೆ.  ಅಭಿಮಾನಿಗಳ (Fans)ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಒಳ್ಳೊಳ್ಳೆ ಆಫರ್​ಗಳು ಸಿಗುತ್ತಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಯಾಂಡಲ್‌ವುಡ್‌, ಟಾಲಿವುಡ್‌, ಕಾಲಿವುಡ್‌, ಬಾಲಿವುಡ್‌... ಹೀಗೆ ವಿಭಿನ್ನ ಭಾಷಾ ಚಿತ್ರಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ ನಟಿ. ಸ್ಯಾಂಡಲ್‍ವುಡ್ ಸಾನ್ವಿ, ಟಾಲಿವುಡ್ ಶ್ರೀವಲ್ಲಿ (Tollywood Shreevalli) ಎಂದೆಲ್ಲಾ ಕರೆಸಿಕೊಳ್ತಿರೋ ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‍ನಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಅವರು ಅಲ್ಲಿನ ಸ್ಟಾರ್​ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ.   

 ವಿಜಯ್​ ದೇವರಕೊಂಡ ಅವರು ನಟಿ ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್ (Dating) ಮಾಡುತ್ತಿದ್ದಾರೆ ಎನ್ನುವ ಸುದ್ದಿ ತುಂಬಾ ಹಳೆಯದ್ದು. ಇವರಿಬ್ಬರು ಎಲ್ಲಿಯೇ ಹೋದರೂ ಹೆಸರು ಥಳಕು ಹಾಕಿಕೊಳ್ಳುತ್ತಿದೆ. ಆದರೆ ಈ ಸುದ್ದಿಯನ್ನು ರಶ್ಮಿಕಾ ಒಮ್ಮೆ ಅಲ್ಲಗಳೆದಿದ್ದರು.  ನಾನು, ವಿಜಯ್ ದೇವರಕೊಂಡ ಉತ್ತಮ ಸ್ನೇಹಿತರು. ನನಗೆ ಫ್ರೆಂಡ್ಸ್ ಸರ್ಕಲ್ ಇದೆ, ಅವರ ಜೊತೆಯೇ ನಾನು ಜಾಸ್ತಿ ಮಾತನಾಡ್ತೀನಿ, ತಿರುಗಾಡ್ತೀನಿ. ನಾವು ಎಲ್ಲಿಯೇ ಹೋದರೂ ನಮ್ಮಿಬ್ಬರನ್ನು ಟ್ಯಾಗ್ ಮಾಡಿ ಹೇಳಲಾಗುತ್ತದೆ. ಸಿನಿಮಾ ರಿಲೀಸ್ ಟೈಮ್‌ನಲ್ಲಿ ವಿಜಯ್, ರಶ್ಮಿಕಾ ಅನ್ನುತ್ತಾರೆ. ಸಿನಿಮಾ ರಿಲೀಸ್ ಟೈಮ್‌ನಲ್ಲಿ ಸಿನಿಮಾ ಬಗ್ಗೆಯೇ ಮಾತನಾಡಬೇಕು. ವರ್ಷಗಟ್ಟಲೇ ಚಿತ್ರಕ್ಕಾಗಿ ಕೆಲಸ ಮಾಡಲಾಗುತ್ತದೆ. ಅದರ ಕಥೆ ಏನಾಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇವರಿಬ್ಬರೂ ನ್ಯೂಯಾರ್ಕ್​ಗೆ ಹೋಗಿದ್ದರು ಎನ್ನುವ ಸುದ್ದಿ ಬಹಳ ಸದ್ದು ಮಾಡಿದ್ದ ಬಗ್ಗೆಯೂ ಮಾತನಾಡಿದ್ದ ರಶ್ಮಿಕಾ  ನಾವು 10 ಜನರು ಒಟ್ಟಿಗೆ ಟ್ರಿಪ್ ಹೋಗ್ತೀವಿ. ಈಗ ಎಲ್ಲರೂ ಸ್ನೇಹಿತರ ಜೊತೆ ಟ್ರಿಪ್ ಹೋಗ್ತಾರೆ. ಅದರಲ್ಲೇನಿದೆ ಎಂದಿದ್ದರು.

ಶೀಘ್ರವೇ ಗುಡ್​ ನ್ಯೂಸ್​ ಎಂದ ವಿಜಯ್​ ದೇವಕೊಂಡ: ಇದು ರಶ್ಮಿಕಾ ಕೈ ಅಲ್ವಲ್ಲಾ ಅಂತಿದ್ದಾರೆ ಫ್ಯಾನ್ಸ್!

ಇಂತಿಪ್ಪ ರಶ್ಮಿಕಾ ಅವರು ಈಗ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಸಮಾಜದ ಎದುರು ಅತ್ತರೆ ಆಗುವ ದುಷ್ಪರಿಣಾಮದ ಕುರಿತು ಅಮ್ಮ ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾರೆ.  ನೀನು ಯಾರ ಮುಂದೂ ಅಳಲು ಹೋಗಬೇಡ. ಅತ್ತರೆ ಜನರ ಮುಂದೆ ನೀನು ಚಿಕ್ಕವಳಾಗ್ತಿಯಾ. ಏನೇ ಸರಿ ಇಲ್ಲ ಎಂದು ಎನಿಸಿದರೂ ಸರಿ ಇದ್ದವರ ಹಾಗೆ ವರ್ತಿಸು. ಯಾರ ಮುಂದೆಯೂ ದುಃಖ ತೋಡಿಕೊಳ್ಳಲು ಹೋಗಬೇಡ. ದುಃಖ ತೋಡಿಕೊಂಡರೆ ಅವರು ನೋಡುವ ರೀತಿಯೇ ಬದಲಾಗುತ್ತದೆ ಎಂದು ತಮ್ಮ ಅಮ್ಮ ಬಾಲ್ಯದಲ್ಲಿ ಹೇಳಿರುವ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ತಾವು ಬಾಲ್ಯದಲ್ಲಿ ಒಮ್ಮೆ ಅಳುತ್ತಾ ಅಮ್ಮನ ಎದುರು ಹೋದಾಗ ಅಮ್ಮ ಈ ಪಾಠ ಮಾಡಿದ ಬಗ್ಗೆ ನಟಿ ಹೇಳಿದ್ದಾರೆ. ಚಿಕ್ಕಪುಟ್ಟ ಸಮಸ್ಯೆಗಳಿಗೆ ಅಮ್ಮನ ಬಳಿ ಹೋಗಿ ದೂರುತ್ತಿದ್ದೆ. ಆಗ ಅಮ್ಮ ಏನೇ ಬಂದರೂ ಯಾರ ಎದುರೂ ಅಳಬೇಡ. ನಿನಗೆ ಬಂದಿರುವುದು ಜಗತ್ತಿನ ಅತಿ ದೊಡ್ಡ ಸಮಸ್ಯೆ ಎಂದು ಅಂದುಕೊಳ್ಳುವೆಯಾ? ಹಾಗೆ ವರ್ತಿಸಬೇಡ ಎಂದು ಪಾಠ ಮಾಡಿರುವುದಾಗಿ ಹೇಳಿದ್ದಾರೆ. 

ಆದರೆ ಕೆಲವೊಮ್ಮೆ ಅಳಬೇಕಾಗುತ್ತದೆ, ಅಳುವುದನ್ನು ತಡೆದುಕೊಂಡರೆ ಅದು ಸರಿಯಾದ ಕ್ರಮವಲ್ಲ. ನಿಮ್ಮ ಅಮ್ಮ ಹೇಳಿರುವುದು ತಪ್ಪು ಎಂದು ಹಲವರು ಕಮೆಂಟ್​ ಮೂಲಕ ತಿಳಿಸಿದ್ದಾರೆ. ಇನ್ನು ಕೆಲವು ಕನ್ನಡಿಗರು ನಿಮ್ಮನ್ನು ಕನ್ನಡ ಚಿತ್ರರಂಗದಿಂದ ಬೈಕಾಟ್​  ಮಾಡಿದ್ರೆ ಆಗಲೂ ನೀವು ಅಳಲ್ವೆ ಅಂತ ಪ್ರಶ್ನಿಸಿದ್ದಾರೆ. ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾ, ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡುತ್ತಾರೆ ಎಂದು ಅನೇಕ ಬಾರಿ ಆರೋಪ ಕೇಳಿ ಬಂದಿದೆ. ಇದಕ್ಕೆ ಪೂರಕ ಎಂಬಂತೆ ರಶ್ಮಿಕಾ, ತಮಿಳು ಸಂದರ್ಶನವೊಂದರಲ್ಲಿ ನನಗೆ ಎಲ್ಲಾ ಭಾಷೆಯೂ ಕಷ್ಟ, ಕನ್ನಡ ಕೂಡಾ ಅಷ್ಟೇ ಎಂದಿದ್ದರು. ಬೇರೆ ಸಿನಿಮಾಗಳ ಬಗ್ಗೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಾಡಿ ಹೊಗಳುವ ರಶ್ಮಿಕಾ, ಕನ್ನಡ ಸಿನಿಮಾಗಳ ಬಗ್ಗೆ ಕಿಂಚಿತ್ತೂ ಮಾತನಾಡುವುದಿಲ್ಲ ಎಂಬ ಆರೋಪ ಇದ್ದು ಕಳೆದ ವರ್ಷ ಇವರನ್ನು ಕನ್ನಡ ಚಿತ್ರರಂಗ ಬೈಕಾಟ್​ ಮಾಡಬೇಕು ಎಂದು ದೊಡ್ಡ ಅಭಿಯಾನವೇ  ಶುರುವಾಗಿತ್ತು. ಅದನ್ನೇ ಈಗ ಟ್ರೋಲಿಗರು ಎಳೆದು ತಂದಿದ್ದಾರೆ. 
ಶಾರುಖ್​ ಖಾನ್​ ಜೊತೆ ನಟಿಸ್ತಿದ್ದಾರೆ ರಶ್ಮಿಕಾ ಮಂದಣ್ಣ! ಏನಿದು ಹೊಸ ವಿಷ್ಯ?

Latest Videos
Follow Us:
Download App:
  • android
  • ios