ನಟ ವಿಜಯ್​ ದೇವರಕೊಂಡ ಅವರು ಹುಡುಗಿಯ ಕೈ ಹಿಡಿದಿರುವ ಫೋಟೋ ಒಂದು ವೈರಲ್​ ಆಗಿದ್ದು, ಶೀಘ್ರವೇ ಹೊಸ ಸುದ್ದಿ ನೀಡಲಿದ್ದೇನೆ ಎಂದಿದ್ದಾರೆ. ಇದು ಯಾರ ಕೈ ಎನ್ನುವ ಚರ್ಚೆ ಶುರುವಾಗಿದೆ.  

ದಕ್ಷಿಣ ಭಾರತ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್​ ಎನಿಸಿರುವ ವಿಜಯ್​ ದೇವರಕೊಂಡ (Vijay Deverakonda) ಅವರು ಈಗ‘ಖುಷಿ’ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಸೆಪ್ಟೆಂಬರ್​ 1ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದ ಮೊದಲ ಹಾಡು ಕಳೆದ ಮೇ 9ರಂದು ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಿತ್ತು. ಹುಟ್ಟುಹಬ್ಬಕ್ಕೆ ಗಿಫ್ಟ್​ ಆಗಿ ನೀಡಲಾಗಿತ್ತು. ಅದಾದ ಬಳಿಕ ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. 'ಲೈಗರ್‌' ಸಿನಿಮಾ ಸೋಲಿನಿಂದ ನಟ ವಿಜಯ್ ದೇವರಕೊಂಡ ಇನ್ನು ಹೊರಬಂದಿಲ್ಲ. ಇದರ ಬೆನ್ನಲ್ಲೇ ಬಹು ನಿರೀಕ್ಷಿತ ಖುಷಿ (Khushi) ಹಾಡುಗಳನ್ನು ರಿಲೀಸ್​ ಮಾಡಲಾಗುತ್ತಿದೆ. ನಟಿ ಸಮಂತಾ ಮತ್ತು ವಿಜಯ್​ ದೇವರಕೊಂಡ ಅಭಿನಯದ ಖುಷಿ ಸಿನಿಮಾ ಲವ್​, ರೊಮ್ಯಾಂಟಿಕ್​ ಎಂಟರ್ಟೈನ ರ್ಚಿತ್ರವಾಗಿದ್ದು, ಶಿವ ನಿರ್ವಾಣ ಎಂಬುವರು ನಿರ್ದೇಶನ​ ಮಾಡಿದ್ದಾರೆ. ಲೈಗರ್ ಸಿನಿಮಾ ಸೋಲಿನ ಬಳಿಕ ಸಮಂತಾ ರುತ್​ ಪ್ರಭು ಜೊತೆ ಖುಷಿ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ ನಟ ವಿಜಯ್ ದೇವರಕೊಂಡ.

 ಇನ್ನೊಂದೆಡೆ, ವಿಜಯ್​ ದೇವರಕೊಂಡ ಅವರು ನಟಿ ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್ (Dating) ಮಾಡುತ್ತಿದ್ದಾರೆ ಎನ್ನುವ ಸುದ್ದಿ ತುಂಬಾ ಹಳೆಯದ್ದು. ಇವರಿಬ್ಬರು ಎಲ್ಲಿಯೇ ಹೋದರೂ ಹೆಸರು ಥಳಕು ಹಾಕಿಕೊಳ್ಳುತ್ತಿದೆ. ಆದರೆ ಈ ಸುದ್ದಿಯನ್ನು ರಶ್ಮಿಕಾ ಒಮ್ಮೆ ಅಲ್ಲಗಳೆದಿದ್ದರು. ನಾನು, ವಿಜಯ್ ದೇವರಕೊಂಡ ಉತ್ತಮ ಸ್ನೇಹಿತರು. ನನಗೆ ಫ್ರೆಂಡ್ಸ್ ಸರ್ಕಲ್ ಇದೆ, ಅವರ ಜೊತೆಯೇ ನಾನು ಜಾಸ್ತಿ ಮಾತನಾಡ್ತೀನಿ, ತಿರುಗಾಡ್ತೀನಿ. ನಾವು ಎಲ್ಲಿಯೇ ಹೋದರೂ ನಮ್ಮಿಬ್ಬರನ್ನು ಟ್ಯಾಗ್ ಮಾಡಿ ಹೇಳಲಾಗುತ್ತದೆ. ಸಿನಿಮಾ ರಿಲೀಸ್ ಟೈಮ್‌ನಲ್ಲಿ ವಿಜಯ್, ರಶ್ಮಿಕಾ ಅನ್ನುತ್ತಾರೆ. ಸಿನಿಮಾ ರಿಲೀಸ್ ಟೈಮ್‌ನಲ್ಲಿ ಸಿನಿಮಾ ಬಗ್ಗೆಯೇ ಮಾತನಾಡಬೇಕು. ವರ್ಷಗಟ್ಟಲೇ ಚಿತ್ರಕ್ಕಾಗಿ ಕೆಲಸ ಮಾಡಲಾಗುತ್ತದೆ. ಅದರ ಕಥೆ ಏನಾಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇವರಿಬ್ಬರೂ ನ್ಯೂಯಾರ್ಕ್​ಗೆ ಹೋಗಿದ್ದರು ಎನ್ನುವ ಸುದ್ದಿ ಬಹಳ ಸದ್ದು ಮಾಡಿದ್ದ ಬಗ್ಗೆಯೂ ಮಾತನಾಡಿದ್ದ ರಶ್ಮಿಕಾ ನಾವು 10 ಜನರು ಒಟ್ಟಿಗೆ ಟ್ರಿಪ್ ಹೋಗ್ತೀವಿ. ಈಗ ಎಲ್ಲರೂ ಸ್ನೇಹಿತರ ಜೊತೆ ಟ್ರಿಪ್ ಹೋಗ್ತಾರೆ. ಅದರಲ್ಲೇನಿದೆ ಎಂದಿದ್ದರು.

ಇದರ ಹೊರತಾಗಿಯೂ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಸುದ್ದಿ ಹರಡುತ್ತಲೇ ಇದೆ. ಇವರಿಬ್ಬರೂ ಒಂಟಿಯಾಗಿ ಸುತ್ತಾಡುವುದು ಕೂಡ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದ್ದಿದೆ. ಆದರೆ ಇದರ ನಡುವೆಯೇ, ಖುಷಿ ಚಿತ್ರದ ಸಮಯದಲ್ಲಿ ಖುಷಿ (Khushi) ಸಿನಿಮಾದ ನಟಿ ಸಮಂತಾ ರುತ್​ ಪ್ರಭು ತಮ್ಮ ಕ್ರಷ್​ ಎಂದು ಬಹಿರಂಗವಾಗಿ ವಿಜಯ್ ಹೇಳಿಕೊಂಡಿದದ್ದರು. ಸಮಂತಾ ನಿಮ್ಮ ಕ್ರಷ್​ ಆದ್ರೆ ರಶ್ಮಿಕಾ ಗತಿಯೇನು ಎಂದು ಫ್ಯಾನ್ಸ್ ಪ್ರಶ್ನಿಸಿದ್ದರು. ಆದರೂ ರಶ್ಮಿಕಾ ಜೊತೆಯೇ ಇವರ ವಿವಾಹ ಎನ್ನಲಾಗುತ್ತಿದೆ. 

ವೇದಿಕೆಯಲ್ಲೇ ಸಮಂತಾ, ದೇವರಕೊಂಡ ರೊಮ್ಯಾನ್ಸ್: ಸಾಕಪ್ಪಾ ಸಾಕು ಎಂದ ಫ್ಯಾನ್ಸ್​!

 ಇದರ ನಡುವೆಯೇ ಈಗ ವಿಜಯ್​ ದೇವರಕೊಂಡ ಅವರು ವಿಜಯ್ ದೇವರಕೊಂಡ ಹುಡುಗಿಯೊಬ್ಬಳ ಕೈ ಹಿಡಿದುಕೊಂಡಿರುವ ಫೋಟೋ ಶೇರ್​ ಮಾಡಿದ್ದಾರೆ. ಈ ಕೈ ಯಾರದ್ದು ಎನ್ನುವ ಬಗ್ಗೆ ಚರ್ಚೆ್ ಶುರುವಾಗಿದೆ. ಶೀಘ್ರದಲ್ಲೇ ಹೊಸ ಅಪ್​ಡೇಟ್ ಕೊಡುವುದಾಗಿ ವಿಜಯ್​ ಹೇಳಿಕೊಂಡಿದ್ದಾರೆ. ‘ಬಹಳಷ್ಟು ವಿಚಾರಗಳು ನಡೆಯುತ್ತಿವೆ. ಆದರೆ ಇದು ನಿಜವಾಗಿಯೂ ವಿಶೇಷ- ಶೀಘ್ರದಲ್ಲೇ ಘೋಷಿಸುತ್ತೇನೆ’ ಎಂದಿದ್ದಾರೆ. ಆದರೆ ಇದನ್ನು ನೋಡಿದರೆ ರಶ್ಮಿಕಾ ಕೈ ಥರ ಕಾಣಿಸುತ್ತಿಲ್ಲ ಎಂದು ಹಲವರು ಹೇಳುತ್ತಿದ್ದಾರೆ. ವಿಜಯ್ ದೇವರಕೊಂಡ ಶೀಘ್ರವೇ ಮದುವೆ ಆಗುತ್ತಾರೆ ಎನ್ನಿಸುತ್ತಿದೆ, ಆದರೆ ಯಾಕೋ ಇದು ರಶ್ಮಿಕಾ ಕೈ ಥರ ಇಲ್ಲ ಎಂದಿದ್ದರೆ, ಇನ್ನು ಕೆಲವರು ಇದು ಸಿನಿಮಾದ ಪ್ರಮೋಷನ್​ ಇರ್ಬೇಕು ಅನ್ನುತ್ತಿದ್ದಾರೆ. ಒಟ್ಟಿನಲ್ಲಿ ವಿಜಯ್​ ದೇವರಕೊಂಡ ಫ್ಯಾನ್ಸ್​ ತಲೆಗೆ ಹುಳು ಬಿಟ್ಟಿದ್ದಾರೆ. 

ಸಮಂತಾಳ 'ಖುಷಿ' ಚಿತ್ರಕ್ಕೆ ಪ್ರಚಾರ ಕೊಡಲು ಥೂ ಈ ಗಿಮಿಕ್ಕಾ ಎಂದು ನಾಗಚೈತನ್ಯ ಗರಂ!