Asianet Suvarna News Asianet Suvarna News

ಫೇಸ್ ಚೆನ್ನಾಗಿಲ್ಲ ಅಂತ ಅನೇಕ ಸಿನಿಮಾಗಳಿಂದ ರಿಜೆಕ್ಟ್ ಆದೆ, ತುಂಬಾ ಅಳ್ತಿದ್ದೆ; ರಶ್ಮಿಕಾ ಮಂದಣ್ಣ

ಕಿರಿಕ್ ಪಾರ್ಟಿ ಸಿನಿಮಾಗೂ ಮೊದಲು ಅನೇಕ ಸಿನಿಮಾಗಳಿಂದ ರಿಜೆಕ್ಟ್ ಆಗಿದ್ದೆ, ಸುಮಾರು 25 ಆಡಿಷನ್‌ಗಳನ್ನು ನೀಡಿದ್ದೇನೆ. ತುಂಬಾ ಅಳುತ್ತಿದ್ದೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. 

rashmika mandanna reveals she rejected from 25 films before kirik party sgk
Author
First Published Jan 23, 2023, 3:39 PM IST

ನಟಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದಿಂದ ಪ್ರಾರಂಭವಾದ ರಶ್ಮಿಕಾ ಸಿನಿಮಾ ಪಯಣ ಇದೀಗ ತೆಲುಗು, ತಮಿಳು ಮತ್ತು ಹಿಂದಿವರೆಗೂ ಸಾಗಿದೆ. ಇಂದು ರಶ್ಮಿಕಾ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ರಶ್ಮಿಕಾ ಸಿನಿಮಾ ಪಯಣ ಉತ್ತುಂಗಕ್ಕೆ ಏರುತ್ತಿರುವ ಜೊತೆಗೆ ಟ್ರೋಲ್ ಕೂಡ ರಶ್ಮಿಕಾ ಅವರನ್ನು ಬಿಡುತ್ತಿಲ್ಲ. ಅತೀ ಹೆಚ್ಚು ಟ್ರೋಲ್ ಆದ ಕಲಾವಿದರಲ್ಲಿ ರಶ್ಮಿಕಾ ಕೂಡ ಒಬ್ಬರೂ ಎಂದರೆ ತಪ್ಪಾಗಲ್ಲ. ಪದೇ ಪದೇ ಟ್ರೋಲಿಗರಿಗೆ ಆಹಾರವಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ, ಆಗ್ತಿದ್ದಾರೆ. ರಶ್ಮಿಕಾ ಅವರ ಕೆಲವು ಹೇಳಿಕೆಗಳು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗುತ್ತಿದ್ದು ಅವರ ವಿರುದ್ಧ ಕಿಡಿ ಕಾರುತ್ತಿದ್ದಾರೆ. 

ಈ ನಡುವೆ ರಶ್ಮಿಕಾ ಸಾಕಷ್ಟು ಸಂದರ್ಶನಗಳನ್ನು ನೀಡುತ್ತಿದ್ದಾರೆ. ಮಿಷನ್ ಮಜ್ನು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ರಶ್ಮಿಕಾ ಪ್ರಮೋಷನ್ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಅನೇಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಗಲಟ್ಟಾ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಕಿರಿಕ್ ಪಾರ್ಟಿ ಸಿನಿಮಾಗೂ ಮೊದಲು ಅನೇಕ ಸಿನಿಮಾಗಳಿಂದ ರಿಜೆಕ್ಟ್ ಆಗಿದ್ದೆ ಎಂದು ಹೇಳಿದ್ದಾರೆ. 

ಕಿರಿಕ್ ಪಾರ್ಟಿ ಸಿನಿಮಾಗೆ ಆಯ್ಕೆ ಆಗುವ ಮೊದಲು ಸುಮಾರು 25 ಸಿನಿಮಾಗಳಿಂದ ರಿಜೆಕ್ಟ್ ಆಗಿದ್ದೆ ಎಂದು ಬಹಿರಂಗ ಪಡಿಸಿದರು. ಸಿನಿಮಾ, ಸೀರಿಸ್ ಅಂತ ಅನೇಕ ಕಡೆ ಆಡಿಷನ್ ನೀಡಿದ್ದೆ. ಆದರೆ ರಿಜೆಕ್ಟ್ ಆಗುತ್ತಿದ್ದೆ. ಅನೇಕರು ಹೇಳಿದ್ದು ನಿನ್ನ ಫೇಸ್ ಚೆನ್ನಾಗಿ ಇಲ್ಲ ಅಂತ ಎಂದು ರಶ್ಮಿಕಾ ಹೇಳಿದ್ದಾರೆ. ನಾನು ಮನೆಗೆ ಹೋಗಿ ತುಂಬಾ ಅಳುತ್ತಿದ್ದೆ. ಬಳಿಕ 'ಗೆಳೆಯರೇ ಗೆಳತಿಯರೇ' ಎನ್ನುವ ಸಿನಿಮಾಗೆ ಆಯ್ಕೆಯಾದೆ ಟ್ರೇನಿಂಗ್ ಕೂಡ ಹೋದೆ. ಆದರೆ ಆ ಸಿನಿಮಾ ಆರಂಭನೇ ಆಗಿಲ್ಲ. ಬಳಿಕ ಓದಿನ ಕಡೆ ಗಮನ ಕೊಡುತ್ತಿದ್ದೆ.ನಂತರ ಕಿರಿಕ್ ಪಾರ್ಟಿ ಬಂತು. 

'ವಾರಿಸು' ಚಿತ್ರದಲ್ಲಿ ನನ್ನ ಪಾತ್ರಕ್ಕೆ ಮಹತ್ವವಿಲ್ಲ; ದಳಪತಿ ಸಿನಿಮಾಗೆ ಸಹಿ ಮಾಡಿದ ಕಾರಣ ಬಿಚ್ಚಿಟ್ಟ ರಶ್ಮಿಕಾ

'ಕಿರಿಕ್ ಪಾರ್ಟಿ ಸಿಕ್ಕಿದ್ದು ತುಂಬಾ ಖುಷಿ ಆಯ್ತು. ಕಿರಿಕ್ ಪಾರ್ಟಿ ರಿಲೀಸ್ ಆದ ದಿನ ಚಿತ್ರಮಂದಿರದ ಹೊರಗೆ ಎಷ್ಟು ದೊಡ್ಡ ಜನ ಸಮೂಹವಿತ್ತು. ಎಲ್ಲರೂ ಸಾನ್ವಿ ಎಂದು ಕೂಗುತ್ತಿದ್ದರು. ನನ್ನ ಪಾತ್ರದ ಹೆಸರು ಕೇಳಿ ಕೂಗುತ್ತಿದ್ದಿದ್ದು ತುಂಬಾ ಖುಷಿ ಆಯಿತು. ಅದು ಜಗತ್ತಿನ ಅತೀ ದೊಡ್ಡ ಫೀಲಿಂಗ್ ಆಗಿತ್ತು. ಕಿರಿಕ್ ಪಾರ್ಟಿ ಬಳಿಕ ಯಾವುದೇ ಸಿನಿಮಾ ಇಲ್ಲ ಎಂದರೆ ಮನೆಗೆ ಹೊಗಲು ನಿರ್ಧರಿಸಿದ್ದೆ. ಆದರೆ ಆ ಸಿನಿಮಾ ಬಳಿಕ ಅಂಜನಿ ಪುತ್ರ, ಚಮಕ್, ತೆಲುಗಿನಲ್ಲಿ ಚಲೋ ಮಾಡಿದೆ ಹಾಗೆ ಸಿನಿಮಾ ಜರ್ನಿ ಪ್ರಾರಂಭ ಆಯಿತು' ಎಂದು ಹೇಳಿದರು.   

ನಾನು ಕರ್ನಾಟಕದವಳು, ಹೈದರಾಬಾದ್‌ನಲ್ಲಿದ್ದೀನಿ ಮುಂದೆ ಕೇರಳಾಗೆ ಹೋಗಬೇಕು: ರಶ್ಮಿಕಾ ಮಂದಣ್ಣ

ಪುನೀತ್ ರಾಜ್ ಕುಮಾರ್ ಬಗ್ಗೆ ರಶ್ಮಿಕಾ ಮಾತು 

ಪುನೀತ್ ರಾಜ್ ಕುಮಾರ್ ಬಗ್ಗೆ ಮಾತನಾಡಿದ ರಶ್ಮಿಕಾ, ನಾನು ಅವರಿಗೆ ತುಂಬಾ ಪ್ರಶ್ನೆಗಳನ್ನು ಕೇಳುತ್ತಿದ್ದೆ. ನನ್ನ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ತೆಲುಗಿನಲ್ಲಿ ಚಲೋ ಮಾಡುತ್ತಿರುವ ಬಗ್ಗೆ ಹೇಳಿದೆ. ಆಗ ಪುನೀತ್ ಸರ್, ಹೋಗಿ ಒಳ್ಳೆಯದಾಗಲಿ, ಸಿನಿಮಾ ಮಾಡಿ ಎಲ್ಲರೂ ಹೆಮ್ಮೆ ಪಡುವಂತೆ ಮಾಡುತ್ತೀರಿ ಎಂದು ಹೇಳಿದ್ದರು. ಬಳಿಕ ಗೀತ ಗೋವಿಂದಂ ಬಗ್ಗೆಯೂ ಹೇಳಿದ್ದೆ. ಅವರ ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ. ಅವರ ಜೊತೆ ಮತ್ತೆ ಮಾತನಾಡಬೇಕು ಅಂತ ಅನಿಸುತ್ತಿದೆ. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. 

 

Follow Us:
Download App:
  • android
  • ios