ನಾನು ಕರ್ನಾಟಕದವಳು, ಹೈದರಾಬಾದ್‌ನಲ್ಲಿದ್ದೀನಿ ಮುಂದೆ ಕೇರಳಾಗೆ ಹೋಗಬೇಕು: ರಶ್ಮಿಕಾ ಮಂದಣ್ಣ
ಕೆಜಿಎಫ್ ಮತ್ತು ಕಾಂತಾರ ಸಿನಿಮಾ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ. ನಾನು ಪ್ರತಿಯೊಬ್ಬರ ಮನೆ ಮಗಳಾಗಬೇಕು....
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸೌತ್ ಸಿನಿಮಾಗಳ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ಶುರು ಮಾಡಿದ ಜರ್ನಿ, ನಡೆದು ಬಂದ ದಾರಿಯನ್ನು ಈಗ ನೆನಪಿಸಿಕೊಳ್ಳುತ್ತಿರುವುದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಅದರಲ್ಲೂ ಸಂದರ್ಶನವೊಂದರಲ್ಲಿ ರಿಷಬ್ ಶೆಟ್ಟಿ- ರಕ್ಷಿತ್ ಶೆಟ್ಟಿಯನ್ನು ನೆನಪಿಸಿಕೊಂಡು ಕನ್ನಡಿಗರ ಮನಸ್ಸಿಗೆ ಹತ್ತಿರವಾಗುತ್ತಿದ್ದಾರೆ.
ಸೌತ್ ಸಿನಿಮಾ ಇಷ್ಟವಾಗಲು ಕಾರಣ:
'ಸೌತ್ ಸಿನಿಮಾಗಳು ಸ್ಥಳೀಯ ಆಚಾರ- ವಿಚಾರ, ಸಂಸ್ಕ್ರೃತಿ ಸಂಪ್ರದಾಯವನ್ನು ಹೈಲೈಟ್ ಮಾಡುವ ಕಾರಣ ಜನರಿಗೆ ಬೇಗ ಕನೆಕ್ಟ್ ಆಗುತ್ತದೆ. ಇಲ್ಲಿ ಸಿನಿ ರಸಿಕರಿಗೆ ವರ್ಲ್ಡ್ ಸಿನಿಮಾಗಳನ್ನು ಹೆಚ್ಚಿಗೆ ನೋಡಿದ್ದಾರೆ. ಕೋವಿಡ್ ನಂತರ ಓಟಿಟಿಯಲ್ಲಿ ಸುಮಾರು ಸಿನಿಮಾಗಳು ಬಿಡುಗಡೆಯಾಗಿದೆ. ವರ್ಲ್ಡ್ ಸಿನಿಮಾ ಮಾತ್ರವಲ್ಲ ಹೊಸ ಕಥೆಗಳು ಜನರಿಗೆ ತಲುಪಿದೆ. ಪುಷ್ಪ, ಬಾಹುಬಲಿ, ಕೆಜಿಎಪ್ ಮತ್ತು ಕಾಂತಾರ ಸಿನಿಮಾ ಜನರಿಗೆ ಕನೆಕ್ಟ್ ಆಗುತ್ತದೆ. ಕೆಜಿಎಫ್‌ನಲ್ಲಿ ತಾಯಿ ಸೆಂಟಿಮೆಂಟ್ ಇದೆ, ಕಾಂತಾರದಲ್ಲಿ ಜನರಿಗೆ ಗೊತ್ತಿಲ್ಲದ ಕಲ್ಚರ್‌ನ ಪರಿಚಯಿಸಿದ್ದಾರೆ, ಪುಷ್ಪ ಸಿನಿಮಾದಲ್ಲಿ ಸ್ಥಳೀಯ ಭಾಷೆಗೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಜನರ ಮುಂದೆ ನೀವು ನೀಟ್ ಆಗಿ ರೆಡಿಯಾಗಿರುವ ಕಥೆಯನ್ನು ಮುಂದಿಟ್ಟಾಗ ಅದನ್ನು ಜನರು ಅಚರಿಸುತ್ತಾರೆ ಇದೇ ಭಾಷೆ ಆಗಿರಬೇಕು ಅಂತೇನಿಲ್ಲ. ಕ್ರಿಯೇಟಿವ್ ಆಗಿರುವುದನ್ನು ಜನರು ಇಷ್ಟ ಪಡುತ್ತಿದ್ದಾರೆ. ನಮಗೆ ಆಗಲೇ ಗೊತ್ತಿರುವುದನ್ನು ತೋರಿಸಿದ್ದರೆ ನಾವು ಯಾಕೆ ನೋಡಬೇಕು ಎಂದು ಜನರು ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ.' ಎಂದು ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ರಶ್ಮಿಕಾ ಮಾತನಾಡಿದ್ದಾರೆ.
ನನ್ನ ಮೇಲೆ ಕಲ್ಲು ಹಾಕಿ, ಫ್ಯಾಮಿಲಿ ಮೇಲಲ್ಲ; 8 ವರ್ಷದ ತಂಗಿ ಟ್ರೋಲ್ ಕಂಡು ರಶ್ಮಿಕಾ ಮಂದಣ್ಣ ಭಾವುಕ
ಕರ್ನಾಟಕ -ತೆಲಂಗಾಣ:
'ನನ್ನ ಕನ್ನಡ ಸಿನಿಮಾಗಳು ವರ್ಕ್ ಆಗಬೇಕು ನನ್ನ ತೆಲುಗು ಸಿನಿಮಾಗಳು ವರ್ಕ್ ಆಗಬೇಕ. ನಾನು ಸೌತ್ ಹುಡುಗಿ, ನಾನು ಕೂರ್ಗ್‌ನವಳು ಕರ್ನಾಟಕದವಳು ...ಹೈದರಾಬಾದ್‌ನಲ್ಲಿ ವಾಸಿಸುತ್ತಿರುವೆ ಕೆಲಸ ಬಂದ್ರೆ ಚೆನ್ನೈಗೆ ಪ್ರಯಾಣ ಮಾಡುವೆ. ಈಗ ನಾನು ಕೇರಳಾಗೆ ಹೋಗಬೇಕು. ಸೌತ್ ಇಂಡಸ್ಟ್ರಿಯ ಬೇಬಿ ನಾನು ಅನಿಸುತ್ತಿದೆ. ನನ್ನ ತಾಯಿ ತಮಾಷೆ ಮಾಡಲು ಸದಾ ಹೇಳುತ್ತಿರುತ್ತಾರೆ ನೀನು ನನ್ನ ಮಗಳು ಅಲ್ಲ ಈ ನೇಷನ್ ಮಗಳು ಎಂದು. ನನಗೆ ಪ್ರತಿಯೊಂದು ಭಾಷೆಯಲೂ ಅಭಿನಯಿಸಬೇಕು ಅನ್ನೋ ಆಸೆ ಇದೆ. ಜನರು ನನ್ನನ್ನು ನಾಯಿಕಿಯಾಗಿ ನೋಡಬಾರದು ಅವರ ಮನೆ ಮಗಳು ರೀತಿ ನೋಡಬೇಕು. ಇತ್ತೀಚಿಗೆ ನಾಟು ನಾಟು ಸಿನಿಮಾಗೆ ಆಕ್ಸರ್ ಬಂತು. ಇದನ್ನು ಪ್ರತಿಯೊಬ್ಬರು ಸಂಭ್ರಮಿಸಬೇಕು.' ಎಂದು ರಶ್ಮಿಕಾ ಹೇಳಿದ್ದಾರೆ.
ಬಾಕ್ಸ್ ಆಫೀಸ್ ವಿಫಲ:
'ಡಿಯರ್ ಕಾಮ್ರೇಡ್ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ವಿಫಲವಾದರೂ ಜನರಿಂದ ಮೆಚ್ಚಿಗೆ ಪಡೆದುಕೊಂಡಿದೆ. ಪ್ರತಿ ಸಲವೂ ಕಲೆಕ್ಷನ್ ಬಗ್ಗೆ ಚಿಂತಿಸಬಾರದು. ಸಿನಿಮಾ ಜನರಿಗೆ ಕನೆಕ್ಟ್ ಆಗಬೇಕು. ಈಗ ನಾನು ಮಾಡಿರುವ ಗುಡ್ ಬೈ ಸಿನಿಮಾವನ್ನು ಎಲ್ಲರೂ ನೋಡಲು ಆಗುವುದಿಲ್ಲ ಏಕೆಂದರೆ ಆ ರೀತಿ ಸಿನಿಮಾಗಳನ್ನು ನೋಡಲು ಬೇರೆ ಕ್ಯಾಟಗರಿ ಜನರಿರುತ್ತಾರೆ. ಗುಡ್ ಬೈ ಓಡಿಲ್ಲ ಆದರೆ 10-15 ವರ್ಷಗಳ ನಂತರ ಮತ್ತೆ ಈ ರೀತಿ ಸಿನಿಮಾ ಮಾಡಬೇಕು ಅನ್ನೋ ಆಲೋಚನೆ ಬರುವಂತೆ ಮಾಡಿಸುತ್ತದೆ. ಕಮರ್ಷಿಲ್ ಸಿನಿಮಾ ಮಾತ್ರವಲ್ಲ ಕ್ಯಾರೆಕ್ಟರ್ ಓರಿಯಂಟ್ ಸಿನಿಮಾಗಳನ್ನು ನಾನು ಮಾಡುತ್ತಿರುವೆ' ಎಂದಿದ್ದಾರೆ.