Asianet Suvarna News Asianet Suvarna News

ರಣವೀರ್ ಸಿಂಗ್ ಜತೆ 'ಬಿಗ್ ಬಾಸ್' ಅರವಿಂದ್ ಕೆಪಿ ಫೋಟೋ; ಏನಿದು ಹೊಸ ಸೆನ್ಸೇಷನ್!

Bigg Boss Kannada 9 fame actor Aravind KP shares photo with Ranveer Singh, who met in an Event recently.ಬಿಗ್ ಬಾಸ್ ಕನ್ನಡ , ಸೀಸನ್ 9 ರ ರನ್ನರ್ ಅಪ್ ಅರವಿಂದ್ ಕೆಪಿ, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಾವು ಇತ್ತೀಚೆಗೆ ಭೇಟಿಯಾದ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. 
 

Bigg Boss Kannada 9 fame Aravind KP shares photo with Ranveer Singh
Author
First Published Sep 27, 2023, 4:10 PM IST

ಬಿಗ್ ಬಾಸ್ ಕನ್ನಡ , ಸೀಸನ್ 9 ರ ರನ್ನರ್ ಅಪ್ ಅರವಿಂದ್ ಕೆಪಿ (Aravind KP),ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಖುಷಿಯ ಕ್ಷಣವೊಂದನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಈವೆಂಟ್ ಒಂದರಲ್ಲಿ ಅರವಿಂದ್ ಅವರು ತಮ್ಮ ರೋಲ್ ಮಾಡೆಲ್ ನಟ ರಣವೀರ್ ಸಿಂಗ್ (Ranveer Singh) ಅವರನ್ನು ಬೇಟಿಯಾಗಿದ್ದಾರೆ. ನಟ ಅರವಿಂದ್ ಕೆಪಿ, ತಮ್ಮಿಷ್ಟದ ನಟ ರಣವೀರ್ ಸಿಂಗ್ ಭೇಟಿಯಾದ ಕ್ಷಣವನ್ನು ಫೋಟೋ ಸಮೇತ ಶೇರ್ ಮಾಡಿಕೊಂಡು ತಮ್ಮ ಅಭಿಮಾನಿಗಳಿಗೆ ಸಖತ್ ಥ್ರಿಲ್ ನೀಡಿದ್ದಾರೆ. 

ಅರವಿಂದ್ ಕೆಪಿ, ಭಾರತದ ಮೋಟಾರ್ ರೇಸ್ ಸ್ಪರ್ಧಿ ಕೂಡ ಹೌದು. 2005ರಲ್ಲಿಯೇ ಅವರು ಮೋಟಾರ್ ರೇಸ್‌ನಲ್ಲಿ ಪಾಲ್ಗೊಂಡಿದ್ದಾರೆ. ಕನ್ನಡದ ಬಿಗ್ ಬಾಸ್ ಸೀಸನ್-8 ರ ರನ್ನರ್ ಅಪ್ ಆಗಿರುವ ಅರವಿಂದ್ ಕೆಪಿ, ಬಳಿಕ ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. 'ನಾನು ಮತ್ತು ವರಲಕ್ಷ್ಮೀ' ಹೆಸರಿನ ಕನ್ನಡ ಚಿತ್ರದ  ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟ ಅರವಿಂದ್ ಕೆಪಿ, ಬಳಿಕ 'ಬೆಂಗಳೂರು ಡೇಸ್' ಎಂಬ ಮಲಯಾಳಂ ಚಿತ್ರದಲ್ಲಿ ಸಹ ನಟಿಸಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿರುವ ಸೆಲೆಬ್ರಿಟಿ ಮುದ್ದು ಮಕ್ಕಳು!

ಬಿಗ್ ಬಾಸ್ ಸಹ ಸ್ಪರ್ಧಿ ಮತ್ತು ಸ್ನೇಹಿತೆ ದಿವ್ಯಾ ಉರುಡಗ ಜತೆ 'ಅರ್ಧಂಬರ್ಧ ಪ್ರೇಮ ಕಥೆ ಚಿತ್ರದಲ್ಲಿ ಲೀಡ್ ರೋಲ್ ನಲ್ಲಿ ನಟ ಅರವಿಂದ ಕೆಪಿ ನಟಿಸಿದ್ದು, ಈ ಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದಾರೆ. ಈ ಚಿತ್ರವು ಈಗಾಗಲೇ ರಿಲೀಸ್ ಆಗಿದ್ದು ತಕ್ಕಮಟ್ಟಿಗೆ ಸೌಂಡ್ ಸಹ ಮಾಡಿದೆ. ಒಟ್ಟಿನಲ್ಲಿ, ಇದೀಗ ಈವೆಂಟ್ ಒಂದರಲ್ಲಿ ತಮ್ಮ ಮೆಚ್ಚಿನ ನಟ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅವರನ್ನು ಭೇಟಿಯಾಗಿ ಅರವಿಂದ್ ಕೆಪಿ, ಸೋಷಿಯಲ್ ಮೀಡಿಯಾ ಮೂಲಕ ಮತ್ತೊಮ್ಮೆ ಸುದ್ದಿಗೆ ಸಿಕ್ಕಿದ್ದಾರೆ. 

ನಾನು ಬದುಕಿದ್ದರೆ ಮತ್ತೆ ನಿಮ್ಮ ಸೇವೆ ಮಾಡುತ್ತೇನೆ; ಇಲ್ಲದಿದ್ದರೆ ಜೈ ಹಿಂದ್: ಸಲ್ಮಾನ್ ಖಾನ್!

 

 
 
 
 
 
 
 
 
 
 
 
 
 
 
 

A post shared by Aravind K P (@aravind_kp)

 

Follow Us:
Download App:
  • android
  • ios