ರಾಮಾಚಾರಿಯ ಹುಚ್ಚು ಪ್ರೇಮಿ ದೀಪಾಗೆ ರಿಯಲ್ ಲೈಫಲ್ಲಿ ಐಪಿಎಸ್ ಆಗೋ ಕನಸಂತೆ
ಮಾವನ ಮಗನಾದ ರಾಮಾಚಾರಿಯನ್ನು ತುಂಬಾನೆ ಪ್ರೀತಿಸುತ್ತಿರುವ, ಮದುವೆಯಾದರೆ ಅವನನ್ನೇ ಆಗೋದು ಎಂದು ಪಟ್ಟು ಹಿಡಿದು ಕುಳಿತಿರುವ ದೀಪಾ ರಿಯಲ್ ಲೈಫ್ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್‌ನಲ್ಲಿ ಮಾವ ಮಾವ ಎನ್ನುತ್ತಾ ರಾಮಾಚಾರಿಯ ಬೆನ್ನು ಬಿದ್ದಿರುವ ದೀಪಾ ಪಾತ್ರಧಾರಿ ಈಗ ಮನೆಮಾತಾಗಿದ್ದಾರೆ. ಈ ಪಾತ್ರದಲ್ಲಿ ಮಿಂಚುತ್ತಿರುವ ನಟಿಯ ನಿಜವಾದ ಹೆಸರು ಅಭಿಜ್ಞಾ ಭಟ್ (Abhijna Bhat).
ಅಭಿಜ್ಞಾ ಭಟ್ ಗೆ ಕಿರುತೆರೆ ಹೊಸದೇನಲ್ಲ. ಇವರು ಮೊದಲಿಗೆ 2018ರಲ್ಲಿ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟರು, ನಂತರ ಕಾಮಿಡಿ ವಿತ್ ಕುಕ್ಕು ಎನ್ನುವ ರಿಯಾಲಿಟಿ ಶೋದಲ್ಲೂ (Relaity show) ಭಾಗವಹಿಸಿದ್ದರು.
ರಾಮಾಚಾರಿ ಮೊದಲ ಸೀರಿಯಲ್
ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದ ಅಭಿಜ್ಞಾಗೆ ರಾಮಾಚಾರಿ (Ramachari) ಮೊದಲ ಸೀರಿಯಲ್. ಮೊದಲ ಬಾರಿಗೆ ದೀಪಾ ಪಾತ್ರಕ್ಕೆ ಆಡಿಶನ್ ಕೊಟ್ಟು, ಅದಕ್ಕೆ ಆಯ್ಕೆ ಕೂಡ ಆಗಿದ್ದರು. ಪಾತ್ರದ ಬಗ್ಗೆ ತುಂಬಾನೆ ಖುಷಿ ಇದೆ ಈ ನಟಿಗೆ.
ರಾಧಿಕಾ ಪಂಡಿತ್ ಪಾತ್ರ
ಅಭಿಜ್ಞಾ ನೆಚ್ಚಿನ ನಟಿ ರಾಧಿಕಾ ಪಂಡಿತ್ (Radhika Pandit) ಅಂತೆ. ಅವರು ಹುಡುಗರು ಸಿನಿಮಾದಲ್ಲಿ ಮಾಡಿದಂತಹ ಪಾತ್ರಕ್ಕೆ ಹೋಲಿಕೆಯಾಗುವ ಪಾತ್ರ ರಾಮಾಚಾರಿಯ ದೀಪಾ ಪಾತ್ರ. ಹಾಗಾಗಿ, ಅದೇ ರೀತಿಯ ಪಾತ್ರ ಮಾಡೋದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ ನಟಿ.
ಮಾಡರ್ನ್ ಬೆಡಗಿ
ಸೀರಿಯಲ್ ನಲ್ಲಿ ಲಂಗ, ದಾವಣಿ ಹಾಕಿ ಸಿಂಪಲ್ ಆಗಿ ಕಾಣುವ ದೀಪಾ ರಿಯಲ್ ಲೈಫಲ್ಲಿ ಸಕ್ಕತ್ ಸ್ಟೈಲಿಶ್. ಇವರ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೂಟ್ ನ ಹಲವಾರು ಫೋಟೋಗಳನ್ನು ನೀವು ಕಾಣಬಹುದು.
ಐಪಿಎಸ್ ಆಗೋ ಕನಸು
ಸೀರಿಯಲ್ ನಲ್ಲಿ ರಾಮಾಚಾರಿಯನ್ನು ಮದುವೆಯಾಗೋ ಕನಸು ಕಾಣೋ ಅಭಿಜ್ಞಾಗೆ ರಿಯಲ್ ಲೈಫಲ್ಲಿ ಐಪಿಎಸ್ (IPS) ಆಗೋ ಬಹು ದೊಡ್ಡ ಕನಸು ಇದೆಯಂತೆ. ಅದಕ್ಕಾಗಿ ಸಕಲ ಸಿದ್ಧತೆಯನ್ನೂ ಮಾಡುತ್ತಿದ್ದಾರೆ. ಶೂಟಿಂಗ್ ಇಲ್ಲದಾಗ ದಿನಕ್ಕೆ 12 ರಿಂದ 14 ಗಂಟೆ ಓದ್ತಾರಂತೆ ಇವರು.
ಮಾಡೆಲ್
ಅಭಿಜ್ಞಾ ಭಟ್ ಮಾಡೆಲ್ (Model) ಕೂಡ ಹೌದು, ಮಲಬಾರ್ ಸೇರಿ ಹಲವಾರು ಆಭರಣ ಸಂಸ್ಥೆಗಳ ಜಾಹೀರಾತುಗಳಲ್ಲಿ ಮಾಡೆಲ್ ಆಗಿ ಕಾಣಿಸಿಕೊಂಡಿದ್ದಾರೆ. ಇಂದಿಗೂ ಸಹ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇಂಡಿಪೆಂಡೆಂಟ್ ಗರ್ಲ್
18ನೇ ವಯಸ್ಸಿನಿಂದಲೇ ಇಂಡಿಪೆಂಡೆಂಟ್ ಆಗಿ ಬೆಳೆದ ಹುಡುಗಿ ಅಭಿಜ್ಞಾ. ಅಲ್ಲಿಂದ ಯಾವುದಕ್ಕೂ ಅಪ್ಪ -ಅಮ್ಮನ ಬಳಿ ಕೈ ಚಾಚಿಲ್ಲವಂತೆ. ಜೊತೆಗೆ ಸೋಲೋ ಟ್ರಿಪ್ ಮಾಡೋ ಈ ಬೆಡಗಿ ಕೇದರನಾಥ್ ಸೇರಿ ಹಲವೆಡೆ ಸೋಲೊ ಟ್ರಿಪ್ ಕೂಡ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.