ಮಾಜಿ ಬಾಯ್‌ಫ್ರೆಂಡ್ಸ್ ಜೊತೆ ಸಂಪರ್ಕದಲ್ಲಿದ್ದೇನೆ, ಉತ್ತಮ ಸಂಬಂಧವಿದೆ...ಗುಟ್ಟು ರಿವೀಲ್ ಮಾಡಿದ ರಶ್ಮಿಕಾ
ಮಾಜಿ ಬಾಯ್‌ಫ್ರೆಂಡ್ಸ್ ಜೊತೆ ಇನ್ನೂ ಸಂಪರ್ಕದಲ್ಲಿದ್ದೇನೆ, ಇನ್ನೂ ಅವರ ಜೊತೆ ಉತ್ತಮ ಸಂಬಂಧ ಹೊಂದಿದ್ದೇನೆ ಎನ್ನುತ್ತಲೇ ನಟಿ ರಶ್ಮಿಕಾ ಮಂದಣ್ಣ ಓಪನ್ ಆಗಿಯೇ ಹೇಳಿದ್ದೇನು?

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ರಶ್ಮಿಕಾ ಮಂದಣ್ಣ ಕೆಲ ವರ್ಷಗಳಿಂದ ಸಕತ್ ಸದ್ದು ಮಾಡ್ತಿರೋ ನಟಿ. ಇದೀಗ ಅವರ ನಟನೆಯ ಸಿಕಂದರ್ ಚಿತ್ರ ರಿಲೀಸ್ ಆಗಬೇಕಿದೆ. ಇದಾಗಲೇ ನಟಿ ಛಾವಾ ಚಿತ್ರದ ಭರ್ಜರಿ ಯಶಸ್ಸಿನ ಮೂಡ್ನಲ್ಲಿದ್ದಾರೆ. ಅದೇ ಇನ್ನೊಂದೆಡೆ, ನಟ ದೀಕ್ಷಿತ್ ಶೆಟ್ಟಿ ಜೊತೆ ನಟಿಸಿರುವ ದಿ ಗರ್ಲ್ ಫ್ರೆಂಡ್ ತೆಲಗು ಚಿತ್ರ ತೆರೆಯ ಮೇಲೆ ಬರುತ್ತಿದೆ. ಇಂಟರೆಸ್ಟಿಂಗ್ ವಿಷ್ಯ ಎಂದರೆ ಇದರಲ್ಲಿ ನಾಯಕಿ ರಶ್ಮಿಕಾ ಮತ್ತು ನಾಯಕ ದೀಕ್ಷಿತ್ ಇಬ್ಬರೂ ಕನ್ನಡಿಗರು. ರಶ್ಮಿಕಾ ಅವರ ಹಾರ್ಡ್ ವರ್ಕಿಂಗ್ ಬಗ್ಗೆ ಇದಾಗಲೇ ದೀಕ್ಷಿತ್ ಕೂಡ ಮಾತನಾಡಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ತಾರೆಯೊಬ್ಬರು ಈ ಪರಿಯಲ್ಲಿ ಯಾವುದೇ ಹೆಡ್ವೇಟ್ ಇಲ್ಲದೇ, ಸಹನಟರ ಜೊತೆ ಇಷ್ಟೊಂದು ಖುಷಿಯಿಂದ ಮಾತನಾಡುವುದನ್ನು ಕಂಡು ಅಚ್ಚರಿಯಾಗುತ್ತದೆ ಎಂದಿದ್ದರು. ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಹಾರ್ಡ್ವರ್ಕರ್. ಬಹುಶಃ ಅವರಂಥ ಹಾರ್ಡ್ವರ್ಕಿಂಗ್ ನಟಿಯನ್ನು ನಾನು ನೋಡಿಲ್ಲ. ದಿನದ 24 ಗಂಟೆಗಳೂ ಬಿಜಿಯಾಗಿರುತ್ತಾರೆ. ಇಷ್ಟಾದರೂ ಅವರ ಮುಖದಲ್ಲಿ ಯಾವುದೇ ಸುಸ್ತು ಕಾಣುವುದಿಲ್ಲ. ಖುಷಿಯಿಂದಲೇ ಎಲ್ಲರ ಜೊತೆ ಬೆರೆಯುತ್ತಾರೆ ಎನ್ನುತ್ತಲೇ ರಶ್ಮಿಕಾ ಅವರು ಶೂಟಿಂಗ್ ಸೆಟ್ನಲ್ಲಿ ನಡೆದುಕೊಳ್ಳುವ ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದರು.
ಇಂತಿಪ್ಪ ರಶ್ಮಿಕಾ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅದರಲ್ಲಿ ನಟಿ, ತಮ್ಮ ಎಕ್ಸ್ಗಳ ಬಗ್ಗೆ ಎಂದರೆ ಮಾಜಿ ಬಾಯ್‌ಫ್ರೆಂಡ್ಸ್ ಬಗ್ಗೆ ಓಪನ್ ಆಗಿಯೇ ಮಾತನಾಡಿದ್ದಾರೆ. ಮಿರ್ಚಿ ಪ್ಲಸ್ ಯೂಟ್ಯೂಬ್ ಚಾನೆಲ್ಗೆ ನೀಡಿದ್ದ ಸಂದರ್ಶನದ ತುಣುಕು ಮತ್ತೀಗ ವೈರಲ್ ಆಗುತ್ತಿದೆ. ಇದರಲ್ಲಿ ರಶ್ಮಿಕಾ ಅವರು, ಈಗಲೂ ನನಗೆ ಮಾಜಿ ಬಾಯ್ಫ್ರೆಂಡಸ್ ಜೊತೆ ಸಂಪರ್ಕವಿದೆ. ಅವರ ಪೋಷಕರ ಜೊತೆಯೂ ಮಾತನಾಡುತ್ತೇನೆ ಎಂದಿದ್ದಾರೆ. 'ನನಗೆ ಎಕ್ಸ್ಗಳ ಬಗ್ಗೆ ಯಾವುದೇ ದ್ವೇಷ ಇಲ್ಲ. ಈಗಲೂ ಅವರ ಜೊತೆ ಸ್ನೇಹದಿಂದ ಇದ್ದೀನಿ. ಯಾವಾಗಲೂ ನಾನು ಅವರ ಕುಟುಂಬದವರನ್ನು ಭೇಟಿಯಾಗಲು ಇಷ್ಟಪಡುತ್ತೇನೆ. ಇದು ಒಳ್ಳೆಯ ಲಕ್ಷಣ ಅಲ್ಲ ಎನ್ನುವುದು ನನಗೆ ಗೊತ್ತಿದೆ. ಆದರೆ ಏನು ಮಾಡುವುದು, ನಾನು ಅವರ ಜೊತೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದೀನಿ. ಹಾಗಾಗಿ ಅದು ಒಳ್ಳೆಯದು' ಎಂದೇ ಹೇಳಿದರು.
ಬ್ಲಾಕ್ಬಸ್ಟರ್ 'ಛಾವಾ' ಶೂಟಿಂಗ್ ವೇಳೆ ಏನೇನಾಗಿತ್ತು? ಮೈ ಝುಂ ಎನ್ನುವ ಮೇಕಿಂಗ್ ವಿಡಿಯೋ ವೈರಲ್
ಇನ್ನು ನಟಿಯ ಈ ಎಕ್ಸ್ಗಳು ಯಾರು ಎನ್ನುವ ಕುತೂಹಲ ಸಹಜವಾಗಿ ಅಭಿಮಾನಿಗಳಿಗೆ ಇದ್ದೇ ಇದೆ. ಆದರೆ ಈ ಹಿಂದೆ ರಶ್ಮಿಕಾಗೆ, ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ಮೆಂಟ್ ಆಗಿತ್ತು. ಬಳಿಕ ಬ್ರೇಕ್ ಅಪ್ ಆಗಿತ್ತು. ರಶ್ಮಿಕಾ ಕಿರಿಕ್ ಪಾರ್ಟಿ ಮೂಲಕ ಸಿನಿಮಲೋಕಕ್ಕೆ ಪದಾರ್ಪಣೆ ಮಾಡಿದವರು. ಈ ಸಿನಿಮಾ ಯಶಸ್ಸಿನ ಬಳಿಕ ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ನಡುವೆ ಸ್ನೇಹ ಬೆಳೆದಿತ್ತು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಜುಲೈ 2017 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅದರ ಬಗ್ಗೆ ಸುದ್ದಿ ಕೂಡ ಆಗಿತ್ತು. ಆದರೆ ಕೆಲವೇ ತಿಂಗಳಲ್ಲಿ ನಿಶ್ಚಿತಾರ್ಥ ಮುರಿದುಬಿತ್ತು. ಕೊನೆಗೆ ನಟಿ ತೆಲುಗಿಗೆ ಎಂಟ್ರಿ ಕೊಟ್ಟರು. ಗೀತಾ ಗೋವಿಂದಂ ಸಿನಿಮಾ ಮೂಲಕ ಅಲ್ಲಿ ಮಿಂಚಿದರು. ಅದಾದ ಬಳಿಕ ಬೇರೆ ಬೇರೆ ಭಾಷೆಗಳಲ್ಲಿ ರಶ್ಮಿಕಾ ಜಾಕ್ಪಾಟ್ ಹೊಡೆದರು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಆಗಿ ನ್ಯಾಷನಲ್ ಕ್ರಷ್ ಕೂಡ ಆಗಿಬಿಟ್ಟರು.
ಅದಾದ ಬಳಿಕ ಅವರ ಹೆಸರು ತೆಲುಗು ನಟ ವಿಜಯ್ ದೇವೇರಕೊಂಡ ಜೊತೆಯೂ ಕೇಳಿಬಂದಿತ್ತು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಇದರ ಬಗ್ಗೆಯೂ ರಶ್ಮಿಕಾ ಮುಜುಗರವಿಲ್ಲದೇ ಮಾತನಾಡಿದ್ದಾರೆ. ನಮ್ಮ ಜೋಡಿ ತುಂಬಾ ಕ್ಯೂಟ್ ಆಗಿತ್ತು. ವಿಜಯ್ ಮತ್ತು ನಾನು ಅನೇಕ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಿದ್ದೇವೆ. ವೃತ್ತಿ ಜೀವನದ ಪ್ರಾರಂಭದಲ್ಲಿ ನಾವಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದೇವೆ. ಚಿತ್ರರಂಗ ಹೇಗಿದೆ ಅಂತ ತಿಳಿಯದೇ ಇದ್ದಾಗ ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ನಾವು ಫ್ರೆಂಡ್ಸ್ ಆಗಿದ್ದೀವಿ' ಎಂದಿದ್ದಾರೆ. ಇಷ್ಟೇ ಅಲ್ಲದೇ ಸಿನಿಮಾದಲ್ಲಿ ಸಾಮಾನ್ಯವಾಗಿ ಇರುವಂತೆ ರಶ್ಮಿಕಾ ಹೆಸರು ಕೂಡ ಕೆಲವರ ಜೊತೆ ಥಳಕು ಹಾಕಿಕೊಂಡದ್ದಿದೆ. ಆದರೆ ಇದೀಗ ನಟಿ ಯಾವ ಎಕ್ಸ್ ಬಗ್ಗೆ ಹೇಳಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳದ್ದು ಅಷ್ಟೇ.
ವಿಭಿನ್ನ ರೀತಿಯಲ್ಲಿ ಆಮ್ಲೇಟ್ ಮಾಡೋದ ಹೇಳಿಕೊಟ್ಟ ರಶ್ಮಿಕಾ- ಹೈದರಾಬಾದಿನೋ, ಕರ್ನಾಟಕನೋ ಕೇಳಿದ ಫ್ಯಾನ್ಸ್!