ರಶ್ಮಿಕಾ ಮಂದಣ್ಣ ಅವರ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ. ಬೆಂಗಳೂರು ಚಿತ್ರೋತ್ಸವಕ್ಕೆ ಬಾರದಿದ್ದುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ, ಆಮ್ಲೆಟ್ ಮಾಡುವ ವಿಡಿಯೋ ವೈರಲ್ ಆಗಿದೆ. ದೀಕ್ಷಿತ್ ಶೆಟ್ಟಿ ಜೊತೆಗಿನ "ದಿ ಗರ್ಲ್ ಫ್ರೆಂಡ್" ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ದೀಕ್ಷಿತ್ ಶೆಟ್ಟಿ, ರಶ್ಮಿಕಾ ಅವರ ಕೆಲಸದ ಬದ್ಧತೆಯನ್ನು ಹೊಗಳಿದ್ದಾರೆ. ಆದರೆ ಕನ್ನಡದ ಬಗ್ಗೆ ರಶ್ಮಿಕಾ ಅವರ ನಿಲುವು ಟೀಕೆಗೆ ಗುರಿಯಾಗಿದೆ.

ಸದ್ಯ ಛಾವಾ ಚಿತ್ರದ ಭರ್ಜರಿ ಯಶಸ್ಸಿನಲ್ಲಿದ್ದಾರೆ ಕನ್ನಡತಿ ರಶ್ಮಿಕಾ ಮಂದಣ್ಣ. ಆದರೆ ಸದಾ ಇವರ ಸುತ್ತಲೂ ಕಾಂಟ್ರವರ್ಸಿಗಳೇ ಸುತ್ತುತ್ತಿರುತ್ತವೆ. ಈ ಹಿಂದೆ ಛಾವಾ ಚಿತ್ರದ ಪ್ರೊಮೋಷನ್​ ಸಂದರ್ಭದಲ್ಲಿ ನಾನು ಹೈದರಾಬಾದಿನವಳು ಎಂದು ಹೇಳುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಹಿಂದೆಯೂ ಕೂಡ ಕನ್ನಡದ ಬಗ್ಗೆ ಮಾತನಾಡಿ, ಸಾಕಷ್ಟು ಟ್ರೋಲ್​ಗೆ ಒಳಗಾಗಿದ್ದರು ನಟಿ. ಇದೀಗ, ಬೆಂಗಳೂರಿನಲ್ಲಿ ನಡೆಯುತ್ತಿರುವ ಚಿತ್ರೋತ್ಸವಕ್ಕೆ ಈಕೆ ಬರುವುದಿಲ್ಲ ಎಂದು ನಟಿಯ ಟೀಮ್​ನವರು ಹೇಳಿರುವುದು ಕನ್ನಡಿಗರಿಗೆ ಮತ್ತಷ್ಟು ಸಿಟ್ಟು ತರಿಸಿದೆ. ಕಾಂಗ್ರೆಸ್ ಶಾಸಕ ರವಿ ಗಣಿಗ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ರಶ್ಮಿಕಾ ವಿರುದ್ಧ ಕಿಡಿ ಕಾರಿದ್ದರು. ರಶ್ಮಿಕಾ ಮಂದಣ್ಣ ಅವರ ತಂಡವು ನಮ್ಮ ಆಹ್ವಾನವನ್ನು ತಿರಸ್ಕರಿಸಿರುವುದಕ್ಕೆ ನಮ್ಮ ಬಳಿ ಪುರಾವೆ ಇದೆ, ಅವರಿಗೆ ಪಾಠ ಕಲಿಸಬೇಕು ಎಂದಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಅವರು ಕೂಡ ಈಚೆಗೆ ನಟಿಯ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಕೊಡಗಿನ ಹೆಣ್ಣುಮಗಳು ರಶ್ಮಿಕಾ ಮಂದಣ್ಣ ನಾನು ತೆಲುಗಿನ ಆಂಧ್ರಪ್ರದೇಶದ ಹೆಣ್ಣುಮಗಳು ಎಂದು ಹೇಳಿಕೆ ಕೊಡುವುದು ಖಂಡನೀಯ ಎಂದಿದ್ದರು.

ಇವೆಲ್ಲಾ ಕಾಂಟ್ರವರ್ಸಿ ನಡುವೆಯೇ, ಇದೀಗ ನಟಿ ಆಮ್ಲೇಟ್​ ಮಾಡುವುದನ್ನು ಹೇಳಿಕೊಟ್ಟಿರುವ ವಿಡಿಯೋ ವೈರಲ್​ ಆಗುತ್ತಿದೆ. ಹಳೆಯ ವಿಡಿಯೋ ಇದಾಗಿದ್ದು, ಇದರಲ್ಲಿ ನಟಿ ಯಾರೂ ಮಾಡದ ರೀತಿಯಲ್ಲಿ ಆಮ್ಲೇಟ್​ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಸಾಮಾನ್ಯವಾಗಿ ಈರುಳ್ಳಿ, ಟೊಮೆಟೊ, ಹಸಿಮೆಣಸು ಹೀಗೆಲ್ಲಾ ಹಾಕೆ ಆಮ್ಲೇಟ್​ ಮಾಡಲಾಗುತ್ತದೆ. ಆದರೆ ರಶ್ಮಿಕಾ ಮಾತ್ರ, ಪಾಲಕ್ ಸೊಪ್ಪು, ಅಣಬೆ ಸೇರಿದಂತೆ ಇನ್ನೂ ಏನೇನೋ ಹಾಕಿದ್ದಾರೆ! ಎಣ್ಣೆ, ತುಪ್ಪ ಸವರಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಬ್ಬಬ್ಬಾ ಇದು ಗೊತ್ತೇ ಇರಲಿಲ್ಲ ಎನ್ನುತ್ತಿದ್ದಾರೆ. ನಾವೂ ಟ್ರೈಮಾಡ್ತೀವಿ ಎಂದು ಕಮೆಂಟ್​ಗಳ ಸುರಿಮಳೆಯೇ ಬರುತ್ತಿದೆ.

ಮಧ್ಯರಾತ್ರಿ 2 ಗಂಟೆಗೆ ರಶ್ಮಿಕಾ ಮಂದಣ್ಣ... ಶೂಟಿಂಗ್​ ಸೆಟ್​ನ ಬಹುದೊಡ್ಡ ರಹಸ್ಯ ಬಿಚ್ಚಿಟ್ಟ ನಟ ದೀಕ್ಷಿತ್​ ಶೆಟ್ಟಿ

ಇನ್ನು ನಟಿಯ ಮುಂದಿನ ಚಿತ್ರದ ಕುರಿತು ಹೇಳುವುದಾದರೆ, ನಟ ದೀಕ್ಷಿತ್​ ಶೆಟ್ಟಿ ಜೊತೆ ನಟಿಸಿರುವ ದಿ ಗರ್ಲ್​ ಫ್ರೆಂಡ್​ ತೆಲಗು ಚಿತ್ರ ತೆರೆಯ ಮೇಲೆ ಬರುತ್ತಿದೆ. ಇಂಟರೆಸ್ಟಿಂಗ್​ ವಿಷ್ಯ ಎಂದರೆ ಇದರಲ್ಲಿ ನಾಯಕಿ ರಶ್ಮಿಕಾ ಮತ್ತು ನಾಯಕ ದೀಕ್ಷಿತ್​ ಇಬ್ಬರೂ ಕನ್ನಡಿಗರು. 'ನಾಗಿಣಿ' ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಗುರುತಿಸಿಕೊಂಡಿರುವ ಹಾಗೂ ದಿಯಾ ಸಿನಿಮಾದಿಂದ ಎಲ್ಲರ ಮನಗೆದ್ದಿರುವ ದೀಕ್ಷಿತ್ ಶೆಟ್ಟಿ ಇದರ ನಾಯಕರು. ಅದರಲ್ಲೂ 'ದಿಯಾ' ಅನ್ನೋ ಒಂದೇ ಒಂದು ಸಿನಿಮಾದಿಂದ ಹಲವು ಹುಡುಗಿಯರ ಫೇವರೇಟ್ ಎನಿಸಿಕೊಂಡಿದ್ರು ಈ ದೀಕ್ಷಿತ್ ಶೆಟ್ಟಿ. ಇದೀಗ ದೀಕ್ಷಿತ್ ಶೆಟ್ಟಿ ಹೀರೋ ಆಗಿರುವ 'ಕೆಟಿಎಂ' ಚಿತ್ರ ತೆರೆಗೆ ಸಿದ್ಧವಾಗಿದೆ. 

ಇದರ ನಡುವೆಯೇ ರಶ್ಮಿಕಾ ಮಂದಣ್ಣ ಜೊತೆಗಿನ ತಮ್ಮ ಪಯಣದ ಬಗ್ಗೆ ದೀಕ್ಷಿತ್​ ಅವರು ಈ ಹಿಂದೆ ಮಾತನಾಡಿದ್ದರು. ರಶ್ಮಿಕಾ ಅವರ ಕಮಿಟ್​ಮೆಂಟ್​ ಹೇಳಿದ್ದರು. ರಶ್ಮಿಕಾ ಮಂದಣ್ಣ ಅವರನ್ನು ಹಾಡಿ ಹೊಗಳಿದ್ದಾರೆ ದೀಕ್ಷಿತ್​. ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ತಾರೆಯೊಬ್ಬರು ಈ ಪರಿಯಲ್ಲಿ ಯಾವುದೇ ಹೆಡ್​ವೇಟ್​ ಇಲ್ಲದೇ, ಸಹನಟರ ಜೊತೆ ಇಷ್ಟೊಂದು ಖುಷಿಯಿಂದ ಮಾತನಾಡುವುದನ್ನು ಕಂಡು ಅಚ್ಚರಿಯಾಗುತ್ತದೆ ಎಂದಿದ್ದರು ದೀಕ್ಷಿತ್​. ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಹಾರ್ಡ್​ವರ್ಕರ್​. ಬಹುಶಃ ಅವರಂಥ ಹಾರ್ಡ್​ವರ್ಕಿಂಗ್​ ನಟಿಯನ್ನು ನಾನು ನೋಡಿಲ್ಲ. ದಿನದ 24 ಗಂಟೆಗಳೂ ಬಿಜಿಯಾಗಿರುತ್ತಾರೆ. ಇಷ್ಟಾದರೂ ಅವರ ಮುಖದಲ್ಲಿ ಯಾವುದೇ ಸುಸ್ತು ಕಾಣುವುದಿಲ್ಲ. ಖುಷಿಯಿಂದಲೇ ಎಲ್ಲರ ಜೊತೆ ಬೆರೆಯುತ್ತಾರೆ ಎನ್ನುತ್ತಲೇ ರಶ್ಮಿಕಾ ಅವರು ಶೂಟಿಂಗ್​ ಸೆಟ್​ನಲ್ಲಿ ನಡೆದುಕೊಳ್ಳುವ ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದರು. ಇದರ ಹೊರತಾಗಿಯೂ ಕನ್ನಡ, ಕನ್ನಡಿಗರ ಬಗ್ಗೆ ಮಾತ್ರ ಈ ಕೊಡಗಿನ ಬೆಡಗಿಗೆ ಯಾಕೋ ಅಸಮಾಧಾನ! 

ಸತ್ಯದ ದರ್ಶನ ಮಾಡಿಸಿದ್ರಾ ರಶ್ಮಿಕಾ ಮಂದಣ್ಣ? ಅಭಿಮಾನಿಗಳಿಂದ ಹರಿದುಬಂತು ಶ್ಲಾಘನೆಗಳ ಮಹಾಪೂರ

View post on Instagram