ಛಾವಾ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗಿದ್ದು, ಐತಿಹಾಸಿಕ ಸತ್ಯಗಳನ್ನು ತೆರೆದಿಡುವ ಪ್ರಯತ್ನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಕ್ಕಿ ಕೌಶಲ್ ಸಾಂಭಾಜಿ ಮಹಾರಾಜರ ಪಾತ್ರಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಚಿತ್ರದ ಮೇಕಿಂಗ್ ವಿಡಿಯೋ ವೈರಲ್ ಆಗಿದ್ದು, ಚಿತ್ರೀಕರಣದ ಕಷ್ಟಗಳು, ತಂತ್ರಜ್ಞಾನ ಬಳಕೆ ಹಾಗೂ ನಟರ ಪರಿಶ್ರಮವನ್ನು ತೋರಿಸುತ್ತದೆ. 140 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಭಾರತದಲ್ಲಿ 13.42 ಕೋಟಿ ಹಾಗೂ ಜಗತ್ತಿನಾದ್ಯಂತ 582.09 ಕೋಟಿ ಗಳಿಸಿದೆ.
ಒಂದು ಸಿನಿಮಾ ಬ್ಲಾಕ್ಬಸ್ಟರ್ ಎಂದು ಸಾಬೀತಾಗಬೇಕಾದರೆ ಅದರ ಹಿಂದೆ ಇಡೀ ಚಿತ್ರತಂಡ ಪಡುವ ಶ್ರಮ ಅಷ್ಟಿಷ್ಟಲ್ಲ. ಕೆಲವು ಸಂದರ್ಭದಲ್ಲಿ ಸಹಸ್ರಾರು ಕೋಟಿ ಸುರಿದರೂ, ನಟ-ನಟಿಯರು ಸಾಕಷ್ಟು ಪರಿಶ್ರಮ ಹಾಕಿದ್ದರೂ ಚಿತ್ರ ಹಿಟ್ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಆದರೆ ಹಲವಾರು ದಾಖಲೆಗಳನ್ನು ಮುರಿದು ಛಾವಾ ಚಿತ್ರ ಮುನ್ನುಗ್ಗುತ್ತಿದೆ. ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದೆ. ಐತಿಹಾಸಿಕ ಘಟನೆಯಿರುವ ಚಿತ್ರವೊಂದು ಈ ಪರಿಯಲ್ಲಿ ಸದ್ದು ಮಾಡಬಹುದು ಎಂದು ಬಹುಶಃ ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ದಶಕಗಳವರೆಗೆ ಮುಚ್ಚಿಟ್ಟ ಸತ್ಯದ ಪರದೆ ತೆರೆಯುವಂತೆ ಮಾಡಿರುವ ಛಾವಾ ಚಿತ್ರವನ್ನು ಪ್ರೇಕ್ಷಕರು ಅಪ್ಪಿಕೊಂಡಿದ್ದಾರೆ. ಕೆಲವು ದೇಶ ವಿದ್ರೋಹಿ ದೊರೆಗಳನ್ನೇ ರಾರಾಜಿಸುತ್ತಾ, ಅವರ ಗುಣಗಾನ ಮಾಡುತ್ತಾ ಪಠ್ಯಪುಸ್ತಕಗಳಲ್ಲಿಯೂ ಅವರನ್ನೇ ಹೊಗಳುತ್ತಾ ಮಕ್ಕಳ ತಲೆಯಲ್ಲಿಯೂ ಅವರ ಬಗ್ಗೆಯೇ ತುಂಬುತ್ತಾ, ನಿಜವಾದ ನಾಯಕರ ತ್ಯಾಗ-ಬಲಿದಾನವನ್ನು ಮರೆಮಾಚಿದವರ ತಲೆಗೆ ಹೊಡೆದಂತೆ ಬಂದಿರುವ ಛಾವಾ (ಮರಿ ಸಿಂಹ)ಚಿತ್ರದ ಮೇಕಿಂಗ್ ವಿಡಿಯೋ ಇದೀಗ ವೈರಲ್ ಆಗಿದೆ.
ಇದರಲ್ಲಿ ಪ್ರತಿಯೊಂದು ದೃಶ್ಯಗಳನ್ನು ಹೇಗೆ ಶೂಟ್ ಮಾಡಲಾಗಿದೆ ಎನ್ನುವುದನ್ನು ತೋರಿಸಲಾಗಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಸಾಂಬಾಜಿ ಮಹಾರಾಜನ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಕ್ಕಿ ಕೌಶಲ್ ಅವರು, ಈ ಪಾತ್ರದ ಒಳಹೊಕ್ಕು ತಮ್ಮನ್ನು ತಾವು ಅರ್ಪಿಸಿಕೊಳ್ಳಲು ಮಾಡಿರುವ ಸಾಧನೆ, ತ್ಯಾಗದ ಬಗ್ಗೆಯೂ ಇದರ ವಿವರಿಸಲಾಗಿದೆ. ಯಾವುದಾದರೊಂದು ವ್ಯಕ್ತಿಯ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ನಟನೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲಿಯೂ ಐತಿಹಾಸಿಕ ನಾಯಕರ ಪಾತ್ರವನ್ನು ಮಾಡುವಾಗ ಅವರ ನೋಟ, ನಡೆ, ವೇಷ-ಭೂಷಣ ಎಲ್ಲವೂ ಅವರದ್ದೇ ರೀತಿಯಲ್ಲಿ ಇರಬೇಕಾಗುತ್ತದೆ. ಸ್ವಲ್ಪ ಹೆಚ್ಚೂ ಕಡಿಮೆಯಾದರೂ ಇದು ಸಾಕಷ್ಟು ಟ್ರೋಲ್ಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಚಿತ್ರಗಳನ್ನು ಮಾಡಿದಾಗ ತಪ್ಪು ಹುಡುಕುವುದಕ್ಕಾಗಿಯೇ ಒಂದಷ್ಟು ವಿಕೃತ ಮನಸ್ಥಿತಿಗಳೂ ಇರುವ ಕಾರಣ, ಇತಿಹಾಸದ ಸತ್ಯವನ್ನು ಜನರ ಮುಂದೆ ಇಡುವಾಗ ಅದರ ಹಿಂದೆ ಪಡಬೇಕಿರುವ ಶ್ರಮ ಅಷ್ಟಿಷ್ಟಲ್ಲ.
ಸತ್ಯದ ದರ್ಶನ ಮಾಡಿಸಿದ್ರಾ ರಶ್ಮಿಕಾ ಮಂದಣ್ಣ? ಅಭಿಮಾನಿಗಳಿಂದ ಹರಿದುಬಂತು ಶ್ಲಾಘನೆಗಳ ಮಹಾಪೂರ
ಅದೇ ರೀತಿ, ವಿಕ್ಕಿ ಅವರು ಸಾಂಭಾಜಿ ಪಾತ್ರಕ್ಕಾಗಿ ವರ್ಷಗಟ್ಟಲೆ ನಡೆಸಿರುವ ತಯಾರಿ, ವೇಷ-ಭೂಷಣಗಳಿಗೆ ಅವರು ಪ್ರತಿನಿತ್ಯ ಮೀಸಲು ಇಟ್ಟಿರುವ ಸಮಯ, ಶೂಟಿಂಗ್ ಸಮಯದಲ್ಲಿ ಎದುರಾದ ಸಂಕಷ್ಟ, ಶೂಟಿಂಗ್ ಮಾಡುವಾಗ ಉಂಟಾದ ಗಾಯ ಜೊತೆಗೆ ಕೆಲವೊಂದು ತಂತ್ರಜ್ಞಾನ ಬಳಸಿ, ಹೇಗೆಲ್ಲಾ ಶೂಟಿಂಗ್ ಮಾಡಲಾಗಿದೆ ಎನ್ನುವ ಸಂಪೂರ್ಣ ಚಿತ್ರಣ ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಅನಿಕೇತ್ ನಿಕಮ್ ಕ್ರಿಯೇಷನ್ಸ್ ಈ ವಿಡಿಯೋ ಶೇರ್ ಮಾಡಿಕೊಂಡಿದೆ. 12 ನಿಮಿಷಗಳ ಈ ವಿಡಿಯೋದಲ್ಲಿ ಉಸಿರುಗಟ್ಟುವ ಕೆಲವೊಂದು ಸನ್ನಿವೇಶಗಳೂ ಇವೆ. ಅಬ್ಬಬ್ಬಾ ಈ ಪರಿಯಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದೆಯೇ? ವಿಕ್ಕಿ ಕೌಶಲ್ ಇಷ್ಟೊಂದು ಶ್ರಮ ವಹಿಸಿದ್ದಾರೆಯೇ ಎಂದು ಅನ್ನಿಸದೇ ಇರಲಾರದು.
ವಿಕ್ಕಿ ಕೌಶಲ್ ಹಾಗೂ ಅಕ್ಷಯ್ ಖನ್ನ ಅಭಿನಯ ಕಣ್ತುಂಬಿಕೊಂಡ ಪ್ರೇಕ್ಷಕರು ಕಳೆದು ಹೋಗಿದ್ದಾರೆ. ವಿಕ್ಕಿ ಕೌಶಲ್ ಈ ಸಿನಿಮಾದಲ್ಲಿ ಮರಾಠ ಕಿಂಗ್ ಛತ್ರಪತಿ ಸಾಂಬಾಜಿ ಮಹಾರಾಜ್ ಪಾತ್ರದಲ್ಲಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ಮಹಾರಾಣಿ ಯೆಸುಬಾಯಿ ಪಾತ್ರದಲ್ಲಿ ನಟಿಸಿದ್ದರೆ, ಅಕ್ಷಯ್ ಖನ್ನ ಮೊಘಲ್ ದೊರೆ ಔರಂಗಜೇಬನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಈ ಚಿತ್ರವು ಸುಮಾರು 140 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ಚಿತ್ರಿಸಲಾಗಿದೆ. ನಿನ್ನೆಯವರೆಗೆ ಛಾವಾ ಭಾರತದಲ್ಲಿ 13.42 ಕೋಟಿ ರೂಪಾಯಿ ಹಾಗೂ ಜಗತ್ತಿನಾದ್ಯಂತ 582.09 ಕೋಟಿ ರೂಪಾಯಿಗಳನ್ನು ಗಳಿಸಿದೆ.
ಮಗಳು ರಾಹಾಳ ಎಲ್ಲಾ ಫೋಟೋ ಡಿಲೀಟ್ ಮಾಡಿದ ಆಲಿಯಾ ಭಟ್! ಆ ಪುಸ್ತಕದಲ್ಲಿ ಇದ್ದದ್ದೇನು?

