ರಕ್ತ ಬಂದ್ರೆ ಒಪ್ಪಿಕೊಳ್ಳೋಕೆ ಆಗಲ್ಲ; ಮೊಟ್ಟೆ, ಹಾರ, ಕಲ್ಲು ಸುದೀಪ್ ಹೇಳಿಕೆಗೆ ರಶ್ಮಿಕಾ ರಿಯಾಕ್ಷನ್
ಮೊಟ್ಟೆ, ಹಾರ, ಕಲ್ಲು ಸುದೀಪ್ ಹೇಳಿಕೆಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಕಲ್ಲು ಎಸೆದಾಗ ರಕ್ತ ಬಂದರೆ ಒಪ್ಪಿಕೊಳ್ಳಲು ಆಗಲ್ಲ ಎಂದು ಹೇಳಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಸದಾ ಸುದ್ದಿಯಲ್ಲಿರುವ ನಟಿ. ವಿವಾದಗಳ ಮೂಲಕವೇ ರಶ್ಮಿಕಾ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ಅದರಲ್ಲೂ ಪದೇ ಪದೇ ಟ್ರೋಲಿಗರಿಗೆ ಆಹಾರವಾಗುತ್ತಾರೆ. ಕಳೆದ ವರ್ಷ ರಶ್ಮಿಕಾ ಸಿನಿಮಾಗಿಂತ ಹೆಚ್ಚಾಗಿ ವಿವಾದಗಳ ಮೂಲಕ ಸದ್ದು ಮಾಡಿದ್ದರು. ಮಾತು, ನಡವಳಿಕೆ ಹೀಗೆ ಅನೇಕ ಕಾರಣಗಳಿಗೆ ನೆಟ್ಟಿಗರು ರಶ್ಮಿಕಾ ವಿರುದ್ಧ ರೊಚ್ಚಿಗೇಳುತ್ತಿದ್ದಾರೆ. ರಶ್ಮಿಕಾ ವರ್ತನೆಯಿಂದ ಅವರನ್ನು ಕನ್ನಡ ಸಿನಿಮಾರಂಗದಿಂದ ಬ್ಯಾನ್ ಮಾಡಬೇಕು ಎನ್ನುವ ಮಾತು ಕೂಡ ಕೇಳಿ ಬಂದಿತ್ತು. ಈ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದರು. ಸಂದರ್ಶನವೊಂದರಲ್ಲಿ ಸುದೀಪ್ ಅವರಿಗೆ ರಶ್ಮಿಕಾ ಬಗ್ಗೆ ಪ್ರಶ್ನೆ ಎದುರಾಗಿತ್ತು. 'ಸಾರ್ವಜನಿಕ ಜೀವನಕ್ಕೆ ಬಂದರೆ ಹೂಮಾಲೆ, ಮೊಟ್ಟೆ, ಟೊಮೆಟೋ ಮತ್ತು ಕಲ್ಲು ಯಾವಾಗಲು ನಿಮ್ಮ ಬಳಿಗೆ ಬರುತ್ತದೆ, ಹ್ಯಾಂಡಲ್ ಮಾಡುವುದನ್ನು ಕಲಿಯಬೇಕು' ಎಂದು ಹೇಳಿದ್ದರು.
ಸುದೀಪ್ ಮಾತಿಗೆ ಇದೀಗ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚಿಗೆ ತೆಲುಗು ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಆಗ ಸುದೀಪ್ ಮಾತಿಗೂ ಪ್ರತಿಕ್ರಿಯೆ ನೀಡಿದ್ದಾರೆ. 'ನಾನು ಅದನ್ನು ಒಪ್ಪುತ್ತೇನೆ. ಏಕೆಂದರೆ ನಾವು ಸಾರ್ವಜನಿಕ ವ್ಯಕ್ತಿಗಳು. ಕಲ್ಲು ಎಸೆದು ನೋವಾದಾಗ, ರಕ್ತ ಬಂದಾಗಲೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. ರಶ್ಮಿಕಾ ಅವರ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹ್ಯಾಂಡಲ್ ಮಾಡೋದನ್ನ ಕಲೀಬೇಕು; ರಶ್ಮಿಕಾ ಮಂದಣ್ಣ ವಿವಾದಕ್ಕೆ ಕಿಚ್ಚ ಸುದೀಪ್ ರಿಯಾಕ್ಷನ್ ವೈರಲ್
ಸುದೀಪ್ ಹೇಳಿದ್ದೇನು?
'ನಾವು ಹ್ಯಾಂಡಲ್ ಮಾಡುವುದನ್ನು ಕಲಿಯಬೇಕು ಮತ್ತು ಮುಂದಕ್ಕೆ ಹೋಗ್ತಾ ಇರಬೇಕು. ನಾವು ಒಮ್ಮೆ ಸಾರ್ವಜನಿಕ ಜೀವನಕ್ಕೆ ಬಂದರೆ ಹೂಮಾಲೆ, ಮೊಟ್ಟೆ, ಟೊಮೆಟೋ ಮತ್ತು ಕಲ್ಲು ಯಾವಾಗಲು ನಿಮ್ಮ ಬಳಿಗೆ ಬರುತ್ತದೆ' ಎಂದು ಹೇಳಿದರು.
ರಶ್ಮಿಕಾ ವಿವಾದ
ಕಾಂತಾರ ರಿಲೀಸ್ ಆಗಿ ಕೆಲವೇ ದಿನಗಳಲ್ಲಿ ರಶ್ಮಿಕಾ ಮಂದಣ್ಣ ಸಿನಿಮಾ ನೋಡಿಲ್ಲ ಎಂದು ಹೇಳಿದ್ದರು. ಬಳಿಕ ಕಿರಿಕ್ ಪಾರ್ಟಿ ಪ್ರೊಡಕ್ಷನ್ ಹೆಸರು ಹೇಳದೆ ಸನ್ನೆ ಮೂಲಕ ಪ್ರತಿಕ್ರಿಯೆ ನೀಡಿದ್ದರು. ರಶ್ಮಿಕಾ ವರ್ತನೆ ವಿರುದ್ಧ ಕನ್ನಡ ಅಭಿಮಾನಿಗಳು ರೊಚ್ಚಿಗೆದಿದ್ದರು. ಹತ್ತಿದ ಏಣಿಯನ್ನು ಒದೆಯಬಾರದು ಎಂದು ಕನ್ನಡ ಅಭಿಮಾನಿಗಳು ಕಿಡಿ ಕಾರಿದ್ದರು. ರಶ್ಮಿಕಾ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರು. ಬಳಿಕ ರಿಷಬ್ ಶೆಟ್ಟಿ ಕೂಡ ಖಡಕ್ ತಿರುಗೇಟು ನೀಡುವ ಮೂಲಕ ರಶ್ಮಿಕಾ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಬಳಿಕ ಕಿಚ್ಚ ಸುದೀಪ್ ಕೂಡ ಮಾತನಾಡಿದ್ದರು. ಇದೀಗ ಸುದೀಪ್ ಮಾತಿಗೆ ರಶ್ಮಿಕಾ ತಿರುಗೇಟು ನೀಡಿದ್ದಾರೆ.
ಚಿತ್ರರಂಗದ ದಾರಿ ತೋರಿಸಿದ್ದೇ ರಕ್ಷಿತ್-ರಿಷಬ್; ಅಚ್ಚರಿ ಮೂಡಿಸಿದ ರಶ್ಮಿಕಾ ಮಾತು, ಬದಲಾವಣೆ ಯಾಕೆಂದ ನೆಟ್ಟಿಗರು
ದಿಢೀರ್ ಮಾತು ಬದಲಾಯಿಸಿದ ರಶ್ಮಿಕಾ
ರಶ್ಮಿಕಾ ರಿಷಬ್ ಮತ್ತು ರಕ್ಷಿತ್ ಶೆಟ್ಟಿ ಸಿನಿಮಾದಿಂದ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದು ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಈ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಆದರೀಗ ರಶ್ಮಿಕಾ ಮಾತು ಬದಲಾಯಿಸಿದ್ದಾರೆ. ಸಂದರ್ಶನದಲ್ಲಿ ರಶ್ಮಿಕಾ, ರಕ್ಷಿತ್ ಮತ್ತು ರಿಷಬ್ ಚಿತ್ರರಂಗದ ದಾರಿ ತೋರಿಸಿದವರು. ನನಗೆ ಅವಕಾಶ ಕೊಟ್ಟಿದ್ದು ಅವರೇ. ಇವತ್ತಿಗೂ ನಾನು ನನ್ನ ವೃತ್ತಿ ಜೀವನದಲ್ಲಿ ಅತ್ಯುತ್ತಮ ವ್ಯಕ್ತಿಗಳ ಜೊತೆ ಕೆಲಸ ಮಾಡಿದ್ದೀನಿ' ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು.