Asianet Suvarna News Asianet Suvarna News

ಹ್ಯಾಂಡಲ್ ಮಾಡೋದನ್ನ ಕಲೀಬೇಕು; ರಶ್ಮಿಕಾ ಮಂದಣ್ಣ ವಿವಾದಕ್ಕೆ ಕಿಚ್ಚ ಸುದೀಪ್ ರಿಯಾಕ್ಷನ್ ವೈರಲ್

ಕಿಚ್ಚ ಸುದೀಪ್, ರಶ್ಮಿಕಾ ಮಂದಣ್ಣ ಅವರ ವಿವಾದಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 

kiccha sudeep reacts to rashmika mandanna's controversy sgk
Author
First Published Jan 4, 2023, 2:46 PM IST

ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮತ್ತೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ, ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ಕಳೆದ ವರ್ಷ ರಶ್ಮಿಕಾ ಸಿನಿಮಾಗಿಂತ ಹೆಚ್ಚಾಗಿ ವಿವಾದಗಳ ಮೂಲಕ ಸದ್ದು ಮಾಡಿದ್ದರು. ಮಾತು, ನಡವಳಿಕೆ ಹೀಗೆ ಅನೇಕ ಕಾರಣಗಳಿಗೆ ನೆಟ್ಟಿಗರು ರಶ್ಮಿಕಾ ವಿರುದ್ಧ ರೊಚ್ಚಿಗೇಳುತ್ತಿದ್ದಾರೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ನೋಡಿಲ್ಲ, ಮೊದಲ ಪ್ರೊಡಕ್ಷನ್ ಹೆಸರು ಹೇಳದೆ ಅವಮಾನ ಮಾಡಿದ್ದರು ಎಂದು ರಶ್ಮಿಕಾ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ರಶ್ಮಿಕಾ ವಿವಾದಗಳ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. 

ಇತ್ತೀಚೆಗೆ ಸುದೀಪ್ ತೆಲುಗು ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ರಶ್ಮಿಕಾ ಮಂದಣ್ಣ ಅವರ  ವಿವಾದಗಳ ಬಗ್ಗೆಯೂ ಪ್ರಶ್ನೆ ಎದುರಾಗಿದೆ. ವಿವಾದ ಮತ್ತು ಟ್ರೋಲ್‌ಗಳ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. '15-20 ವರ್ಷಗಳ ಹಿಂದೆ ಹೋದರೆ ಆಗ ನಮ್ಮನ್ನು ನ್ಯೂಸ್ ಚಾನೆಲ್ ಗಳು ನಮ್ಮನ್ನು ಸಂದರ್ಶನ ಮಾಡುತ್ತಿದ್ದರು. ಆಗ ಅದು ತುಂಬಾ ಹೊಸದಾಗಿತ್ತು. ಆಧರೆ ಡಾ.ರಾಜ್ ಕುಮಾರ್ ಅವರ ಕಾಲಕ್ಕೆ ಹೋದರೆ ದೂರದರ್ಶನ ಮತ್ತು ಪತ್ರಿಕೆಗಳು ಬಿಟ್ಟರೆ ಬೇರೇನು ಇರ್ರಿಲ್ಲ' ಎಂದು ಹೇಳಿದ್ದಾರೆ. 

ತುಂಬಾ ಸ್ಟ್ರಾಂಗ್ ಲೇಡಿ; ಅನಾರೋಗ್ಯದಿಂದ ಬಳಲುತ್ತಿರುವ ಸಮಂತಾ ಬಗ್ಗೆ ಕಿಚ್ಚ ಸುದೀಪ್ ರಿಯಾಕ್ಷನ್

'ಅಂದೇ ತುಂಬಾ ಉತ್ತಮವಾಗಿತ್ತು ಎಂದು ನೀವು ಹೇಗೆ ಹೇಳುತ್ತೀರಿ. ನಾವು ಹ್ಯಾಂಡಲ್ ಮಾಡುವುದನ್ನು ಕಲಿಯಬೇಕು ಮತ್ತು ಮುಂದಕ್ಕೆ ಹೋಗ್ತಾ ಇರಬೇಕು. ನಾವು ಒಮ್ಮೆ ಸಾರ್ವಜನಿಕ ಜೀವನಕ್ಕೆ ಬಂದರೆ ಹೂಮಾಲೆ, ಮೊಟ್ಟೆ, ಟೊಮೆಟೋ ಮತ್ತು ಕಲ್ಲು ಯಾವಾಗಲು ನಿಮ್ಮ ಬಳಿಗೆ ಬರುತ್ತದೆ' ಎಂದು ಹೇಳಿದರು.   
ಕಾಂತಾರ ರಿಲೀಸ್ ಆಗಿ ಕೆಲವೇ ದಿನಗಳಲ್ಲಿ ರಶ್ಮಿಕಾ ಮಂದಣ್ಣ ಸಿನಿಮಾ ನೋಡಿಲ್ಲ ಎಂದು ಹೇಳಿದ್ದರು. ಹೀಗೆ ಹೇಳಿ ಕೆಲವೇ ದಿನಕ್ಕೆ ಕಿರಿಕ್ ಪಾರ್ಟಿ ಪ್ರೊಡಕ್ಷನ್ ಹೆಸರು ಹೇಳದೆ ಸನ್ನೆ ಮೂಲಕ ಪ್ರತಿಕ್ರಿಯೆ ನೀಡಿದ್ದರು. ರಶ್ಮಿಕಾ ವರ್ತನೆ ವಿರುದ್ಧ ಕನ್ನಡ ಅಭಿಮಾನಿಗಳು ರೊಚ್ಚಿಗೆದಿದ್ದರು. ಹತ್ತಿದ ಏಣಿಯನ್ನು ಒದೆಯಬಾರದು ಎಂದು ಕನ್ನಡ ಅಭಿಮಾನಿಗಳು ಕಿಡಿ ಕಾರಿದ್ದರು. ರಶ್ಮಿಕಾ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರು. ಬಳಿಕ ರಿಷಬ್ ಶೆಟ್ಟಿ ಕೂಡ ಖಡಕ್ ತಿರುಗೇಟು ನೀಡುವ ಮೂಲಕ ರಶ್ಮಿಕಾ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದೀಗ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. 

ಬಿಗ್ ಬಾಸ್ ಫಿನಾಲೆಯಲ್ಲಿ ಭಾವುಕರಾದ ಕಿಚ್ಚ, ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಯೆ ಕಾಣಿಕೆ!

 ಅಂದಹಾಗೆ ಸುದೀಪ್ ಮುಂದಿನ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ಸದ್ಯ ಕಿಚ್ಚ ಮುಂದಿನ ಸಿನಿಮಾದ ತಯಾರಿಯಲ್ಲಿದ್ದಾರೆ. ಆದರೆ ಯಾವ ಸಿನಿಮಾ ಎನ್ನುವುದು ಇನ್ನು ಬಹಿರಂಗವಾಗಿಲ್ಲ. ಕಿಚ್ಚನ ಮುಂದಿನ ಸಿನಿಮಾಗೆ ಯಾರು ಆಕ್ಷನ್ ಕಟ್ ಹೇಳುತ್ತಾರೆ, ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಾರೆ ಎಂದು ಕಾದು ನೋಡಬೇಕು. 
 

Follow Us:
Download App:
  • android
  • ios