Asianet Suvarna News Asianet Suvarna News

Complaint Filed Against Deepika Padukone: ದೀಪಿಕಾರಿಂದ ದುಬೈ ಉದ್ಯಮಿಗೆ ಕೋಟಿಗಟ್ಟಲೆ ವಂಚನೆ ?

  • Complaint filed against Deepika Padukone: ನಟಿಯ ವಿರುದ್ಧ ಕೇಸ್
  • 83 ಸಿನಿಮಾ ತಂದಿಟ್ಟ ಸಂಕಷ್ಟವೇನು ?
  • ವಿದೇಶಿ ಉದ್ಯಮಿಗೆ ಕೋಟಿಗಟ್ಟಲೆ ವಂಚನೆ ?
Ranveer Singhs 83 and Deepika Padukone in legal trouble ahead of the films release dpl
Author
Bangalore, First Published Dec 11, 2021, 1:59 PM IST
  • Facebook
  • Twitter
  • Whatsapp

ರಣವೀರ್ ಸಿಂಗ್ ಅಭಿನಯದ 83 ಸಿನಿಮಾ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಚಿತ್ರದ ಟ್ರೇಲರ್ ಆಗಿರಲಿ ಅಥವಾ ಹಾಡುಗಳಿರಲಿ, ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಎಲ್ಲರೂ ಚಿತ್ರದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಸಿನಿಮಾ ಮತ್ತೊಮ್ಮೆ ಸುದ್ದಿಯಾಗಿದೆ. ಆದರೆ ಈ ಬಾರಿ ಒಳ್ಳೆಯ ವಿಚಾರವಾಗಿ ಸುದ್ದಿ ಮಾಡಿಲ್ಲ. ಬದಲಾಗಿ ಸ್ವಲ್ಪ ನೆಗೆಟಿವ್ ಕಾರಣಗಳಿಂದ ಸಿನಿಮಾ ಸುದ್ದಿಯಾಗಿದೆ. ವಂಚನೆಗಾಗಿ ನಿರ್ಮಾಪಕರ ವಿರುದ್ಧ ದೂರು ದಾಖಲಿಸಿದ ನಂತರ ಸಿನಿಮಾ ಸಂಕಷ್ಟಕ್ಕೆ ಸಿಲುಕಿದೆ. ದೀಪಿಕಾ ಪಡುಕೋಣೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿರುವ ಕಾರಣ, ನಟಿ ದೀಪಿಕಾ ಪಡುಕೋಣೆ ಅವರನ್ನು ಕೂಡ ಈ ವಿವಾದಾತ್ಮಕ ಪ್ರಕರಣದಲ್ಲಿ ಸುದ್ದಿ ಮಾಡಲಾಗಿದೆ.

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ ಯುಎಇ ಮೂಲದ ಫೈನಾನ್ಸರ್ ತನ್ನ ಕಂಪನಿ 83 ಸಿನಿಮಾದಲ್ಲಿ ಹೂಡಿಕೆ ಮಾಡಿದ ನಂತರ ವಿಬ್ರಿ ಮೀಡಿಯಾ ಅವರು ಸುಮಾರು 16 ಕೋಟಿ ರೂ. ಗಳಿಕೆಯನ್ನು ಭರವಸೆ ನೀಡಿದ್ದರು ಎಂದು ಆರೋಪಿಸಿದ್ದಾರೆ. ಅವರಿಗೆ ಭರವಸೆ ನೀಡಿದಂತೆ ಲಾಭ ಸಿಗದ ಕಾರಣ ಉದ್ಯಮಿ ಅಂಧೇರಿಗೆ ಸಂಪರ್ಕ ಮಾಡಿದ್ದಾರೆ. ಮುಂಬೈನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮತ್ತು 83 ರ ತಯಾರಕರ ವಿರುದ್ಧ ದೂರು ದಾಖಲಿಸಿದ್ದಾರೆ.

83 Movie: ರಣವೀರ್ ಸಿಂಗ್ ಸೂಪರ್, ಕಪಿಲ್‌ ದೇವ್ ಫ್ಯಾಮಿಲಿಗೆ ದೀಪಿಕಾ ಓಕೆ ಆಗಿಲ್ಲ

ಅವರ ಹಣವನ್ನು ಸಿನಿಮಾ ನಿರ್ಮಾಪಕರಾದ ಕಬೀರ್ ಖಾನ್, ಸಾಜಿದ್ ನಾಡಿಯಾಡ್ವಾಲಾ ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಅನೇಕ ಒಪ್ಪಂದಗಳಿಗೆ ನಿರ್ದೇಶಿಸಲಾಗಿದೆ ಎಂದು ವರದಿಯಾಗಿದೆ. ಉದ್ಯಮಿಯಿಂದ ಯಾವುದೇ ಲಿಖಿತ ಒಪ್ಪಿಗೆಯನ್ನು ಪಡೆಯದೆ ರಣವೀರ್ ಸಿಂಗ್ ಅಭಿನಯದ 83 ರ ನಿರ್ಮಾಣಕ್ಕೆ ಹಣವನ್ನು ಬಳಸಲಾಗಿದೆ. ವಂಚನೆ ಮತ್ತು ಕ್ರಿಮಿನಲ್ ಪಿತೂರಿಯ ಆಧಾರದ ಮೇಲೆ 83 ರ ಎಲ್ಲಾ ನಿರ್ಮಾಪಕರ ವಿರುದ್ಧ ತಮ್ಮ ಕಕ್ಷಿದಾರರು ಕ್ರಿಮಿನಲ್ ದೂರು ದಾಖಲಿಸಿದ್ದಾರೆ ಎಂದು ವಕೀಲ ರಿಜ್ವಾನ್ ಸಿದ್ದಿಕಿ ತಮ್ಮ ಹೇಳಿಕೆಯಲ್ಲಿ ಹೇಳಿದ್ದಾರೆ.

83 ಅನ್ನು ಕಬೀರ್ ಖಾನ್ ನಿರ್ದೇಶಿಸಿದ್ದಾರೆ. ಇದು 1983 ರಲ್ಲಿ ವಿಶ್ವಕಪ್ ಗೆದ್ದ ಮಾಜಿ ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಆಧರಿಸಿದೆ. ಇದರಲ್ಲಿ ದೀಪಿಕಾ ಪಡುಕೋಣೆ ಕೂಡ ನಟಿಸಿದ್ದಾರೆ. ಅವರು ಕಪಿಲ್ ದೇವ್ ಅವರ ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 83 ಡಿಸೆಂಬರ್ 24, 2021 ರಂದು ತೆರೆಗೆ ಬರಲಿದೆ.

Film 83:ಟೀಮ್‌ ಇಂಡಿಯಾದ ಆಟಗಾರರ ಪಾತ್ರದಲ್ಲಿ ಯಾರಿದ್ದಾರೆ ನೋಡಿ!

83 ಸಿನಿಮಾ ಟ್ರೈಲರ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವಾರದ ಆರಂಭದಲ್ಲಿ ರಿಲೀಸ್ ಆದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಹರಿದುಬರುತ್ತಿದೆ. 83 ಸಿನಿಮಾ ತಂಡ ಟ್ರೈಲರ್ ಸಕ್ಸಸ್ ಬಗ್ಗೆ ಖುಷಿಯಾಗಿದ್ದಾರೆ. ಕ್ರಿಕೆಟ್ ಕುರಿತ ಸಿನಿಮಾ ಆಗಿರುವುದರಿಂದಲೂ ದೇಶಾದ್ಯಂತ ಜನರಿಂದ ಭಾರೀ ಮೆಚ್ಚುಗೆ ಗಳಿಸುತ್ತಿದ್ದೆ ಸಿನಿಮಾ ಟ್ರೈಲರ್. ಸಾಮಾನ್ಯ ಜನರು ಮಾತ್ರವಲ್ಲದೆ ಸೆಲೆಬ್ರಿಟಿಗಳೂ ಸಹ ಸಿನಿಮಾ ಟ್ರೈಲರ್ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಕಬೀರ್ ಖಾನ್ ನಿರ್ದೇಶನದ ಸಿನಿಮಾ ಕಪಿಲ್ ದೇವ್ ನೃತೃತ್ವದಲ್ಲಿ 1983ರಲ್ಲಿ ಭಾರತದ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಕುರಿತಾಗಿದೆ. ರಣವೀರ್ ಸಿಂಗ್ ಕಪಿಲ್ ದೇವ್ ಅವರ ಪಾತ್ರ ಮಾಡಿದರೆ, ಅವರ ನಿಜವಾದ ಪತ್ನಿ ದೀಪಿಕಾ ಪಡುಕೋಣೆ ಕಪಿಲ್ ದೇವ್ ಅವರ ಪತ್ನಿ ರೋಮಿ ಭಾಟಿಯಾ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ 83 ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಕನ್ನಡಿಗರಿಗೆ ಹತ್ತಿರವಾಗಲು ಮತ್ತೊಂದು ಕಾರಣವಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಅವತರಣಿಕೆಯನ್ನು ಬಿಡುಗಡೆ ಮಾಡುತ್ತಿದ್ದಾರೆ. 'ಇದು ಬಹಳ ಸಂತೋಷ ಮತ್ತು ಹೆಮ್ಮಯ ವಿಚಾರ. ಕಿಚ್ಚ ಸುದೀಪ್ (Kiccha Sudeep) ಅವರು ನಮ್ಮ ತಂಡದೊಂದಿಗೆ ಸೇರಿಕೊಂಡಿರುವುದರಿಂದ 83 ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ,'ಎಂದು ಕಬೀರ್ ಖಾನ್ ಹೇಳಿದ್ದಾರೆ. 

Follow Us:
Download App:
  • android
  • ios