MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • Film 83:ಟೀಮ್‌ ಇಂಡಿಯಾದ ಆಟಗಾರರ ಪಾತ್ರದಲ್ಲಿ ಯಾರಿದ್ದಾರೆ ನೋಡಿ!

Film 83:ಟೀಮ್‌ ಇಂಡಿಯಾದ ಆಟಗಾರರ ಪಾತ್ರದಲ್ಲಿ ಯಾರಿದ್ದಾರೆ ನೋಡಿ!

ರಣವೀರ್ ಸಿಂಗ್ (Ranveer Singh) ಅಭಿನಯದ '83' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸುಮಾರು 3 ನಿಮಿಷ 49 ಸೆಕೆಂಡುಗಳ ಈ ಟ್ರೇಲರ್‌ ಆಗಿದೆ. ಈ ಸಿನಿಮಾವು 1983 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ಗೆದ್ದ ಕಥೆಯನ್ನು ಆಧರಿಸಿದೆ.ಚಿತ್ರದಲ್ಲಿ ರಣವೀರ್ ಸಿಂಗ್ ಕಪಿಲ್ ದೇವ್ (Kapil Dev) ಪಾತ್ರವನ್ನು ನಿರ್ವಹಿಸುತ್ತಿದ್ದರೆ, ರಣವೀರ್ ಅವರ ಪತ್ನಿ ದೀಪಿಕಾ ಪಡುಕೋಣೆ (Deepika Padukone) ಅವರ ಪತ್ನಿ ರೋಮಿ ದೇವ್ (Romi Dev) ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ತಿಳಿಸೋಣ. 83 ರಲ್ಲಿ ಟೀಂ ಇಂಡಿಯಾದ ಉಳಿದ ಆಟಗಾರರ ಪಾತ್ರವನ್ನು ಯಾರು ನಿರ್ವಹಿಸುತ್ತಿದ್ದಾರೆ ಎಂಬುದನ್ನು ತಿಳಿಯಿರಿ.

3 Min read
Suvarna News
Published : Dec 02 2021, 11:16 PM IST| Updated : Dec 02 2021, 11:19 PM IST
Share this Photo Gallery
  • FB
  • TW
  • Linkdin
  • Whatsapp
114

ಕ್ರಿಕೆಟರ್‌  ಕೃಷ್ಣಮಾಚಾರಿ ಶ್ರೀಕಾಂತ್  ಪಾತ್ರವನ್ನು ನಟ ಜೀವಾ ನಟಿಸಿದ್ದಾರೆ : '83' ಚಿತ್ರ ಡಿಸೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಇದರೊಂದಿಗೆ 3ಡಿಯಲ್ಲಿಯೂ ಬಿಡುಗಡೆಯಾಗಲಿದೆ. 

214

ರವಿಶಾಸ್ತ್ರಿ ಪಾತ್ರವನ್ನು ನಟ ದೈರ್ಯ್‌ ಕರ್ವಾ ಮಾಡಲಿದ್ದಾರೆ: ದೇಶದ ಅತಿದೊಡ್ಡ ಸ್ಪೋರ್ಟ್ಸ್‌ ಡ್ರಾಮಾ ಎಂದು ಪರಿಗಣಿಸಲ್ಪಟ್ಟ '83' ಸಿನಿಮಾವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ 10 ಏಪ್ರಿಲ್ 2020 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣ ಅದರ ದಿನಾಂಕವನ್ನು ಮುಂದೂಡುತ್ತಲೇ ಬಂದಿತ್ತು


 

314

ನಟ ಆದಿನಾಥ್ ಕೊಠಾರೆ ದಿಲೀಪ್ ವೆಂಗ್‌ಸರ್ಕರ್ ಪಾತ್ರದಲ್ಲಿ : ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ವಿವಾಹದ ನಂತರ 83 ಚಿತ್ರವು ಜೊತೆಯಾಗಿ ತೆರೆಯ ಮೇಲಿನ ಮೊದಲ ಚಲನಚಿತ್ರವಾಗಿದೆ. ಇದರಲ್ಲಿ ರಣವೀರ್ ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪತ್ನಿ ರೋಮಿ ಭಾಟಿಯಾ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ. 

414

ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಆಗಿ ನಟ ಸಾಹಿಲ್ ಖಟ್ಟರ್: ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ಈ ಸಿನಿಮಾವು 1983 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ಗೆದ್ದ ಕಥೆಯನ್ನು ಆಧರಿಸಿದೆ. ಆಗ ಕಪಿಲ್ ದೇವ್ ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದರು. ರಣವೀರ್ ಸಿಂಗ್ ಅವರ ಈ ಸಿನಿಮಾದ ಮೂಲಕ ವಿಶ್ವಕಪ್‌ನ ನೆನಪುಗಳನ್ನು ಮರುಕಳಿಸಲಿದೆ.

 

514

ಬೌಲರ್ ಬಲ್ವಿಂದರ್ ಸಿಂಗ್ ಸಂಧು ಪಾತ್ರದಲ್ಲಿ  ಆಮಿ ವಿರ್ಕ್ ಕಾಣಿಸಿಕೊಳ್ಳಲಿದ್ದಾರೆ: ವಿದೇಶಿ ನೆಲದಲ್ಲಿ ತಮ್ಮ ದೇಶವನ್ನು ಹೆಮ್ಮೆ ಪಡುವಂತೆ ಮಾಡಲು ಭಾರತೀಯ ಆಟಗಾರರು ಹೇಗೆ ಶ್ರಮಿಸುತ್ತಾರೆ ಎಂಬುದನ್ನು ಚಿತ್ರ ತೋರಿಸುತ್ತದೆ. ಅಲ್ಲದೆ ಕೊನೆಯಲ್ಲಿ ಭಾರತ ತಂಡ ಕ್ರಿಕೆಟ್ ಮೈದಾನದಲ್ಲಿ ಗೆದ್ದಾಗ ದೇಶಾದ್ಯಂತ ದೀಪಾವಳಿಯನ್ನು ಹೇಗೆ ಆಚರಿಸಲಾಗುತ್ತದೆ ಎಂದು ಸಿನಿಮಾದಲ್ಲಿ ನೋಡಬಹುದು. 

614

ಕೀರ್ತಿ ಆಜಾದ್ ಆಗಿ ನಟ ದಿನಕರ್ ಶರ್ಮಾ: ಈ ಚಿತ್ರದ ಟ್ರೇಲರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ರಣವೀರ್, 'ಅಂಡರ್‌ಡಾಗ್‌ಗಳ ನಿಜವಾದ ಕಥೆ, ನೀವು ಊಹಿಸಲೂ ಸಾಧ್ಯವಿಲ್ಲ' ಎಂದು ಬರೆದಿದ್ದಾರೆ. ಅದೇ ಸಮಯದಲ್ಲಿ, ಅಭಿಮಾನಿಗಳು 83 ರ ಟ್ರೈಲರ್ ಅನ್ನು ಸಹ ತುಂಬಾ ಇಷ್ಟಪಡುತ್ತಾರೆ.

 

714

ಯಶಪಾಲ್ ಶರ್ಮಾ ಅವರ ಪಾತ್ರಲ್ಲಿ ನಟ  ಜತಿನ್ ಸರ್ನಾ ಕಾಣಿಸಿಕೊಳ್ಳಲಿದ್ದಾರೆ: ಚಿತ್ರದ ಕಥೆಯು 1983 ರ ಕ್ರಿಕೆಟ್ ವಿಶ್ವಕಪ್ ಅನ್ನು ಆಧರಿಸಿದೆ, ಇದರಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಲಾರ್ಡ್ಸ್‌ನಲ್ಲಿ ಮೊದಲ ವಿಶ್ವಕಪ್ ಗೆದ್ದಿತು.


 

814

ಮದನಲಾಲ್ ಪಾತ್ರದಲ್ಲಿ ನಟ ಹಾರ್ಡಿ ಸಂಧು : ಗಾಯಕ ಹಾರ್ಡಿ ಸಂಧು ಈ ಚಿತ್ರದಲ್ಲಿ ಮದಲ್ ಲಾಲ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರವು ಶೀಘ್ರದಲ್ಲೇ ನಿಮ್ಮೆಲ್ಲರ ಮುಂದೆ ಬರಲಿದೆ ಎಂದು ನನಗೆ ತುಂಬಾ ಖುಷಿಯಾಗಿದೆ. ಈ ಚಿತ್ರಕ್ಕಾಗಿ ನಾವೆಲ್ಲ 2 ವರ್ಷಗಳಿಂದ ಕಾಯುತ್ತಿದ್ದೆವು ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದರು.

914

ಈ ಸಿನಿಮಾದಲ್ಲಿ ಸುನಿಲ್ ಗವಾಸ್ಕರ್ ಆಗಿ  ನಟ ತಾಹಿರ್ ರಾಜ್ ಭಾಸಿನ್ ಕಾಣಿಸಿಕೊಳ್ಳುತ್ತಾರೆ: 'ನಾವು 1983 ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿದ್ದೇವೆ ಮತ್ತು ನಾವು ಗೆಲ್ಲುತ್ತೇವೆ ಎಂದು ಕ್ಯಾಪ್ಟನ್‌ ಹೇಳುತ್ತಾರೆ.  ಕ್ಯಾಪ್ಟನ್ ಹುಚ್ಚನಾಗಿದ್ದಾನೆ ಎಂದು ನಮಗೆ ಅನಿಸುತ್ತದೆ ಎಂಉ ಸಿನಿಮಾದ ಒಂದು ದೃಶ್ಯದಲ್ಲಿ, ತಂಡದ ಎಲ್ಲರೂ ಕಪಿಲ್ ದೇವ್‌ಗೆ (ರಣವೀರ್ ಸಿಂಗ್‌)  ಹೇಳುತ್ತಾರೆ.

1014

ನಟ ಚಿರಾಗ್ ಪಾಟೀಲ್ ಕ್ರಿಕೆಟರ್‌ ಸಂದೀಪ್ ಪಾಟೀಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 
ಈ ಪಂದ್ಯದಲ್ಲಿ ಭಾರತ ಗೆದ್ದಾಗ ರಣವೀರ್ ಸಿಂಗ್ ಭಾರತ ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದರು. ಚಿತ್ರೀಕರಣದ ಸಮಯದಲ್ಲಿ, ರಣವೀರ್ ನಿಜವಾಗಿಯೂ ಭಾರತಕ್ಕೆ ವಿಶ್ವಕಪ್ ತರುತ್ತಾನೆ ಮತ್ತು ಅಂತಿಮ ಶಾಟ್‌ನಲ್ಲಿ ದೃಶ್ಯವನ್ನು ಕಟ್‌ ಮಾಡಿದ  ನಂತರ, ಅವನು  ಅಳುತ್ತಾನೆ' ಎಂದು 83 ಚಿತ್ರದ ನಿರ್ದೇಶಕ ಕಬೀರ್ ಖಾನ್  ಹೇಳಿದ್ದಾರೆ.

1114

ಟೀಮ್‌ ಇಂಡಿಯಾದ ಮಾಜಿ ಆಟಗಾರ ಮೊಹಿಂದರ್ ಅಮರನಾಥ್ ಪಾತ್ರದಲ್ಲಿ ಸಾಕಿಬ್ ಸಲೀಂ.

1983ರಲ್ಲಿ ಭಾರತ ಕ್ರಿಕೆಟ್ ತಂಡವು ಜಗತ್ತಿನಲ್ಲಿ ಅಷ್ಟು ಹೆಸರು ಹೊಂದಿಲ್ಲದ ಸಮಯವಾಗಿತ್ತು  ಇದಾದ ಬಳಿಕ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಎರಡು ಬಾರಿಯ ಚಾಂಪಿಯನ್ಸ್‌ ಹಾಗೂ ಅಂದಿನ ಬಲಿಷ್ಠ ತಂಡ ವೆಸ್ಟ್ಇಂಡೀಸ್ ತಂಡವನ್ನು ಮಣಿಸಿತ್ತು. 

1214

ಸುನಿಲ್ ವಲ್ಸನ್ ಪಾತ್ರವನ್ನು ನಟ ಆರ್ ಬದ್ರಿನಿರ್ವಹಿಸಿದ್ದಾರೆ.
'ಕ್ರೀಡಾ ಇತಿಹಾಸದ ಅತ್ಯಂತ ಅಪ್ರತಿಮ ಕ್ಷಣಗಳಲ್ಲಿ ಒಂದು ಸಣ್ಣ ಆದರೆ ಪ್ರಮುಖ ಪಾತ್ರವನ್ನು ವಹಿಸುವುದು ಗೌರವ. ಗಂಡನ ವೃತ್ತಿಪರ ಮತ್ತು ವೈಯಕ್ತಿಕ ಆಕಾಂಕ್ಷೆಗಳ ಯಶಸ್ಸಿನಲ್ಲಿ ಹೆಂಡತಿ ಎಷ್ಟು ಪ್ರಮುಖ ಪಾತ್ರವನ್ನು ವಹಿಸುತ್ತಾಳೆ ಎಂಬುದನ್ನು ನಾನು ನನ್ನ ತಾಯಿಯಿಂದ ಕಲಿತಿದ್ದೇನೆ' ಎಂದು ಸಿನಿಮಾದಲ್ಲಿ  ತನ್ನ ಪಾತ್ರದ ಬಗ್ಗೆ ಮಾತನಾಡುತ್ತಾ, ದೀಪಿಕಾ ಪಡುಕೋಣೆ ಹೇಳಿದ್ದಾರೆ.  

1314

ನಟ ನಿಶಾಂತ್ ದಹಿಯಾ ಅವರನ್ನು  ರೋಜರ್ ಬಿನ್ನಿಆಗಿ ಕಾಣಬಹುದು.
ಕಪಿಲ್ ದೇವ್ ಮಾತ್ರವಲ್ಲದೆ ಅವರ ಮಗಳು ಅಮಿಯಾ ಕೂಡ '83' ಚಿತ್ರದ ಭಾಗವಾಗಿದ್ದಾರೆ. ಅಮಿಯಾ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ರಣವೀರ್ ಸಿಂಗ್ ಅಭಿನಯದ ಈ ಸಿನಿಮಾದ
ಸಹಾಯಕ ನಿರ್ದೇಶಕ ಅಮಿಯಾ ದೇವ್ ಆಗಿದ್ದಾರೆ. ಆಮಿಯಾ ತನ್ನ ಅಧ್ಯಯನದ ಕಾರಣದಿಂದ ಲೈಮ್‌ಲೈಟ್‌ನಿಂದ ದೂರ ಉಳಿಯುತ್ತಿದ್ದರು.

1414

ಪಿಆರ್ ಮಾನ್ಸಿಂಗ್ ಪಾತ್ರದಲ್ಲಿ  ನಟ ಪಂಕಜ್ ತ್ರಿಪಾಠಿಕಾಣಿಸಿಕೊಳ್ಳಲಿದ್ದಾರೆ.
 ಈ ಚಿತ್ರವನ್ನು ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ 5 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ರಣವೀರ್ ಈ ಹಿಂದೆ ಸೂರ್ಯವಂಶಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು ಹಾಗೂ ಈ ನಟ ಶೀಘ್ರದಲ್ಲೇ ಜಯೇಶ್‌ಭಾಯ್ ಜೋರ್ದಾರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

About the Author

SN
Suvarna News
ಬಾಲಿವುಡ್
ರಣವೀರ್ ಸಿಂಗ್
ದೀಪಿಕಾ ಪಡುಕೋಣೆ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved