Asianet Suvarna News Asianet Suvarna News

83 Movie: ರಣವೀರ್ ಸಿಂಗ್ ಸೂಪರ್, ಕಪಿಲ್‌ ದೇವ್ ಫ್ಯಾಮಿಲಿಗೆ ದೀಪಿಕಾ ಓಕೆ ಆಗಿಲ್ಲ

83 ಸಿನಿಮಾದಲ್ಲಿ ಕಪಿಲ್ ದೇವ್(Kapil Dev) ಆಗಿ ರಣವೀರ್ ಸಿಂಗ್(Ranveer Singh) ಹಾಗೂ ಅವರ ಪತ್ನಿಯಾಗಿ ದೀಪಿಕಾ ಪಡುಕೋಣೆ (Deepika Padukone)ನಟಿಸಿದ್ದಾರೆ. ಆದರೆ ಕಪಿಲ್ ದೇವ್ ಫ್ಯಾಮಿಲಿಗೆ ದೀಪಿಕಾ ನಟನೆ ಇಷ್ಟವಾಗಿಲ್ಲವಂತೆ.

Kapil Devs family not happy with Deepika Padukones portrayal as Romi in 83 dpl
Author
Bangalore, First Published Dec 3, 2021, 9:44 PM IST
  • Facebook
  • Twitter
  • Whatsapp

83 ಸಿನಿಮಾ ಟ್ರೈಲರ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ವಾರದ ಆರಂಭದಲ್ಲಿ ರಿಲೀಸ್ ಆದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಹರಿದುಬರುತ್ತಿದೆ. 83 ಸಿನಿಮಾ ತಂಡ ಟ್ರೈಲರ್ ಸಕ್ಸಸ್ ಬಗ್ಗೆ ಖುಷಿಯಾಗಿದ್ದಾರೆ. ಕ್ರಿಕೆಟ್ ಕುರಿತ ಸಿನಿಮಾ ಆಗಿರುವುದರಿಂದಲೂ ದೇಶಾದ್ಯಂತ ಜನರಿಂದ ಭಾರೀ ಮೆಚ್ಚುಗೆ ಗಳಿಸುತ್ತಿದ್ದೆ ಸಿನಿಮಾ ಟ್ರೈಲರ್. ಸಾಮಾನ್ಯ ಜನರು ಮಾತ್ರವಲ್ಲದೆ ಸೆಲೆಬ್ರಿಟಿಗಳೂ ಸಹ ಸಿನಿಮಾ ಟ್ರೈಲರ್ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಕಬೀರ್ ಖಾನ್ ನಿರ್ದೇಶನದ ಸಿನಿಮಾ ಕಪಿಲ್ ದೇವ್ ನೃತೃತ್ವದಲ್ಲಿ 1983ರಲ್ಲಿ ಭಾರತದ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಕುರಿತಾಗಿದೆ. ರಣವೀರ್ ಸಿಂಗ್ ಕಪಿಲ್ ದೇವ್ ಅವರ ಪಾತ್ರ ಮಾಡಿದರೆ, ಅವರ ನಿಜವಾದ ಪತ್ನಿ ದೀಪಿಕಾ ಪಡುಕೋಣೆ ಕಪಿಲ್ ದೇವ್ ಅವರ ಪತ್ನಿ ರೋಮಿ ಭಾಟಿಯಾ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ, ಬೊಮನ್ ಇರಾನಿ, ಹಾರ್ಡಿ ಸಂಧು, ಆಮಿ ವಿರ್ಕ್ ಸೇರಿ ಹಲವಾರು ಕಲಾವಿದರು ನಟಿಸಿದ್ದಾರೆ. ಕಪಿಲ್ ದೇವ್(Kapil Dev) ಜೊತೆ ರೋಮಿ ಭಾಟಿಯಾ(Romi Bhatia) ಪತಿಯ ಸೋಲು ಹಾಗೂ ಗೆಲುವಿನಲ್ಲಿ ಸ್ಟ್ರಾಂಗ್ ಆಗಿ ನಿಂತಿರುವುದನ್ನು ಟ್ರೈಲರ್‌ನಲ್ಲಿ ಕಾಣಬಹುದು. ಈಗ ಕಪಿಲ್ ದೇವ್ ಅವರು ದೀಪಿಕಾ ಅವರ ನಟನೆಯ ಬಗ್ಗೆ ಅವರ ಕುಟುಂಬ ಹೇಗೆ ಪ್ರತಿಕ್ರಿಯಿಸಿದೆ ಎನ್ನುವುದನ್ನು ಹೇಳಿದ್ದಾರೆ. ಕಪಿಲ್ ದೇವ್ ಪತ್ನಿಯಾಗಿ ದೀಪಿಕಾ ಅವರ ನಟನೆಯ ಬಗ್ಗೆ ಅವರ ಕುಟುಂಬಸ್ಥರ ಪ್ರತಿಕ್ರಿಯೆ ಹೀಗಿತ್ತು. ಇದು ಮಿಶ್ರ ಪ್ರತಿಕ್ರಿಯೆ ಎನ್ನಬಹುದು. ನನ್ನ ಪತ್ನಿಯ ಪಾತ್ರ 83 ಸಿನಿಮಾದಲ್ಲಿ ಎಷ್ಟಿದೆ ಎಂಬುದು ಗೊತ್ತಿಲ್ಲ. ಹಾಗಾಗಿ ಅವರೇನು ಮಾಡುತ್ತಿದ್ದಾರೆ ಎಂಬುದು ಅವರಿಗೆ ಅರ್ಥವಾಗಿಲ್ಲ ಎಂದಿದ್ದಾರೆ.

Film 83:ಟೀಮ್‌ ಇಂಡಿಯಾದ ಆಟಗಾರರ ಪಾತ್ರದಲ್ಲಿ ಯಾರಿದ್ದಾರೆ ನೋಡಿ!

83 ಸಿನಿಮಾಗೆ ವ್ಯಾಪಕ ಪ್ರತಿಕ್ರಿಯೆ ಪ್ರೀತಿ ಲಭಿಸಿದ್ದು ರಣವೀರ್ ಸಿಂಗ್ ಈ ಬಗ್ಗೆ ಭಾವುಕ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಇದು ಬರೀ ಒಂದು ಸಿನಿಮಾವಲ್ಲ. ಭಾರತದ ಇತಿಹಾಸದ ಅದ್ಭುತ ಕ್ಷಣಕ್ಕೆ ಗೌರವ ಇದು. 1983ರ ಕಪಿಲ್ ದೇವ್ ಅವರ ತಂಡದ ಅದ್ಭುತ ಗೆಲುವಿನ ಕುರಿತು ಈ ಸಿನಿಮಾ. ಈ ಯುವಕರು ಲೆಜೆಂಡ್‌ಗಳು. ಅವರ ಅದ್ಭುತ ಕಥೆ ಹೇಳುವ ಸಿನಿಮಾದ ಭಾಗವಾಗಿದ್ದೇ ಗೌರವ. ನಿಮ್ಮೆಲ್ಲರ ಪ್ರೀತಿಗೆ ನನ್ನ ವಂದನೆಗಳು ಎಂದು ಬರೆದಿದ್ದಾರೆ.

ಸಿನಿಮಾ ಟೀಸರ್:

ಕಬೀರ್ ಖಾನ್ ಅವರ ಬಹುನಿರೀಕ್ಷಿತ ಸಿನಿಮಾ '83'ರ ಟೀಸರ್ ಹೊರಬಿದ್ದಿದೆ. ಶುಕ್ರವಾರ ಬೆಳಗ್ಗೆ ಸಿನಿಮಾ ಟೀಸರ್ ರಿಲೀಸ್ ಆಗಿದ್ದು ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಟ್ರೈಲರ್ ನವೆಂಬರ್ 30ರಂದು ರಿಲೀಸ್ ಆಗಲಿದೆ. ಟೀಸರ್ ಭಾರತೀಯ ಕ್ರಿಕೆಟ್ ಇತಿಹಾಸದ ಅದ್ಭುತ ದಿನದ ಗ್ರೇಸ್ಕೇಲ್ ದೃಶ್ಯದೊಂದಿಗೆ ಪ್ರಾರಂಭವಾಗುತ್ತದೆ. ಜೂನ್.25, 1983, ಸ್ಥಳ ಲಾರ್ಡ್ಸ್ ಕ್ರಿಕೆಟ್ ಸ್ಟೇಡಿಯಂ ಲಂಡನ್. ಕಪಿಲ್ ದೇವ್ ಅವರ ಪಾತ್ರ ಮಾಡಿರೋ ರಣವೀರ್ ಸಿಂಗ್ ಬಾಲ್ ಕ್ಯಾಚ್ ಹಿಡಿಯಲು ಹಾರುವ ದೃಶ್ಯದೊಂದಿಗೆ ಟೀಸರ್ ಕೊನೆಯಾಗುತ್ತದೆ.

ಕನ್ನಡದಲ್ಲೂ ಸಿನಿಮಾ ಬಿಡುಗಡೆ:

'83 ಡಿಸೆಂಬರ್ 24, 2021 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಕಪಿಲ್ ದೇವ್ ಪತ್ನಿ ರೋಮಿ ದೇವ್ ಆಗಿ ತೆರೆಮೇಲೆ ಕಾಣಿಸಿಕೊಳ್ಳಲು ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದಾರೆ ಎಂದು ಬರೆದಿದ್ದಾರೆ.

Kapil Devs family not happy with Deepika Padukones portrayal as Romi in 83 dpl

ಸಿನಿಮಾದ ಚಿತ್ರೀಕರಣವು 2019 ರಲ್ಲಿ ಪ್ರಾರಂಭವಾಯಿತು. ಚಿತ್ರದ ಆರಂಭಿಕ ಬಿಡುಗಡೆ ದಿನಾಂಕವು ಏಪ್ರಿಲ್ 10, 2020 ಎಂದು ನಿಗದಿಯಾಗಿತ್ತು. ಆದರೂ ಕೊರೋನಾದಿಂದಾಗಿ ರಿಲೀಸನ್ನು ಕ್ರಿಸ್ಮಸ್‌ಗೆ ಮುಂದೂಡಲಾಯಿತು. ಕೊರೋನಾ ಮತ್ತು ಲಾಕ್‌ಡೌನ್‌ಗಳಿಂದಾಗಿ ಬಿಡುಗಡೆಯ ದಿನಾಂಕಗಳಲ್ಲಿ ಹಲವಾರು ಬಾರಿ ಬದಲಾವಣೆಗಳಾದ ನಂತರ, ಸಿನಿಮಾ ಕೊನೆಗೂ ಡಿಸೆಂಬರ್ 21, 2021 ರಂದು ತೆರೆಗೆ ಬರಲಿದೆ.

"

Follow Us:
Download App:
  • android
  • ios