ಬಾಲಿವುಡ್ ನಟಿ ರಾಣಿ ಮುಖರ್ಜಿಗೆ 10 ವರ್ಷದ ಮಗಳಿದ್ದಾಳೆ. ಹೆಸರು ಅಧೀರಾ. ರಾಣಿ ಮುಖರ್ಜಿ ಎಲ್ಲೂ ಅಧೀರಾ ಮುಖ ತೋರಿಸಿಲ್ಲ. ಮಗಳನ್ನು ಗೌಪ್ಯವಾಗಿಟ್ಟಿರುವ ನಟಿ, ಅವಾರ್ಡ್ ಫಂಕ್ಷನ್ ನಲ್ಲಿ ಮಾತ್ರ ಮಗಳ ಪ್ರೀತಿಯನ್ನು ಡಿಫರೆಂಟ್ ಆಗಿ ತೋರಿಸಿದ್ರು. 

ನ್ಯಾಷನಲ್ ಅವಾರ್ಡ್ (National Award) ಫಂಕ್ಷನ್ ಮುಗಿದು ನಾಲ್ಕೈದು ದಿನ ಕಳೆದಿದೆ. ಆದ್ರೂ ನ್ಯಾಷನಲ್ ಅವಾರ್ಡ್ ಫಂಕ್ಷನ್ ನಲ್ಲಿ ಪಾಲ್ಗೊಂಡಿದ್ದ, ಪ್ರಶಸ್ತಿ ಪಡೆದ ಕಲಾವಿದರ ಬಗ್ಗೆ, ಅವ್ರ ಡ್ರೆಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗ್ತಿದೆ. ಅದ್ರಲ್ಲೂ ಉತ್ತಮ ನಟ ಹಾಗೂ ಉತ್ತಮ ನಟಿ ಪ್ರಶ್ತಿಗೆ ಭಾಜನರಾದ ಶಾರುಖ್ ಖಾನ್ (Shah Rukh Khan) ಹಾಗೂ ರಾಣಿ ಮುಖರ್ಜಿ (Rani Mukerji) ಫ್ರೆಂಡ್ ಶಿಪ್ ನಿಂದ ಹಿಡಿದು ಡ್ರೆಸ್ ವರೆಗೆ ಎಲ್ಲದ್ರ ಬಗ್ಗೆ ನೆಟ್ಟಿಗರು ಮಾತನಾಡ್ತಿದ್ದಾರೆ. ರಾಣಿ ಮುಖರ್ಜಿ ನೆಕ್ಲೇಸ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ರಾಣಿ ಮುಖರ್ಜಿ ಧರಿಸಿದ್ದ ನೆಕ್ಲೇಸ್ ಹಾಗೂ ಅವರ ಮಗಳು ಅಧೀರಾ ಮಧ್ಯೆ ಗಾಢ ಸಂಬಂಧವಿದೆ. ಮೀಡಿಯಾ ಮುಂದೆ ಮಗಳನ್ನು ತೋರಿಸದ ರಾಣಿ, ಮಗಳ ಮೇಲಿರುವ ತಮ್ಮ ಪ್ರೀತಿಯನ್ನು ನ್ಯಾಷನಲ್ ಅವಾರ್ಡ್ನಲ್ಲಿ ತೋರಿಸಿದ್ದಾರೆ.

ಮಗಳ ಹೆಸರಿನ ಚೈನ್‌ ಧರಿಸಿದ್ದ ರಾಣಿ ಮುಖರ್ಜಿ : 

ನ್ಯಾಷನಲ್ ಅವಾರ್ಡ್ ಫಂಕ್ಷನ್ ಗೆ ರಾಣಿ ಮುಖರ್ಜಿ ಸುಂದರ ಸೀರೆಯುಟ್ಟು ಬಂದಿದ್ರು. ಚೋಕರ್ ಜೊತೆ ಚಿನ್ನದ ಸರ ಧರಿಸಿದ್ದರು. ಚೋಕರ್ ಅವರ ಸೌಂದರ್ಯ ಡಬಲ್ ಮಾಡಿದ್ರೆ ಅಧೀರಾ ಹೆಸರಿನ ಸರ ರಾಣಿಯ ಲುಕ್ಗೆ ವಿಶೇಷ ಸ್ಪರ್ಶವನ್ನು ನೀಡಿತ್ತು. ಅವರು ಧರಿಸಿದ್ದ ಸರದಲ್ಲಿ ಅಧೀರಾ ಹೆಸರನ್ನು ನೀವು ಸ್ಪಷ್ಟವಾಗಿ ಕಾಣ್ಬಹುದು. ಸರದ ಮಧ್ಯೆ ಮಧ್ಯೆ A.D.I.R.A ಅಕ್ಷರಗಳನ್ನು ನೀವು ಸ್ಪಷ್ಟವಾಗಿ ನೋಡ್ಬಹುದು.

Lakshmi Nivasa Serial: ಅಂಜಲಿ ಹೊರಬರೋಕೆ ಬೇರೆ ಕಾರಣ ಇದೆ; ಎಚ್ಚರಿಕೆ ಕೊಟ್ಟ ವಿಜಯಲಕ್ಷ್ಮೀ ಸುಬ್ರಮಣಿ

ಮಗಳ ಮೇಲೆ ರಾಣಿ ಪ್ರೀತಿ : 

ರಾಣಿ ಮುಖರ್ಜಿ ಮಗಳು ಅಧೀರಾ, 2015ರಲ್ಲಿ ಜನಿಸಿದ್ದಾಳೆ. ಅವಳಿಗೆ ಈಗ 10 ವರ್ಷ ವಯಸ್ಸು. ಅಧೀರಾ ಮೇಲೆ ರಾಣಿ ಅಪಾರ ಪ್ರೀತಿ ಹೊಂದಿದ್ದಾರೆ. ಹಾಗೆ ಅಧೀರಾಳನ್ನು ಕ್ಯಾಮರಾದಿಂದ ದೂರ ಇಟ್ಟಿದ್ದಾರೆ. ಅಧೀರಾ ಎಲ್ಲೂ ಕ್ಯಾಮರಾ ಮುಂದೆ ಕಾಣಿಸಿಕೊಳ್ಳೋದಿಲ್ಲ. ಅಧೀರಾ ಹಾಗೂ ರಾಣಿ ಮುಖರ್ಜಿ ಪತಿ ಆದಿತ್ಯಾ ಕ್ಯಾಮರಾದಿಂದ ಸದಾ ದೂರ ಇರ್ತಾರೆ.

ಅಮ್ಮನ ನಟನೆಗೆ ಪ್ರಶಸ್ತಿ ಗಿಟ್ಟಿಸಿಕೊಂಡ ರಾಣಿ ಮುಖರ್ಜಿ : 

ಇದೇ ಮೊದಲ ಬಾರಿ ರಾಣಿ ಮುಖರ್ಜಿ, ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಅದೂ ಅಮ್ಮ ಹಾಗೂ ಮಗುವಿನ ಮಧ್ಯೆ ಇರುವ ಸಂಬಂಧವನ್ನು ಸಿನಿಮಾ ಹೇಳುತ್ತದೆ. ರಾಣಿ ಮುಖರ್ಜಿಗೆ ಮಿಸೆಸ್ ಚಟರ್ಜಿ vs. ನಾರ್ವೆ ಸಿನಿಮಾಕ್ಕೆ ಪ್ರಶಸ್ತಿ ಸಿಕ್ಕಿದೆ. ನಾರ್ವೇ ಅಧಿಕಾರಿಗಳು ಮಕ್ಕಳನ್ನು ಕರೆದುಕೊಂಡು ಹೋದ ನಂತ್ರ, ಅವರನ್ನು ವಾಪಸ್ ಪಡೆಯಲು ಮಿಸೆಸ್ ಚಟರ್ಜಿ ಮಾಡುವ ಕೆಲ್ಸವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಸಿನಿಮಾದ ಅಧ್ಬುತ ನಟನೆಗೆ ರಾಣಿ ಪ್ರಶಸ್ತಿ ಪಡೆದಿದ್ದಾರೆ.

2013ರ ಬಳಿಕ ವರ್ಜಿನಿಟಿ ಬಗ್ಗೆ ಮತ್ತೆ ಮಾತನಾಡಿದ Salman Khan; ನಂಬಲಾಗದೆ ಹೌಹಾರಿದ ವೀಕ್ಷಕರು

ರಾಣಿ ಮುಖರ್ಜಿ ಸಿನಿಮಾ : 

ರಾಣಿ ಮುಖರ್ಜಿ 2014ರಲ್ಲಿ ಆದಿತ್ಯ ಚೋಪ್ರಾ ಜೊತೆ ಮದುವೆ ಆಗಿದ್ದಾರೆ. ಅವರ ಮದುವೆ ಬಹಳ ಗೌಪ್ಯವಾಗಿ ನಡೆದಿತ್ತು. ನಿರ್ದೇಶಕ ಆದಿತ್ಯ ಚೋಪ್ರಾ ಹಾಗೂ ರಾಣಿ ಮುಖರ್ಜಿ ಮದುವೆಯಲ್ಲಿ ಕೇವಲ ಸಂಬಂಧಿಕರು, ಆಪ್ತ ಸ್ನೇಹಿತರು ಮಾತ್ರ ಪಾಲ್ಗೊಂಡಿದ್ದರು. ರಾಣಿ ಮುಖರ್ಜಿ ಮದುವೆ ಆದ್ಮೇಲೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಅಪರೂಪ. ಮಗುವಾದ್ಮೇಲೆ ಕೆಲ ವರ್ಷ ಸಂಪೂರ್ಣ ದೂರವಿದ್ದ ರಾಣಿ ಮುಖರ್ಜಿ ಮತ್ತೆ ಸಿನಿಮಾ ಶುರು ಮಾಡಿದ್ದಾರೆ.

ರಾಣಿ ಮುಖರ್ಜಿ ಜೊತೆ ಶಾರುಖ್ ಖಾನ್ : 

ಆಪ್ತ ಸ್ನೇಹಿತರಾದ ರಾಣಿ ಮುಖರ್ಜಿ ಹಾಗೂ ಶಾರುಖ್ ಖಾನ್ ಗೆ ಉತ್ತಮ ನಟ ಹಾಗೂ ನಟಿ ಪ್ರಶಸ್ತಿ ಸಿಕ್ಕಿದ್ದು, ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಇಬ್ಬರೂ ಒಟ್ಟಿಗೆ ಮಿಂಚಿದ್ದಾರೆ. ಅವರಿಬ್ಬರ ಜೋಡಿ ನೋಡಿ, ಅಭಿಮಾನಿಗಳು ಕುಚ್ ಕುಚ್ ಹೋತಾ ಹೇ ಸಿನಿಮಾ ನೆನಪಿಸಿಕೊಂಡಿದ್ದಾರೆ.