- Home
- Entertainment
- Cine World
- 2013ರ ಬಳಿಕ ವರ್ಜಿನಿಟಿ ಬಗ್ಗೆ ಮತ್ತೆ ಮಾತನಾಡಿದ Salman Khan; ನಂಬಲಾಗದೆ ಹೌಹಾರಿದ ವೀಕ್ಷಕರು
2013ರ ಬಳಿಕ ವರ್ಜಿನಿಟಿ ಬಗ್ಗೆ ಮತ್ತೆ ಮಾತನಾಡಿದ Salman Khan; ನಂಬಲಾಗದೆ ಹೌಹಾರಿದ ವೀಕ್ಷಕರು
Salman Khan virgin comment controversy: 2013ರಲ್ಲಿ ಅತಿಯಾದ ಪರ್ಸನಲ್ ಲೈಫ್ ಬಗ್ಗೆ ಮಾತನಾಡಿದ್ದ ಸಲ್ಮಾನ್ ಖಾನ್ ಅವರು, ಈ ಬಾರಿ ಮತ್ತೆ ಅದೇ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಸಲ್ಮಾನ್ ಖಾನ್ ಹೇಳಿದ್ದನ್ನು ಅನೇಕರು ನಂಬಿಲ್ಲ. ಹಾಗಾದರೆ ಬಾಲಿವುಡ್‌ನ ಬ್ಯಾಚುಲರ್ ಹೇಳಿದ್ದೇನು?

ಅತಿಥಿಗಳು ಯಾರು?
ಟ್ವಿಂಕಲ್ ಖನ್ನಾ, ಕಾಜೋಲ್ ನಟನೆಯ ‘ಟೂ ಮಚ್’ ಶೋನ ಮೊದಲ ಎಪಿಸೋಡ್ ಪ್ರಸಾರ ಆಗಿದೆ. ಸಲ್ಮಾನ್ ಖಾನ್, ಆಮಿರ್ ಖಾನ್ ಅವರು ಅತಿಥಿಗಳಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಒಂದಿಷ್ಟು ವಿಷಯಗಳು ಚರ್ಚೆ ಆಗಿವೆ.
ನಾಚಿಕೆಯಿಂದ ತಲೆಯಾಡಿಸಿದ ಸಲ್ಲು
ಸಲ್ಮಾನ್ ಮತ್ತು ಆಮಿರ್ ನಡುವೆ ಖಾನ್ ಎನ್ನುವ ಹೆಸರನ್ನು ಬಿಟ್ಟು ಬೇರೆ ಯಾವುದೇ ಹೋಲಿಕೆ ಇಲ್ಲ ಎಂದು ಕೂಡ ಹೇಳಿದ್ದಾರೆ. ‘ಸಲ್ಮಾನ್ ತಾನು ಎಟರ್ನಲ್ ವರ್ಜಿನ್ ಅಂತ ಹೇಳ್ತಾರೆ, ಅವರೇ ಅದನ್ನು ಒಪ್ಪಿಕೊಳ್ಳುತ್ತಾರೆʼ ಎಂದು ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ತಮಾಷೆ ಮಾಡಿದ್ದಾರೆ. ಆಗ ಸಲ್ಮಾನ್ ಖಾನ್ ಅವರು ನಾಚಿಕೆಯಿಂದ ತಲೆಯಾಡಿಸಿದ್ದಾರೆ.
ಮತ್ತೆ ಬಾಯಿಬಿಟ್ಟ ಸಲ್ಮಾನ್
ಸಲ್ಮಾನ್ ಖಾನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ 2013ರಲ್ಲಿ ಹೇಳಿಕೊಂಡಿದ್ದರು. 47 ವರ್ಷ ವಯಸ್ಸಿನ ಸಲ್ಮಾನ್ ಖಾನ್, ‘ಕಾಫಿ ವಿತ್ ಕರಣ್’ ಶೋನ ಮೊದಲ ಸಂಚಿಕೆಯಲ್ಲಿ ಭಾಗವಹಿಸಿದ್ದರು. ಆ ವೇಳೆ ಸಲ್ಮಾನ್ ಖಾನ್ ತಾವು ‘ವರ್ಜಿನ್’ ಎಂದು ಹೇಳಿದ್ದರು. ಇದು ನಿಜಕ್ಕೂ ಪ್ರೇಕ್ಷಕರನ್ನು ಆಶ್ಚರ್ಯಗೊಳಿಸಿತ್ತು. “ನಾನು ಇನ್ನೂ ವರ್ಜಿನ್, ನನ್ನ ಗರ್ಲ್‌ಫ್ರೆಂಡ್ ಜೊತೆ ನಾನು ಮಂಚ ಏರಿಲ್ಲ. ನಾನು ನನ್ನ ವರ್ಜಿನಿಟಿಯನ್ನು ಮದುವೆಯಾಗುವವರಿಗಾಗಿ ಕಾಪಾಡಿಕೊಳ್ತೀನಿ" ಎಂದು ಹೇಳಿದ್ದರು.
ಲಾಭ ಇಲ್ಲ
ಕರಣ್ ಮತ್ತೆ, ‘ನೀವು ವರ್ಜಿನ್ʼ ಎಂದು ಮರು ಪ್ರಶ್ನೆ ಮಾಡಿದ್ದಾರೆ. ಆಗ ಸಲ್ಮಾನ್ ಖಾನ್ ಸಂಪೂರ್ಣ ಗಂಭೀರ ಮುಖದಿಂದ ‘ಹೌದು’ ಎಂದಿದ್ದರು. ಅಷ್ಟೇ ಅಲ್ಲದೆ ‘ನನಗೆ ಫ್ರೆಂಡ್ಸ್ ಇದ್ದಾರೆ, ಆದರೆ ಯಾವುದೇ ಲಾಭ ಇಲ್ಲʼ ಎಂದು ಹೇಳಿದ್ದರು. ಕರಣ್‌ಗೆ ಈ ಮಾತು ನಂಬಲು ಆಗಲಿಲ್ಲ. ಆಗ ಸಲ್ಮಾನ್, ‘ಸ್ನೇಹಿತರ ಥರ ಬೆನ್ನಿನ ಮೇಲೆ ತಟ್ಟೋದಷ್ಟೇ" ಎಂದು ಹೇಳಿದ್ದಾರೆ.
ಗೆಳತಿಯರಿಂದ ದೂರ ಇರ್ತಾರೆ
ಮಾಜಿ ಪ್ರಿಯತಮೆಯನ್ನು ಭೇಟಿ ಮಾಡಿದಾಗ ಹೇಗೆ ವ್ಯವಹಾರ ಮಾಡ್ತೀರಿ ಎಂದು ಪ್ರಶ್ನೆ ಕೇಳಲಾಯ್ತು. ಆಗ ಸಲ್ಮಾನ್, "ಕೆಲವರನ್ನು ನಾನಂತೂ ಸಂಪೂರ್ಣವಾಗಿ ಕಡೆಗಾಣಿಸ್ತೀನಿ. ನಾನು ಅವರಿಂದ ಓಡಿಹೋಗೋಕೆ ನೋಡ್ತೀನಿ" ಎಂದಿದ್ದಾರೆ. ‘ನಾನು ಕೆಟ್ಟ ದೃಷ್ಟಿಯಿಂದ ಈ ರೀತಿ ಮಾಡೋದಿಲ್ಲ. ಈಗ ನೀವು ಬೇರೆ ಕಡೆ ಇದ್ದೀರಿ, ನಿಮ್ಮದೇ ಆದ ಒಂದು ಜೀವನವಿದೆ. ಯಾರೇ ಆಗಲಿ ಮನಸ್ಸಿನಲ್ಲಿ 'ಮಾಜಿ ಗೆಳೆಯ' ಎಂಬ ಯೋಚನೆ ಬರಬಾರದು. ಅವರ ಜೀವನದಲ್ಲಿ ಅವರ ಹಿಂದಿನ ಪಾಸ್ಟ್ ಲೈಫ್ ಬರಬಾರದು. ಆದ್ದರಿಂದ ನಾನು ದೂರವಿರುತ್ತೇನೆ" ಎಂದಿದ್ದಾರೆ.
ಸಂಗೀತಾ ನನ್ನ ಕುಟುಂಬದ ಭಾಗ
‘ಎಲ್ಲ ಮಾಜಿ ಗೆಳತಿಯರನ್ನೂ ಕಡೆಗಣಿಸೋದಿಲ್ಲ. ಸಂಗೀತಾ ಬಿಜಲಾನಿ ನನ್ನ ಫ್ರೆಂಡ್. ಅವಳು ನಮ್ಮ ಕುಟುಂಬದ ಭಾಗವಾಗಿದ್ದಾಳೆ, ಯಾವಾಗಲೂ ಹಾಗೆಯೇ ಇರುತ್ತಾಳೆʼ ಎಂದಿದ್ದರು.
ಸಂಗೀತಾ ಬಿಜಲಾನಿ, ಸೋಮಿ ಅಲಿ, ಐಶ್ವರ್ಯಾ ರೈ, ಕತ್ರಿನಾ ಕೈಫ್ ಜೊತೆಗೆ ಸಲ್ಮಾನ್ ಖಾನ್‌ಗೆ ಲವ್ ಇತ್ತು ಎನ್ನಲಾಗಿದೆ.