Kashmiri Teacher Held: ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಗೆ ನೆರವು ನೀಡಿದ ಆರೋಪದ ಮೇಲೆ ಶಿಕ್ಷಕ ಮೊಹಮ್ಮದ್ ಯೂಸುಫ್ ಕಟಾರಿಯನ್ನು ಬಂಧಿಸಲಾಗಿದೆ. ಈತನ ಕೈವಾಡ 'ಆಪರೇಷನ್ ಮಹಾದೇವ್' ಕಾರ್ಯಾಚರಣೆಯ ನಂತರ ಬೆಳಕಿಗೆ ಬಂದಿತ್ತು.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ನೆರವು ನೀಡಿದವ ಶಿಕ್ಷಕ:

26 ಪ್ರವಾಸಿಗರನ್ನು ಬಲಿ ಪಡೆದ ಜಮ್ಮುಕಾಶ್ಮೀರದ ಪಹಲ್ಗಾಮ್‌ ಭಯೋತ್ಪಾದಕ ದಾಳಿಕೋರರಿಗೆ ನೆರವಾದ ಆರೋಪದ ಮೇಲೆ 26 ವರ್ಷದ ಕಾಶ್ಮೀರಿ ಯುವಕನನ್ನು ಪೊಲೀಸರು ಬುಧವಾರವೇ ಬಂಧಿಸಲಾಗಿತ್ತು. ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಆರೋಪಿ ಮೊಹಮ್ಮದ್ ಯೂಸುಫ್ ಕಟಾರಿಯನ್ನು ಬಂಧಿಸಲಾಗಿತ್ತು. ಈತನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

ಆಪರೇಷನ್ ಮಹಾದೇವ್ ನಂತರ ಯುಸೂಪ್‌ ಕಟಾರಿ ಕೃತ್ಯ ಬಯಲು

ವರದಿಯ ಪ್ರಕಾರ, ಮೊಹಮ್ಮದ್ ಯುಸೂಪ್‌ ಕಟಾರಿ ಮೂಲತಃ ಓರ್ವ ಶಿಕ್ಷಕ ಇದರ ಜೊತೆಗೆ ಆತ ಕುಲ್ಗಾಮ್‌ನಲ್ಲಿ ಗ್ರೌಂಡ್ ವರ್ಕರ್ ಅಗಿಯೂ ಕೆಲಸ ಮಾಡುತ್ತಿದ್ದ. ಈತನಿಗೆ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕ ಇದೆ ಎಂದು ನಂಬಲಾಗಿದೆ. ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರಿಗೆ ಈತ ಓಡಾಟಕ್ಕೆ ಬೆಂಬಲ ನೀಡಿದ್ದ. ನಂತರ ಭಾರತೀಯ ಸೇನೆ ಆಪರೇಷನ್ ಮಹಾದೇವ್ ಕಾರ್ಯಾಚರಣೆ ನಡೆಸಿ ಆ ದಾಳಿಕೋರರ ಹೆಡೆಮುರಿಕಟ್ಟಿದ್ದರು. ಆದರೆ ಅವರಿಗೆ ಸಹಾಯ ಮಾಡಿದವರ ಬಗ್ಗೆ ಅನುಮಾನವಿತ್ತೇ ಹೊರತು ಸರಿಯಾದ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಆದರೆ ಆಪರೇಷನ್ ಮಹಾದೇವ್‌ನಲ್ಲಿ ಕೊಲ್ಲಲ್ಪಟ್ಟ ಎಲ್‌ಇಟಿ ಭಯೋತ್ಪಾದಕರಿಂದ ವಶಪಡಿಸಿಕೊಂಡ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳ ವಿಶ್ಲೇಷಣೆಯ ನಂತರ ಈ ಮೊಹಮ್ಮದ್ ಯೂಸುಫ್ ಕಟಾರಿ ಬಗ್ಗೆ ಸೇನೆಗೆ ಸುಳಿವು ಸಿಕ್ಕಿತ್ತು.

ಮೇ 22 ರಂದು ಶ್ರೀನಗರ ಬಳಿಯ ದಚಿಗಮ್‌ನಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಭದ್ರತಾ ಪಡೆಗಳಿಗೆ ಗುಪ್ತಚರ ಮಾಹಿತಿ ದೊರೆತಾಗ, ವಾರಗಳ ಕಾಲ ಆಪರೇಷನ್ ಮಹಾದೇವ್ ನಡೆಸಿ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಸೇರಿದಂತೆ ಮೂವರು ಭಯೋತ್ಪಾದಕರನ್ನು ಸೇನಾ ಕಾರ್ಯಾಚರಣೆಯಲ್ಲಿ ಫಿನಿಶ್ ಮಾಡಲಾಗಿತ್ತು. ಈ ಮೂವರು ಭಯೋತ್ಪಾದಕರ ಅಡಗುತಾಣದಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ ಎಕೆ-47 ಮತ್ತು ಎಂ9 ಅಸಾಲ್ಟ್ ರೈಫಲ್‌ಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಸ್ತ್ರಾಸ್ತ್ರಗಳ ಸಂಸ್ಕರಣೆಗಾಗಿ ಚಂಡೀಗಢದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ನಂತರ ಪಹಲ್ಗಾಮ್ ದಾಳಿಯಲ್ಲಿ ೀ ಬಂದೂಕುಗಳನ್ನು ಬಳಸಲಾಗಿದೆ ಎಂದು ವರದಿಗಳು ದೃಢಪಡಿಸಿದ್ದವು.

ಏಪ್ರಿಲ್ 22 ರಂದು ಪಹಲ್ಗಾಮ್‌ನ ಬೈಸರನ್‌ನಲ್ಲಿ 26 ಜನರ ಹತ್ಯೆಗೈದಿದ್ದ ಪ್ರವಾಸಿಗರು

ಏಪ್ರಿಲ್ 22 ರಂದು ಪಹಲ್ಗಾಮ್‌ನ ಬೈಸರನ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 24 ಭಾರತೀಯರು ಮತ್ತು ಒಬ್ಬ ನೇಪಾಳಿ ಪ್ರಜೆ ಮತ್ತು ಒಬ್ಬ ಸ್ಥಳೀಯ ವ್ಯಕ್ತಿ ಸೇರಿದಂತೆ ಇಪ್ಪತ್ತೈದು ಪ್ರವಾಸಿಗರು ಸಾವನ್ನಪ್ಪಿದರು. ಮೃತರಾದವರಲ್ಲಿ ಭಾರತೀಯ ನೌಕಾಪಡೆಯ ಅಧಿಕಾರಿ ಮತ್ತು ಗುಪ್ತಚರ ಬ್ಯೂರೋದ ಸಿಬ್ಬಂದಿ ಕೂಡ ಸಾವನ್ನಪ್ಪಿದ್ದರು. 2019 ರ ಪುಲ್ವಾಮಾ ದಾಳಿಯ ನಂತರ ಜಮ್ಮು ಕಾಶ್ಮಿರದ ಕಣಿವೆಯಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಎಲ್‌ಇಟಿ ಬೆಂಬಲಿತ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.

ಈ ದಾಳಿಗೆ ಪ್ರತಿಯಾಗಿ ಮೇ 6 ಮತ್ತು 7 ರ ಮಧ್ಯರಾತ್ರಿ, ಭಾರತೀಯ ವಾಯುಪಡೆಯು ಪಾಕಿಸ್ತಾನದ ಮೇಲೆ ನಿಖರ ದಾಳಿಗಳನ್ನು ನಡೆಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ ಒಂಬತ್ತು ಭಯೋತ್ಪಾದಕ ನೆಲೆಗಳ ಮೂಲಸೌಕರ್ಯಗಳನ್ನು ನಾಶಪಡಿಸಿತು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಈ ಕಾರ್ಯಾಚರಣೆ ನಡೆದವು.

ಇದನ್ನೂ ಓದಿ: ಭಾರತದ ಜೊತೆಗೆ ತೆರಿಗೆ ಮುನಿಸು: ಭಾರತದ ಶತ್ರು ಪಾಕಿಸ್ತಾನವನ್ನು ಅಪ್ಪಿ ಮುದ್ದಾಡ್ತಿರುವ ಟ್ರಂಪ್

ಇದನ್ನೂ ಓದಿ: ಭಾರತದಿಂದ ಆಮದಾಗುವ ಔಷಧಿಗಳಿಗೆ ಶೇ.100 ತೆರಿಗೆ ವಿಧಿಸಿದ ಟ್ರಂಪ್: ದೇಶದ ಫಾರ್ಮಾ ಕಂಪನಿಗಳಿಗೆ ಸಂಕಷ್ಟ